ಪತ್ರಿಕಾ ಪ್ರಕಟಣೆ
ದಿನಾಂಕ:05-06-2011 ರಂದು ಮದ್ದೂರು ತಾಲ್ಲೂಕು, ಸಿ.ಎ.ಕೆರೆ ಹೋಬಳಿ, ಚಂದೂಪುರ ಗ್ರಾಮದ ವಾಸಿ ಲೇ||ಮರೀಗೌಡರವರ ಮಗನಾದ ಸಿ.ಎಂ.ಪ್ರದೀಪಕುಮಾರ್ ರವರು ಮಳವಳ್ಳಿ ಪುರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆರೆ , ಮಳವಳ್ಳಿ ಟೌನ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಿದ್ದರಾಮುರವರ ಬಿಲ್ಡಿಂಗ್ ಮೊದಲನೇ ಅಂತಸ್ತಿನಲ್ಲಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಮೊಬೈಲ್ ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದು, ದಿ:04-06-2011 ರಂದು ರಾತ್ರಿ ತಮ್ಮ ಅಂಗಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಹೊಡೆದು ಅಂಗಡಿಯಲ್ಲಿಟ್ಟಿದ್ದ ಎರಡು ಮೊಬೈಲ್ ಹಾಗೂ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಗಳನ್ನು ಮತ್ತು ಸುಮಾರು 3,500/- ರೂ ನಗದು ಸೇರಿದಂತೆ ಒಟ್ಟು ರೂ.12,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರ ಸಂಬಂಧ ಮಳವಳ್ಳಿ ಪುರ ಠಾಣೆ ಮೊ.ಸಂ.77/2011 ಕಳಂ 457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕೃತ್ಯ ನಡೆದ ಸ್ಥಳಕ್ಕೆ ಮಂಡ್ಯದ ಬೆರಳಚ್ಚು ತಜ್ಞರು ಭೇಟಿ ಮಾಡಿ ಸ್ಥಳದಲ್ಲಿದ್ದ ಬೆರಳು ಗುರುತುಗಳನ್ನು ಸಂಗ್ರಹಿಸಿಕೊಂಡು ಸೆಂಟ್ರಲ್ ಸರ್ವರ್ ಮುಖಾಂತರ ಶೋಧನೆ ಮಾಡಿ ಕೃತ್ಯ ನಡೆದ ಸ್ಥಳದಲ್ಲಿದ್ದ ಬೆರಳು ಮುದ್ರೆ ಗುರುತುಗಳಿಗೂ ಹಾಗೂ ಬೆಂಗಳೂರಿನ ಹೆಬ್ಬಕವಾಡಿ, ವಿಜಯನಗರ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಆರೋಪಿತರುಗಳಾದ 1.ರವಿ @ ಗುಂಢ ಬಿನ್ ಸುಬ್ರಮಣಿ, 36 ವರ್ಷ, ಬೋವಿ ಜನಾಂಗ, ಆಟೋ ಡ್ರೈವರ್, ವಾಸ ಮನೆ.ನಂ.96, 9 ನೇ ಕ್ರಾಸ್, ಚಿಕ್ಕಣ್ಣ ಬಡಾವಣೆ, ಆಶ್ವತನಗರ, ತಣಿಸಂದ್ರ, ಬೆಂಗಳೂರು, ಹಾಲಿವಾಸ, ಓಂ ಶಕ್ತಿ ದೇವಸ್ಥಾನದ ಪಕ್ಕ, ಶಂಕರ ಬಿಲ್ಡಿಂಗ್, ಇಲಾಲ್ ನಗರ, ಬೆಂಗಳೂರು, 2.ಖಾದರ್ ಬಾಷ ಬಿನ್ ಅಬೀಬ್ ಖಾನ್, 35 ವರ್ಷ, ಮುಸ್ಲಿಂ ಜನಾಂಗ, ಪಂಚರ್ ಅಂಗಡಿ ಕೆಲಸ, ಮನೆ.ನಂ.22, ಬೇಗೂರು ರೋಡ್ ಕ್ರಾಸ್, ಮಸೀದಿ ಹಿಂಭಾಗ, 1 ನೇ ಕ್ರಾಸ್, ಮೌಲ್ವಿ ಬಿಲ್ಡಿಂಗ್, ಬೊಮ್ಮನಹಳ್ಳಿ, ಬೆಂಗಳೂರು-68 ರವರುಗಳ ಬೆರಳು ಗುರುತುಗಳಿಗೆ ಸಾಮತ್ಯೆ ಇರುವುದಾಗಿ ತಿಳಿದುಬಂದ ಮೇರೆಗೆ ಮಳವಳ್ಳಿ ಪುರ ಪೊಲೀಸ್ ಠಾಣೆಯ ಪಿಐ ಎಲ್.ಕೆ.ರಮೇಶ್ ಹಾಗೂ ಸಿಬ್ಬಂದಿಯವರು ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಇಬ್ಬರು ಆರೋಪಿಗಳನ್ನು ದಿ:09-06-2011 ರಂದು ಬೆಂಗಳೂರಿನಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡಿರುತ್ತಾರೆ.
