Moving text

Mandya District Police

DAILY CRIME REPORT DATED : 29-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-04-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಕಳವು ಪ್ರಕರಣ ಹಾಗು ಇತರೆ 13 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು, ಅಬಕಾರಿ ಕಾಯಿದೆ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 217/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-04-2013 ರಂದು ಪಿರ್ಯಾದಿ ನಂದೀಶ.ವೈ.ಹೆಚ್. ಬಿನ್. ಹನುಮೇಗೌಡ, ಯಲಿಯೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 28-04-2013 ರಂದು ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಹೊಡೆದು ಒಳಗಡೆ ಇದ್ದ 3 ಟಗರು ಮತ್ತು 5 ಹೋತಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇವುಗಳ ಅಂದಾಜು ಬೆಲೆ 24000-00 ರೂ ಆಗುತ್ತದೆ ಪತ್ತೆ ಮಾಡಿಕೊಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಸಲಾಗಿದೆ. ರಸ್ತೆ ಅಪಘಾತ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 279-304[ಎ]-176-201 ಐ.ಪಿ.ಸಿ.. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 29-04-2013 ರಂದು ಪಿರ್ಯಾದಿ ಮೂಡಲಗಿರಿಗೌಡ ವ್ಯವಸಾಯ, ಕಾಡಂಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಜೆ.ಸಿ.ಬಿ. ಚಾಲಕ ವೆಂಕಟೇಶ, ತೊರಹಳ್ಳಿ ಪಾಳ್ಯ, ತುರುವೇಕೆರೆ ತಾಲ್ಲೂಕು ರವರು (ಮಾಲೀಕರು ಶ್ರೀನಿವಾಸ, ಹೊಸಕ್ಕಿಪಾಳ್ಯ) ಪಿರ್ಯಾದಿಯವರ ಮಗನಾದ ಶ್ರಿನಿವಾಸ ಎಂಬುವವನಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತನಾಗಿದ್ದು, ಜಿ.ಸಿ.ಬಿ. ಮಾಲೀಕರು ಪಿರ್ಯಾಧಿಯ ಸಂಬಂಧಿಕರಾಗಿದ್ದು ಯಾವುದೇ ಕೇಸು ವಗೈರೆ ಬೇಡವೆಂದು ಮೃತನ ಶವವನ್ನು ಅವರ ಜಮಿನಿನಲ್ಲೇ ಸುಟ್ಟು ಹಾಕಿ, ಶವಸಂಸ್ಕಾರ ಮಾಡಿದ್ದು, ನಂತರ ಈ ಬಗ್ಗೆ ಪೊಲೀಸರಿಗ ಮಾಹಿತಿ ನೀಡುವುದು ಸೂಕ್ತವೆಂದು ಗ್ರಾಮಸ್ಥರು ತಿಳಿಸಿದ ಮೇರೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 106/13 ಕಲಂ. 41 ಕ್ಲಾಸ್[ಡಿ] ಕೂಡ 102 ಸಿ,ಆರ್,ಪಿ,ಸಿ ಕೂಡ 379 ಐ.ಪಿ.ಸಿ.

ದಿನಾಂಕ: 29-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿ. ಪಿ.ಎಸ್.ಐ. ಕೆ.ಆರ್.ಸಾಗರ ಪೊಲೀಸ್ ಠಾಣೆ. ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪುನೀತ್ ಬಿನ್ ರಂಗಸ್ವಾಮಿ, 19 ವರ್ಷ, ಮನೆ ನಂ 256, 3ನೇ ಕ್ರಾಸ್, 1ನೇ ಮುಖ್ಯ ರಸ್ತೆ, ಲಕ್ಷ್ಮಿಕಾಂತರನಗರೆ, ಹೆಬ್ಬಾಳ್, ಮೈಸೂರು ರವರ ಮೇಲೆ ಅನುಮಾನವಿದ್ದು ಅವರ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನ್ನು ತೆಗೆದು ನೋಡಿದಾಗ 10 ಮೊಬೈಲ್ಗಳು ಇದ್ದು 6 ಸ್ಯಾಮ್ಸಂಗ್ ಮೊಬೈಲ್, 3 ನೋಕಿಯಾ ಮೊಬೈಲ್ ಮತ್ತೊಂದು ಕೆನ್ಝಿಂಡಾ ಮೊಬೈಲ್ ಆಗಿದ್ದು ಇವುಗಳ ಒಟ್ಟು ಬೆಲೆ 72000/- ರೂ ಅಗಿರುತ್ತದೆ ಆದ್ದರಿಂದ ಇದನ್ನೆಲ್ಲಾ ಕಳ್ಳತನ ಮಾಡಿರಬಹುದೆಂದು ಅನುಮಾನ ಬಂದು ಆರೋಪಿಯ ಮೇಲೆ ಸ್ವಯಂ ವರದಿ ತಯಾರಿಸಿ ಕೇಸು ದಾಖಲಿಸುವಂತೆ ಹೆಚ್.ಸಿ-84 ರವರಿಗೆ ವರದಿ ನೀಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 28-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-04-2013 ರಂದು ಒಟ್ಟು 22 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಅಪಹರಣ ಪ್ರಕರಣ, 1 ವಂಚನೆ ಪ್ರಕರಣ, 1 ರಾಬರಿ ಪ್ರಕರಣ ಹಾಗು 13 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 379 ಐ.ಪಿ.ಸಿ.

       ದಿನಾಂಕ: 28-04-2013 ರಂದು ಪಿರ್ಯಾದಿ ಆರ್ ನಾಗೇಶ್ ರಾವ್.  ಬಿನ್. ಎಸ್. ರಾಮರಾವ್, ಮನೆ. ನಂ-52, 2ನೇ ಹಂತ, 7ನೇ ಕ್ರಾಸ್, ನಿವೇದಿತ ನಗರ, ಮೈಸೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಹಾಗೂ ಅವರ ಸ್ನೇಹಿತರು ನಂ.ಕೆಎ-55-ಎಂ-1843 ಮಾರುತಿ ಓಮಿನಿ ಕಾರಿನಲಿ ಪ್ರವಾಸಕ್ಕೆಂದು ಬಲಮುರಿಗೆ ಬಂದಿದ್ದು ಸ್ನಾನ ಮಾಡುವ ಸಲುವಾಗಿ ಪಿರ್ಯಾದಿಯವರ ಬಾಬ್ತು ಬ್ಲಾಕ್ ಬೆರಿ ಮೊಬೈಲ್ ಹಾಗೂ ಅವರ ಸ್ನೇಹಿತರ ಇತರೇ 5 ಮೊಬೈಲ್ ಎಟಿಎಂ ಕಾರ್ಡ, ಡ್ರೈವಿಂಗ್ ಲೆಸನ್ಸ್ಗಳನ್ನು  ಕಾರಿನಲ್ಲಿಟ್ಟು ಲಾಕ್ ಮಾಡಿದ್ದು, ವಾಪಸ್ 03-00 ಗಂಟೆಗೆ ಬಂದು ನೋಡಲಾಗಿ ಕಾರಿನಲ್ಲಿದ್ದ ಮೇಲ್ಕಂಡ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 12600/- ರೂ ನಗದು, ಮೊಬೈಲ್ಗಳ ಒಟ್ಟು ಬೆಲೆ ಸುಮಾರು 25000, ಕಳುವಾದ ಇಲ್ಲಾ ವಸ್ತುಗಳ ಒಟ್ಟು ಬೆಲೆ 37600/- ರೂ ಗಳಾಗಿರುತ್ತೆ ಇವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. 379 ಐ.ಪಿ.ಸಿ.

ದಿನಾಂಕ: 28-04-2013 ರಂದು ಪಿರ್ಯಾದಿ ಜಗದೀಶ ಬಿನ್. ಶಿಲ್ಪಾಚಾರ್, 40 ವರ್ಷ, ವಿಶ್ವಕರ್ಮ ಜನಾಂಗ, ಮ್ಯಾನೇಜರ್ ಕೆಲಸ, ವಿಜಯನಗರ, ಮೈಸೂರು ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 27-04-2013 ರಂದು ರಾತ್ರಿ ವೇಳೆಯಲ್ಲಿ ಹಂಗರಹಳ್ಳಿ ಗ್ರಾಮದ ಆರ್.ಕೆ.ಕೆ ಠಾರ್ ಮಿಕ್ಸಿಂಗ್ ಪ್ಲಾಂಟ್ನಲ್ಲಿ ಫಿರ್ಯಾದಿಯವರು ಮ್ಯಾನೇಜರ್ ಆಗಿದ್ದು, ಸದರಿ ಪ್ಲಾಂಟ್ನಲ್ಲಿ 10 ಅಡಿಗಳ ಅಂತರದಲ್ಲಿ 2 ಹೆಚ್.ಪಿ ಕಿರ್ಲೋಸ್ಕರ್  ಕಂಪನಿಯ 4 ಡಿ.ಸಿ. ಮೋಟಾರ್ ಗಳನ್ನು  ಅಳವಡಿಸಿದ್ದು, ದಿನಾಂಕಃ 27-04-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಈ 4 ಡಿಸಿ ಮೋಟಾರ್ ಗಳನ್ನು  ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 49,000/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ: 28-04-2013 ರಂದು ಪಿರ್ಯಾದಿ ಭಾಗ್ಯಮ್ಮ ಕೋಂ. ಶಿವಲಿಂಗಶೆಟ್ಟಿ, ಪಟ್ಟಸೋಮನಹಳ್ಳಿ ಗ್ರಾಮ, ಪಾಂಡವಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ಶಿವಲಿಂಗಶೆಟ್ಟಿ, 55ವರ್ಷ, ಪಟ್ಟಸೋಮನಹಳ್ಳಿ ಗ್ರಾಮ ರವರು ಕ್ರಿಮಿನಾಶಕವನ್ನು ಸಿಂಪಡಿಸುವಾಗ ಗಾಳಿಯಲ್ಲಿ ನನ್ನ ಗಂಡ ಕ್ರಿಮಿನಾಶಕವನ್ನು ಸೇವಿಸಿ ನಿತ್ರಾಣಗೊಂಡು ಅಲ್ಲೇ ಜಮೀನಿನ ಬಳಿ ಇದ್ದರು ನಾವುಗಳು ಸಂಜೆ 06-00 ಗಂಟೆಗೆ ಹೋಗಿ ನೋಡಲಾಗಿ ಎದೆ ಉರಿ ಎಂದು ತುಂಬಾ ಅಸ್ವಸ್ಥಗೊಂಡಿದ್ದರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 174 ಸಿ.ಆರ್.ಪಿ.ಸಿ.
         
         ದಿನಾಂಕ: 28-04-2013 ರಂದು ಪಿರ್ಯಾದಿ ನಿಂಗರಾಜು ಬಿನ್. ಬಸವಶೆಟ್ಟಿ, ಉಮ್ಮತ್ತೂರು ಗ್ರಾಮ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾ.ರವರು ನೀಡಿದ ದೂರು ಏನೆಂದರೆ ದಿನಾಂಕ:28-04-2013 ರಂದು ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಮತ್ತು ಮಿಂಚಿನಿಂದ ಆಕಸ್ಮಿಕವಾಗಿ ದೊಡ್ಡತೆಂಗಿನ ಮರ ಮುರಿದು ತನ್ನ ತಂದೆ ಬಸವಶೆಟ್ಟಿ, ಉಮ್ಮತ್ತೂರು ಗ್ರಾಮ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ರವರ ಮೇಲೆ ಬಿದ್ದು, ಮೂಗು ಬಾಯಿಯಿಂದ ರಕ್ತ ಬಂದು ತಲೆ ಹೊಡೆದುಹೋಗಿರುತ್ತದೆ. ಬೀಸಿದ ಬಿರುಗಾಳಿ ಮತ್ತು ಮಿಂಚಿನಿಂದ ಆಕಸ್ಮಿಕವಾಗಿ ತೆಂಗಿನ ಮರ ಮುರಿದು ನಮ್ಮ ತಂದೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174(ಸಿ) ಸಿ.ಆರ್.ಪಿ.ಸಿ. 

        ದಿನಾಂಕ: 28-04-2013 ರಂದು ಪಿರ್ಯಾದಿ ಮಹದೇವ ಲೇಟ್. ಜವರಯ್ಯ, ಕೊಡಿಯಾಲ, ಅರೆಕೆರೆ ಹೋಬಳಿ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಅಕ್ಕನಾದ ಲಕ್ಷ್ಮಿ ಕೋಂ. ಕುಮಾರ, 28ವರ್ಷ, ಪರಿಶಿಷ್ಠ ಜಾತಿ, ಚಿಕ್ಕಹೊಸಗಾವಿ ಗ್ರಾಮ, ಕೊಪ್ಪ ಹೋಬಳಿ ವಾಸಿ, ಎಂಬುವವಳು ಮನೆಯಲ್ಲಿ ನೇಣುಹಾಕಿಕೊಂಡು ಸತ್ತಿದ್ದು ಈ ಬಗ್ಗೆ ತಾನು ಗ್ರಾಮಕ್ಕೆ ಬಂದಾಗ ಗ್ರಾಮದಲ್ಲಿ ಮೃತಳ ಜೊತೆ ಆಕೆಯ ಗಂಡ ಕುಮಾರ, ಮೈದುನ ಶಂಕರ, ಅತ್ತೆ ಸಣ್ಣಮ್ಮ, ವಾರಗಿತ್ತಿ ಪ್ರೇಮ ಎಂಬುವವರುಗಳು ಜಗಳ ಮಾಡಿದ್ದು ಈ ಹಿನ್ನೆಲೆಯಲ್ಲಿ ನೇಣು ಹಾಕಿಕೊಂಡು ಸತ್ತಿರುವುದಾಗಿದ್ದು ಈಕೆಯ ಸಾವಿನ  ಬಗ್ಗೆ ಅನುಮಾನವಿರುವುದಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 498[ಎ] ಐ.ಪಿ.ಸಿ. 

       ದಿನಾಂಕ: 28-04-2013 ರಂದು ಪಿರ್ಯಾದಿ ಡಿ.ಗೋದಾ ಕೋಂ. ಎಲ್.ಎಲ್.ಲೋಕೇಶ, ಕಲ್ಯಾಣಿ ಬೀದಿ, [ಭಕ್ತ ಮಂಡಳಿ] ಮೇಲುಕೋಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎಲ್.ಎನ್. ಲೋಕೇಶ್, ಮೇಲುಕೋಟ್ ಟೌನ್, ಪಾಂಡವಪುರ ತಾಲ್ಲೋಕು ರವರು ಪ್ರತಿ ದಿನ ನನ್ನ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ದಿನಾಂಕಃ-24-04-2013 ರಂದು ಸಂಜೆ 5 ಗಂಟೆಯಲ್ಲಿ ಅದೇ ರೀತಿ ನಡೆದುಕೊಂಡಿರುತ್ತಾರೆ ಅದ್ದ್ರರಿಂದ ದಯಮಾಡಿ ಕಾನೂನು ರೀತಿಯಲ್ಲಿ ಸೂಕ್ತ ರಕ್ಷಣೆಬೇಕೆಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲು ದಾಖಲಿಸಲಾಗಿರುತ್ತದೆ.


ಅಪಹರಣ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 92/13 ಕಲಂ. 364. 506 ಕೂಡ 34 ಐ.ಪಿ.ಸಿ.

       ದಿನಾಂಕ: 28-04-2013 ರಂದು ಪಿರ್ಯಾದಿ ಚಿಕ್ಕತಾಯಮ್ಮ ಕೋಂ. ಲೇಟ್. ಮರಿದೇವರು, ಟಿ.ಕೆ.ಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಕುಮಾರ ಬಿನ್. ಹೊನ್ನಯ್ಯ. 2] ಕರಿಯಪ್ಪ ಬಿನ್. ದಡಿಯಯ್ಯ, ಇಬ್ಬರೂ ತೊರೆಕಾಡನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಆಟೋದಲ್ಲಿ ಕರೆದುಕೊಂಡು ಮದ್ದೂರು ರಸ್ತೆಯಿಂದ ಓದುಬಸಪ್ಪನದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಆಟೋದಲ್ಲಿ ಹೋಗುತ್ತಿದ್ದಾಗ ಪಿರ್ಯಾದಿಯವರು ಕಿರುಚಿಕೊಂಡಾಗ ಅಲ್ಲಿನ ಗ್ರಾಮಸ್ಥರು ಆಟೋವನ್ನು ಅಡ್ಡಗಟ್ಟಿ ಪಿರ್ಯಾದಿಯವರನ್ನು ಪ್ರಾಣಪಾಯದಿಂದ ಕಾಪಾಡಿರುತ್ತಾರೆ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 420, 114 ಕೂಡ 34 ಐ.ಪಿ.ಸಿ.

ದಿನಾಂಕ:28-04-2013 ರಂದು ಪಿರ್ಯಾದಿ ಪ್ರಿಯಾ ಕೆ. ಬಿನ್. ಕೃಷ್ಣ, ಕರಡಹಳ್ಳಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1] ಸಂಪಂಗಿರಾಮ ಬಿನ್. ಶ್ರೀನಿವಾಸಯ್ಯ. 2] ರಂಗನಾಯಕಮ್ಮ ಕೋಂ. ಶ್ರೀನಿವಾಸಯ್ಯ, ಕರಡಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರ ತಂದೆ ತಾಯಿಯವರು ಮದುವೆ ಮಾಡುವ ಸಲುವಾಗಿ ಮನೆಯಲ್ಲಿ ಇಟ್ಟಿದ್ದ ಹಣವನ್ನು ತೆಗೆದುಕೊಂಡು ಬಾ ಕನಕಪುರದಲ್ಲಿ ಚಿನ್ನದ ಬೆಲೆ ಕಡಿಮೆ ಇದೆ ಎಂದು ಹೇಳಿ ನಂಬಿಸಿ ಮನೆಯಲ್ಲಿದ್ದ 20ಸಾವಿರ ರೂನಗದು ಮತ್ತು 20 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಕನಕಪುರಕ್ಕೆ ಆರೋಪಿಯು ಪಿರ್ಯಾದಿಯವರನ್ನು ಕರೆದುಕೊಂಡು ಹೋಗಿ ಇಲ್ಲಿ ಕಳ್ಳರು ಇದ್ದಾರೆ ನಿನ್ನ ಸರವನ್ನು ಬಿಚ್ಚಿಕೊಡು ನನ್ನ ಜೇಬಿನಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಹಣ ಮತ್ತು ವಡವೆಯನ್ನು ತೆಗೆದು- ಕೊಂಡು ನಿಮ್ಮ ತಂದೆ-ತಾಯಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವನು ವಾಪಸ್ಸು ಬಂದಿರುವುದಿಲ್ಲ ನನ್ನನ್ನು ನಂಬಿಸಿ 20 ಸಾವಿರ ರೂ ನಗದು ಹಾಗೂ ಚಿನ್ನದ ಸರವನ್ನು ತೆಗೆದುಕೊಂಡು ಹೋಗಲು ಆತನ ತಾಯಿ ಕುಮ್ಮಕ್ಕು ನೀಡಿರುತ್ತಾರೆ ಅವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ರಾಬರಿ ಪ್ರಕರಣ :

ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 392 ಐ.ಪಿ.ಸಿ.

        ದಿನಾಂಕ: 28-04-2013 ರಂದು ಪಿರ್ಯಾದಿ ಲೀಲಾವತಿ ಕೋಂ. ಲಿಂಗಾಚಾರಿ, ದೊಡ್ಡೇಗೌಡನಕೊಪ್ಪಲು ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಅಪರಿಚಿತ ಇಬ್ಬರು ಗಂಡಸರು ಮೋಟಾರ್ ಬೈಕ್ನಲ್ಲಿ ಬಂದ, ಇಬ್ಬರೂ ಗಂಡಸರು ತಮ್ಮ ಮೋಟಾರ್ ಬೈಕ್ನ್ನು ನಿಲ್ಲಿಸಿ ಅವರಲ್ಲಿ ಒಬ್ಬನು ಕೆಳಗೆ ಇಳಿದು ಬಂದವನೆ ನನ್ನ ಕತ್ತಿಗೆ ಕೈ ಹಾಕಿ  ನನ್ನ ಮಾಂಗಲ್ಯ ಸರವನ್ನು ಅರ್ಧ ಭಾಗದಷ್ಟು ಸರವನ್ನು ಕಿತ್ತುಕೊಂಡಿದ್ದು, ಸುಮಾರು 10 ಗ್ರಾಂ ತೂಕದಷ್ಟಿದ್ದು ಅದನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 27-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-04-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  2 ಕಳವು ಪ್ರಕರಣಗಳು ಹಾಗು 36 ಚುನಾವಣಾ ಅಕ್ರಮ/ಮುಂಜಾಗ್ರತೆ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್.ನಂ. 24/13 ಕಲಂ. 174 ಸಿ,ಆರ್,ಪಿ.ಸಿ.

ದಿನಾಂಕ: 27-04-2013 ರಂದು ಪಿರ್ಯಾದಿ ಪಾರ್ವತಿ ಬಿನ್. ವಿಜಿಕುಮಾರ್, ಮರಾಠಿ, ನಂ.55. ಬಿ.ಎಂ.ಸಿನಗರ, ಮೈಸೂರು. ರವರು ನೀಡಿದ ದೂರು ಏನೆಂದರೆ ದಿನಾಂಕ: 23-04-2013 ರಂದು ಶ್ರೀರಂಗಪಟ್ಟಣ ಟೌನ್ ನ ಬಳಿ ಅವರ ತಂದೆ ಹಾಗೂ ಅವರ ಮಗ ಸ್ಟವ್ ರಿಪೇರಿ ಮಾಡಲು ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಆ ದಿನ ಪಿರ್ಯಾದಿಯವರ ತಂದೆ ಹಾಗೂ ತಮ್ಮ ಇಲ್ಲೆ ಉಳಿದುಕೊಂಡರು ಬೆಳಿಗ್ಗೆ 06-30 ಗಂಟೆಯಲ್ಲಿ ಪಿರ್ಯಾದಿಯವರ ತಮ್ಮ ಹಾಗೂ ನಾರಾಯಣ, ಕೃಷ್ಣಪ್ಪ, ಮುಜಾರವರುಗಳು ಪೋನ್ ಮಾಡಿ ನಮ್ಮ ತಂದೆ ಸತ್ತು ಹೋಗಿರುತ್ತಾರೆಂದು ತಿಳಿಸಿರುತ್ತಾರೆ ನಮ್ಮ ತಂದೆಯ ಸಾವಿನ ಬಗ್ಗೆ ಅನುಮಾನ ಇರುತ್ತೆ  ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. ಹೆಂಗಸು ಕಾಣಿಯಾಗಿದ್ದಾಳೆ.

ದಿನಾಂಕ: 27-04-2013 ರಂದು ಪಿರ್ಯಾದಿ ಸಿದ್ದಪ್ಪ ಬಿನ್. ಮಹದೇವಪ್ಪ, ಮಾದರಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಪಾರ್ವತಮ್ಮ ಈಗ್ಗೆ ಸುಮಾರು 6 ವರ್ಷಗಳ ಹಿಂದೆ ತನ್ನ ತಂದೆಯ ಮನೆಯಿಂದ ಹೋಗಿದ್ದು ಬಂದಿರುವುದಿಲ್ಲ ಎಲ್ಲ್ಲಾಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ  ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 279, 304(ಎ) ಐ.ಪಿ.ಸಿ.

  ದಿನಾಂಕ: 27-04-2013 ರಂದು ಪಿರ್ಯಾದಿ ಎಂ.ಪಿ.ಹರಿಪ್ರಸಾದ್, ಮನೆ ನಂ. #676/2, 2ನೇ ಕ್ರಾಸ್, ಜೈನ್ಸ್ ಸ್ಟ್ರೀಟ್, ಮಸೀದಿ ರಸ್ತೆ, ಮಂಡ್ಯ. ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ   ದಿನಾಂಕ: 26-04-2013 ರಂದು ರಾತ್ರಿ 09-40 ಗಂಟಿಯಲ್ಲಿ, ಮಂಡ್ಯ ಸಿಟಿ ಸಂತೆಮಾಳದ ಸ್ಕೂಲ್ ಮುಂಭಾಗದ ಬಳಿ ಆರೋಪಿ ಕೆಎ-11/ಡಬ್ಲ್ಯೂ-9849ರ ಮೋಟಾರ್ ಸೈಕಲ್ ಸವಾರ ಹೆಚ್,ಕಾಳೇಗೌಡ, 2ನೇ ಕ್ರಾಸ್, ಜೈನ್ಸ್ ಸ್ಟ್ರೀಟ್ ಮಸೀದಿ ರಸ್ತೆ, ಮಂಡ್ಯ. ರವರು ತಮ್ಮ ಮೋಟಾರ್ ಸೈಕಲ್ನ್ನು ಅತಿವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ಹಾಕಿದ್ದ ಮೋರಿಯ ಡ್ರೈನೇಜಿನ ಮಣ್ಣಿನ ಗುಡ್ಡೆಯ ಮೇಲೆ ಮೋಟಾರ್ ಸೈಕಲ್ನ್ನು ಹತ್ತಿಸಿ ಆಯಾತಪ್ಪಿ ರಸ್ತೆಗೆ ಬಲಮಗ್ಗಲಾಗಿ ಬಿದ್ದಾಗ ಅವರಿಗೆ ತಲೆಗೆ, ಮುಖಕ್ಕೆ ಹಾಗೂ ಇತರೆ ಕಡೆಗಳಿಗೆ ಪೆಟ್ಟಾಗಿದ್ದು, ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದು ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 379 ಐ.ಪಿ.ಸಿ.

ದಿನಾಂಕ: 27-04-2013 ರಂದು ಪಿರ್ಯಾದಿ ನಾಗಮ್ಮ, ಬಿ. ಗೌಡಗೆರೆ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ:27-04-2013ರಂದು ದೇಶಹಳ್ಳಿ ಗ್ರಾಮದ ಪಿರ್ಯಾದಿಯವರ ಸುಮಾರು 48000=00 ರೂ ಬೆಲೆಬಾಳುವ ಮಾಂಗಲ್ಯ ಸರವನ್ನು ಯಾರೋ ಕಳ್ಳರು ಕಿತ್ತುಕೊಂಡಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 379 ಐ.ಪಿ.ಸಿ.

ದಿನಾಂಕ: 27-04-2013 ರಂದು ಪಿರ್ಯಾದಿ ಕ್ರಪಾಲ್ ಸಿಂಗ್ ಶ್ಯಾಮ್, ಬನರ್ಾಡ್ ಲಾಡ್ಜ್, ಬಾತ್ ರೋಡ್, ಕಾನರ್್ಬ್ರೂಕ್, ಯು.ಕೆ. ದೇಶದ ವಾಸಿ ರವರು ನೀಡಿದ ದೂರು ಏನೆಂದರೆ ದಿನಾಂಕ: 27-04-2013 ರಂದು ಬೃಂದಾವನ ಗಾರ್ಡನ್ನ ಸಂಗೀತ ನೃತ್ಯ ಕಾರಂಜಿಯ ಬಳಿ ಯಾರೋ ಅಪರಿಚಿತರು 350 ಪೌಂಡ್ ಸ್ಟರ್ಲಿಂಗ್,  12500/- ರೂ ಹಣವನ್ನು ಹಾಗೂ ಬಾರ್ಕಲೇಯ 1 ಡೆಬಿಟ್ ಕಾರ್ಡನ್ನು ಕಳ್ಳತನ ಮಾಡಿರುತ್ತಾರೆ ಅದನ್ನು ಪತ್ತೆಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 26-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-04-2013 ರಂದು ಒಟ್ಟು 39 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1  ವಾಹನ ಕಳವು ಪ್ರಕರಣ,  1 ರಾಬರಿ ಪ್ರಕರಣ,  1 ಅಪಹರಣ ಪ್ರಕರಣ ಹಾಗು 34 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು,  ಅಬಕಾರಿ ಕಾಯಿದೆ ಪ್ರಕರಣಗಳು,  ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 26-04-2013 ರಂದು ಪಿರ್ಯಾದಿ ಎಂ.ವಿ.ಗಿರೀಶ್ ಬಿನ್. ವೆಂಕಟಪ್ಪ, ಮಹದೇಶ್ವರಪುರ ಗ್ರಾಮ, ಮೇಲುಕೋಟೆ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹದೇಶ್ವರ ಪುರ ಗ್ರಾಮ.ಮೇಲುಕೋಟೆ ಹೋಬಳಿ ಪಾಂಡವಪುರ ತಾಲ್ಲೂಕು. ರವರ  ಸ್ಕೂಟರಿಗೆ ಡಿಕ್ಕಿ ಹೊಡೆಸಿದ್ದರಿಂದ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದು ಅವರ ತಲೆಗೆ ಮತ್ತು ಇತರೆ ಕಡೆ ಪೆಟ್ಟಾಗಿ ರಕ್ತಗಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕಃ 26-04-2013 ರಂದು ಮದ್ಯಾಹ್ನ 01-05 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಮನುಷ್ಯ ಕಾಣೆಯಾದ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 190/13 ಕಲಂ. ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 26-04-2013 ರಂದು ಪಿರ್ಯಾದಿ ರಾಮೇಗೌಡ ಬಿನ್. ಲೇ.ಚಿಕ್ಕಸಿದ್ದಪ್ಪ, ವಳೆಗೆರೆಹಳ್ಳಿ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ವಳಗೆರೆಹಳ್ಳಗೆ ಹೋದತ್ತೇನೆಂದು ಹೇಳಿ ಹೋದವಳು ಗಂಡನ ಮನೆಗೂ ಹೋಗದೆ ನಮ್ಮ ಮನೆಗೂ ಬಾರದೆ ಎಲ್ಲಿಯೋ ಹೊರಟು ಹೋಗಿರುತ್ತಾಳೆ. ನಮ್ಮ ಸಂಬಂಧಿಕರ ಮನೆಗಳಲ್ಲೂ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಅವಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 199/13 ಕಲಂ. 379 ಐ.ಪಿ.ಸಿ.

ದಿನಾಂಕ:26-04-2013 ರಂದು ಪಿರ್ಯಾದಿ ಜಿ.ಶಶಿಧರ ಬಸವರಾಜು 2303, 2ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ದಿನಾಂಕ:16-04-2013 ರಂದು ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ಬಳಿ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 18,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


 ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 341-395-506-427 ಐ.ಪಿ.ಸಿ.

ದಿನಾಂಕ:26-04-2013 ರಂದು ಪಿರ್ಯಾದಿ ಬಿ.ಎಲ್ ತೇಜಸ್ವಿ ಕಿರಣ್, ಕಾಳೇನಹಳ್ಳಿ ಫಾರಂ ಹೌಸ್ ರವರು ನೀಡಿದ ದೂರು ಏನೆಂದರೆ ದಿನಾಂಕ: ದಿನಾಂಕ 25/26-04-2013 ರಂದು ದೇವರಾಜುರವರ ಇಟ್ಟಿಗೆ ಫ್ಯಾಕ್ಟರಿ ಹತ್ತಿರ, ಯಾರೋ ಅಪರಿಚಿತ ಐದು ಜನರು ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ಜೆಡಿಎಸ್ ಕಡೆಯವರು ಎಂದು ಮಾತನಾಡಿಕೊಂಡು ಇಬ್ಬರು ಪಿಯರ್ಾದಿಯವರನ್ನು ತಬ್ಬಿ ಹಿಡಿದು -ಕೊಂಡು ಉಳಿದ ಇಬ್ಬರೂ ಪಿಯರ್ಾದಿಯವರ ಜೇಬಿನಲ್ಲಿದ್ದ 11,500 ರು ನಗದು ಹಣ ಮತ್ತು ಸ್ಯಾಮ್ಸಂಗ್ ಕಂಪೆನಿಯ ಮೊಬೈಲ್ ಮತ್ತು ಡ್ರೈವರ್ನ ಹತ್ತಿರ ಇದ್ದ ಮೊಬೈಲನ್ನು ಕಿತ್ತುಕೊಂಡು, ರಿಪೀಸ್ಪಟ್ಟಿಯನ್ನು ಹಿಡಿದುಕೊಂಡು ನಿನ್ನನ್ನು ಇಲ್ಲೆ ಸಾಯಿಸುಬಿಡುತ್ತೆವೆ ಎಂದು ಪ್ರಾಣ ಬೆದರಿಕೆ ಹಾಕಿದರು ಮತ್ತು ಗ್ಲಾಸಿನ ಚೂರಗಳು ಡ್ರೈವರ್ ಮುಖಕ್ಕೆ  ಹಾಗು ಕೈಗೆ ಹೊಡೆದಾಗ ಡ್ರೈವರ್ಗೆ ಸ್ವಲ್ಪ ಪೆಟ್ಟಾಗಿರುತ್ತೆ ಎಂದು ಇತ್ಯಾದಿಯಾಗಿ ದೂರು ನೀಡಿದ್ದು ಪ್ರಕರಣನ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 211/13 ಕಲಂ. 363 ಕೂಡ 34 ಐ.ಪಿ.ಸಿ.

       ದಿನಾಂಕ:26-04-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ. ರಾಜೇಶ, 30 ವರ್ಷ, ಕನ್ನಲಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವ ಅಕ್ಕನ ಮಗಳನ್ನು ದಿನಾಂಕ: 03-04-2013 ರಂದು ಅದೇ ಗ್ರಾಮದ ಆರೋಪಿತರು ಅಪಹರಣ ಮಾಡಿರುತ್ತಾರೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 25-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-04-2013 ರಂದು ಒಟ್ಟು 44 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು ಹಾಗು 38 ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು, ಅಬಕಾರಿ ಪ್ರಕರಣಗಳು ಹಾಗು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 117/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 25-04-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಚಾಮಲಾಪುರ ಗೇಟ್ ನೇರದ ಎನ್ಹೆಚ್-48 ರಸ್ತೆಯಲ್ಲಿ ಪಿರ್ಯಾದಿ ಕೆ.ಎಸ್.ವಿಜಯ್ಕುಮಾರ್ ಬಿನ್. ಕೆ.ಹೆಚ್.ಶಂಕರ್, 28 ವರ್ಷ, ಒಕ್ಕಲಿಗರು, ಕನ್ನಾಘಟ್ಟ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆಎ-51-ಎಂ.ಡಿ-6721 ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ತಮ್ಮ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಾದಚಾರಿ ರಾಮೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆ ಮತ್ತು ಇತರ ಕಡೆ ಪೆಟ್ಟಾಗಿದ್ದು. ಎ.ಸಿ.ಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಆತನನ್ನು ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದಾಗ ಮೃತನಾಗಿರುತ್ತಾನೆಂದು ವೈದ್ಯಾದಿಕಾರಿಗಳು ತಿಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 210/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 25-04-2013 ರಂದು ಡಿ.ಎನ್. ಶ್ರೀನಿವಾಸಯ್ಯ ಬಿನ್. ಲೇಟ್. ನರಸಿಂಹೇಗೌಡ,  ದುದ್ದ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-04-2013 ರಂದು ಮಂಡ್ಯ ಹೊಳಲು ರಸ್ತೆಯ ಸ್ಮಶಾನದ ಬಳಿ ದೊಡ್ಡಹಳ್ಳದ ಸೇತುವೆ ಹತ್ತಿರ ಆರೋಪಿ ಡಿ.ಪಿ. ನಾಗರಾಜು ಕೆಎ-11-ಕೆ-1112 ರ ಮೋಟಾರ್ ಸೈಕಲ್ ಸವಾರ, ದುದ್ದ ಗ್ರಾಮ, ಮಂಡ್ಯ ತಾ. ರವರು ಊರಿಗೆ ಹೋಗುವಾಗ ಸ್ವಾಮಿಯನ್ನು ಹಿಂಭಾಗ ಕೂರಿಸಿಕೊಂಡು ಮಧ್ಯಾಹ್ನ 02-30 ಗಂಟೆ ಸಮಯದಲ್ಲಿ ಮಂಡ್ಯ- ಹೊಳಲು ರಸ್ತೆಯ ಸ್ಮಶಾನದ ದೊಡ್ಡ ಹಳ್ಳದ ಬಳಿ ಮೋಟಾರ್ ಸೈಕಲ್ಲನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಸೇತುವೆಗೆ ಡಿಕ್ಕಿ ಹೊಡೆದು ಅಪಘಾತದಿಂದಾಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 118/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ:25-04-2013 ರಂದು ಪಿರ್ಯಾದಿ ಶುಕ್ರ ಬಿನ್ ಗಂಗಯ್ಯ, ಇರುಬನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಕವಿತಾ ಬಿನ್. ಶುಕ್ರ, ಸುಮಾರು 20ವರ್ಷ, ಮಾತನಾಡಲು ಬರುವುದಿಲ್ಲ, ವಕ್ಕಲಿಗರು, ವಾಸ ಇರುಬನಹಳ್ಳಿ ಗ್ರಾಮ ಮನೆಯಿಂದ ಹೊರಹೋದವಳು ಕಾಣೆಯಾಗಿರುತ್ತಾಳೆ. ಈಕೆ              [ ಅಂಗವಿಕಲೆ ] ಮಾತನಾಡಲು ಬರುವುದಿಲ್ಲ. ನಮ್ಮ ಸಂಬಂಧಿಕರ ಮನೆಯಲ್ಲಿ ಕೇಳಿದರು ಹುಡುಕಿದರೂ ಸಹ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 197/13 ಕಲಂ. ಮಗು ಕಾಣೆಯಾಗಿದೆ.

     ದಿನಾಂಕ:25-04-2013 ರಂದು ಪಿರ್ಯಾದಿ ಕವಿತ ಕೋಂ. ನಾಗರಾಜು, ಮನೆ.ನಂ.-409, 9ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 24-04-2013 ಬೆಳಿಗ್ಗೆ 09-00 ಗಂಟೆಯಲ್ಲಿ ಪಿರ್ಯಾದಿಯವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಅನುಷಾ ಬಿನ್. ನಾಗರಾಜು, 4 ವರ್ಷ, ದುಂಡು ಮುಖ, ಎಣ್ಣೆ ಗೆಂಪು ಬಣ್ಣ, ಗಡ್ಡದ ಮೇಲೆ ಒಂದು ಕಪ್ಪು  ಕಾರರಳು ಇರುತ್ತೆ. ಮೈಮೇಲೆ ಒಂದು ಲೈಟ್ ಹಸಿರು ಬಣ್ಣದ ಟೀಶರ್ಟ್. ಒಂದು ಕಪ್ಪು ಬಣ್ಣದ ನಿಕ್ಕರ್ ಧರಿಸಿರುತ್ತಾಳೆ ನಾನು ನೋಡಿದ್ದು ನಂತರ 09-00 ಗಂಟೆಯ ಸಮಯಕ್ಕೆ ಮತ್ತೆ ಬಂದು ನೋಡಲಾಗಿ ನನ್ನ ಮಗಳು ಅಲ್ಲಿ ಕಾಣಿಸಲಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2013 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ:25-04-2013 ರಂದು ಪಿರ್ಯಾದಿ ಎ.ಬಿ.ರಾಮು ಬಿನ್. ಬಾಳಾರಯ್ಯ, ಬ್ಯಾಂಕ್ ಬೀದಿ, ಅರಣಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಒಬ್ಬ ಅಪರಿಚಿತ ಹೆಂಗಸು  ಸುಮಾರು 35-40 ವರ್ಷ ರವರು ಬಿಕ್ಷಾಟನೆ ಮಡಿಕೊಂಡು ರಾತ್ರಿ ಹಳೆ ಗ್ರಾಮಪಂಚಾಯ್ತಿ ಕಟ್ಟಡದ ಹೊರಾಂಗಣದಲ್ಲಿ ತನ್ನ ಬಟ್ಟೆಗಂಟಿನೊಂದಿಗೆ ತಂಗಿದ್ದು, ದಿನಾಂಕಃ 25-04-2013 ರಂದು ಬೆಳಿಗ್ಗೆ ಸುಮಾರು 08-30 ಗಂಟೆ ಸಮಯದಲ್ಲಿ ನೋಡಲಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು ಈಕೆ ಯಾವುದೋ ಕಾಯಿಲೆಯಿಂದಲೋ ಅಥವ ಸರಿಯಾಗಿ ಊಟೋಪಚಾರವಿಲ್ಲದೆ, ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:25-04-2013 ರಂದು ಪಿರ್ಯಾದಿ ಮೇರಿ ಕೋಂ. ಅಂತೋನಿರಾಜ್, ತಮಿಳು ಕಾಲೋನಿ, ಮದ್ದೂರು ರವರು ನೀಡಿದ ದೂರು ಏನೆಂದರೆ ಅವರ ಗಂಡ ಅಂತೋನಿರಾಜ್ ರವರು ಹೊಟ್ಟೆನೋವಿನ ಬಾದೆಯನ್ನು ತಾಳಲಾರದೆ ಪಿರ್ಯಾದಿ ಹೋದಾಗ ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡಿದ್ದು ದೇಹವು ನೇತಾಡುತ್ತಿರುತ್ತದೆ. ಕೂಡಲೆ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ತಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:25-04-2013 ರಂದು ಸಂಜೆ 04-10 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 24-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-04-2013 ರಂದು ಒಟ್ಟು 44 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  2 ಕಳವು ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ ಹಾಗು 38 ಚುನಾವಣಾ ಮುಂಜಾಗ್ರತಾ ಹಾಗು ಅಕ್ರಮ ಪ್ರಕರಣಗಳು,  ಅಬಕಾರಿ ಪ್ರಕರಣಗಳು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 185/13 ಕಲಂ. 498(ಎ) 504, 506 ಐ.ಪಿ.ಸಿ.

ದಿನಾಂಕ: 24-4-2013 ರಂದು ಪಿರ್ಯಾದಿ ಜಯಮ್ಮ @ ಜಯಲಕ್ಷ್ಮಿ, ನೀಲಕಂಠನಹಳಿ,್ಳ, ನೀಲಕಂಠನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರಿಗೆ ತನ್ನ ಗಂಡ ಆರೋಪಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಾಯಿಗೆ ಬಂದಂತೆ ಬೈಯ್ದು ಪಿರ್ಯಾದಿಯವರ ಬಟ್ಟೆಗಳನ್ನು ಸುಟ್ಟು ಹಾಕಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 109/13 ಕಲಂ. 498(ಎ)-324-506 ಕೂಡ 34 ಐ.ಪಿ.ಸಿ.

ದಿನಾಂಕ:24-4-2013 ರಂದು ಪಿರ್ಯಾದಿ ಚಂದ್ರೀಕಾ, ಜೈನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ  ಗಂಡ .ಸುರೇಶ ರವರು 50000/- ರೂ ಹಣವನ್ನು ವರದಕ್ಷಿಣೆಯಾಗಿ ಕೊಡುವಂತೆ ಜಗಳ ತೆಗೆದು ಪಿರ್ಯಾದಿ ತಂದೆಯವರು ಕೊಡಲು ಸಾದ್ಯವಿಲ್ಲಾ ಎಂದಾಗ ಆರೊಫಿತರು ಪಿರ್ಯಾದಿ ಅವಾಚ್ಯವಾಗಿ ಬೈದು ಮೊಟಕಡ್ಡಿ ಬರಲಿನಿಂದ ಬಲಮುಂಗೈಗೆ ಎದೆಗೆ ರಕ್ತಬರುವ ಹಾಗೆ ಹೊಡೆದನು ಗಂಡನು ಕಾಲಿನಿಂದ ಹೊಟ್ಟೆಗೆ ಒದ್ದನು ನೋವುಂಟು ಮಾಡಿ  50000/- ರೂ ಹಣವನ್ನು ತರದಿದ್ದರೆ ಬೇರೊಂದು ಹುಡುಗಿಯನ್ನು ಮದುವೆಯಾಗಲು ಬಿಡದಿದ್ದರೆ ನಿನ್ನನ್ನು ನಿನ್ನ ಮಗುವನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಇದಕ್ಕೆ 2.ಕಮಲಮ್ಮ 3.ಗೀತಾ ಎಲ್ಲರೂ ಕಿರಿಸೊಡ್ಲು ಗ್ರಾಮ ಗೌಡಗೆರೆ ಹೋಬಳಿ ರವರುಗಳು ಸಹ ಭಾಗಿಯಾಗಿರುತ್ತಾರೆ ಅವರುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 279,304(ಎ) ಐ.ಪಿ.ಸಿ.

ದಿನಾಂಕ:24-4-2013 ರಂದು ಪಿರ್ಯಾದಿ ಕೆ. ಪ್ರಶಾಂತ್, ಪಿ.ಎಸ್.ಐ. ಮದ್ದೂರು ಸಂಚಾರಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಮರಿಗೆಗೌಡ, ನಂ. ಕೆ.ಎ-01-3040 ರ ಲಾರಿ ಚಾಲಕ ಬೆಂಗಳೂರು, ವಿಳಾಸ ತಿಳಿಯಬೇಕಾಗಿರುತ್ತೆ ಇವರು ತನ್ನ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಲಾರಿಯ ಚಕ್ರ ಅಪರಿಚಿತ ವ್ಯಕ್ತಿಯ ಹೊಟ್ಟೆಯ ಮೇಲೆ ಹರಿದ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 379 ಐ.ಪಿ.ಸಿ.

ದಿನಾಂಕ:24-4-2013 ರಂದು ಪಿರ್ಯಾದಿ ರವಿಕುಮಾರ್ಆರ್ ಕೆ.ಟಿ. ಕಾರಿಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮೂತರ್ಿ, ಮಾಣಿಕನಹಳ್ಳಿ ಗ್ರಾಮ, ಕಿಕ್ಕೇರಿ ರವರು ನನ್ನ ಹಸುವನ್ನು ಕಳ್ಳತನ ಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 281/13 ಕಲಂ. 380 ಐ.ಪಿ.ಸಿ.

ದಿನಾಂಕ:24-4-2013 ರಂದು ಪಿರ್ಯಾದಿ ಬಿ.ಜಿ.ಲಕ್ಷ್ಮಮ್ಮ, ಗುರುಶ್ರೀ, ಮನೆ ನಂ.17, 4ನೇ ಅಡ್ಡರಸ್ತೆ, ಶಕ್ತಿನಗರ, ಮೈಸೂರು ಸಿಟಿ-29 ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ರಾಘವೇಂದ್ರ ಜ್ಯೂಯಲರಿ ವಕ್ಸರ್್ನಲ್ಲಿ ಚಿನ್ನದ  ಸರದ ಪೆಂಡೆಂಟನ್ನು ಬದಲಾಯಿಸಲು ಕೊಟ್ಟಿದ್ದು ಅವರು ಪೆಟೆಂಟನ್ನು ತೆಗೆದುಕೊಂಡು ಸರವನ್ನು ವಾಪಸ್ಸ್ ಪಿರ್ಯಾದಿಯವರ ಮುಂದೆ ಟೇಬಲ್ ಮೇಲೆ ಇಟಿದ್ದು, ಅಂಗಡಿಯಲ್ಲಿ ತುಂಬಾ ಜನರು ಇದ್ದು ಪಿರ್ಯಾದಿಯವರು ಪೋನಿನಲ್ಲಿ ಮಾತನಾಡಲು ಹೊರಗಡೆ ಹೋಗಿದ್ದು ಮಾತನಾಡಿ ವಾಪಸ್ಸ್ ಬಂದು ನೋಡಲಾಗಿ ಸರವು ಟೇಬಲ್ ಮೇಲೆ ಇರಲಿಲ್ಲ.  ಸರವು 28 ಗ್ರಾಂ ಇದ್ದು. ಇದರ ಒಟ್ಟು ಬೆಲೆ ಸುಮಾರು 48,000/- ರೂ. ಆಗಿರುತ್ತದೆ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ : 

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ:24-4-2013 ರಂದು ಪಿರ್ಯಾದಿ ಕೆ.ಎಂ.ಉಮಾ, ಕಾಡುಕೊತ್ತನಹಳ್ಳಿ ಗ್ರಾಮ ಚಿಕ್ಕರಸಿನಕೆರೆ ಹೊಬಳಿ ರವರು ನೀಡಿದ ದೂರು ಏನೆಂದರೆ ಆರೋಪಿ ಮಹೇಶ, 28 ವರ್ಷ, ವ್ಯವಸಾಯ, ಕಾಡುಕೊತ್ತನಹಳ್ಳಿ ಗ್ರಾಮ ರವರು ಹೊಟ್ಟೆನೋವು ತಾಳಲಾರದೆ ಗದ್ದೆಗೆ ಸಿಂಪಡಿಸುವ ಔಷಧಿ(ಕೀಟನಾಶಕ) ವನ್ನು ಸೇವಿಸಿದ್ದು ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 23-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-04-2013 ರಂದು ಒಟ್ಟು 43 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವಂಚನೆ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಅಪಹರಣ ಪ್ರಕರಣ,  3 ಕಳ್ಳತನ ಪ್ರಕರಣಗಳು ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 23-04-2013 ರಂದು ಪಿರ್ಯಾದಿ ಎಂ.ರಾಜು ಬಿನ್. ಮೂಡಲಪ್ಪ, 43 ವರ್ಷ, ವ್ಯವಸಾಯ, ಬೆಳ್ಳಾಳೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರ್.ಬಿ.ರಕ್ಷಿತ್ ಬೆಳ್ಳಾಳೆ ಗ್ರಾಮರವರು ದಿನಾಂಕ: 20-04-2013 ರಂದು ಫಿರ್ಯಾದಿಯವರ ರೈಸ್ಮಿಲ್ ಬಳಿ ಇದ್ದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 205/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ:23-04-2013 ರಂದು ಪಿರ್ಯಾದಿ ಲೋಕೇಶ.ಎಂ ಬಿನ್ ಲೇಟ್ ಮಾದೇಗೌಡ, ಕುಂಬಾರಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಸಿ.ಅಕ್ಷಯ್ ಬಿನ್. ಲೋಕೇಶ್.ಎಂ, 18 ವರ್ಷ ಕುಂಬಾರಕೊಪ್ಪಲು, ಮೈಸೂರು ಸಿಟಿ ರವರು ದಿನಾಂಕ: 19-04-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಕೊಮ್ಮೇರಹಳ್ಳಿ ವಿಶ್ವ ಮಾನವ ಹಾಸ್ಟಲ್ನಿಂದ ಮನೆಗೆ ಹೋಗುತ್ತೇನೆಂದು ಹೇಳಿ ಹೋದವರು  ತನ್ನ ವಾಸದ ಮನೆ ಮೈಸೂರಿಗೆ ಹೋಗದೆ ಕಾಣೆಯಾಗಿರುತ್ತಾನೆ ಈ ಬಗ್ಗೆ ಅವರ ಸ್ನೇಹಿತರುಗಳ ಮನೆಗಳಲ್ಲಿ  ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 23-04-2013 ರಂದು ಪಿರ್ಯಾದಿ ವಿ.ಎಂ ಭಾಸ್ಕರ ಬಿನ್. ಅರಕೆರೆ ಟೌನ್, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ] ಮಣಿರಾಜನ್ 2] ರಾಜು ಇಬ್ಬರೂ ಸೇಲಂ ಟೌನ್, ತಮಿಳುನಾಡು ರಾಜ್ಯ ರವರುಗಳು ಫಿರ್ಯಾದಿಗೆ  ಫೋನ್ ಮಾಡಿ 2 ಲಕ್ಷ ರೂ.ಗಳನ್ನು ನೀಡಿದರೆ, 10 ಲಕ್ಷ ಸಾಲ ಕೊಡುತ್ತೇವೆ ಎಂದು ತಿಳಿಸಿದ್ದು, ಫಿರ್ಯಾದಿಯವರು ಅದರಂತೆ ದಿನಾಂಕ: 19-04-2013 ರಂದು ಸೇಲಂ ಟೌನ್ ಗೆ,  ಹೋಗಿ ಬೆಳಿಗ್ಗೆ  07-30 ಗಂಟೆಗೆ ಆರೋಪಿಗಳಿಗೆ ನೀಡಿದ್ದು, ಆರೋಪಿಗಳು ಬ್ಲಾಕ್ ಪೇಪರ್ ಕೊಟ್ಟು ಎಂದು ಹೇಳಿ, ಭಾನುವಾರ ನಿಮ್ಮ ಮನೆಗೆ ಬಂದು  ವರ್ಜಿನಲ್ ಹಣ ಮಾಡಿಕೊಡುವುದಾಗಿ ಹೇಳಿ ನಂಬಿಸಿ, 2 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 11/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 23-04-2013 ರಂದು ಪಿರ್ಯಾದಿ ವೆಂಕಟೇಗೌಡ, ಹಳುವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸ, ಒಕ್ಕಲಿಗರು, ವ್ಯವಸಾಯ, ಹಳುವಾಡಿ ಗ್ರಾಮ ರವರು ದಿನಾಂಕ: 22-04-2013 ರಂದು ಹೊಟ್ಟೆನೋವು ತಾಳಲಾರದೆ ಗದ್ದೆಗೆ ಸಿಂಪಡಿಸಲು ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷದಿಯನ್ನು ಕುಡಿದಿದ್ದು ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 22-4-2013 ರಂದು ರಾತ್ರಿ 08-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 194/13 ಕಲಂ. 363 ಐ.ಪಿ.ಸಿ.

      ದಿನಾಂಕ: 23-04-2013 ರಂದು ಪಿರ್ಯಾದಿ ಪ್ರಶಾಂತ್. ಆರ್.ಆರ್. ಸ್ವರ್ಣಸಂದ್ರ,, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಆರೋಪಿ ನಿರಂಜನ ಬಿನ್. ಆಟೋ ಮಾದು, 22 ವರ್ಷ ಚಿಕ್ಕ ಮಂಡ್ಯ .ಫೂರ್ಣ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ಇವರು ಸ್ವರ್ಣಸಂದ್ರದ ಶನಿಮಹಾತ್ಮ  ದೇವಸ್ಥಾನದ ಹತ್ತಿರಕ್ಕೆ  ನಮ್ಮ ಮಗಳುನ್ನು ಬರಹೇಳಿ ಅಲ್ಲಿಂದ  ಅವಳನ್ನು ಅಪಹರಿಸಿಕೊಂಡು ಹೋಗಿದ್ದು ನಾನು ಮತ್ತು  ನನ್ನ ಹೆಂಡತಿ ಅಂದಿನಿಂದ ಇಂದಿನವರೆವಿಗೂ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಹ ನಮ್ಮ ಮಗಳು ಸಿಕ್ಕಿರುವುದಿಲ್ಲಾ. ನಮ್ಮ ಮಗಳು ಇನ್ನು ಅಪ್ರಾಪ್ತ ವಯಸ್ಕಳಾಗಿದ್ದು 16ವರ್ಷ ತುಂಬಿರುತ್ತೆ ಆದ್ದರಿಂದ ತಾವುಗಳು ನಮ್ಮ ಮಗಳನ್ನು  ಅಪಹರಿಸಿಕೊಂಡು ಹೋಗಿರುವ  ನಿರಂಜನನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣಗಳು : 

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 195/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 23-04-2013 ರಂದು ಪಿರ್ಯಾದಿ ಎ.ಅನಂತರಾಮು,  ಹುಡ್ಕೋ, ಮಂಡ್ಯ ರವರು ನೀಡಿದ ದೂರು ಏನೆಂದರೆ ದಿನಾಂಕ: 22-04-2013 ರಂದು ರಾತ್ರಿ ವೇಳೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ 2ನೇ ಹಾಸ್ಟೆಲ್ನಲ್ಲಿ ನೆಹರು ನಗರ ಮಂಡ್ಯದಲ್ಲಿ ಯಾರೋ ಕಳ್ಳರು ಹಾಸ್ಟೆಲ್ಗಳ ರೂಮುಗಳ ಬೀಗಗಳನ್ನು ಮೀಟಿ ಅಳವಡಿಸಿದ್ದ 14 ಬಜಾಜ್ ಕಂಪನಿಯ ಸೀಲಿಂಗ್ ಫ್ಯಾನ್ಗಳನ್ನು ಶೌಚಾಲಯದ ಬಾಗಿಲ ಬೀಗವನ್ನು ಮೀಟಿ 4 ಹಳೆಯ ಸ್ಟೀಲ್ ನಲ್ಲಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 181/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 23-04-2013 ರಂದು ಪಿರ್ಯಾದಿ ಟಿ. ಶ್ರೀಪತಿ ಬಿನ್. ಲೇಟ್|| ತಿಮ್ಮಯ್ಯ, 2ನೇ ಕ್ರಾಸ್, ಸಕರ್ಾರಿ ಹೈಸ್ಕೂಲ್ ಹಿಂಭಾಗ, ಕಾವೇರಿನಗರ ರವರು ನೀಡಿದ ದೂರು ಏನೆಂದರೆ ದಿನಾಂಕ: 22-4-2013 ರ ರಾತ್ರಿವೇಳೆಯಲ್ಲಿ ಮದ್ದೂರು ಟೌನ್ ಕಾವೇರಿ ನಗರದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಹೊಡೆದು ಒಳನುಗ್ಗಿ ಮನೆಯಲ್ಲಿ ಬಿರುವಿನಲ್ಲಿದ್ದ 24,800/- ರೂ ಬೆಲೆ ಬಾಳುವ ಚಿನ್ನದ 1 ಜೊತೆ ಗುಂಡು, 5 ಗ್ರಾಂನ ಚಿನ್ನದ ಎರಡು ತಾಳಿ, ಹಾಗೂ 3,1/2 ಗ್ರಾಂ ಚಿನ್ನದ ಉಂಗುರ [ಹರಳು ಇರಲಿಲ್ಲ] ಹಾಗೂ 1 ಬೆಳ್ಳಿಯ ಚೊಂಬು, ಬೆಳ್ಳಿಯ ದೀಪಾಳೆಕಂಬ, ಮತ್ತು 1 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 457-380 ಐ.ಪಿ.ಸಿ.

      ದಿನಾಂಕ: 23-04-2013 ರಂದು ಪಿರ್ಯಾದಿ ಶ್ರೀ ಕೃಷ್ಣ, ಸರ್ಕಾರಿ  ಪ್ರೌಡಶಾಲೆ, ಹೊಸಕ್ಕಿಪಾಳ್ಯ ಗೇಟ್, ಹಟ್ನ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರದ ಕೊಠಡಿಯ ಕಬ್ಬಿಣದ ಬೀಗವನ್ನು ಯಾರೋ ಕಳ್ಳರು ಹೊಡೆದಿರುವುದು ಕಂಡು ಬಂತು, ನಾನು ಗಾಬರಿಗೊಂಡು ಗಣಕಯಂತ್ರದ ಕೊಠಡಿಯ ಒಳಗೆ ಹೋಗಿ ನೋಡಿದಾಗ 11 ಬ್ಯಾಟರಿ, 2 ಸಿ.ಪಿ.ಯು ಹಾಗೂ 2 ಪ್ಲಗ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 22-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-04-2013 ರಂದು ಒಟ್ಟು 43 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ರಾಬರಿ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,    1 ಕೊಲೆ ಪ್ರಕರಣ,  ಇತರೆ 39 ಅಬಕಾರಿ/ಚುನಾವಣಾ/ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 304[ಎ] ಐ.ಪಿ.ಸಿ.

ದಿನಾಂಕ: 22-04-2013 ರಂದು ಪಿರ್ಯಾದಿ ಜವರಯ್ಯ ಬಿನ್. ಲಕ್ಕಯ್ಯ, ಹುಲಿಕೆರೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಅ. ಮಿಷನ್ ನಂ.1821047, ಇಂಜಿನ್ ನಂ.ಊ25917 ರ ಚಾಲಕ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ,  ಇವರು ಜೆ.ಸಿ.ಬಿ.ಯನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ  ಹಿಂದಕ್ಕೆ  ಮುಂದಕ್ಕೆ ತೆಗೆದು ಕೆಲಸ ಮಾಡುವಾಗ ರಸ್ತೆಯ ಮೊಗ್ಗಲಲ್ಲಿ ನಿಂತಿದ್ದ ಆಕಾಶನಿಗೆ ಡಿಕ್ಕಿ ಹೊಡೆದು ಆತನ ಪೆಕ್ಕೆಗೆ  ಪೆಟ್ಟಾಗಿ ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆತಂದಿರಿತ್ತೇನೆ ನನ್ನ ತಮ್ಮ ರಮೇಶನ ಮಗ ಆಕಾಶನ ಸಾವಿಗೆ ಮೇಲ್ಕಂಡ ಜೆ.ಸಿ.ಬಿ. ಚಾಲಕನ ನಿರ್ಲಕ್ಷತನವೇ  ಕಾರಣವಾಗಿದ್ದು ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಾಬರಿ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 143-144-147-148-324-354-392-506 ಕೂಡ 149 ಐ.ಪಿ.ಸಿ.

ದಿನಾಂಕ: 22-04-2013 ರಂದು ಪಿರ್ಯಾದಿ ಹೆಚ್.ಎ. ಪುಟ್ಟಲಿಂಗಯ್ಯ ಬಿನ್. ಲೇಟ್. ಅಂಕಯ್ಯ, 50 ವರ್ಷ, ಒಕ್ಕಲಿಗ, ವ್ಯವಸಾಯ, ಹೊಸಕೆರೆ ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಜಯರಾಮ ಬಿನ್. ಆನೇಗೌಡ ಮತ್ತು ಇತರೆ 07 ಜನರು ಎಲ್ಲರೂ ಗೆಜ್ಜಲಗೆರೆ, ಮದ್ದೂರು ತಾ. ರವರು ಪಿರ್ಯಾದಿಯವರೊಂದಿಗೆ ಜಗಳ ತೆಗೆದು ಅಕ್ರಮ ಗುಂಪು ಕಟ್ಟಿಕೊಂಡು ಲಾಂಗಿನಿಂದ ಮತ್ತು ದೊಣ್ಣೆಯಿಂದ ಹೊಡೆದು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 112/13 ಕಲಂ. ಹುಡುಗ ಕಾಣಿಯಾಗಿದ್ದಾನೆ.

ದಿನಾಂಕ: 22-04-2013 ರಂದು ಪಿರ್ಯಾದಿ ಶಿವಮ್ಮ ಕೊಂ. ಅರುಣ್ಕುಮಾರ್, ನಂ. 221, 6ನೇ ಕ್ರಾಸ್, ಭವಾನಿನಗರ ರವರು ನೀಡಿದ ದೂರು ಏನೆಂದರೆ ಅವರ ಮಗ ಮನೋಜ್ 05ವರ್ಷ, :ದಿನಾಂಕ: 21-04-2013 ರಂದು  07-00 ಪಿ.ಎಂ ನಲ್ಲಿ,  ಶ್ರೀ ಆದಿಚುಂಚನಗಿರಿ ಕ್ಷೇತ್ರದ ಸಭಾಮಂಟಪದ ಬಳಿ ಆಟವಾಡುತ್ತಿದ್ದವನ್ನು ಕಾಣೆಯಾಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ಕೊಲೆ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 302, ಐ.ಪಿ.ಸಿ.

ದಿನಾಂಕ: 22-04-2013 ರಂದು ಪಿರ್ಯಾದಿ ಬಾಬು ಬಿನ್. ಲೇಟ್. ವಾಹಬ್ಖಾನ್, 48 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಕೊನೆಯ ಮಗಳು ಜುಲ್ಫಿಯಾ ಈಗ್ಗೆ ಎರಡು ವರ್ಷಗಳ ಹಿಂದೆ ಕೆಸ್ತೂರು ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದು, ನವೀನ್ ಎಂಬುವವನನ್ನು ಪರಸ್ಪರ ಪ್ರೀತಿಸುತ್ತಿದ್ದು, ನಮ್ಮಗಳ ಸಮ್ಮತಿಯನ್ನು ಪಡೆಯದೆ ಇಬ್ಬರು ಮದುವೆಯಾಗಿರುತ್ತಾರೆ. ಅದೇ ಮನೆಯಲ್ಲಿ ನನ್ನ ಮಗಳು ಮೃತಪಟ್ಟಿದ್ದಾಳೆಂದು ನನಗೆ ನಮ್ಮ ಗ್ರಾಮದ ರಮೇಶ್ ಕರೆ ಮಾಡಿ ತಿಳಿಸಿರುತ್ತಾನೆ.  ನನ್ನ ಮಗಳ ಕುತ್ತಿಗೆಯನ್ನು ಯಾವುದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಹೊರಟು ಹೋಗಿರುತ್ತಾನೆ. ನನ್ನ ಮಗಳ ಶವದ ಹತ್ತಿರ ಸೀರೆಯ ಜೋಲಿಯಲ್ಲಿದ್ದ ಒಂದೂವರೆ ತಿಂಗಳ ಹೆಣ್ಣು ಮಗುವನ್ನು ನನ್ನ ವಶಕ್ಕೆ ಪಡೆದುಕೊಂಡಿರುತ್ತೇನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 21-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-04-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  1 ಕಳವು ಪ್ರಕರಣ ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಪಘಾತ ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 304(ಎ) ಐ.ಪಿ.ಸಿ.

ದಿನಾಂಕ: 21-04-2013 ರಂದು ಪಿರ್ಯಾದಿ ನಾಗೇಶ, ಉಯ್ಗೋನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯವರ ಜಮೀನಿನಲ್ಲಿ ನಂ. ಕೆಎ-51, ಎಂ.ಡಿ-7333,  ಬೋರ್ ವೆಲ್ ನ ಚಾಲಕ ಹಾಗು ಮಾಲೀಕ 1] ಸಿಂದಿಕ್ ಮತ್ತು 2] ಮೊಗಣ್ಣಗೌಡ ರವರುಗಳು ಜಮೀನಿನಲ್ಲಿ ಬೋರ್ವೆಲ್ ಕೊರೆಯುತ್ತಿರುವಾಗ ಕೇಸಿಂಗ್ ಪೈಪನ್ನು ಕತ್ತರಿಸಿ ಉಳಿಕೆ ಪೈಪನ್ನು ಲಾರಿಯಿಂದ ಬೇರ್ಪಡಿಸುತ್ತಿದ್ದಾಗ ಬೋರ್ವೆಲ್  ಆಪರೇಟರ್ ಸರಿಯಾಗಿ ಆಪರೇಟ್ ಮಾಡದ ಕಾರಣ ಬೋರ್ವೆಲ್ನ, ಮಿಷನ್ನಲ್ಲಿದ್ದ ಕೇಸಿಂಗ್ ಪೈಪ್ ಅಲ್ಲಿ ಕೆಲಸ ಮಾಡುತ್ತಿದ್ದ ಸತ್ತಿ ಎಂಬುವವರ ಬಲ ಪಕ್ಕೆಗೆ ಹೊಡೆದು ಅಲ್ಲೇ ಕೆಳಕ್ಕೆ ಬಿದ್ದು ನಂತರ ಉಪಚರಿಸಿ 108 ಆಂಬುಲೆನ್ಸ್ ನಲ್ಲಿ, ಕೆ.ಆರ್.ಪೇಟೆ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸುವಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 279,337-304[ಎ]  ಐ.ಪಿ.ಸಿ. ರೆ/ವಿ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 21-04-2013 ರಂದು ಪಿರ್ಯಾದಿ ಎಂ. ಹೇಮಂತ್ ಕುಮಾರ್, ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ-44-4479 ರ ಟ್ರಾಕ್ಟರ್, ಹೆಸರು  ವಿಳಾಸ ಗೊತ್ತಿಲ್ಲಾ ಇವರು ದಿನಾಂಕ: 20-04-2013 ರಂದು ರಾತ್ರಿ 12 ಗಂಟೆಯಲ್ಲಿ ತಮ್ಮ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತೋಷನಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಸಂತೋಷ ಮೃತಪಟ್ಟಿರುತ್ತಾನೆ ಅವನ ಶವವು ಅಲ್ಲೆ ಇರುತ್ತದೆ ಈ ಅಪಘಾತಕ್ಕೆ ಕಾರಣನಾದ ಟ್ರಾಕ್ಟರ್ ಚಾಲಕನ ಮೇಲೆ  ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 379 ಐ.ಪಿ.ಸಿ.

ದಿನಾಂಕ: 21-04-2013 ರಂದು ಪಿರ್ಯಾದಿ ಕುರ್ರಮ್ ಅಮೀದ್, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಬ್ಯಾಗಿನಲ್ಲಿದ್ದ 6 ಮೊಬೈಲ್ ಗಳು ಹಾಗೂ 7400/- ರೂ ಹಣ ಕಳುವಾಗಿರುತ್ತದೆಂದು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 20-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-04-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಾಬರಿ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು,  2 ವಾಹನ ಕಳವು ಪ್ರಕರಣಗಳು,  1 ಚುನಾವಣಾ ನೀತಿ ಸಂಹಿತೆ ಪ್ರಕರಣ,  ಅಬಕಾರಿ ಕಾಯಿದೆ ಪ್ರಕರಣಗಳು, ಚುನಾವಣಾ ಮುಂಜಾಗ್ರತಾ ಪ್ರಕರಣಗಳು ಹಾಗು ಇತರೆ 24 ಪ್ರಕರಣಗಳು ವರದಿಯಾಗಿರುತ್ತವೆ.


ರಾಬರಿ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 191/13 392,  ಐ.ಪಿ.ಸಿ.

     ದಿನಾಂಕ: 20-04-2013 ರಂದು ಪಿರ್ಯಾದಿ ಬಿ. ಕೇಶವ ಬಿನ್. ಎಸ್. ಭೀಮರಾಜು, ಆಶೋಕ ನಗರ, ಮಂಡ್ಯ, ವಿದ್ಯಾನಗರ, ಶಿವಮೊಗ್ಗ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು ಅಪರಿಚಿತ ಮೋಟಾರು ಬೈಕು ಸವಾರರು ಸುಮಾರು 19 ರಿಂದ 20 ವರ್ಷದವರು ಪಿರ್ಯಾದಿಯವರು ಬಿಲ್ ಕಲೆಕ್ಷನ್ ಮಾಡಿಕೊಂಡು ಬಿಲ್ಗಳು ಮತ್ತು ಹಣ ಸುಮಾರು 50-60 ರೂ ನಗದು ಹಣವನ್ನು ಟಾರ್ಪಲ್ ಬ್ಯಾಗಿನಲ್ಲಿ ಇಟ್ಟುಕೊಂಡು ಪೇಟೆ ಬಿದಿಗೆ ಹೋಗಲು ಗುತ್ತಲಿನಿಂದ ಹೊರಟು ಎಸ್,ಎಫ್ ಸರ್ಕಲ್ ಮೂಲಕ ಹಳೆ ಎಂ.ಸಿ ರಸ್ತೆ ಷುಗರ್ ಟೌನ್ ಷುಗರ್ ಕಂಪನಿಯ ಮುಖ್ಯ ಕಛೇರಿಯ ಪಶ್ಚಿಮದ ಹಳೆ ಸಂಗಪ್ಪನ ಖಾಲಿಸ ಜಾಗದಲ್ಲಿ ಬೈಕ್ ಅನ್ನು ಇಲ್ಲಿಸಿ ಹಣದ ಬ್ಯಾಗಿನ ಸಮೇತ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಯಾರೋ ಇಬ್ಬರು ಹಿಂದಿನಿಂದ ಬಂದು ಒಬ್ಬ ಒಂದು ಕಡ್ಡಿಯಿಂದ ವೃಷಣಕ್ಕೆ ಹೊಡೆದಾಗ ಮತ್ತೊಬ್ಬ ಹಣದ ಬ್ಯಾಗನ್ನು ಕಿತ್ತುಕೊಂಡು ಇಬ್ಬರ ಅವರ ಬೈಕ್ ಹತ್ತಿ ಪೂರ್ವಕ್ಕಾದಂತೆ ಹೊರಟು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 177/13 ಕಲಂ. 392 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಪಾರ್ವತಮ್ಮ ಕೊಂ. ಲೇ|| ರಾಮಕೃಷ್ಣ, ಎಸ್.ಬಿ.ಎಂ. ಮುಂಭಾಗದ ರಸ್ತೆ, ಮದ್ದೂರು ಟೌನ್. ರವರು ನೀಡಿದ ದೂರಿನ ವಿವರವೇನೆಂದರೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂಭಾಗದಿಂದ ಏಕಾಏಕಿ ಯಾರೋ ಕಳ್ಳನು ನನ್ನ ಬಲಕತ್ತಿನ ಬಳಿ ಬಂದು ಕೈ ಹಾಕಿ ಬಲವಾಗಿ ಹಿಡಿದುಕೊಂಡು ನನ್ನ ಕತ್ತಿನಲ್ಲಿದ್ದ ಒಂದು ಸುಮಾರು 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಾಗಿ ಕಿತ್ತಾಗ ಅದರ ಬಗ್ಗೆ ನನಗೆ ಅರಿವು ಬಂದು ಎಡಗೈಯಿಂದ ನನ್ನ ಕತ್ತಿನ ಸರವನ್ನು ಬಲವಾಗಿ ಹಿಡಿದುಕೊಂಡೆ ಆದರೂ ಆತ ಅರ್ಧ ಸರವನ್ನು ಕಿತ್ತುಕೊಂಡನು. ಉಳಿದರ್ಧ ನನ್ನ ಎಡಗೈಗೆ ಸೇರಿದೆ. ಸುಮಾರು 35ಗ್ರಾಂ ಆಗಿರುತ್ತೆ ಅದರ ಅಂದಾಜು ಬೆಲೆ ಸುಮಾರು 91,000/- ಬೆಲೆ ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆರಗೋಡು ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 392 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಪಲ್ಲವಿ ಕೋಂ. ರಾಮು, ಸ್ವರ್ಣಸಂದ್ರ, 3 ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 20-04-2013 ರಂದು ಬೆಳಿಗ್ಗೆ 09-50 ಗಂಟೆಯಲ್ಲಿ ಕೀಲಾರ, ಮಂಡ್ಯ ಮುಖ್ಯ ರಸ್ತೆಯಲ್ಲಿ ಯಾರೋ ಇಬ್ಬರು ಅಪರಿಚಿತ ಹುಡುಗರು ಹಣವನ್ನು ಕಲೆಕ್ಟ್ ಮಾಡಿದ್ದು ಒಟ್ಟು ಹಣ 44252/- ರೂಪಾಯಿಗಳನ್ನು ಕಪ್ಪು ಬ್ಯಾಗ್ ನಲ್ಲಿ ಇಟ್ಟುಕೊಂಡು ಸುಮಾರು 09-50 ಗಂಟೆಯಲ್ಲಿ ಕೀಲಾರದಿಂದ ಮಂಡ್ಯಕ್ಕೆ ಕೆಎ-02-ಇಡಿ-651 ಸ್ಕೂಟಿಯಲ್ಲಿ ಹೋಗುವಾಗ ಕೀಲಾರ ಬಳಿಯ ಆಚರ್್ ಸಹ ಬಿಟ್ಟು ಮುಂದೆ ಹಳ್ಳದ ಹತ್ತಿರ ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿ ಹುಡುಗರು ಪಲ್ಸರ್,  ಗಾಡಿಯಲ್ಲಿ ಬಂದು ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕು ತೋರಿಸಿ ನನಗೆ ನನ್ನ ಹತ್ತಿರ ಇದ್ದ ಹಣದ ಬ್ಯಾಗನ್ನು ಕಿತ್ತುಕೊಂಡು ಹೊರಟು ಹೋದರು. ಗಾಬರಿಯಲ್ಲಿ ಗಾಡಿಯ ಸಂಖ್ಯೆಯನ್ನು ನೋಡಲಿಲ್ಲ. ಸದರಿ ವ್ಯಕ್ತಿಗಳನ್ನು ನೋಡಿದರೆ ಗುತರ್ಿಸುತ್ತೇನೆ. ಈ ಮೇಲ್ಕಂಡ ಹಣವನ್ನು ಪತ್ತ್ತೆ ಮಾಡಿಕೊಟ್ಟು ಕಾನೂನು ರೀತಿಯಾಗಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. ಕಲಂಃ 59/13 ಕಲಂ. 279-304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

     ದಿನಾಂಕ: 20-04-2013 ರಂದು ಪಿರ್ಯಾದಿ ಲಕ್ಷ್ಮಮ್ಮ @ ಸಾವಿತ್ರಮ್ಮ ಕೋಂ. ಲೇ.ನಂಜಪ್ಪ, ಪಿಚಿಟ್ಟನಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ  ಪ್ರವೀಣ, ಕೆಎ-04/5485 ರ ಹೀರೊಹೊಂಡಾ ಸಿಡಿ-100 ಬೈಕ್ ಚಾಲಕ, ಮಸ್ಕೋನಹಳ್ಳಿ ಗ್ರಾಮ ರವರು ಮೊಟಾರ್ ಬೈಕ್ನ್ನು ಅತಿ ವೇಗವಾಗಿ ಮತ್ತು ಅಜಾಗೃತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಾಯಿಗೆ ಡಿಕ್ಕಿ ಅಪಘಾತವನ್ನುಂಟು ಮಾಡಿದನು ಇದರಿಂದ ನಮ್ಮ ತಾಯಿ ತಕ್ಷಣ ಕೆಳಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು,. ಮೊಟಾರ್ ಬೈಕ್ ಚಾಲಕ ಬೈಕ್ನ್ನು ನಿಲ್ಲಿಸದೆ ಹೊರಟು ಹೋದನು. ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ ದಾಖಲಿಸಲಾಗಿದೆ. 


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ.60/13 ಕಲಂ. 279, 304(ಎ) ಐ.ಪಿ.ಸಿ.

     ದಿನಾಂಕ: 20-04-2013 ರಂದು ಪಿರ್ಯಾದಿ ಸತೀಶ್ ಬಿನ್. ಸುಬ್ಬರಾಮಯ್ಯ, ದಡಗ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ನೀಡಿದ ದೂರು ಏನೆಂದರೆ ಆರೋಪಿ ಅರುಣ. ಕೆ.ಎ-03-ಎಂ.ಎನ್.-6042 ವೆನ್ಟೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಓಡಿಸಿಕೊಂಡು ಬಂದು ಶ್ರೀಮಂದಿರಯ್ಯನವರ ಮೋಟಾರ್ ಸೈಕಲಿಗೆ ಢಿಕ್ಕಿ ಮಾಡಿದ ಪರಿಣಾಮ ಶ್ರೀ ಮಂದಿರಯ್ಯ ನವರ ತಲೆಗೆ, ಕುತ್ತಿಗೆಗೆ, ಮೈ ಕೈಗಳಿಗೆ ಕಾಲುಗಳಿಗೆ, ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥೃಳದಲ್ಲಿಯೇ ಮೃತಪಟ್ಟಿದ್ದು ಈ ಅಪಘಾತ ಮಾಡಿದ ಕಾರಿನ ಚಾಲಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 379 ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ದಿ:07/04/13 ರಂದು ಸಿದ್ದರಾಜು ಬಿನ್. ಚಿಕ್ಕಲಿಂಗೇಗೌಡ, ಅಮೃತೇಶ್ವರನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಅವರ    ಜಮೀನು ಅಮೃತೇಶ್ವರನಹಳ್ಳಿ ಗ್ರಾಮದ ಸವರ್ೇ. ನಂ.71/6ಎ ಮತ್ತು 71/6ಎಪೈ ಜಮೀನು, ಮಳವಳ್ಳಿ ತಾ. ರಲ್ಲಿ ಆರೋಪಿಗಳಾದ 1) ಜವನೇಗೌಡ, 2) ಮಹದೇವಶೆಟ್ಟಿ ಹಾಗು 3) ನಾಗರಾಜಶೆಟ್ಟಿ ಅಮೃತೇಶ್ವರನಹಳ್ಳಿ ಗ್ರಾಮ ರವರುಗಳು ರಾತ್ರಿ ಸಮಯದಲ್ಲಿ ಕದ್ದು ಟೈರ್ ಗಾಡಿಯಲ್ಲಿ ತುಂಬಿಕೊಂಡು ಕಳ್ಳತನ ಮಾಡಿಕೊಂಡು ಸಾಗಿಸಿರುತ್ತಾರೆಂದು ಇವುಗಳ ಬೆಲೆ ಸುಮಾರು 30,000/- ರೂ.ಗಳಾಗುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 199/13 ಕಲಂ. 379 ಐ.ಪಿ.ಸಿ.

    ದಿನಾಂಕ: 20-04-2013 ರಂದು ಪಿರ್ಯಾದಿ ಬಿ.ಸಿ.ಮಾಯಿಗಯ್ಯ ಒಕ್ಕಲಿಗರು, ಬೇಲೂರು ರವರು ಮೋಟಾರ್ ಮತ್ತು ಪೈಪನ್ನು ಅವರ ಜಮೀನಿನ ಬೋರ್ವೆಲ್ ಗೆ ಅಳವಡಿಸಿದ್ದು, ದಿನಾಂಕ-19-04-13 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪೈಪ್ ಮತ್ತು ಮೋಟಾರ್ ಎರಡನ್ನೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 8000/- ರೂಗಳಾಗಿರುತ್ತೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಚುನಾವಣಾ ನೀತಿ ಸಂಹಿತೆ ಪ್ರಕರಣ : 

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 171 (ಹೆಚ್) ಐ.ಪಿ.ಸಿ.

   ದಿನಾಂಕ: 20-04-2013 ರಂದು ಪಿರ್ಯಾದಿ ಕೆಂಪೇಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಯವರು, ಹರಳಹಳ್ಳಿ, ಹರಿಯಾಲದಮ್ಮ ಚೆಕ್ ಪೊಸ್ಟ್ನ ಮುಖ್ಯಸ್ಥರು ನೀಡಿದ ದೂರು ಏನೆಂದರೆ ಆರೋಪಿ 1] ಸರ್ವಣ್ಣ ಹಾಗು 2] ಮಂಜುನಾಥ ಇಬ್ಬರೂ ಬೆಂಗಳೂರು ನಗರ ರವರುಗಳು ಮೋಟಾರ್ ಸೈಕಲ್ನಲ್ಲಿ ಬರುತ್ತಿದ್ದು ಅವರನ್ನು ಪಿರ್ಯಾದಿಯವರು ತಡೆದು ತಪಾಸಣೆ ಮಾಡುತ್ತಿದ್ದಾಗ ಹಿಂದೆ ಕುಳತಿದ್ದ ಆರೋಪಿ-2 ರವರ ಕೈಯ್ಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇದ್ದು ಕವರ್ ನಲ್ಲಿ   1,65,000-00 ರೂ ನಗದು ಹಣವಿದ್ದು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರ ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಮತ್ತು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದವರ ಬಳಿ ಯಾವುದೇ ರೀತಿಯ ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಆರೋಪಿಗಳನ್ನು ಮತ್ತು ಮಾಲಿನ ಸಮೇತ ದೂರು ದಾಖಲಿಸಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 19-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-04-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 29 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 174(ಸಿ) ಸಿ.ಆರ್.ಪಿ.ಸಿ.

ದಿನಾಂಕ: 19-04-2013 ರಂದು ಪಿರ್ಯಾದಿ ಗುರುಮೂರ್ತಿ ಬಿನ್. ಲೇ. ಹುಚ್ಚಪ್ಪ, 50ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ವಯಸ್ಸು ಸುಮಾರು 50-55 ವರ್ಷ, ಹೆಸರು, ವಿಳಾಸ ತಿಳಿಯಬೇಕಾಗಿದೆ ದಿನಾಂಕ: 18-04-2013 ರ ರಾತ್ರಿ ವೇಳೆಯಲ್ಲಿ ಹಲಗೂರು ನಾಗರಾಜಪ್ಪರವರ ಸರ್ವೆ. ನಂ. 176ರ ಜಮೀನಿನಲ್ಲಿರುವ ಒಂದು ಉಲಚಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಶವವು ಮರದಲ್ಲಿ ನೇತಾಡುತ್ತಿರುತ್ತೆ ಶವದ ತೊಡೆಯ ಬಳಿ ರಕ್ತ ಬರುತ್ತಿದ್ದು ಸಾವಿನ ಬಗ್ಗೆ ಅನುಮಾನವಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ:19-04-2013 ರಂದು ಪಿರ್ಯಾದಿ ಬಸವರಾಜು ಬಿನ್. ಚಿಕ್ಕಬಸವಯ್ಯ, 46 ವರ್ಷ, ಒಕ್ಕಲಿಗರು, ಉಪನ್ಯಾಸಕರು, ಸುಲ್ತಾನ್ ರಸ್ತೆ, ಚರ್ಚ ಎದುರು ಮಳವಳ್ಳಿ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಲ್ಲೇಶ ಬಿನ್. ಲೇಟ್. ಸುಬ್ಬಶೆಟ್ಟಿ, ಪಾಳ್ಯೆ ಗ್ರಾಮ, ಕೋಳ್ಳೇಗಾಲ ತಾಲ್ಲೂಕು, ಕೆಎ-05-ಎಸ್-7509ರ ಟಿ.ವಿ.ಎಸ್. ಸ್ಕೂಟಿ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಸರೋಜಮ್ಮರವರಿಗೆ ಡಿಕ್ಕಿ ಮಾಡಿಸಿದ ಪರಿಣಾಮ, ತಲೆಗೆ ಮತ್ತು ಕಿವಿಯ ಹತ್ತಿರ ಏಟಾಗಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗಮಧ್ಯೆ  ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 18-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-04-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಎಸ್ಸಿ. ಮತ್ತು ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  2 ವಂಚನೆ ಪ್ರಕರಣಗಳು,   2 ರಸ್ತೆ ಅಪಘಾತ ಪ್ರಕರಣಗಳು, 4 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.        

ಎಸ್. / ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 3 ಕ್ಲಾಸ್ (1) (X)  ಎಸ್. / ಎಸ್.ಟಿ. ಅಕ್ಟ್-1989 ಹಾಗೂ 506 ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಎ.ಡಿ. ಬೀರೇಶ, 38 ವರ್ಷ, ಆದಿಕರ್ನಾಟಕ (ಮಾದಿಗ) ಜನಾಂಗ, ಆನೆದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎ.ಪಿ. ಮಹೇಶ @ ಆಕಾಶ್ ವಕ್ಕಲಿಗ, ಆನೆದೊಡ್ಡಿ ಗ್ರಾಮ ರವರಿಗೆ ಹಣವನ್ನು ಕೊಟ್ಟಿದ್ದು ನನಗೆ ಹಣದ ತೊಂದರೆ ಇದೆ ಎಂದು ಕೇಳಿದೆ ಆಗ ಅವನು ಏಕಾಏಕಿ ನನ್ನನ್ನು ಕರೆದು ಹಣ ಕೇಳುವಷ್ಠು ನಿನಗೆ ಕೊಬ್ಬ ಹೊಲಯ, ಮಾದಿಗ ನನ್ನ ಮಗನೆ, ಬೋಳಿಮಗನೆ, ಬಡ್ಡಿಮಗನೆ ಎಂದು ಜಾತಿ ನಿಂದನೆ ಮಾಡಿ ಬಾಯಿಗೆ ಬಂದ ಹಾಗೆ ಬೈದಿರುತ್ತಾನೆ. ನನಗೆ ಪ್ರಾಣ ಬೆದರಿಕೆ ಇರುವುದರಿಂದ ನನಗೆ ತುಂಬಾ ಭಯವಾಗುತ್ತದೆ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣಗಳು :

1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 419-468 ಐ.ಪಿ.ಸಿ. 

ದಿನಾಂಕ: 18-04-2013 ರಂದು ಪಿರ್ಯಾದಿ ಪ್ರತಾಪ್ರೆಡ್ಡಿ, ಸಿಪಿಐ, ಮಳವಳ್ಳಿ ಗ್ರಾಮಾಂತರ ವೃತ್ತ, ಮಳವಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿಕುಮಾರ್ 30ವರ್ಷ, ಚನ್ನಪಟ್ಟಣ್ಣ ಟೌನ್, ರಾಮನಗರ ಜಿಲ್ಲೆ ರವರು ಮೊ.ಸಂ.114/2012ರ ಆರೋಪಿಗಳಿಗೆ ಕೃತ್ಯವೆಸಗಲು ಮೊಬೈಲ್ ನಂ. 8431187015 ಸಿಮ್ನ್ನು ಬೇರೆಯವರ ದಾಖಲಾತಿಗಳನ್ನು ಮತ್ತು ಸಹಿಯನ್ನು ಬಳಸಿ ನೀಡಿರುತ್ತಾರೆಂದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 419-468 ಐ.ಪಿ.ಸಿ. 

ದಿನಾಂಕ: 18-04-2013 ರಂದು ಪಿರ್ಯಾದಿ ಪ್ರತಾಪ್ರೆಡ್ಡಿ, ಸಿಪಿಐ, ಮಳವಳ್ಳಿ ಗ್ರಾಮಾಂತರ ವೃತ್ತ, ಮಳವಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಹಮ್ಮದ್ಅಲಿ, 3ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್ ರವರು ಮೊ.ಸಂ.114/2012ರ ಆರೋಪಿಗಳಿಗೆ ಕೃತ್ಯವೆಸಗಲು ಮೊಬೈಲ್ ನಂ 9663871313 ಸಿಮ್. ಬೇರೆಯವರ ದಾಖಲಾತಿಗಳನ್ನು ಮತ್ತು ಸಹಿಯನ್ನು ಬಳಸಿ ನೀಡಿರುತ್ತಾರೆಂದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 107/13 ಕಲಂ. 279-337-304[ಎ} ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಶಿವಣ್ಣ, 40ವರ್ಷ, ಚುಂಚನಹಳ್ಳಿಪಾಳ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶೀತಲ್ಕುಮಾರ್. ಎಂ.ಜೆ. ಜೈನರು,  ಶಿಕ್ಷಕರು, ಮಾಯಸಂದ್ರ ಗ್ರಾಮ ರವರು ನಂ. ಕೆಎ-44-ಕೆ-668 ಬಜಾಜ್ ಡಿಸ್ಕವರಿ ಬೈಕನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿಗೆ ಪೆಟ್ಟಾಗಿ, ಮೋಟಾರ್ ಸೈಕಲ್ ಸವಾರ ಮೃತಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 279,304(ಎ) ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಮರಿಲಿಂಗಯ್ಯ, ಕುಂಟನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ಕೆ ಎ.09-ಎಫ್-3783 ರ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ನ್ನು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ-02-ಆರ್-5695 ರ ಮೋಟಾರ್ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆಸಿದ ಪರಿಣಾಮೆ ಅವರಿಗೆ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 498(ಎ) ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಮಾದೇವಿ, ನಂದೀಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 16-04-2013 ರಂದು ಆರೋಪಿಗಳಾದ ಯೊಗೇಶ, ಗೌರಮ್ಮ, ಶೇಖರ, ದ್ಯಾವಶೆಟ್ಟಿ, ವೈಶಾಲಿ, ಹಾಗು ಮಂಜುಳ ನಂದೀಪುರ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಇನ್ನೂ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಒತ್ತಾಯಿಸಿ ಗಂಡ ಮತ್ತು ಅತನ ಸಂಬಂಧಿಕರು ಹಿಂಸೆ ಕಿರುಕುಳ ನೀಡುತ್ತಿರುತ್ತಾರೆಂದು ಅವರುಗಳ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 498(ಎ), 323,506 ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಕಾವೇರಿ @ ಕಾವ್ಯ ಬಿದರಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಗಂಡ ಆರೋಪಿ ಯರಕೇಗೌಡ @ ಗಿರೀಶ, ಬಿದರಕೆರೆ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ಸಣ್ಣಪುಟ್ಟ ವಿಚಾರಗಳಿಗೆಲ್ಲಾ ನನಗೆ ಬೈದು , ಹೊಡೆದು ಮತ್ತು ಊಟ ಬಟ್ಟೆ ಕೊಡದೆ ಮಾನಸಿಕವಾಗಿ. ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಈಗ ನಾನು 3 ತಿಂಗಳ ಗಭರ್ಿಣಿಯಾಗಿರುತ್ತೇನೆ. ನಿಮ್ಮ ಅಪ್ಪನ ಮನೆಯಿಂದ ಹಣ ತೆಗೆದುಕೊಂಡು ಬಾ, ಇನ್ನು ಮುಂದೆ ಉಳಿಸುವುದಿಲ್ಲ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 80/13 ಕಲಂ. 498(ಎ)-504-114-149 ಐ.ಪಿ.ಸಿ. ಕೂಡ 3 ಮತ್ತು 4 ಡಿ.ಪಿ. ಕಾಯಿದೆ.    

ದಿನಾಂಕ:18-04-2013ರಂದು ಪಿರ್ಯಾದಿ ಊ.ಎ.ರೇಖಾ, ಹಂಚೀಪುರ, ಮಳವಳ್ಳಿ ತಾಲ್ಲೋಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಆರ್..ಓ.ನಂಜುಂಡಯ್ಯ . ಆರ್.ಓ.ಬಸವರಾಜು, ಆರ್..ಓ.ನಂಜುಂಡಸ್ವಾಮಿ, ಸುಶೀಲ, ಪವಿತ್ರ, ರಾಜಮ್ಮ ಎಲ್ಲರೂ ರಾವಣಿ ಗ್ರಾಮ, ಕಸಬಾ ಹೋಬಳಿ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ನಿಮ್ಮ ತಂದೆ ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


4. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 143-355-324-498(ಎ) ಕೂಡ 149 ಐಪಿಸಿ ಮತ್ತು ಕಲಂ 3 ಮತ್ತು 4 ಡಿ.ಪಿ ಆಕ್ಟ್.

ದಿನಾಂಕ: 18-04-2013 ರಂದು ಪಿರ್ಯಾದಿ ಶ್ರೀಮತಿ. ವಿನೋದ, ಐಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 17-04-2013 ರಂದು ಆರೋಪಿಗಳಾದ 1]ಬಸವರಾಜು 2]ಜಯಮ್ಮ, 3] ಗೌರಮ್ಮ, 4] ತಮ್ಮಯ್ಯ, 5] ಯೋಗರಾಜು, 6] ಪಾಪು, ಹಾಗು 7]ಸುನೀಲ್ ಐಕನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದು ಪಿಯರ್ಾದಿಗೆ ಚಪ್ಪಲಿ ಕಾಲಿನಿಂದ ಒದ್ದು ಸೀಳು ಸೌದೆಯಿಂದ ಎಡಕಾಲಿಗೆ ಹೊಡೆದು ರಕ್ತಗಾಯ ಮಾಡಿ ನೀನು ನಿಮ್ಮ ತಂದೆ ಮನೆಗೆ ಹೋಗು ಇಲ್ಲಿ ಇರಬೇಡ ಎಂದು ಹೊಡೆದು ಗಲಾಟೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 18-04-2013 ರಂದು ಪಿರ್ಯಾದಿ ಶಶಿಕಲಾ, 38 ವರ್ಷ, ಸ್ಪಂದನ ಉಚಿತ ಅನಾಥಾಶ್ರಮ, ಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಭವಾನಿ, 13ವರ್ಷ, ಸ್ಪಂದನ, ಅನಾಥಾಶ್ರಮದಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 17-04-2013


ದಿನಾಂಕ : 17-04-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ,  1 ವಂಚನೆ ಪ್ರಕರಣ,  4 ಮನುಷ್ಯ ಕಾಣೆಯಾದ ಪ್ರಕರಣಗಳು,    2 ರಸ್ತೆ ಅಪಘಾತ ಪ್ರಕರಣಗಳು ಹಾಗು 19 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. 461, 380 ಐ.ಪಿ.ಸಿ.

ದಿನಾಂಕ: 17-04-2013 ರಂದು ಪಿರ್ಯಾದಿ ಎಂ.ಶಾಂತ, ಹಾಪ್ಕಾಮ್ಸ್ ಸಹಾಯಕ, ಕುವೆಂಪುನಗರ, ಮೈಸೂರು ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯಲ್ಲಿ, ಎಂ.ಸಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ        1] ಎಸ್.ನಾಗೇಂದ್ರ ಗುತ್ತಲು, ಹಾಗು 2] ವಿ.ನಾಗರಾಜು ಕಾಮರ್ಿಕರ ಕಾಲೋನಿ, ಚಿಕ್ಕಮಂಡ್ಯ ರವರುಗಳು 09-04-13 ರಂದು ಎಂ.ಸಿ ರಸ್ತೆ, ಮಂಡ್ಯ ಸಿಟಿ ಯಲ್ಲಿರುವ ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯ ಬೀರುವನ್ನು ದಿನಾಂಕ: 09-04-2013 ರಂದು ಆರೋಪಿತರು ಹೊಡೆದು ಹಾಕಿ ದಾಖಲಾತಿಗಳನ್ನು ಹೊರಗಡೆ ತೆಗೆದು ಕಳವು ಮಾಡಿರುತ್ತಾರೆಂದು ಹಾಗೂ ಹೊಡೆದಿರುವ ಬೀರುವಿನ ನಕಲಿ ಕೀಲಿ ಕೈ ಮಾಡಿಸಿ ಬಳಕೆ ಮಾಡುತ್ತಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 190/13 ಕಲಂ. 420 ಐ.ಪಿ.ಸಿ.

ದಿನಾಂಕ: 17-04-2013 ರಂದು ಪಿರ್ಯಾದಿ ಮಾಯಣ್ಣ ಬಿನ್ ಲೇಟ್. ನೀಲಿ ಕೆಂಪಯ್ಯ, 53 ವರ್ಷ, ಬೇವಿನಹಳ್ಳಿ ಗ್ರಾಮ ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು 20-25 ವರ್ಷ ವಯಸ್ಸಿನ ಅಪರಿಚಿತ ಹುಡುಗರು ಬೆಳ್ಳಿ ಕಾಲುಮುರಿ ಹಾಗೂ ಕುಕ್ಕರನ್ನು ಪಾಲಿಶ್ ಮಾಡಿ ನಂತರ ತಮ್ಮ ಪತ್ನಿಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಪಾಲಿಶ್ ಮಾಡಲು ತೆಗೆದುಕೊಂಡಿದ್ದು ನಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಂಬಿಸಿ ಮಾಂಗಲ್ಯ ಸರವನ್ನು ಮೋಸದಿಂದ ತೆಗೆದುಕೊಂಡು ಹೊರಟುಹೋಗಿರುತ್ತಾರೆಂದು ಇದರ ಅಂದಾಜು ಬೆಲೆ ಸುಮಾರು 85,000 ರೂಗಳಾಗಿರುತ್ತೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರನ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 191/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ. 

ದಿನಾಂಕ: 17-04-2013 ರಂದು ಪಿರ್ಯಾದಿ ಕೆ.ಎಂ.ಮಂಚೇಗೌಡ ಬಿನ್. ಲೇಟ್. ಮೂಗಿ, ಮಾದೇಗೌಡ, 48 ವರ್ಷ, ಕಾರಸವಾಡಿ ರಸ್ತೆ ರವರು ನೀಡಿದ ದೂರು ಏನೆಂದರೆ ಅವರ ಮಗಳು ಕೆ.ಎಂ.ಸುಹಾಸಿನಿ ಬಿನ್ ಮಂಚೇಗೌಡ, 18 ವರ್ಷ,ಒಕ್ಕಲಿಗರು, ಕಾರಸವಾಡಿ ಗ್ರಾಮ, ಮಂಡ್ಯ ತಾ. ರವರು ಮನೆಯಿಂದ ಎದ್ದು ಬಾಗಿಲಿಗೆ ನೀರು ಹಾಕಲು ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ನಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಸೇಹಿತರ ಮನೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಕ್ರಮ ಕೋರಿ ನೀಡಿದ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ರಮೇಶ ಬಿನ್. ನಂಜೇಗೌಡ, ಸಾರಂಗಿ ಗ್ರಾಮ, ಕೆ.ಆರ್. ಪೇಟೆ ತಾ|| ಮಂಡ್ಯ ಜಿಲ್ಲೆರವರು ನೀಡಿದ ದೂರು ಏನೆಂದರೆ ಅವರ ಮಗಳು ಎಸ್.ಆರ್ ದೇವಕಿ ಬಿನ್. ರಮೇಶ್, 18 ವರ್ಷ, ವಕ್ಕಲಿಗರು, ಸಾರಂಗಿ ಗ್ರಾಮ ರವರು ದಿನಾಂಕ: 15.04.2013 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ಸಾರಂಗಿ ಗ್ರಾಮದಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಕೆ.ಆರ್.ಪೇಟೆ ಟೌನ್ಗೆ ಹೋದವಳು ಸಂಜೆ ಆದರು ಕೂಡ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಿದರು ಪತ್ತೆಯಾಗದ ಕಾರಣ ಸಿಕ್ಕಿರುವುದಿಲ್ಲ ಪತ್ತೆಮಾಡಿ ಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 155/2013 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ಪಳಿನಿ ಬಿನ್. ಲೇಟ್ ಕೆ. ಚಂದ್ರ, ಪೆನ್ಶನ್ ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾಯಿ ಧನಲಕ್ಷ್ಮಿ, ಪೆನ್ಶನ್ ಕಾಲೋನಿ ರವರು ದಿನಾಂಕ: 16-04-2013 ರಂದು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಲ್ ಶಿವರಾಮು ಬಿನ್. ಲಿಂಗಯ್ಯ, ಮಂಡ್ಯ ಸಿಟಿ, ಹೊಸಹಳ್ಳಿ, 6ನೇ ಕ್ರಾಸ್ (ಬಸವನಗುಡಿ ಮುಂದೆ) ವಾಸವಾಗಿರುವ ಆರ್, ಪವಿತ್ರ ಬಿನ್ ರಾಮಚಂದ್ರ, 19 ವರ್ಷ, ಮೊದಲನೇ ವರ್ಷದ ಬಿ.ಕಾಂ.ವಿದ್ಯಾರ್ಥಿನಿ, ವಾಸ ಕಾವೇರಿ ಚಂದ್ರ ದರ್ಶನ ಕಲ್ಯಾಣಮಂಟಪದ ಹತ್ತಿರ, ಕಾವೇರಿ ನಗರ, ಮಂಡ್ಯ ಸಿಟಿ ರವರು ದಿನಾಂಕ: 17-04-2013 ರಂದು ಬೆಳಿಗ್ಗೆ ಹೊಸಹಳ್ಳಿ 6 ನೇಕ್ರಾಸ್ ಬಸವನಗೂಡು ಮುಂಭಾಗದಲ್ಲಿರುವ ಪಿರ್ಯಾದಿ ಹೆಚ್.ಎಲ್ ಶಿವರಾಮು ರವರ ಮನೆಯಿಂದ ಕಾವೇರಿನಗರದ ತಂದೆ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಮನೆಗೆ ಸಂಜೆಯಾದರು ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲಾ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279,304 (ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಸ್.ಕೆಂಪಯ್ಯ ಬಿ.ಹೊಸೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 17-04-2013 ರಂದು ಪಂಚಲಿಂಗೇಶ್ವರ ಪೆಟ್ರೋಲ್ ಬಂಕ್ ಮುಂಭಾಗ ನಂ. ಕೆಎ-11/ಎ-5639ರ ಟಾಟಾ ಮ್ಯಾಜಿಕ್ ವಾಹನದ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಜೊತೆ ನನ್ನ ಬಲಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಜವರೇಗೌಡರ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಜವರೇಗೌಡರವರು ಕೆಳಗೆ ಬಿದ್ದಾಗ ಅಲ್ಲೇ ಜೊತೆಯಲ್ಲಿ ನಾನು ಹಾಗೂ ರಸ್ತೆಯಲ್ಲಿ ಬರುತ್ತಿದ್ದವರು ಜವರೇಗೌಡರನ್ನು ಎತ್ತಿ ಉಪಚರಿಸಿ ನೋಡಲಾಗಿ ಅವರಿಗೆ ತಲೆಗೆ, ಬಲಗೈಗೆ ಮತ್ತು ಇತರೆ ಕಡೆಗಳಿಗೆ ಪೆಟ್ಟಾಗಿದ್ದು ನಂತರ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 279-337-304[ಎ] ಐಪಿಸಿ ಕೂಡ 187 ಐಎಂವಿ ಕಾಯ್ದೆ.

ದಿನಾಂಕ: 17-04-2013 ರಂದು ಪಿರ್ಯಾದಿ ನಾಗೇಗೌಡ ಬಿನ್. ಸಿದ್ದೇಗೌಡ, 48 ವರ್ಷ, ರಾಯಸಮುದ್ರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 14.04.2013 ರಂದು ರಾತ್ರಿ 08.00 ಗಂಟೆಯಲ್ಲಿ, ಉಯ್ಗೋನಹಳ್ಳಿ ಹಳ್ಳದ ಹತ್ತಿರ ನಂ. ಕೆಎ-16-ಟಿ-7640 ರ ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತಿದ್ದ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿ ಕುಳಿತಿದ್ದ ನನಗೆ ಬಲಮೊಣಕೈಗೆ ಪೆಟ್ಟಾಯಿತು. ಕಾಂತರಾಜುಗೆ ತಲೆಗೆ ಮೈಕೈಗೆ ಪೆಟ್ಟಾಗಿ ತಲೆಯಲ್ಲಿ ರಕ್ತ ಬರುತಿತ್ತು ಕೆಆರ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬರುತ್ತಿರುವಾಗ ಕಾಂತರಾಜು ಮೃತಪಟ್ಟಿರುತ್ತಾನೆ ಆದ್ದರಂದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 16-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ ಹಾಗು ಇತರೆ 18 ಇತರೆ ಪ್ರಕರಣಗಳಾದ, ಚುನಾವಣಾ ಮುಂಜಾಗ್ರತಾ ಪ್ರಕರಣಗಳು/ಅಬಕಾರಿ ಕಾಯಿದೆ ಪ್ರಕರಣಗಳು/ಸಿಆರ್.ಪಿ.ಸಿ. ಪ್ರಕರಣಗಳು/ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 392  ಐ.ಪಿ.ಸಿ.

ದಿನಾಂಕ: 16-04-13 ರಂದು ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿ ವಿಜಯಲಕ್ಷ್ಮಿ ಕೋಂ. ಬಾಬುರಾವ್, ಹೊಸ ಗುಡ್ಡದಹಳ್ಳಿ, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಅವರು ದಿನಾಂಕ: 14-03-2013 ರಂದು ಸುಮಾರು ಸಂಜೆ 07-30 ಗಂಟೆಯಲ್ಲಿ ಬೃಂದಾವನ ಗಾರ್ಡನಲ್ಲಿ ಮ್ಯೂಸಿಕಲ್ ಪೌಂಟೆನ್  ಹತ್ತಿರ ವೀಕ್ಷಣೆ ಮಾಡುತ್ತಿದ್ದಾಗ ಸುಮಾರು 25 ವರ್ಷ ವಯಸ್ಸಿನ ಯಾರೋ ಒಬ್ಬ ಅಪರಿಚಿತ ಹುಡುಗನು ಪಿರ್ಯಾದಿಯವರ ಕತ್ತಿನಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಜನಗಳ ಮಧ್ಯೆ ಓಡಿ ಹೋಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಯು.ಡಿ.ಆರ್. ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಆರ್ ಶ್ರೀನಿವಾಸ ಬಿನ್. ರಂಗನಾಯ್ಕ್, ಮೈಸೂರು ರವರು ನೀಡಿದ ದೂರು ಏನೆಂದರೆ ದಿನಾಂಕ: 15-04-13 ರಂದು ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಪಿರ್ಯಾದಿಯವರ ಮಗ ಶ್ರೀಹರ್ಷ ಬಿನ್. ಆರ್. ಶ್ರೀನಿವಾಸ, 20 ವರ್ಷ, ವಿದ್ಯಾರ್ಥಿ, ಮೈಸೂರು ರವರು ನೀರಿನಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ಕಳ್ಳತನ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.72/13 ಕಲಂ. 457-380 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಜಯಶಂಕರ ಹೆಚ್.ಎನ್, ಮುಖ್ಯ ಶಿಕ್ಷಕರು ಕರಡಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-04-2013 ರಂದು ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕಾಗಿದೆ ಕರಡಹಳ್ಳಿ ಗ್ರಾಮದ ಪ್ರೌಡಶಾಲೆಯಲ್ಲಿ ಕಂಪ್ಯೂಟರ್ ಗೆ, ಅಳವಡಿಸಿದ್ದ 14 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇವುಗಳ ಅಂದಾಜು ಬೆಲೆ 84.000/-ರೂ ಅಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ನಾಗಮಂಗಲ ಗ್ರಾಮಾಂತರ ಠಾಣೆ ಮೊ.ನಂ. 73/13 ಕಲಂ. 304 (ಎ) ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಈರಣ್ಣ ಬಿನ್. ಲೇಟ್. ರುದ್ರಪ್ಪ, 50ವರ್ಷ ರವರು ನೀಡಿದ ದೂರು ಏನೆಂದರೆ .ಶಿವಕುಮಾರ್, ಚೆಸ್ಕಾಂನಲ್ಲಿ ಜೆ.ಇ ಕೆಲಸ, ಚೀಣ್ಯಾ ಸೆಕ್ಷನ್, ನಾಗಮಂಗಲ ಉಪವಿಭಾಗ ಹಾಗು ಇತರರು ಇಜ್ಜಲಘಟ್ಟ ಗ್ರಾಮದಲ್ಲಿ ವಿದ್ಯುತ್ ತಗುಲಿ ಪಿರ್ಯಾದಿಯವರ ತಮ್ಮ ಶಂಕರರವರು ಮೃತಪಟ್ಟಿರುತ್ತಾರೆ, ಈ ಕೃತ್ಯವು ಚೀಣ್ಯಾ ಸೆಕ್ಷನ್ನ ಜೆ.ಇ. ಶಿವಕುಮಾರ್ರವರ ಹಾಗು ಲೈನ್ ಮ್ಯಾನ್ ಗಳ ನಿರ್ಲಕ್ಷತೆಯಿಂದ ಉಂಟಾಗಿರುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 172/13 ಕಲಂ. 379-188 ಐ.ಪಿ.ಸಿ.

ದಿನಾಂಕ: 16-04-13 ರಂದು ಪಿರ್ಯಾದಿ ಪುಟ್ಟಮಾದಯ್ಯ ಸಿ.ಕೆ. ಗ್ರಾಮ, ಲೆಕ್ಕಿಗರು, ಮಾಲಗಾರನಹಳ್ಳಿ ವೃತ್ತ ರವರು ನೀಡಿದ ದೂರು ಏನೆಂದರೆ ದಿನಾಂಕ:15-04-2013 ರಂದು ರಾತ್ರಿ 12 ಗಂಟೆ ವೇಳೆಯಲ್ಲಿ ಮಾಲಗಾರನಹಳ್ಳಿ ಶಿಂಷಾ ನದಿ ಪಾತ್ರದಲ್ಲಿ 1) ಲಾರಿ ನಂ ಕೆ.ಎ.-01-ಬಿ-4371 ರ ಚಾಲಕ 2) ಲಾರಿ ನಂ ಕೆ.ಎ.-01-ಬಿ-4371 ರ ಮಾಲೀಕ ಇಬ್ಬರು ಲಾರಿಗೆ ಮರಳನ್ನು ಶಿಂಷಾನದಿಯಿಂದ ಅಕ್ರಮವಾಗಿ ತುಂಬುತ್ತಿರುವಾಗ ಪಿರ್ಯಾದಿರವರ ಜೀಪು ಹತ್ತಿರ ಹೋಗುತ್ತಿರುವುದನ್ನು ಕಂಡು ಅವರು ಲಾರಿಯನ್ನು ಚಾಲನೆ ಮಾಡಿಕೊಂಡು ಕತ್ತಲೆಯಲ್ಲಿ ಕಾಣದೆ ಪರಾರಿಯಾಗಿರುತ್ತಾರೆ ಸದರಿ ಲಾರಿ ಚಾಲಕ ಹಾಗು ಮಾಲೀಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 15-04-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-04-2013 ರಂದು ಒಟ್ಟು 39 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಹೆಂಗಸು ಕಾಣೆಯಾದ ಪ್ರಕರಣ ಹಾಗು 34 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಮಮತ, 30ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಎಂ.ಎನ್. ರಾಜು 40 ವರ್ಷ ಕೆ.ಮಲ್ಲೇನಹಳ್ಳಿ ಗ್ರಾಮ  ರವರಿಗೆ ಪಿರ್ಯಾದಿಯವರ ಗಂಡನಿಗೆ ಕುಡಿಯುವ ಚಟವಿದ್ದು ಕುಡಿದು ಮನೆಯಲ್ಲಿ ಮಲಗಿದ್ದವರು ಊಟಕ್ಕೆ ಏದ್ದೇಳದ ಕಾರಣ ಹೋಗಿ ನೋಡಲಾಗಿ ಸುಸ್ತಾಗಿದ್ದವರನ್ನು ಚಿಕಿತ್ಸೆಗೆ ಎಂದು ನಾಗಮಂಗಲ ಸರ್ಕಾರಿ  ಅಸ್ಪತ್ರೆಗೆ ಕರೆ ತಂದು ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್.ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-04-2013 ರಂದು ಪಿರ್ಯಾದಿ ಚಂದುಲಾಲ್, 42 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷೀ, 75 ವರ್ಷ, ದರಸಗುಪ್ಪೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಮ್ಮರವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಮೈ ಕೈ ದೇಹವೆಲ್ಲ ಸುಟ್ಟ ಗಾಯಾಗಳಗಿದ್ದು ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಅರ್.ಪಿ.ಸಿ.

 ದಿನಾಂಕ: 15-04-2013 ರಂದು ಪಿರ್ಯಾದಿ ಮಾಯಮ್ಮ, 50ವರ್ಷ, ಮೊಳೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-04-213 ರಂದು ಮದ್ಯಾಹ್ನ 12 ಗಂಟೆಯಲ್ಲಿ ಸುಧಾ, 30 ವರ್ಷ, ಮರಡಿಪುರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದೀಪವು ಆಕಸ್ಮಿಕವಾಗಿ ಬಿದ್ದ ಕಾರಣ ಸೀರೆ ಬೆಂಕಿ ಹೊತ್ತಿಕೊಂಡು ಮೈಯೆಲ್ಲಾ ಸುಟ್ಟಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ .ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 279, 304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 15-04-2013 ರಂದು ಪಿರ್ಯಾದಿ ಎಂ.ಎಸ್.ನಾಗರಾಜು, ಸಿದ್ದಾರ್ಥನಗರ, ಮಳವಳ್ಳಿಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-01. ಸಿ-981 ಟಾಟಾ ಇಂಡಿಕಾ ಕಾರಿನ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ಕಾರನ್ನು ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾಗಿದ್ದಾನೆ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 15-04-2013 ರಂದು ಪಿರ್ಯಾದಿ ನಿಂಗರಾಜು ಬಿ.ಎನ್. 36ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸಾವಿತ್ರಿ. 26 ವರ್ಷ, ಬೆಟ್ಟಹಳ್ಳಿ ಗ್ರಾಮ ರವರು ದಿನಾಂಕ: 10-04-2013 ರಂದು ಬೆಂಗಳೂರಿಗೆ ಹೋಗುತ್ತೇನೆಂದು ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಗದ ಕಾರಣ ಪತ್ತೆ ಮಾಡಿಕೊಡಿ ಎಂದು ದೂರು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 14-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-04-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಪಹರಣ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 177/13 ಕಲಂ. 343, 366(ಎ) ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಬಿ. ಕುಮಾರ್ ಬಿನ್. ಲೇಟ್. ಬೋರೇಗೌಡ, ನಂ. 1498 5 ನೇ ಕ್ರಾಸ್, ಅಶೋಕ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೇವರಾಜು ಬಿನ್. ದೇವೇಗೌಡ, ವಾಸ ಬೂತನಹೊಸೂರು ಗ್ರಾಮರವರು ಅವರ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಬಲವಂತವಾಗಿ ಇರಿಸಿಕೊಂಡು ಮದುವೆ ಮಾಡಿಕೊಂಡಿರು-ತ್ತಾನೆ.  ಆದ್ದರಿಂದ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆ ಮಾಡಿಕೊಂಡಿರುವ ದೇವರಾಜನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ನೀಡಿದ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತದೆ, 


ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 379 ಐ.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕುಮಾರ್.ಎಸ್.ಡಿ. ಬಿನ್. ದೇವೇಗೌಡ, ಕೃಷ್ಣ ನಗರ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ ಬೆಳ್ಳಿ ಪದಾರ್ಥಗಳು ಒಟ್ಟು 300 ಗ್ರಾಂ ಬೆಳ್ಳಿ ಹಾಗೂ 21.500 ರೂ ಹಣ ಕಳ್ಳತನ ಮಾಡಲಾಗಿದೆ. ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯ 36.000/- ರೂಗಳು. ಆದ್ದರಿಂದ ಸದರಿ ವಸ್ತುಗಳನ್ನು ಪತ್ತೆಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 14-04-2013  ರಂದು ಪಿರ್ಯಾದಿ ಕೃಷ್ಣ ಬಿನ್. ಕರಿಯಪ್ಪ, ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಕರಿಯಪ್ಪ ಕೆ.ಕೋಡಿಹಳ್ಳಿ ಗ್ರಾಮ, ಮದ್ದೂರು ರವರು ಕ್ರಿಮಿನಾಶಕವನ್ನು ಔಷದಿ ಎಂದು ಸೇವಿಸಿದ್ದು ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-4-2013 ರಂದು ಸಂಜೆ 06-40ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 244/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 14-04-2013  ರಂದು ಪಿರ್ಯಾದಿ ಪುಷ್ವಲತಾ ಕೊಂ. ಮಹೇಶ, ಮೇಳಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹೇಶ ಬಿನ್. ಲೇಟ್. ರಾಮೇಗೌಡ 52 ವರ್ಷ, ವಕ್ಕಲಿಗರು, ಮೇಳಾಪುರ ಗ್ರಾಮ ರವರು ದಿನಾಂಕ: 17-03-2013 ಬೆಳಿಗ್ಗೆ 11-30 ಗಂಟೆ ಮೇಳಪುರ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 184/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 14-04-2013  ರಂದು ಪಿರ್ಯಾದಿ ರತ್ನಮ್ಮ ಕೋಂ. ಸಿ.ಬಿ. ಮಾಧು, 48 ವರ್ಷ, ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ನಿರಂಜನ್ ಬಿನ್ ಸಿ.ಬಿ. ಮಾಧು, 22 ವರ್ಷ,  ಚಿಕ್ಕಮಂಡ್ಯ ಗ್ರಾಮ, ಮಂಡ್ಯ ತಾ. ರವರು ದಿನಾಂಕ: 14-04-2013 ರಂದು ಕೆಲಸಕ್ಕೆ  ಹೊಗುತ್ತೇನೆಂದು ಹೇಳಿ  ಹೋದವನು ಇಲ್ಲಿಯವರೆಗೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂಧಿಕರ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 498(ಎ)-324 ಐ.ಪಿ.ಸಿ.

ದಿನಾಂಕ: 14-04-2013  ರಂದು ಪಿರ್ಯಾದಿ ಪುಟ್ಟಮ್ಮ, ಮಾದರಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿತ ಅವರ ಗಂಡ ತಮ್ಮಯ್ಯ @ ಶಿವರಾಜು ಬಿನ್.  ಮಾಳಗಯ್ಯ,, 38 ವರ್ಷ, ಪರಿಶಿಷ್ಟಜಾತಿ, ಮಾದರಹಳ್ಳಿ ಗ್ರಾಮ, ಮದ್ದೂರು ತಾ. ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ: 14-04-2013 ರಂದು ಬೆಳಿಗ್ಗೆ 08-00  ಗಂಟೆ ಸಮಯದಲ್ಲಿ ಗಲಾಟೆ ತೆಗೆದು ಬಿಡಲು ಬಂದ ದೇವಿರಮ್ಮನವರಿಗೆ ದೊಣ್ಣೆಯಿಂದ ಹೊಡೆದು ಗಲಾಟೆಮಾಡಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 143-323-324-504-506-498(ಎ) ಕೂಡ 149 ಐ.ಪಿ.ಸಿ. 3 ಮತ್ತು 4 ಡಿ.ಪಿ. ಕಾಯಿದೆ. 

 ದಿನಾಂಕ: 14-04-2013  ರಂದು ಪಿರ್ಯಾದಿ ಎಂ.ವಿ. ವಿಧ್ಯಾ, ಅಗಸನಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ಎ.ಬಿ.ವಿಜಯ್ ಇತರೆ 13 ಜನರು ಎಲ್ಲರೂ ಅಗಸನಪುರ ಗ್ರಾಮ ಹಾಗು ಬೆಂಗಳೂರು ವಾಸಿಗಳು ಪಿರ್ಯಾದಿಯವರಿಗೆ ಹೆಚ್ಚಿನ ವರದಕ್ಷಿಣೆ ಹಣವನ್ನು ತಂದು ಕೊಡುವಂತೆ ಮನೆಯಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಗಲಾಟೆ ಮಾಡುತ್ತಿದ್ದಾಗ ಪಂಚಾಯ್ತಿಗೆ ಬಂದಿದ್ದ ಅವರ ಮನೆಯವರಿಗೆ ಕಲ್ಲು. ದೊಣ್ಣೆ. ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿ ಹೆಚ್ಚಿನ ವರದಕ್ಷಿಣೆಯನ್ನು ತರದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೆವೆ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 13-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 47 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಆತ್ಮಹತ್ಯೆ ಪ್ರಚೋದನಾ ಪ್ರಕರಣ ಹಾಗು ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು ಮತ್ತು 41 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 21/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ನಾಗರಾಜು ಬಿನ್. ರಾಜಪ್ಪ, 70 ವರ್ಷ, ನಯನ ಕ್ಷತ್ರಿಯ, ಚಿಕ್ಕಜೋನಿಗರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿ ಸುಮಾರು 80 ವರ್ಷ ಒಬ್ಬ ಅಪರಿಚಿತ ಗಂಡಸು ಸತ್ತು ಮಲಗಿರುತ್ತಾನೆ ಮೃತ ಅಪರಿಚಿತನಾಗಿದ್ದು ಯಾರೂ ಯಾವ ಊರು ಗೊತ್ತಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಸಯ್ಯದ್ ಸಾಜಿದ್ ಬಿನ್ ಸಯ್ಯದ್ ಶಪಿವುಲ್ಲಾ, ಕ್ಯಾತನಹಳ್ಳಿ ರವರು ನೀಡಿದ ದೂರು ಏನೆಂದರೆ ದಿನಾಂಕ: 13-04-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ, ಕೆರೆಕೋಡಿ ಹತ್ತಿರ ಸಯ್ಯದ್ ಅಮಿದ್ ಬಿನ್., ಸಯ್ಯದ್ ಶಫಿವುಲ್ಲಾ 38 ವರ್ಷ, ಕ್ಯಾತನಹಳ್ಳಿ ಗ್ರಾಮ ರವರು ಮದ್ಯಪಾನ ಮಾಡಿ ಕೆರೆಕೋಡಿ ಹತ್ತಿರ ಮೃತ ಪಟ್ಟಿದ್ದಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಚರಿತ್ ಎಂ.1301, 10ನೇ ಕ್ರಾಸ್, 4ನೇಮೈನ್, ಎಚ್.ಎಸ್,ಆರ್ ಲೇ. ಔಟ್ ಬೆಂಗಳೂರು ರವರು ನೀಡಿದ ದೂರು ಏನೆಂದರೆ ಜಯಂತ್ ಲೇಟ್. ಈಶ್ವರಪ್ಪ 23 ವರ್ಷ, ಕೆ.ನಾರಾಯಣಪುರ ಕ್ರಾಸ್, ಕೊತ್ತನೂರು, ಬೆಂಗಳೂರು ರವರು ಅವರ ಸ್ನೇಹಿತರ ಜೊತೆ ಕೆರೆತಣ್ಣೂರು ಕೆರೆಯಲ್ಲಿ ಸ್ನಾನಮಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4.ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ: 13-04-13 ರಂದು ಪಿರ್ಯಾದಿ ಲಿಂಗೇಗೌಡ, ದೊಡ್ಡಗರುಡ ಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸ್ವಾಮಿ, ದೊಡ್ಡಗರುಡ ಹಳ್ಳಿ ಗ್ರಾಮರವರು ದಿನಾಂಕ: 12-04-2013 ರಂದು ಮರ ಕಡಿಯುವಾಗ ಅಕಸ್ಮಿಕವಾಗಿ ಬಿದ್ದು ಮ್ವತ ಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 179/13 ಕಲಂ. 379 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ವನವಂಗ್ಲೈನಾ ಬಿನ್. ಲಾಲ್ನಾನ್ಫೆಲಾ ರಾಲ್ಟೆ, ವಾಸ ಕೇರಾಫ್ ಸಿದ್ದಪ್ಪ, ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ ರವರು ನೀಡಿದ ದೂರು ಏನೆಂದರೆ ದಿನಾಂಕ: 12-04-2013 ರಂದು ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರ ರೂಮಿನಲ್ಲಿ ಗ್ಯಾಸ್ ಲೀಕೇಜ್ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಫಿರ್ಯಾದಿಯವರು ರೂಮಿನಲ್ಲಿದ್ದ ಡೆಲ್ ಕಂಪನಿಯ ಲ್ಯಾಪ್ಟಾಪ್ ಅನ್ನು ರೂಮಿನ ಹೊರಗಡೆಗೆ ತಂದಿಟ್ಟು ಪುನಃ ಬೆಂಕಿಯನ್ನು ಆರಿಸಲು ಒಳಗಡೆ ಹೋಗಿ ತಕ್ಷಣ ವಾಪಸ್ ಹೊರಗಡೆ ಬಂದು ನೋಡಲಾಗಿ ತಾನು ಇಟ್ಟಿದ್ದ ಲ್ಯಾಪ್ಟಾಪ್ ಅನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಆತ್ಮಹತ್ಯೆ ಪ್ರಚೋದನಾ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. 306 ಕೂಡ 34 ಐ.ಪಿ.ಸಿ.

ದಿನಾಂಕ: 13-04-2013 ರಂದು ಪಿರ್ಯಾದಿ ಬಿ.ಕೆ.ದೀಪಿಕ ಕೋಂ. ನರಸೇಗೌಡ, 26 ವರ್ಷ, ವಾಸ 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಲಿಂಗರಾಜು, 2] ಪುಟ್ಟಸ್ವಾಮಿ,. 3] ಮಿಲಿಟರಿ ಶ್ರೀನಿವಾಸ ಹಾಗು 4] ಮಮತ ರವರುಗಳು ವಡವೆಗಳನ್ನು ಬಿಡಿಸಿಕೊಡುವಂತೆ ಕೇಳಿದ್ದು ಇನ್ನು ಬಿಡಿಸಿಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಆರೋಪಿತರು ಈ ದಿವಸ ಒಟ್ಟಾಗಿ ಬಂದು ಫಿರ್ಯಾದಿಯವರ ತಂದೆ ತಾಯಿಗಳಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು ಆಗ ಅಕ್ಕಪಕ್ಕದ ಮನೆಯವರು ಗಲಾಟೆಯನ್ನು ನೋಡುತ್ತಿದ್ದು ಇದರಿಂದ ತಮ್ಮ ತಂದೆ ತಾಯಿಗಳು ಮಾನಸಿಕವಾಗಿ ನೊಂದು ಅಳುತ್ತಿದ್ದು ಈ ಅವಮಾನವನ್ನು ಸಹಿಸಲಾರದೆ ಬೆಳಿಗ್ಗೆ 11-00 ಗಂಟೆಯಲ್ಲಿ ಫಿರ್ಯಾದಿಯವರ ತಾಯಿ ಸುಜಾತ ರವರು ಸೀರೆಯಿಂದ ಕತ್ತಿಗೆ ನೇಣು ಹಾಕಿಕೊಂಡಿದ್ದು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದು ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಆದ್ದರಿಂದ ಆರೋಪಿಗಳ ವಿರುದ್ದ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 12-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ : 12-04-2013 ರಂದು ಒಟ್ಟು 42 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ, 3 ರಸ್ತೆ ಅಪಘಾತ ಪ್ರಕರಣಗಳು,  1 ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ,  1 ಯು.ಡಿ.ಅರ್. ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.     


ವಾಹನ ಕಳವು ಪ್ರಕರಣ :

ಕೆ.ಆರ್. ಪೇಟೆ ಟೌನ್ ಠಾಣೆ ಪೊಲೀಸ್ ಠಾಣೆ ಮೊ.ನಂ. 379 ಐ.ಪಿ.ಸಿ.

ದಿನಾಂಕ: 12-04-2013 ರಂದು ಪಿರ್ಯಾದಿ ರಾಮಕೃಷ್ಣೇಗೌಡ ಕಾಳೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 04.04.13 ರಾತ್ರಿ 09-00 ಗಂಟೆಯಲ್ಲಿ ಬ್ಯಾಟೇಗೌಡ ಕಾಂಪ್ಲೆಕ್ಸ್ ಹೊಸಹೊಳಲು ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಾಮಕೃಷ್ಣೇಗೌಡ, ಕಾಳೇಗೌಡನಕೊಪ್ಪಲು ಗ್ರಾಮ ರವರು ಅವರ ಬಾಬ್ತು ಮೋಟಾರ್ ಸೈಕಲ್ ಕಳ್ಳತನವಾಗಿದ್ದು ಅದನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 279-304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ಅಭಿಷೇಕ್ ಹೆಚ್.ಜಿ. ಹೊಸಹೊಳಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವರಾಜು, ಸಿಂಗನಹಳ್ಳಿ ಗ್ರಾಮ ರವರು ಅವರ ಮೋಟಾರ್ ಸೈಕಲ್ ನಲ್ಲಿ ಬಂದು ನಂಜಮ್ಮರವರಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಅವರಿಗೆ ಪೆಟ್ಟಾಗಿರುತ್ತೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಆರೋಪಿ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-04-2013 ರಂದು ಬಿ.ಜಿ.ನಗರದ ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಅಪಘಾತ ಮಾಡಿ ಹೊರಟು ಹೋಗಿದ್ದು, ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತನಾದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 12-04-2013 ರಂದು ಪಿರ್ಯಾದಿ ಎ.ಬಿ.ಮಂಜೇಗೌಡ, 28ವರ್ಷ, ಅಳೀಸಂದ್ರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ಕೆಎಲ್-60-ಸಿ-5241ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿದಿಲ್ಲ ರವರು ಕಾರನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯು ಟನರ್್  ತೆಗೆದುಕೊಳ್ಳುತ್ತಿದ್ದ ಬೈಕಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಿ.ರಾಮೇಗೌಡ ಸ್ಥಳದಲ್ಲೇ ಸತ್ತು ಹೊಗಿದ್ದು ಕಾರ್ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 9,39,40,4, 49, ಬಿ& ಸಿ 51, ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಕೂಡ 379 ಐ.ಪಿ.ಸಿ. 

ದಿನಾಂಕ: 12-04-2013 ರಂದು ಪಿರ್ಯಾದಿ ನರೇಂದ್ರಕುಮಾರ್.ಕೆ. ಪಿ.ಎಸ್.ಐ. ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ರವಿ, ಮನೋಜ್ ಇಬ್ಬರೂ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ ರವರುಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಯು.ಡಿ.ಆರ್. ಪ್ರಕರಣ :


ಬೆಸಗರಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.

ದಿನಾಂಕ: 12-04-2013 ರಂದು ಪಿರ್ಯಾದಿ ಪ್ರಮೀಳಾ 35 ವರ್ಷ, ಎನ್ ಕೋಡಿಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 09-04-2013 ರಂದು ಎನ್, ಕೋಡಿಹಳ್ಳಿ ಗ್ರಾಮದಲ್ಲಿ ಶಿವಕುಮಾರ @ ರಾಜು 44 ವರ್ಷ ರವರು ಯಾವುದೋ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಸೇವನೆ ಮಾಡಿ ಚಿಕಿತ್ಸೆ ಸಂಬಂಧ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  ಮನುಷ್ಯ ಕಾಣೆಯಾದ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 12-04-2013 ರಂದು ಪಿರ್ಯಾದಿ ಶಿವಣ್ಣಗೌಡ,  40 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಸಣ್ಣಪ್ಪ, 70 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ಕಾಣೆಯಾಗಿರುವ ನಮ್ನ ತಂದೆಯವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DETECTION OF TIGER SKIN - PANDAVAPURA PS Cr.No.150/13


 ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
      ಮಂಡ್ಯ ಜಿಲ್ಲೆ, ದಿನಾಂಕಃ  12-04-2013.

            -ಃ ಪತ್ರಿಕಾ ಪ್ರಕಟಣೆ ಃ-      ದಿನಾಂಕ:11-04-2013 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಾಂಡವಪುರ ತಾಲ್ಲೋಕು, ಶಿಕಾರಿಪುರದ ಕೆಲವು ವ್ಯಕ್ತಿಗಳು ಪಾಂಡವಪುರದ ಬೇವಿನಕುಪ್ಪೆ ಸಮೀಪ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಬಾತ್ಮಿದಾರರಿಂದ ಖಚಿತ ಮಾಹಿತಿ ದೊರೆತ್ತಿದ್ದು, ಕಲಾಕೃಷ್ಣಸ್ವಾಮಿ, ಡಿ.ಎಸ್.ಪಿ, ಶ್ರೀರಂಗಪಟ್ಟಣರವರ ಮಾರ್ಗದರ್ಶನದಲ್ಲಿ ಪಾಂಡವಪುರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ರವರು ದಿನಾಂಕ:11-04-2013 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಬೇವಿನಕುಪ್ಪೆ ಸಮೀಪ ಹೋಗಿ ನೋಡಲಾಗಿ ಅವರಲ್ಲಿನ ಒಬ್ಬರ ಕೈಯಲ್ಲಿ ಒಂದು ಪ್ಲಾಸ್ಟಿಕ್ಟ್ ಚೀಲ ಇದ್ದು, ಮತ್ತೊಬ್ಬ ನಮ್ಮ ಸಿಬ್ಬಂದಿಯೊಂದಿಗೆ ವ್ಯಾಪಾರ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಸದರಿ ಪಿ.ಎಸ್.ಐರವರು ಸುತ್ತುವರಿದು ಅವರುಗಳನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ತಿಳಿಯಲಾಗಿ ಪ್ಲಾಸ್ಟಿಕ್ ಚೀಲದಲ್ಲಿ  ಹುಲಿ ಚರ್ಮವನ್ನು ಮತ್ತು ಹುಲಿಯ ಉಗುರುಗಳನ್ನು ಹಾಕಿ ಹಿಡಿದುಕೊಂಡಿದ್ದವನ ಹೆಸರು ಮನೋಜ್ ಕುಮಾರ್ ಬಿನ್ ಕಣ್ಣಮಣಿ, 38 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ಹಾಗೂ ಹುಲಿ ಚರ್ಮದ ಬಗ್ಗೆ ವ್ಯಾಪಾರ ಮಾಡುತ್ತಿದ್ದವರು ರವಿ ಬಿನ್ ರಿಪೀಟ್, 51 ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ವ್ಯಾಪಾರ, ವಾಸ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ, ಪಾಂಡವಪುರ ತಾಲ್ಲೋಕು, ಎಂದು ತಿಳಿಸಿದ್ದು, ಅವರ ವಶದಲ್ಲಿದ್ದ ಹುಲಿ ಚರ್ಮದ ಬಗ್ಗೆ ವಿಚಾರ ಮಾಡಿ ವಿವರವಾದ ಮಹಜರ್ ಕ್ರಮ ಜರುಗಿಸಿ, ವಶಕ್ಕೆ ತೆಗದುಕೊಂಡಿರುತ್ತೆ. ಸದರಿ ಆಸಾಮಿಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿಯನ್ನು ತಯಾರಿಸಿ ಪಾಂಡವಪುರ ಠಾಣಾ ಮೊ. ನಂ. 150/2013. ಕಲಂ: 9, 39, 40, 44, 49, ಬಿ & ಸಿ 51, ವನ್ಯ ಪ್ರಾಣೆಗಳ ಸಂರಕ್ಷಣಾ ಕಾಯಿದೆ ಕೂಡ 379 ಐ.ಪಿ.ಸಿ. ರೀತ್ಯ ಕೇಸು ನೊಂದಾಯಿಸಿಕೊಂಡು ತನಿಖೆ ಕೈಗೊಂಡು ಸದರಿ ಆಸಾಮಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.   

       ಸದರಿ ಪ್ರಕರಣವನ್ನು ಪತ್ತೆ ಮಾಡಿದ ಪಾಂಡವಪುರ ಪೊಲೀಸ್ ಠಾಣೆಯ ಪಿಎಸ್ಐ  ಶ್ರೀ.ಕೆ.ನರೇಂದ್ರಕುಮಾರ್ ಮತ್ತು ಸಿಬ್ಬಂದಿಯವರುಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ.

DAILY CRIME REPORT DATED : 11-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ,  1 ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 28 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304 [ಎ] ಐಪಿಸಿ ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 11-04-2013 ರಂದು ಬೆಳಗಿನ ಜಾವ 04-15 ಗಂಟೆಯಲ್ಲಿ ಬಿ.ಜಿ.ನಗರದ ಮಾನಸ ಹೋಟೆಲ್ ನ, ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಒಬ್ಬ ಅಪರಿಚಿತ ಗಂಡಸಿಗೆ ಅಪಘಾತ ಮಾಡಿ ಹೊರಟು ಹೋಗಿದ್ದು, ಅಪರಿಚಿತ ವ್ಯಕ್ತಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದಾಗಿ ಮಾಹಿತಿ ಪಡೆದ 108 ವಾಹನದವರು, ಸದರಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಕೋರಿಕೊಂಡ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಇದೇ ದಿನ ಅಂದರೆ ದಿನಾಂಕಃ 11-04-2013 ರಂದು ಬೆಳಿಗ್ಗೆ 11-00ಗಂಟೆಯಲ್ಲಿ ಮೃತನಾದ ಮೇರೆಗೆ, ಮೃತನ ಹೆಸರು ವಿಳಾಸ ಹಾಗೂ  ವಾರಸುದಾರರ ಪತ್ತೆಮಾಡುವ ಸಲುವಾಗಿ ಸದರಿ ಶವವನ್ನು ಆಸ್ಪತ್ರೆಯಲ್ಲಿ ಇಟ್ಟಿದ್ದು ನಂತರ ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆರವರು ವಾಪಾಸ್ ಪೊಲೀಸ್ ಠಾಣೆಗೆ ಬಂದು ಮಧ್ಯಾಹ್ನ 12-00 ಗಂಟೆಯಲ್ಲಿ ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.


ಸಂಶಯಾಸ್ಪದ ಯು.ಡಿ.ಆರ್. ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 169/13 ಕಲಂ. 143, 176, 201  ಐಪಿಸಿ & 174[ಸಿ] ಸಿಆರ್ಪಿಸಿ ಕೂಡ 149 ಐ.ಪಿ.ಸಿ.

ದಿನಾಂಕ: 11-04-2013 ರಂದು ಪಿರ್ಯಾದಿ ಎಂ.ಸಿ.ಮಂಜುನಾಥ, ಸಿಪಿಸಿ 573, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ದಿನಾಂಕ:11-04-2013 ಸುಂದರೇಶ್ ಮನೆಯಲ್ಲಿ 1ನೇ ಕ್ರಾಸ್, ಹೊಸಹಳ್ಳಿ, ಆರೋಪಿಗಳಾದ ಸುಂದರೇಶ, ವಸಂತ, ತಿಬ್ಬಣ್ಣ, ರೇವಣ್ಣ, ಮೂಗೂರ, ಪುಟ್ಟತಾಯಮ್ಮ ಹಾಗು ಬೋರೆಗೌಡ, ಹೊಸಹಳ್ಳಿ ಇತರರುಗಳು ಉದ್ದೇಶಪೂರ್ವಕವಾಗಿ ಎಲ್ಲರು ಸೇರಿಕೊಂಡು ಸತ್ತದೇಹವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಗುಪ್ತ ರೀತಿಯಿಂದ ಬೆಂಕಿಯಿಂದ ಶವವನ್ನು ಸುಟ್ಟುಹಾಕಿರುತ್ತಾರೆ. ಆದ್ದರಿಂದ ಆರೋಪಿತರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಇತ್ಯಾದಿಯಾಗಿ ನೀಡಿದ ದೂರು.


ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 504,323, 324, 279, 427, ಕೂಡ 34, ಐ.ಪಿ.ಸಿ. ಹಾಗೂ ಕಲಂ, 3 ಕ್ಲಾಸ್ (1) & (10) ಎಸ್.ಸಿ/ಎಸ್.ಟಿ ಕಾಯಿದೆ. 1989.

      ದಿನಾಂಕ: 11-04-2013 ರಂದು ಪಿರ್ಯಾದಿ ಜಿ.ಜಿ.ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಲೋಕೇಶ. ಪುಟ್ಟಸ್ವಾಮಿ ದಿನೇಶ ಹಾಗು ಲಿಂಗರಾಜು ಹೂತಗೆರೆ ಗ್ರಾಮ ರವರುಗಳು ನಮ್ಮ ಕಾರಿಗೆ ಡಿಕ್ಕಿ ಮಾಡಿದ್ದು, ಸದರಿ ಕಾರನ್ನು ನಿಲ್ಲಿಸಿ ಕೇಳಲು ಓದಾಗ ಅವಾಚ್ಯ ಶಬ್ದದಿಂದ ಬೈಯುತ್ತಿದ್ದು, ನಾನು ಏಕೆ ಈ ರೀತಿ ಬೈಯುತ್ತಿದ್ದೀಯ ಎಂದು ಕೇಳಿದ್ದಕ್ಕೆ ಏನೋ ಬೋಳಿ ಮಗನೆ ನಾನು ಅದೇ ರೀತಿ ಬೈಯುವುದು ಅಂತ ಹೇಳಿ ಪುಟ್ಟಸ್ವಾಮಿ ನನ್ನ ಕತ್ತಿನ ಪಟ್ಟಿಯನ್ನು ಹಿಡಿದು. ಕೆಡವಿಕೊಂಡು ಕೈಯಿಂದ ಕಾಲಿನಿಂದ ಒದ್ದನು ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ : 

ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 11-04-2013 ರಂದು ಪಿರ್ಯಾದಿ ಚೇತನಾ ಕೋಂ ಸುಬ್ರಮಣ್ಯ ಭಟ್, 35 ವರ್ಷ, ರಾಮಕೃಷ್ಣನಗರ, ಮೈಸೂರು ಸಿಟಿ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ:11-04-2013 ರಂದು ಮಹದೇವಪುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಭಾಗ್ಯರವರು ಕಾವೇರಿ ನದಿಯ ಬಳಿ ಫೋಟೋ ತೆಗೆಸುತ್ತಿದ್ದಾಗ ಆಕಸ್ಮಿಕವಾಗಿ ಭಾಗ್ಯರವರು ಕಾವೇರಿ ನದಿಗೆ ಬಿದ್ದುಹೋದಾಗ ರವಿ ರಕ್ಷಿಸಲು ಹೋಗಿ ಕಾವೇರಿ ನದಿಗೆ ಬಿದ್ದು ಹೋಗಿದ್ದು, ಭಾಗ್ಯ ಮತ್ತು ರವಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 10-04-2013ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-04-2013 ರಂದು ಒಟ್ಟು 60 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  3 ಕಳವು ಪ್ರಕರಣಗಳು ಹಾಗು 54 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 94/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 10-04-2013 ರಂದು ಪಿರ್ಯಾದಿ ವೆಂಕಟೇಶ್ ಬಿನ್ ವೆಂಕಟಶೆಟ್ಟಿ, ಬೀಚನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಾಯಿ ಚೆಲುವಮ್ಮ ಕೋಂ. ಲೇಟ್. ವೆಂಕಟಶೆಟ್ಟಿ, 80ವರ್ಷ, 5 ಅಡಿ 2 ಇಂಚು ಇತ್ತರ, ರವರು 07-04-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಅಂಚೆಭೂವನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 158/13 ಕಲಂ. ಹುಡುಗಿಯರು ಕಾಣೆಯಾಗಿದ್ದಾರೆ.

ದಿನಾಂಕ:10-04-2013ರಂದು ಪಿರ್ಯಾದಿ ಪುಟ್ಟೇಗೌಡ ಬಿನ್. ಲೇಟ್. ಬೆಟ್ಟೇಗೌಡ, ಹಾಲಹಳ್ಳಿ, 3ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ ಮಗಳಾದ 1]ಶ್ವೇತಾ ಬಿನ್. ಬೆಟ್ಟೇಗೌಡ, 18 ವರ್ಷ, ಹಾಲಹಳ್ಳಿ , 3 ನೇ ಕ್ರಾಸ್, ಹಾಗು ಆಕೆಯ ಚಿಕ್ಕಮ್ಮಳ ಮಗಳಾದ 2] ಸುಷ್ಮಾ ಬಿನ್. ಲೇಟ್. ವೆಂಕಟೇಶ್, 18 ವರ್ಷ, ಕಾರಸವಾಡಿ  ಗ್ರಾಮ, ಮಂಡ್ಯ ತಾ. ಇವರಿಬ್ಬರು  ದಿನಾಂಕಃ-06-04-2013 ರಂದು ತನ್ನ ಚಿಕ್ಕಮ್ಮನ ಮನೆಯಾದ ಕಾರವಾಡಿ ಗ್ರಾಮಕ್ಕೆ  ಹೋಗಿದ್ದು,  ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮಳ ಮಗಳಾದ ಸುಷ್ಮಾ ಇಬ್ಬರು ಎಲ್ಲಿಗೂ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲವೆಂದು ಪೋನ್ ಮೂಲಕ  ತಿಳಿಸಿದ ಮೇರೆಗೆ ನಾನು ಕಾರಸವಾಡಿ ಗ್ರಾಮಕ್ಕೆ  ಹೋಗಿ  ಈ ಬಗ್ಗೆ  ವಿಚಾರಿಸಿ ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮನ ಮಗಳಾದ ಸುಷ್ಮಾ ಇಬ್ಬರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಅವಳ ಸ್ನೇಹಿತೆಯರ ಮನೆಯಲೆಲ್ಲಾ  ಮತ್ತು ನಮ್ಮ ನೆಂಟರ ಮನೆಗಳ ಕಡೆ ವಿಚಾರಿಸಲಾಗಿ ಗೊತ್ತಿಲ್ಲವೆಂದು ತಿಳಿಸಿದ್ದು ಕಾಣೆಯಾಗಿರುವ ನಮ್ಮ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 504-506-498(ಎ)-323 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಸರೋಜ ಕೋಂ. ಶಿವಣ್ಣ, ಕುದುರಗುಂಡಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಿವಣ್ಣ ಮನೆಗೆ ಬಂದು ವಿನಾಕಾರಣ ಜಗಳತೆಗೆದು ಪಿರ್ಯಾದಿಯವರ ತಲೆಯ ಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿಕೊಂಡು ಕೈಯಿಂದ ಹೊಡೆದು ಗಲಾಟೆ ಮಾಡಿದ್ದಾರೆ, ಪಿರ್ಯಾದಿಯ ಗಂಡ ಈಗ್ಗೆ 4-5 ವರ್ಷಗಳಿಂದಲೂ ಹೀಗೆ ಪ್ರತಿ ದಿನ ಕುಡಿದು ಬಂದು ಜಗಳ ತೆಗೆದು ಹೊಡೆದು-ಬಡಿಯುವುದು ಮಾಡುತ್ತಾರೆ ಹಾಗು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮಾನಸಿಕವಾಗಿ ಹಾಗು ದೈಹಿಕವಾಗಿ ಹಿಂಸೆ ಕೊಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 163/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ನಿಂಗಮ್ಮ ಕೋಂ. ಮಾಯಿಗಯ್ಯ, ನಗರಕೆರೆ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಮದ್ದೂರು  ಐ.ಬಿ. ವೃತ್ತದಲ್ಲಿ ಬಸ್ ನ್ನು ಇಳಿಯುವಾಗ ಪಿರ್ಯಾದಿಯವರ ಕತ್ತಿನಲ್ಲಿದ್ದ ಸುಮಾರು 36 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಪಿರ್ಯಾದಿಯವರಿಗೆ ತಿಳಿಯದಂತೆ ಕಳ್ಳತನ ಮಾಡಿಕೊಂಡು  ಹೋಗಿರುವುದಾಗಿ ದೂರು ಇದರ ಅಂದಾಜು ಬೆಲೆ 1,00,000/-ರೂಗಳಾಗಬಹುದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಮಾಯಮ್ಮ ಕೋಂ. ಮುಳಕಟ್ಟೆ ಸಿದ್ದಯ್ಯ, 55 ವರ್ಷ, ಯತ್ತಗದಹಳ್ಳಿ ರಸ್ತೆ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10-04-2013 ರಂದು ಪಿರ್ಯಾದಿಯವರು ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಜನರ ನೂಕು ನುಗ್ಗಲಿನಲ್ಲಿ ಬಸ್ಸನ್ನು ಹತ್ತಿ ಒಳಗಡೆ ಹೋಗಿ ಸೀಟಿನಲ್ಲಿ ಕುಳಿತುಕೊಂಡು ತನ್ನ ಕತ್ತನ್ನು ನೋಡಿಕೊಂಡಾಗ ತನ್ನ ಕತ್ತಿನಲ್ಲಿದ್ದ 27 ಗ್ರಾಂ ತೂಕದ ಒಂದು ಚಿನ್ನದ ತಾಳಿ ಮತ್ತು 4 ಚಿನ್ನದ ಗುಂಡುಗಳಿರುವ ಒಂದು ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಕೂಡಲೇ ಬಸ್ಸಿನಿಂದ ಕೆಳಗಡೆ ಇಳಿದು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಸದರಿ ಚಿನ್ನದ ಮಾಂಗಲ್ಯ ಸರವನ್ನು ಯಾರೋ ಕಳ್ಳರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜನ ಸಂದಣಿಯಲ್ಲಿ ಬಸ್ಸನ್ನು ಹತ್ತುವಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯ ಸರವಾಗಿದ್ದು ಇದರ ಬೆಲೆ 78,300-00 ರೂಪಾಯಿಗಳಾಗುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 379 ಐ.ಪಿ.ಸಿ.

ದಿನಾಂಕ: 10-04-2013 ರಂದು ಪಿರ್ಯಾದಿ ಎಂ, ಮಾದಯ್ಯ, ಕಿರಿಯ ಇಂಜಿನಿಯರ್, ಕೆ.ಆರ್. ಪೇಟೆ ಓ&ಎಂ 3 ಘಟಕ, ಕೆ.ಆರ್ ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 08-04-2013 ರ ರಾತ್ರಿ ವೇಳೆಯಲ್ಲಿ ಹಿರಿಕಳಲೆ ಗ್ರಾಮದ ಹತ್ತಿರ, ಕಸಬಾ ಹೋಬಳಿ,  ಕೆ.ಆರ್.ಪೇಟೆ ತಾಲ್ಲೋಕು ನಲ್ಲಿ ನೀರಾವರಿ ಪಂಪ್ಸೆಟ್ನ ಆರ್ಆರ್ ಸಂಖ್ಯೆ: K2MRGIP-568 ರ ಲೈನನ್ನು ಸುಮಾರು 3 ಕಂಬಗಳ ದೂರ, ಮೂರು ತಂತಿ ಅಂದರೆ ಅಂದಾಜು 400 ಮೀಟರ್ ನಷ್ಟು ವೈರನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡುಬಂದಿದೆ. ಇದರ ಬೆಲೆ ಸುಮಾರು 9200-00 ರೂ. ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.