Moving text

Mandya District Police
Showing posts with label Raid. Show all posts
Showing posts with label Raid. Show all posts

PRESS NOTE DATE 05-12-2015


                                                                                        ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                        ಮಂಡ್ಯ ಜಿಲ್ಲೆ,
                                                                              ಮಂಡ್ಯ,  ದಿನಾಂಕಃ-05-12-2015.

-:ಪತ್ರಿಕಾ ಪ್ರಕಟಣೆ:-


     ಈ ದಿವಸ ದಿನಾಂಕಃ-05-12-2015 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ಶ್ರೀಮತಿ.ಭವಿತ, ಮ.ಪಿ.ಎಸ್.ಐ ಮಂಡ್ಯ ಗ್ರಾಮಾಂತರ ಠಾಣೆರವರಿಗೆ ಜಿಲ್ಲಾ ಪೋಲಿಸ್ ಕಛೇರಿಯಿಂದ ಬಂದ ಮಾಹಿತಿ ಏನೆಂದರೆ, ಮಂಡ್ಯ ನಗರದ ಗಾಂದಿನಗರ 8 ನೇ ಕ್ರಾಸ್‍ನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ರಲ್ಲಿ ಮನೆಯ ಮಾಲೀಕರ ಮಗನಾದ  ಸಿ.ಎಂ.ರಾಮು ಎಂಬುವವನು ಹುಡುಗಿಯರನ್ನಿಟ್ಟುಕೊಂಡು ವೇಶ್ಯವಾಟಿಕೆ ದಂದೆಯಲ್ಲಿ ತೊಡಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆಂತಲೂ  ಈ ಬಗ್ಗೆ ದಾಳಿ ನಡೆಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಸದರಿ ವಿಚಾರವನ್ನು ಡಿ.ವೈ.ಎಸ್.ಪಿ. ಮಂಡ್ಯ ಉಪ-ವಿಭಾಗರವರಿಗೆ ತಿಳಿಸಿ ಅವರಿಂದ ಸರ್ಚ್‍ವಾರೆಂಟ್ ಪಡೆದು ಅವರ ಜೊತೆಯಲ್ಲಿ ಪಶ್ಚಿಮ ಪೋಲಿಸ್ ಠಾಣೆಯ ಮಹಿಳಾ ಪಿ.ಎಸ್.ಐ. ಜಯಲಕ್ಮಮ್ಮ ಹಾಗು ಇತರೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚಾಯ್ತುದಾರರನ್ನು ನೇಮಕ ಮಾಡಿಕೊಂಡು ಮೆಲ್ಕಂಡ ಮನೆಯ ಮೇಲೆ ದಾಳಿ ಮಾಡಲಾಗಿ ಸದರಿ ಮನೆಯು  ಮಂಡ್ಯ ಸಿಟಿ ಗಾಂದಿನಗರದ 8 ನೇ ಕ್ರಾಸಿನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ಆಗಿದ್ದು, ಸದರಿ ಮನೆಯು 1ನೇ ಅಂತಸ್ತಿನಲ್ಲಿರುವ ಆರ್.ಸಿ.ಸಿ. ಮನೆ ಆಗಿರುತ್ತದೆ.

       ಮನೆಯ ಬಾಗಿಲನ್ನು ತಟ್ಟಿದಾಗ ಒಳಗಿಂದ ಬಾಗಿಲು ತೆರೆದಾಗ ಇಬ್ಬರು ಹೆಣ್ಣುಮಕ್ಕಳು ಅರೆಬರೆ ಬಟ್ಟೆಯನ್ನು ಧರಿಸಿರುವ ಸ್ಥಿತಿಯಲ್ಲಿದ್ದು, ಮತ್ತು ಇಬ್ಬರು ಗಂಡಸರು ಅರೆ ಬೆತ್ತಲೆ ಸ್ಥಿತಿಯಲ್ಲಿದ್ದು,  ಸದರಿ ಗಂಡಸರನ್ನು ವಿಚಾರಮಾಡಲಾಗಿ ಒಬ್ಬನು ತನ್ನ ಹೆಸರು ಸಿ.ಎಂ ರಾಮು ಬಿನ್ ಮಂಚಯ್ಯ 45 ವರ್ಷ, ಕೂಲಿಕೆಲಸ, ವಾಸ:- ನಂಬರ್ 2033/6 ಗಾಂದಿನಗರ, 8ನೇ ಕ್ರಾಸ್, ಮಂಡ್ಯ ಸಿಟಿ  ಎಂತಲೂ ತಾನು ಇದೇ ಮನೆಯಲ್ಲಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ತನ್ನ ಬಳಿಯಿರುವ ಮೊಬೈಲ್‍ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವುದಾಗಿ ತಿಳಿಸಿರುತ್ತಾನೆ, ಮತ್ತೊಬ್ಬನು ತನ್ನ ಹೆಸರು ಗಂಗಾಧರ ಬಿನ್ ಲೇಟ್ ಕಾಳೇಗೌಡ, 23 ವರ್ಷ, ವಕ್ಕಲಿಗರು, ಡ್ರೈವರ್ ಕೆಲಸ, ವಾಸ:-ಕಾಳೇನಳ್ಳಿ  ಗ್ರಾಮ. ಎಂತಲೂ ತಿಳಿಸಿರುತ್ತಾನೆ. ಹೆಣ್ಣುಮಕ್ಕಳನ್ನು ವಿಚಾರ ಮಾಡಲಾಗಿ ಒಬ್ಬಳು ಆದಿವಾಲ ಗ್ರಾಮ, ಹಿರಿಯೂರು ಹೋಬಳಿ, ಚಿತ್ರದುರ್ಗಾ ಜಿಲ್ಲೆ ಎಂತಲೂ ಮತ್ತೊಬ್ಬಳು, ಚಿಕ್ಕಜಾಜೂರು ಗ್ರಾಮ, ಚಿತ್ರದುರ್ಗಾ ಜಿಲ್ಲೆ, ಎಂತಲೂ ತಿಳಿಸಿರುತ್ತಾರೆ. ಇಬ್ಬರೂ ಹೆಣ್ಣುಮಕ್ಕಳು ತಾವು ನೆನ್ನೆ ರಾತ್ರಿ ಅಂದರೆ ದಿನಾಂಕ:04-12-2015 ರಂದು ಬಂದಿದ್ದಾಗಿಯೂ ಸದರಿ ಮನೆಯಲ್ಲಿರುವ ರಾಮು ಎಂಬುವರು ತಮ್ಮನ್ನು ವೇಶ್ಯಾವಾಟಿಕೆಗಾಗಿ ಕರೆಸಿ, ವೈಶ್ಯಾವಾಟಿಕೆಯಲ್ಲಿ ತೊಡಗಿಸಿರುತ್ತಾರೆಂದು ತಿಳಿಸಿರುತ್ತಾರೆ. 

    ಸದರಿ ಮೇಲ್ಕಂಡ ಸಿ.ಎಂ ರಾಮುರವರು ಕಾನೂನಿಗೆ ವಿರುದ್ದವಾಗಿ ತಮ್ಮ ಮನೆಯನ್ನು  ವೇಶ್ಯವಾಟಿಕೆಯ ದಂಧೆಗೆ ಉಪಯೋಗಿಸಿ ಹುಡುಗಿಯರನ್ನು ವೇಶ್ಯವಾಟಿಕೆ ದಂಧೆಗೆ ತೊಡಗಿಸಿ ಇದರಿಂದ ಹಣ ಸಂಪಾದನೆ ಮಾಡುವ ದಂಧೆಯಲ್ಲಿ ತೊಡಗಿದ್ದರಿಂದ ಮತ್ತು ಗಂಗಾದರ ಎಂಬುವವನು ವೇಶ್ಯವಾಟಿಕೆಯಲ್ಲಿ ತೊಡಗಿದ್ದರಿಂದ, ಗಂಗಾಧರ ಮತ್ತು ಸಿ.ಎಂ.ರಾಮುರವರುಗಳ  ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ. 

raid on 06-11-11

ದಿನಾಂಕ: 06-11-11 ರಂದು ಸಂಜೆ 06-00 ಗಂಟೆಯ ಸಮಯದಲ್ಲಿ ಶ್ರೀ ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ . ಡಿ.ಸಿ.ಐ.ಬಿ ಡಿ,ಪಿ.ಓ ಮಂಡ್ಯ ರವರಿಗೆ ಬಾಕ್ಮಿಧಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಟೌನಿನ, ಮಂಡ್ಯ - ಕೊಪ್ಪ ಮುಖ್ಯ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿರುವ ಪ್ರಕಾಶರವರ ಬಿಲ್ಡಿಂಡ್ ನಲ್ಲಿ, ಸತೀಶ ಎಂಬುವವರ ಚಿಲ್ಲರೆ ಅಂಗಡಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ. ಕೃಷ್ಣಮೂರ್ತಿ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತ್ತು ಸಿಬ್ಬಂದಿಗಳಾದ ಎಂ.ಎಸ್. ಗುರುಸ್ವಾಮಿ. ಸಿ.ಹೆಚ್.ಸಿ 277. ಸಿ.ಹೆಚ್.ಸಿ 04 ಮಾದಯ್ಯ. ಸಿ.ಹೆಚ್.ಸಿ 191 ಸಿ.ಡಿ. ನಿಂಗೇಗೌಡ. ಸಿಪಿಸಿ 343 ವಿ. ಬಾಬು. ಸಿ.ಪಿ.ಸಿ. 580 ರಮೇಶ. ಸಿಪಿಸಿ 731 ಅರಸು. ಎ.ಪಿ.ಸಿ. ಕೇಶವ ಮೂರ್ತಿ ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಒಬ್ಬ ಅಸಾಮಿ ನಿಂತಿದ್ದು ಆತನನ್ನು ವಿಚಾರ ಮಾಡಲಾಗಿ ನನ್ನ ಹೆಸರು ಸತೀಶ ಎಂದು ತಿಳಿಸಿದ ಮತ್ತೊಂದು ಕೋಣೆಯಲ್ಲಿ 5 ಜನರು ಬಾರ್ ಮಾದರಿಯಲ್ಲಿ ಕುಳಿತು ಕೊಂಡು ಕುಡಿಯುತ್ತಿದ್ದು. ಸತೀಶನನ್ನು ಯಾವುದಾದರು ಲೈಸನ್ಸ್ ಇದೆಯೇ ಎಂದು ಕೇಳಲಾಗಿ ಯಾವುದೇ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿದ,. ನಂತರ ಆತನ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯಲ್ಲಿ ಸೂಪರ್ ಜಾಕ್ 180 ಎಂ.ಎಲ್ ನ 1 ಬಾಟಲ್. ಸೂಪರ್ ಜಾಪ್ ಕ್ಲಾಸಿಕ್ 180 ಎಂ.ಎಲ್ 1 ಬಾಟಲ್. ಸಾವರಿನ್ ಬ್ರಾಂಡಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಟ್ರವಿನ್ ವಿಸ್ಕಿ 180 ಎಂ.ಎಲ್ ನ 3 ಬಾಟಲ್. ಓಲ್ಡ್ ಅಡಿವಿರಲ್ ಬ್ರಾಂಡಿ 3 ಬಾಟಲ್, ಓಲ್ಡ್ ಅಡಿವಿರಲ್ ಬ್ರಾಂಡಿ 90 ಎಂ.ಎಲ್ 1 ಬಾಟಲ್ ಮತ್ತು ಮ್ಯಾಕ್ ಡುವೆಲ್ ಬ್ರಾಂಡಿ 90 ಎಂ.ಎಲ್ ನ 7 ಬಾಟಲ್ ಗಳು ಮತ್ತು ಈ ದಿನ ವ್ಯಾಪಾರ ಮಾಡಿದ ಬಾಬ್ತು ರೂ 2606/- ಹಣವನ್ನು ಸದರಿ ವ್ಯಕ್ತಿಯಿಂದ ವಶಪಡಿಸಿಕೊಂಡು. ಅನಧಿಕೃತವಾಗಿ ಬಾರ್ ನಡೆಸುತ್ತಿದ್ದ ಬಾರ್ ಮಾಲೀಕನಾದ ಸತೀಶನ ವಿರುದ್ದ ಕೆರಗೋಡು ಪೊಲೀಸ್ ಠಾಣೆಯ ಮೊ.ಸಂ 197/11 ಕಲಂ 32-34 ಕೆ.ಇ ಆಕ್ಟ್ ಪ್ರಕಾರ ಕೇಸು ದಾಖಲು ಮಾಡಿ ನ್ಯಾಯಾಲಕ್ಕೆ ಹಾಜರ್ ಪಡಿಸಿರುತ್ತೆ

Raid On 24-08-2011

ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 240/11 ಕಲಂ 87 ಕೆ.ಪಿ. ಆಕ್ಟ್
1] ದಿನಾಂಕ 24-08-11 ರಂದು ಪಿರ್ಯಾದಿ ಶ್ರೀ ರೇಣುಕಾ ಪ್ರಸಾದ್ ಪಿ,ಎಸ್.ಐ ಕೆ,ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಏನೆಂದರೆ ತಂಡೆಕೆರೆ ಗ್ರಾಮದ ಸಂತೆ ಮೈಧಾನದ ಬೆಲ್ಲದ ಮಂಡಿ ಮುಂಭಾಗದ ಹೊರಂಗಣದಲ್ಲಿ ಸಾರ್ವಜನಿಕರು ವ್ಯಾಪರ ಮಾಡುವ ಸೀಮೆಂಟ್ ಕಟ್ಟಡದ ಜಗಲಿಯ ಮೇಲೆ ಆರೋಪಿತರಾದ ಚಲುವಯ್ಯ ಮತ್ತು ಇತರೆ 8 ಜನರು ಅಕ್ರಮವಾಗಿ ಅಂದರ್ ಬಾಯರ್ ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಡನೆ ದಾಳಿ ಮಾಡಿ 52 ಇಸ್ಪೀಟ್ ಎಲೆಗಳನ್ನು. 2 ಮೋಬೈಲ್ ಸೆಟ್ ಗಳು ಹಾಗೂ ನಗದು 66.720/- ರೂ ಹಾಗೂ ಇಸ್ಪೀಟ್ ಆಡಲು ಉಪಯೋಗಿಸಿದ ಒಂದು ಹಳೆಯ ಚಾಪೆಯನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತೆ

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 377/11 ಕಲಂ 87 ಕೆ.ಪಿ. ಆಕ್ಟ್
2] ದಿನಾಂಕ 24-08-11 ರಂದು ಆರೋಪಿಗಳಾದ ನಾಗರಾಜು ಮತ್ತು ಇತರೆ 3 ಜನರು ಪಾಂಡವಪುರ ಟೌನ್ ಕೆರೆ ಕೋಡಿಯ ಗದ್ದೆಯ ಬಯಲಿನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸಪೀಟ್ ಜೂಜಾಟವಾಡುತ್ತದ್ದಾರೆಂದು ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಪಿ,ಐ ಪಾಂಡವಪುರ ಪೊಲೀಸ್ ಠಾಣೆ ರವರು ಒಂದು ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡು ಅವರ ಬಳಿ ಇದ್ದ 24.530 ರೂ, ಮೋಟಾರ್ ಸೈಕಲ್ ಮತ್ತು ಮೊಪೆಡ್ ಮತ್ತು ಮೊಬೈಲ್ ಪೋನ್ ಗಳನ್ನು ಅಮಾನತ್ತು ಪಡಿಸಿ, ಸದರಿ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಪಡಿಸಿರುತ್ತೆ,

Raid On 23-07-2011

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಮೊ,ಸಂ 221/11 ಕಲಂ 79-80 ಕೆಪಿ ಕಾಯಿದೆ

ದಿನಾಂಕ 22-07-11 ರಂದು ಪಿರ್ಯಾದಿ ಎಸ್, ಹೆಚ್ ವಸಂತ ಪಿಎಸ್ಐ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಂಡ್ಯದ ಸಿಟಿ ಕ್ಲಬ್ ನಲ್ಲಿ ಕೆಲವರು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸದಿರಿ ಮಾಹಿತಿಯನ್ನು ಮಾನ್ಯ ಡಿ,ಎಸ್,ಪಿ ಮಂಡ್ಯ ಉಪ-ವಿಭಾಗ ರವರಿಗೆ ತಿಳಿಸಿ ಅವರಿಂದ ಅನುಮತಿ ಪಡೆದು ಸಿಬ್ಬಂದಿಗಳೊಡನೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿಗಳಾದ ಎಂ.ವಿ. ನಾಗರಾಜು ಮತ್ತು ಇತರೆ 9 ಜನರನ್ನು ಬಂಧಿಸಿ ಮತ್ತು ಸದರಿಯವರಿಂದ 1.59.565 /- ರೂಗಳನ್ನು ವಶಪಡಿಸಿಕೊಂಡಿರಿತ್ತೆ

Raid On 18-07-2011

ಕೆರಗೋಡು ಪೊಲೀಸ್ ಠಾಣೆ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 18-07-11 ರಂದು 00-15 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕೆರಗೋಡು ಪೊಲೀಸ್ ಠಾಣೆಯ ಸರಹದ್ದಿನ ಆಲಕೆರೆ ಗ್ರಾಮದ ಚನ್ನಬಸಣ್ಣನವರ ಮನೆಯ ಮುಂದೆ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 277 ಗುರುಸ್ವಾಮಿ ಎಂ.ಎಸ್ , ಸಿ.ಹೆಚ್.ಸಿ 04 ಎಂ ಮಾದಯ್ಯಮ ಮತ್ತು ಸಿಪಿಸಿ ರಮೇಶ, ಅರಸು, ಬಾಬು,ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 7.700 ರೂ ಹಣ, 4 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 2 ದ್ವಿಚಕ್ರ ವಾಹನ, 1 ಮಾರುತಿ ಕಾರ್ ಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಶಿವರಾಜು ಮತ್ತು ಇತರರೆ 7 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಕೆರಗೋಡು ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 114/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

Raid On 17-07-2011

ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 17-07-11 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಂಡ್ಯ ತಾಲ್ಲೋಕು ಕೂಲಕಾರನದೊಡ್ಡಿ ಗ್ರಾಮದ ಚಿಕ್ಕಮೊಗಣ್ಣನವರ ಕಬ್ಬಿನ ಗದ್ದೆಯ ಪಕ್ಕದ ಗಾಡಿ ಜಾಡು ರಸ್ತೆಯಲ್ಲಿ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ರಮೇಶ, ಅರಸು ಮತ್ತು ಬಾಬು, ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 13.820 ರೂ ಹಣ, ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 4 ದ್ವಿಚಕ್ರ ವಾಹನಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಪುಟ್ಟರಾಜು ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್

ದಿನಾಂಕ 17-07-11 ರಂದು ಮಧ್ಯಾಹ್ನ 18-30 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಎ.ಆರ್ ವೆಂಕಟೇಶ ಮೂರ್ತಿ ಸಿ.ಪಿ.ಐ ಶ್ರೀರಂಗಪಟ್ಟಣ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಶ್ರೀರಂಗಪಟ್ಟಣ ಟೌನ್ ಪ್ರವಾಸಿ ಮಂದಿರದ ಹಿಂಭಾಗ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 34500 ರೂ ಹಣ, ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಸಂತೋಷ ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ

Raid On 09-07-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ, 474/11 ಕಲಂ 79-80 ಕೆ.ಪಿ ಕಾಯಿದೆ

ದಿನಾಂಕ 10-07-11 ರಂದು ಪಿರ್ಯಾದಿ ಶ್ರೀ ಎ.ಆರ್. ವೆಂಕಟೇಶ ಮೂರ್ತಿ ಸಿ.ಪಿಐ ಶ್ರೀರಂಗಪಟ್ಟಣ ವೃತ್ತ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ಶ್ರೀರಂಗಪಟ್ಟಣದ ಐ.ಬಿ ಗೆ ಹೋಗಿ ದಾಳಿಮಾಡಲಾಗಿ ಆರೋಪಿಗಳಾದ ಶಿವಕುಮಾರ ಮತ್ತು ಇತರೆ 8 ಜನರು ಒಂದು ರೂಂ ನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಎಂಬ ಜೂಜಾಟ ಆಡುತ್ತಿದ್ದವರನ್ನು ಹಿಡಿದ್ದು ಠಾಣೆಗೆ ಕರೆತಂದು ಕೇಸು ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮತ್ತು ಸದರಿಯವರಿಂದ 47.500/- ರೂ ಗಳನ್ನು ವಶಪಡಿಸಿಕೊಂಡಿರುತ್ತೆ

Raid On 07-07-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಂ 113/11 ಕಲಂ 87 ಕೆ.ಪಿ. ಕಾಯಿದೆ

ದಿನಾಂಕ 07-07-11 ರಂದು ಸಂಜೆ 04-00 ಗಂಟೆಯಲ್ಲಿ ಬೆಳಗೊಳ ಗ್ರಾಮದ ಸರ್ವದರ್ಮ ಆಶ್ರಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮೇಲ್ಬಾಗಕ್ಕಾದಂತೆ ಪಾಳು ಬಿದ್ದಿರುವ ಸ್ಥಳದಲ್ಲಿ ಆರೋಪಿಗಳಾದ ಸಮೀಉಲ್ಲಾ ಖಾನ್ ಮತ್ತು ಇತರೆ 4 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಇಸ್ಟೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ಪಿರ್ಯಾದಿ ಸಿ.ಪಿ.ಐ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ದಾಳಿ ಮಾಡಿ 24.980 ರೂಗಳನ್ನು ವಶಪಡಿಸಿಕಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತೆ

Raid On 11-06-2011

ವೇಶ್ಯಾವಾಟಿಕೆ ಪ್ರಕರಣ

ಮದ್ದೂರು ಪೊಲೀಸ್ ಠಾಣೆ
1] ಮೊ.ಸಂ 250/11 ಕಲಂ 3-4-5-6-7-8 ಮತ್ತು 11 ಐ.ಟಿ.ಪಿ ಕಾಯಿದೆ ದಿನಾಂಕ 11-06-11 ರಂದು 01-15 ಗಂಟೆಯಲ್ಲಿ ಪಿರ್ಯಾದಿ ಶ್ರೀ ಎಂ. ಎಂ. ಪ್ರಶಾಂತ್ ಸಿ.ಪಿ.ಸಿ ಮದ್ದೂರು ವೃತ್ತ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಡನೆ ಮದ್ದೂರು ಟೌನ್ ಪೂಜಿತ್ ಲಾಡ್ಕ್ ನ್ನು ಪರಿಶೀಲಿಸಿದಾಗ ಸದರಿ ಲಾಡ್ಕ್ ನಲ್ಲಿ ಆರೋಪಿಗಳಾದ ಸಿದ್ದರಾಜಿ, ಅಪ್ಪಾಜಿ. ರಾಜು ಮತ್ತು ಇತರರೂ ವೇಶ್ಯಾವಾಟಿಯಲ್ಲಿ ತೊಡಗಿದ್ದು ಸದರಿಯವರ ವಿರುದ್ದ ಕೇಸು ದಾಖಲು ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ ಬಗ್ಗೆ

Raid On 02-06-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಓ 95/11 ಕಲಂ 79-80 ಕೆ.ಪಿ. ಆಕ್ಟ್

ದಿನಾಂಕ 03-06-11 ರಂದು ಜಿ. ಕೃಷ್ಣಮೂರ್ತಿ ಪಿಐ ಡಿ.ಸಿ.ಐಬಿ ಮಂಡ್ಯ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿ ಸಿಬ್ಬಂದಿಗಳೊಡನೆ ಸಂಜೆ 04-00 ಸಮಯದಲ್ಲಿ ಕೆ.ಆರ್. ಸಾಗರ ಪೊಲೀಸ್ ಠಾಣೆ ಸರಹದ್ದಿನ ಮೊಗರಹಳ್ಳಿ ಗ್ರಾಮದ ಬಳಿ ಇರುವ ಹಿರಿದೇವಮ್ಮ ರಿಕ್ರಿಯೇಷನ್ ಸೆಂಟರ್ ನಲ್ಲಿ ಆರೋಪಿಗಳಾದ ಹೊನ್ನೇಗೌಡ ಮತ್ತು ಇತರೆ 22 ಜನರು ಹನವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದು. ಸದರಿಯವರ ಮೇಲೆ ಪಿರ್ಯಾದಿಯವರ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಬಳಿ ಇದ್ದು ನಗದು 59.271/- ರೂ, 22 ಮೋಬೈಲ್ ಪೋನುಗಳು. 10 ಕೈ ಗಡಿಯಾರಗಳು. 3 ಚಿನ್ನದಂತಿರುವ ಉಂಗುರು. 18 ದ್ವಿಚಕ್ರ ವಾಹನಗಳು. 1 ಸ್ಯಾಂಟ್ರೋ ಕಾರ್ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

Raid on 01-06-2011

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ 223/11 ಕಲಂ 87 ಕೆ.ಪಿ. ಆಕ್ಟ್

ದಿನಾಂಕ 31-05-11 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಮಂಡ್ಯ ನಗರದಲ್ಲಿ ರೌಂಡ್ಸ್ ನಲ್ಲಿರುವಾಗ ಪಿರ್ಯಾದಿ ಶ್ರೀ ಚನ್ನಬಸವಣ್ಣ ಎಸ್.ಎಲ್ ಡಿ.ವೈಎಸ್.ಪಿ ಮಂಡ್ಯ ಉಪ-ವಿಭಾಗ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಹನಕೆರೆ ಗ್ರಾಮದ ಈಶ್ವೆರ ದೇವಸ್ಥಾನದ ಕೆರೆ ಬಳಿ ಇರುವ ಹುಣೆಸೆ ಮರದ ಕೆಳಗಡೆ ಸುಮಾರು 8-10 ಜನರು ಪ್ಲಾಸ್ಟೀಕ್ ಥಾಟನ್ನು ಹಾಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟವಾಡುತ್ತಿದ್ದಾರೆದು ಬಂದು ಖಚಿತ ಮಾಹಿತಿಯ ಮೇರೆಗೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಆರೋಪಿಗಳಾದ ಹೆಚ್.ಟಿ. ರವೀಂದ್ರ ಮತ್ತು ಇತರೆ 10 ಜನರನ್ನು ಮತ್ತು 18.800 ರೂ ನಗದು, ಒಂದು ಚಿನ್ನದ ಉಂಗುರ. 3 ವಾಚ್ ಗಳು, 3 ಮೋಟಾರ್ ಸೈಕಲ್ ಕಳನ್ನು ವಶಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

Raid On 20-05-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ 

ದಿನಾಂಕ 19-05-11 ರಂದು ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಕಪ್ಪರನ ಕೊಪ್ಪಲಿ ಗ್ರಾಮದ ಚಿಕ್ಕಬಸವಶೆಟ್ಟಿ ರವರ ಹೋಟೆಲ್ ನಲ್ಲಿ ಅಕ್ರಮವಾಗಿ ಜೂಜಾಟ ವಾಡುತ್ತಿದ್ದ ಆಸಾಮಿಗಳಾದ ಮಹೇಶ ಬಿನ್ ಚಿಕ್ಕ ಭೈರವಶಟ್ಟಿ ಮತ್ತು ಇತರೆ 7 ಜನರು ಎಲ್ಲರೂ ಕಪರನಕೊಪ್ಪಲು ಗ್ರಾಮ ಶ್ರೀರಂಗಪಟ್ಟಣ ತಾಲ್ಲೋಕು ರವರುಗಳ ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದು . ಸದರಿಯವರ ಮೇಲೆ  ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ಮತ್ತು ಸಿಬ್ಬಂದಿಗಳೊಡನೆ ದಾಳಿ ಸದರಿಯವರ ಬಂಧಿಸಿ ಅವರುಗಳ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ ಕೇಸು ದಾಖಲು ಮಾಡಿ ಮತ್ತು ಅವರ ಬಳಿ ಇದ್ದ ಹಣ 15.400/- ರೂ 6 ಮೋಬೈಲ್ ಪೋನ್ ಗಳು, 3 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ತೆಗೆದು ಕೊಂಡಿರುತ್ತೆ 

Raid On 18-05-2011

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ಸಂ 132/11 ಕಲಂ 188 ಐಪಿಸಿ ರೆ/ವಿ 34 ಕೆ.ಇ. ಕಾಯಿದೆ 

ದಿನಾಂಕ 18-05-11 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿ ಎಂ.ಪಿ. ಜಯಮಾರುತಿ ಸಿಪಿಐ ಮಂಡ್ಯ ನಗರ ವೃತ್ತ ರವರಿಗೆ ಬಂದು ಖಚಿತ ಮಾಹಿತಿ ಏನೆಂದರೇ ಮಂಡ್ಯ ಸಿಟಿ ಕಾಳಿಕಾಂಬ ದೇವಸ್ಥಾನದ ಸರ್ಕಲ್ ಪಕ್ಕ ಪಶು ಆಸ್ಪತ್ರೆಯ ಪಕ್ಕದಲ್ಲಿ ಆರೋಪಿ ನಾಗರಾಜು ಬಿನ್ ಸಿದ್ದಾಚಾರಿ ಎಂಬ ಸಾಮಿಯು ಮಧ್ಯದ ಬಾಟಲ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು, ಮಂಡ್ಯ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ನಡೆದು ಮತ ಎಣಿಕೆ ಕಾರ್ಯಕ್ರಮ ಇದ್ದು, ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯ ಮಾರಾಟ ಮಾಡುವುದನ್ನು ನಿಷೇಧಿಸಿದ್ದು. ಅದನ್ನು ಉಲ್ಲಂಘಿಸಿ ಮಧ್ಯ ಮಾರಾಟ ಮಾಡುತ್ತಿದ್ದ. ದಾಳಿ ಮಾಡಿ ಆರೋಪಿಯನ್ನು ಮತ್ತು 6 ಮಧ್ಯ ತುಂಬಿದ ಸೂಪರ್ ಜಾಕ್ ಬಾಟಲ್ ಗಳು ಹಾಗೂ 2 ಅರ್ಧ ಮಧ್ಯ ತುಂಬಿದ ಮಧ್ಯದ ಬಾಟಲ್ಗಳು ಮಧ್ಯ ಮಾರಾಟ ದಿಂದ ಬಂದ ಹಣ 120 ರೂ ವನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಯ ವಿರುದ್ಧ ಕೇಸು ದಾಖಲು ಮಾಡಿರುತ್ತೆ 

Raid On 16-05-2011

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ

ದಿನಾಂಕ 16-05-11 ರಂದು  ಎ.ಪಿ.ಎಂ.ಸಿ ಚುನಾವಣೆ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಮಧ್ಯ ಮಾರಾಟ ಮಾಡದಂತೆ ನಿಷೇದಾಜ್ಞೆ ಹೊರಡಿಸಿದ್ದರು ಸಹಾ ಸದರಿ ಆದೇಶವನ್ನು ಉಲ್ಲಂಘಿಸಿ ಮಂಡ್ಯದ ಹಳೆ ತಾಲ್ಲೋಕು ಕಛೇರಿ ಬಳಿ ಆರೋಪಿ 
ರಘು @ ರಾಘವೇಂದ್ರ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು. ಆತನ ಬಳಿ ಇದ್ದ 180 ಎಂ.ಎಲ್ ನ 4 ಸೂಪರ್ ಜಾಕ್ ಬಾಟಲ್ ಗಳು ಮತ್ತು 14 ಪ್ಲಾಸ್ಟಿಕ್ ರಟ್ಟಿನಲ್ಲಿದ್ದ 180 ಎಂ.ಎಲ್  ನ ಓಲ್ಡ್ ತವರಿನ್ ಪೋಚ್ಗಳನ್ನು ಹಾಗೂ ಮಾರಾಟ ಮಾಡಿದ್ದು 1500-00 ರೂಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ  ಸದರಿ ಆರೋಪಿಯು ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ಸಂ 139/11 ಕಲಂ 34 ಕೆ.ಇ. ಕಾಯಿದೆ ಮತ್ತು 188 ಐಪಿಸಿ ರೀತ್ಯಾ ಕೇಸು ದಾಖಲು ಮಾಡಿರುತ್ತೆ 

Raid On 14-05-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ 

ದಿನಾಂಕ 14-05-11 ರಂದು ಪಿರ್ಯಾದಿ ಶ್ರೀ ಪ್ರಭಾಕರ್ ರಾವ್ ಸಿಂದೆ  ಪೊಲೀಸ್ ಇನ್ಸ್ ಪೆಕ್ಟರ್ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಶ್ರೀರಂಗಪಟ್ಟಣ ಟೌನ್ ನ ಬಾಲಾಜಿ ಲಾಡ್ಜ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 1] ಸೂಯದ್ ರೂಹುಲ್ಲಾ ಬಿನ್ ಸೈಯದ್ ಖಲಿಂ, 2] ಹಸೀನಾ ಕೋಂ ರಷೀದ್ , 3] ಮೊಹಮದ್ ಖಲಿಂ ಉಲ್ಲಾ, 4] ಲುಗ್ನಾ ಬಿನ್ ಜುಬೇರಾ. 5] ಪುಂಟಲೀಕ ಇತರರನ್ನು ಮತ್ತು 1940 ರೂ ಹಣವನ್ನು ಮತ್ತು ಒಂದು ಮೋಟಾರ್ ಬೈಕ್ ನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಗಳ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ 317/11 ಕಲಂ 3-4-5-6-7 ಐ.ಟಿಪಿ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ 

ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ 

ದಿನಾಂಕ 13-05-11 ರಂದು ಪಿರ್ಯಾದಿ ಶ್ರೀ ಎಲ್ ಕೆ ರಮೇಶ ಅರಕ್ಷಕ ನಿರೀಕ್ಷಕರು ಮಳವಳ್ಳಿ ಪುರ ಪೊಲಿಸ್ ಠಾಣೆ ರವರು ಗಸ್ತಿನಲ್ಲಿರು ಬೇಕಾದರೆ ಬೆಳ್ಳಿಗೆ 10-45 ಗಂಟೆ ಸಮಯಲ್ಲಿ ಆರೋಪಿಗಳಾದ  ಅನ್ವರ್ ಪಾಷ ಮತ್ತು  ಜಯಚಂದ್ರ  ಮುಸ್ಲಿಂ ಬ್ಲಾಕ್ ಅರಳಿ ಕಟ್ಟೆಯ ಬಳಿ. ಕುಳಿತುಕೊಂಡು ರಸ್ತೆಯಲ್ಲಿ ಬರುವ ಸಾರ್ವಜಿಕರನ್ನು ಕರೆದು ಐ.ಪಿ.ಎಲ್ ನಡೆಸುತ್ತಿರುವ ಕ್ರಕೇಟ್ ಪಂದ್ಯಾವಳಿಯಲ್ಲಿ. ಒಬ್ಬ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡ ಗೆಲ್ಲುತ್ತದೆ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದ. ಮತ್ತೊಬ್ಬ ಕೊಲ್ಕತಾ ನೈಟ್ ರೈಡರ್ಸ್ ತಂಡ ಗೆಲ್ಲುತ್ತದೆ ಎಂದು ಕೂಗಿ ಹೇಳುತ್ತಾ ಹಣವನ್ನು ಪಣಾವಗಿ ಕಟ್ಟಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಾ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ದಾಳಿ ಮಾಡಿದ್ದಾಗ ಆರೋಪಿ ಅನ್ವರ್ ಪಾಷ ಬಳಿ ಶೋಧಿಸಿದಾಗ 22.510-00 ಒಂದು ನೋಕಿಯಾ ಮೊಬೈಲ್ ಮತ್ತು ಜಯಚಂದ್ರ ಶೋಧಿಸಿದಾಗ 32.500-00 ರೂ ನಗದು ಹಣ ಮತ್ತು 3 ನೋಕಿಯಾ ಮೋಬೈಲ್  ಗಳಿದ್ದ ಹಣವನ್ನು ವಶಕ್ಕೆ ತೆಗೆದು ಕೊಂಡು ಮೇಲ್ಕಂಡ ಆರೋಪಿಗಳ ವಿರುದ್ದಾ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ 

Raid On 06-05-2011

ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 219/11 ಕಲಂ 3-5 ಸ್ಪೋಟಕ ವಸ್ತುಗಳ ಅಧಿ ನಿಯಮ 1908 

ದಿನಾಂಕ 04-05-11 ರಂದು ಹೊನ್ನಾಗಾನ ಹಳ್ಳಿ ಗ್ರಾಮದ ಚಲುವೇಗೌಡ ಬಿನ್ ಹನುಮಂತೇಗೌಡ ಬಾಬ್ತು ಸರ್ವೆ ನಂ 62 ರ ಕಬ್ಬಿನ ಗದ್ದೆಯಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸಲು ಉಯೋಗಿಸುವ ಸ್ಪೋಟಕ ವಸ್ತುಗಳನ್ನು ಅನದಿಕೃತವಾಗಿ ಸಂಗ್ರಹಿಸಿಟ್ಟು ಕೊಂಡಿರುತ್ತಾರೆಂದು ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಪಿ.ಐ ಪಾಂಡವಪುರ ರವರಿಗೆ ಬಾತ್ಮಿದಾರಿಂದ ಖಚಿತ ವರ್ತಮಾನ  ಬಂದ ಮೇರೆಗೆ ಸಿಬ್ಬಂದಿಗಳೊಡನೆ ದಾಳಿ ಮಾಡಿ ಆರೋಪಿ ಚಲುವೇಗೌಡ ಬಿನ್ ಹನುಮಂತೇಗೌಡ ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿದ್ದ ಸ್ಪೋಟಕ ವಸ್ತುಗಳಾದ 1 ಲಕ್ಷ ಮೌಲ್ಯದ ಡಿಟೋನೇಟರ್ ಅನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಯ ವಿರುದ್ದ ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ 219/11 ಕಲಂ 3-5 ಸ್ಪೋಟಕ ವಸ್ತುಗಳ ಅಧಿ ನಿಯಮ 1908 ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