ನಂತರ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ, ಆರೋಪಿಗಳು ಮೇಲ್ಕಂಡ ಮಳವಳ್ಳಿ ಪಟ್ಟಣದಲ್ಲಿ ಕಳ್ಳತನ ಮಾಡಿದ್ದ ಹಾಗೂ ಇತರೆ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ ಚಿನ್ನಾಭರಣ, ಮೊಬೈಲ್, ನಗದು ಹಣ, ಬಟ್ಟೆಗಳು ಹಾಗೂ ಇತರೆ ವಸ್ತುಗಳನ್ನು ಮೇಲ್ಕಂಡ ಆರೋಪಿ ರವಿ @ ಗುಂಡ ಎಂಬುವರ ಬೆಂಗಳೂರಿನಲ್ಲಿರುವ ಅವರ ತಾಯಿ ಮನೆಯಲ್ಲಿ ಹಾಗೂ ಬೆಂಗಳೂರಿನ ಹೊರಮಾವುವಿನ ಶ್ರೀಮಾತಾಜಿ, ಜ್ಯುವೆಲ್ಲರ್ಸ್ ಬ್ಯಾಂಕರ್ಸ್ ಅಂಡ್ ಗಿರವಿ ಅಂಗಡಿಯಲ್ಲಿ ಎರಡು ಚಿನ್ನದ ಬಳೆ, ಒಂದು ಚೈನ್ ಮಾರಾಟ ಮಾಡಲು ಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ ಐದು ಮೊಬೈಲ್, ಎರಡು ಚಿನ್ನದ ಬಳೆ, ಒಂದು ಚಿನ್ನದ ಚೈನ್, 3,500-00 ನಗದು, ನಾಲ್ಕು ಟೀಶರ್ಟ್, ನಾಲ್ಕೂ ಪ್ಯಾಂಟ್, ಒಂದು ಎಲೆಕ್ಷನ್ ಐಡಿ ಕಾರ್ಡ್, ಎರಡು ಮಹಿಳೆಯ ಭಾವಚಿತ್ರ ಇರುವ ಪಾಸ್ ಪೊರ್ಟ್ ಸೈಜಿನ ಪೋಟೋಗಳು, ಮತ್ತು ಒಂದು ಕೆಂಪು ಹರಳಿನ ಚಿನ್ನದ ಉಂಗುರು, ಒಂದು ಜೊತೆ ಮುತ್ತಿನ ಓಲೆ, ಒಂದು ಜೊತೆ ಬಿಳಿ ಹರಳು ಇರುವ ಚಿನ್ನದ ಓಲೆ, ಒಂದು ಜೊತೆ ಕೆಂಪು ಹರಳಿನ ಚಿನ್ನದ ಹ್ಯಾಂಗಿಂಗ್ಸ್, ಒಂದು ಲಕ್ಷ್ಮೀ ಚಿತ್ರವಿರುವ ಚಿನ್ನದ ಡಾಲರ್ ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು ಎರಡು ಲಕ್ಷ ರೂಗಳಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಶ್ರಮವಹಿಸಿದ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಎಲ್.ಕೆ.ರಮೇಶ್ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment