Press Note on Murder Case Detected - Nagamangala Rural PS
Moving text
Showing posts with label Press Note. Show all posts
Showing posts with label Press Note. Show all posts
ಪೊಲೀಸ್ ಸೂಪರಿಂಟೆಂಡೆಂಟ್
ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 08.01.2018
ಪತ್ರಿಕಾ ಪ್ರಕಟಣೆ
“ಮಂಡ್ಯ ಜಿಲ್ಲಾ ಅಪರಾಧ ವಿಭಾಗ ಪೊಲೀಸರಿಂದ
ಜೂಜುಕೋರರ ಬಂಧನ”
²
² ²
ದಿನಾಂಕ: 07-01-2018 ರಂದು ಜಿಲ್ಲಾ ಅಪರಾಧ
ವಿಭಾಗದ ಪಿ.ಐ ಶ್ರೀ. ರಾಜು.ಜಿ.ಸಿ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಶ್ರೀರಂಗಪಟ್ಟಣ ತಾಲ್ಲೋಕು, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾರದೊಡ್ಡಿ ನಾಲೆಯ
ಕಾವೇರಿ ನದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಿದ್ದವರನ್ನು
ಸಿಬ್ಬಂದಿರವರೊಡನೆ ಧಾಳಿ ಮಾಡಿ ಜೂಜಾಟದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್
ಆಟದಲ್ಲಿ ತೊಡಗಿದ್ದ 1] ಮಹಮ್ಮದ್ ಮುಜಾಹಿದ್ ಬಿನ್
ಪೀರಸಾಭ್ 46 ವರ್ಷ, ಮೈಸೂರು ನಗರ 2] ಸುಭಾಷ್ ಪಿ @ ರಾಜು ಬಿನ್ ಪುಟ್ಟಸ್ವಾಮಿಗೌಡ,
32 ವರ್ಷ, ಮೈಸೂರು ನಗರ 3] ಅಮೀತ್ ಬಿನ್ ಪ್ರಭಾಕರ್,
25 ವರ್ಷ, ಮೈಸೂರು ನಗರ 4] ಅಶೋಕ ಕೆ. ಬಿನ್ ಲೇಟ್
ಕಪನೀಗೌಡ, 49 ವರ್ಷ, ಮೈಸೂರು ನಗರ 5] ಪುಟ್ಟ ಬಿನ್ ಪುಟ್ಟೇಗೌಡ, 47 ವರ್ಷ,ಪಾಲಹಳ್ಳಿ ಗ್ರಾಮ 6]
ಮಹೇಶ್ ವಿ. ಬಿನ್ ಲೇಟ್ ವೆಂಕಟೇಶ್, 21 ವರ್ಷ, ಪಾಲಹಳ್ಳಿ ಗ್ರಾಮ 7] ಸತೀಶ್ ಬಿನ್ ಗೋಪಾಲಗೌಡ,
37 ವರ್ಷ, ಚಿಕ್ಕನಹಳ್ಳಿ ಗ್ರಾಮ, ಮೈಸೂರು, 8] ಸ್ವಾಮೀಗೌಡ ಬಿನ್ ಚಿಕ್ಕಸಿದ್ದೇಗೌಡ, 45 ವರ್ಷ, ಯಲಚಹಳ್ಳಿ ಗ್ರಾಮ ಮೈಸೂರು ಜಲ್ಲೆ 9] ಗುಣಸಾಗರ್ ಆರ್ ಬಿನ್ ರಾಮೇಗೌಡ, 26 ವರ್ಷ, ದರಸಗುಪ್ಪೆ ಗ್ರಾಮ ಇವರೆಲ್ಲರೂ ಪಣವಾಗಿ ಇಟ್ಟಿದ್ದ ಹಣ 8790/-
ರೂ ಹಾಗೂ 9 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅಂದರ್ ಬಾಹರ್ ಜೂಜಾಟವನ್ನು ಶ್ರೀರಂಗಪಟ್ಟಣ ಟೌನ್ ಪೊಲೀಸ್
ಠಾಣೆಯ ರೌಡಿ ಶೀಟರ್ ಪಾಲಹಳ್ಳಿ ರಘು ಎಂಬುವವನು ನಡೆಸುತ್ತಿದ್ದು ಈತನು ದಾಳಿಯ ವೇಳೆಯಲ್ಲಿ ಓಡಿ
ಹೋಗಿರುತ್ತಾನೆ. ಉಳಿದೆಲ್ಲಾ ಮೇಲ್ಕಂಡವರನ್ನು ದಸ್ತಗಿರಿ ಮಾಡಲಾಗಿದೆ ಈ ಬಗ್ಗೆ ಶ್ರೀರಂಗಪಟ್ಟಣ
ಟೌನ್ ಪೊಲೀಸ್ ಠಾಣೆಯಲ್ಲಿ ಮೊ.ನಂಃ05/2018 ಕಲಂಃ87 ಕೆ.ಪಿ.ಆಕ್ಟ್ ರೀತ್ಯಾ
ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಜೂಜು ಅಡ್ಡೆ
ದಾಳಿಯಲ್ಲಿ ಮಂಡ್ಯ ಜಿಲ್ಲಾ ಅಪರಾಧ ವಿಭಾಗದ ಪಿ.ಐ ಶ್ರೀ ರಾಜು.ಜಿ.ಸಿ ರವರ ನೇತೃತ್ವದಲ್ಲಿ,
ಸಿಬ್ಬಂದಿಯವರಾದ ದೇವರಾಜು, ಶಶಿಕುಮಾರ, ಗುರುಬಾಳಪ್ಪ, ಹರೀಶ, ಚನ್ನಪ್ಪ, ಈರಣ್ಣ, ರವಿ ಹಾಗೂ ಚಾಲಕರಾದ ವಿಜಯ್ ರವರು ಪಾಲ್ಗೊಂಡಿದ್ದರು. ಈ
ತಂಡದ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ರಾಧಿಕಾ. ಜಿ.
ಐಪಿಎಸ್ ರವರು ಪ್ರಶಂಸಿರುತ್ತಾರೆ.
ಪೊಲೀಸ್ ಸೂಪರಿಂಟೆಂಡೆಂಟ್
ರವರ ಕಛೇರಿ,
ಮಂಡ್ಯ ಜಿಲ್ಲೆ ಮಂಡ್ಯ ದಿನಾಂಕ: 06.01.2017
ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರ ಯಶಸ್ವಿ
ಕಾರ್ಯಾಚರಣೆ,
ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು
ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪಿತರ ಬಂಧನ
ಮಂಡ್ಯ ಜಿಲ್ಲೆಯ ಮೇಲುಕೋಟೆ ಠಾಣೆ ವ್ಯಾಪ್ತಿಯ ಮಂಡ್ಯ-ಮೇಲುಕೋಟೆ ರಸ್ತೆಯ ಮುದ್ದು ಬೆಟ್ಟ
ನೇರದ ತಿರುವಿನ ಹಂಪ್ಸ್ ಬಳಿ ಸ್ಟೇಟ್ ಬ್ಯಾಂಕ್ ಇಂಡಿಯ ಮೇಲುಕೋಟೆ ಶಾಖೆಯ ವ್ಯವಸ್ಥಾಪಕರ ಕಾರನ್ನು
ಅಡ್ಡಗಟ್ಟಿ ಚಿನ್ನದ ಚೈನು, ಮೊಬೈಲ್, 2000 ರೂ ನಗದು ಹಣ ಹಾಗೂ ವಾಚ್‍ನ್ನು ಮತ್ತು ಮಂಡ್ಯ
ತಾಲ್ಲೋಕಿನ ತೂಬಿನಕೆರೆ ಗ್ರಾಮದ ಕಾಲೇಜು ಗೇಟ್ ಬಳಿ ಟಿಪ್ಪರ್ ಲಾರಿ ಚಾಲಕನನ್ನು ಬೆದರಿಸಿ ಆತನ
ಬಳಿ ಇದ್ದ ನಗದು 2000 ರೂ ಹಣ, ಒಂದು ಮೊಬೈಲ್‍ನ್ನು ರೇಜರ್ ತೋರಿಸಿ ಬೆದರಿಸಿ ದೋಚಿದ್ದ
4 ಜನ ಆರೋಪಿಗಳನ್ನು ದಿನಾಂಕ: 05-01-2017 ರಂದು ಪತ್ತೆಹಚ್ಚಿ ಬಂಧಿಸಿದ್ದು ಆರೋಪಿತರಿಂದ ಒಟ್ಟು
ಎರಡು ಪ್ರಕರಣಗಳಲ್ಲಿ ಒಂದು ಚಿನ್ನದ ಚೈನು ಸುಮಾರು 15 ಗ್ರಾಂ ತೂಕ (ಬೆಲೆ ಸುಮಾರು 38,000/- ರೂ) ಹಾಗೂ ಎರಡು ಮೊಬೈಲ್‍ಗಳು (ಮೊಬೈಲ್‍ಗಳ ಮೌಲ್ಯ ಸುಮಾರು 20,000 ರೂಗಳು), 800 ರೂ. ನಗದು ಹಣವನ್ನು ಒಟ್ಟು 80,000/- ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಆರೋಪಿ 1;- ನಾಗೇಶ @ ಪೃಥ್ವಿ @ ಈರುಳ್ಳಿ ಬಿನ್ ಶಿವಲಿಂಗೇಗೌಡ, 21 ವರ್ಷ, ಸಿದ್ದೇಶ್ವರ ನಗರ, ಕ್ಯಾತುಂಗೆರೆ ಗ್ರಾಮ,
ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕು ಮತ್ತು ಜಿಲ್ಲೆ.
ಆರೋಪಿ 2;- ಲಿಖಿತ್ ಬಿನ್ ರಾಜೇಶ, 19 ವರ್ಷ, ಕಚವಾನಹಳ್ಳಿ ಗ್ರಾಮ,
ಸಾತನೂರು ಹೋಬಳಿ, ಕನಕಪುರ ತಾಲ್ಲೋಕು, ಹಾಲಿ ವಾಸ ಆಲಭೂಜನಹಳ್ಳಿ ರಸ್ತೆ ಕೆ,ಎಂ ದೊಡ್ಡಿ, ಮದ್ದೂರು ತಾಲ್ಲೋಕು, ಮಂಡ್ಯ ಜಿಲ್ಲೆ.
ಬಂಧಿಸಲ್ಪಟ್ಟ ಒಟ್ಟು 04 ಜನ ಆರೋಪಿತರುಗಳಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ
ಬಾಲಕರಾಗಿದ್ದು ಅವರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದ್ದು ಮತ್ತೊಬ್ಬ ಆರೋಪಿಯನ್ನು
ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂದನಕ್ಕೆ
ಆದೇಶಿಸಿರುತ್ತದೆ. ಮತ್ತೊಬ್ಬ ಆರೋಪಿಯನ್ನು ಈ ದಿವಸ ದಿನಾಂಕ: 06/01/2018 ರಂದು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತೆ.
ಆರೋಪಿಗಳ ಮತ್ತು ಸ್ವತ್ತು ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಜಿ. ರಾಧಿಕಾ,
ಐಪಿಎಸ್, ರವರ ಸೂಚನೆ ಮೇರೆಗೆ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಬಿ.ಎನ್.ಲಾವಣ್ಯ
ಮತ್ತು ಮಂಡ್ಯ ಉಪ ವಿಭಾಗದ ಡಿವೈಎಸ್.ಪಿ ಶ್ರೀ ಎನ್.ಎಸ್.ಚಂದ್ರಶೇಖರ್‍ರವರ ಮಾರ್ಗದರ್ಶನದಲ್ಲಿ
ಶ್ರೀ ಸುರೇಶ್ ಕುಮಾರ್ ಬಿ.ಕೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರು ರವರ ನೇತೃತ್ವದಲ್ಲಿ ಮಂಡ್ಯ
ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ಶ್ರೀ ಅಜರುದ್ದೀನ್, ಶ್ರೀಮತಿ ಕಮಲಾಕ್ಷಿ ಮ.ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಜೀಸನ್,
ರಘುರಾಜೇ ಅರಸು, ಸತೀಶ್ ರವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ. ಸದರಿ
ಆರೋಪಿಗಳು ಮತ್ತು ಸ್ವತ್ತುಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪತ್ತೆ ತಂಡದ
ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ರಾಧಿಕಾ. ಜಿ. ಐಪಿಎಸ್
ರವರು ಪ್ರಶಂಸಿರುತ್ತಾರೆ.
Press Note on 22-11-2017
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ 22.11.2017
ಪತ್ರಿಕಾ ಪ್ರಕಟಣೆ
ವಿಷಯ:ದಿನಾಂಕ 20.11.2017 ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಯವರ ನಾಗಮಂಗಲ
ಟೌನ್‍ನ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಓರ್ವ ಮಹಿಳೆ ಚಿಕಿತ್ಸೆಗೆ ತೆರಳುತ್ತಿದ್ದ
ಆಂಬ್ಯೂಲೆನ್ಸ್ ಅನ್ನು ಪೊಲೀಸರು ತಡೆದು ತೊಂದರೆ ಉಂಟು ಮಾಡಿರುತ್ತಾರೆಂದು ಇತ್ಯಾದಿ
ಯಾಗಿ ದೃಶ್ಯ/ಪತ್ರಿಕಾ ಮಾದ್ಯಮಗಳಲ್ಲಿ ಸುದ್ದಿ ವರದಿಯಾಗಿರುವ ಬಗ್ಗೆ ಸ್ಪಷ್ಟೀಕರಣ ಕುರಿತು.
***
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ 22.11.2017
ಪತ್ರಿಕಾ ಪ್ರಕಟಣೆ
ವಿಷಯ:ದಿನಾಂಕ 20.11.2017 ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಯವರ ನಾಗಮಂಗಲ
ಟೌನ್‍ನ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಓರ್ವ ಮಹಿಳೆ ಚಿಕಿತ್ಸೆಗೆ ತೆರಳುತ್ತಿದ್ದ
ಆಂಬ್ಯೂಲೆನ್ಸ್ ಅನ್ನು ಪೊಲೀಸರು ತಡೆದು ತೊಂದರೆ ಉಂಟು ಮಾಡಿರುತ್ತಾರೆಂದು ಇತ್ಯಾದಿ
ಯಾಗಿ ದೃಶ್ಯ/ಪತ್ರಿಕಾ ಮಾದ್ಯಮಗಳಲ್ಲಿ ಸುದ್ದಿ ವರದಿಯಾಗಿರುವ ಬಗ್ಗೆ ಸ್ಪಷ್ಟೀಕರಣ ಕುರಿತು.
***
ಮೇಲ್ಕಂಡ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಯವರಿಂದ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ.
ತೊಂದರೆಗೊಳಗಾಗಿದ್ದಾರೆ ಎನ್ನಲಾದ ಮಹಿಳೆ ಮತ್ತು ಈಕೆಯ ಪತಿ ಮತ್ತು ಸಹೋದರನ ಹೇಳಿಕೆ:
ತೊಂದರೆಗೆ ಒಳಗಾದವರು ಎನ್ನಲಾದ ಮಹಿಳೆ, ಈಕೆಯ ಪತಿ ಮತ್ತು ಮಹಿಳೆಯ ಸಹೋದರನಿಂದ ಹೇಳಿಕೆ ನೀಡಿದ್ದು, ಹೇಳಿಕೆಯಲ್ಲಿ ಸದರಿ ಮಹಿಳೆ ಶ್ರೀಮತಿ ಯಶೋದಾ ಕೋಂ ಶಂಕರ, 35 ವರ್ಷ, ಕೊಣನೂರು ಗ್ರಾಮ, ನಾಗಮಂಗಲ ತಾ|| ರವರು 5-6 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಪತಿ ಶ್ರೀ ಶಂಕರ ದಿನಾಂಕ 20.11.2017 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಚಿಕಿತ್ಸೆಗಾಗಿ ಒಂದು ಆಟೋದಲ್ಲಿ ನಾಗಮಂಗಲ ಟೌನ್‍ಗೆ ಬಂದಿಳಿದು, ನಂತರ ಅಲ್ಲಿಂದ ಬೇರೆ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಈ ಸಮಯದಲ್ಲಿ ಟ್ರಾಫಿಕ್ ಇರುತ್ತದೆ. ಆಗ ಆಟೋ ಡ್ರೈವರ್, ಆಸ್ಪತ್ರೆ ಹತ್ತಿರದಲ್ಲೇ ಇರುವುದರಿಂದ ನಡೆದುಕೊಂಡು ಹೋಗಬಹುದು ಎಂದು ತಿಳಿಸಿದ್ದು, ಅದರಂತೆ ಸದರಿ ಮಹಿಳೆ ತನ್ನ ಪತಿ ಮತ್ತು ಸಹೋದರನೊಡನೆ ನಡೆದುಕೊಂಡು ಹೋಗಿರುವುದಾಗಿದೆ. ಆದರೆ ಈ ವಿಚಾರ ಪೊಲೀಸರಿಗೆ ತಿಳಿದಿರುವುದಿಲ್ಲ ಹಾಗೂ ಪೊಲೀಸರು ತಮ್ಮ ಯಾವುದೇ ವಾಹನವನ್ನು ತಡೆದು ನಿಲ್ಲಿಸಿ ಯಾವುದೇ ತೊಂದರೆ ನೀಡಿಲ್ಲ, ಆಸ್ಪತ್ರೆ ಹತ್ತಿರವೆ ಇದ್ದುದ್ದರಿಂದ ತಾವೇ ಆಟೋದಿಂದ ಇಳಿದು ಆಸ್ಪತ್ರೆಗೆ ನಡೆದುಕೊಂಡು ಹೋಗಿರುತ್ತೇವೆಂದು ತಿಳಿಸಿರುವುದಾಗಿದೆ.
ಡಾ|| ಶಿವಕುಮಾರ್, ವೈದ್ಯಾಧಿಕಾರಿ, ನಾಗಮಂಗಲ ಸರ್ಕಾರಿ ಆಸ್ಪತ್ರೆ ರವರ ಹೇಳಿಕೆ:
ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಮಧ್ಯಾಹ್ನ 12.45 ಗಂಟೆಗೆ ಶ್ರೀಮತಿ ಯಶೋದಮ್ಮ ಕೋಂ ಶಂಕರ, ಕೊಣನೂರು ಗ್ರಾಮ ಎಂಬುವರು ಸಾಮಾನ್ಯ ಸುಸ್ತಿಗೆಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದು, ಇವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಮಧ್ಯಾಹ್ನ 03.30 ಗಂಟೆಯಲ್ಲಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ.
ಡಾ|| ಡಿ.ಎಸ್.ವೆಂಕಟೇಶ್, ಮುಖ್ಯ ವೈದ್ಯಾಧಿಕಾರಿ, ನಾಗಮಂಗಲ ಆಸ್ಪತ್ರೆ ರವರ ಹೇಳಿಕೆ:
ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಯಾವುದೇ ಆಂಬ್ಯೂಲೆನ್ಸ್‍ನಲ್ಲಿ ಯಶೋಧ ಎಂಬುವರನ್ನು ಕರೆ ತಂದಿರುವುದಿಲ್ಲವೆಂದು ತಿಳಿಸಿರುತ್ತಾರೆ.
ಪೊಲೀಸ್ ಸೂಪರಿಂಟೆಂಡೆಂಟ್ ರವರ ಅಭಿಪ್ರಾಯ ಮತ್ತು ಸ್ಪಷ್ಟನೆ:
ದಿನಾಂಕ 20.11.2017 ರಂದು ನಾಗಮಂಗಲದಲ್ಲಿನ ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಆಂಬ್ಯೂಲ್ಸ್‍ನಲ್ಲಾಗಲಿ ಅಥವಾ 108ರ ವಾಹನದಲ್ಲಾಗಲಿ ಶ್ರೀಮತಿ ಯಶೋಧ ಎಂಬ ಮಹಿಳೆಯನ್ನು ಕರೆದುಕೊಂಡು ಬಂದಿರುವುದಿಲ್ಲ. ಈಕೆಯನ್ನು ಚಿಕಿತ್ಸೆಗಾಗಿ ಆಕೆಯ ಮನೆಯವರು ಒಂದು ಆಟೋದಲ್ಲಿ ನಾಗಮಂಗಲ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದು, ಆ ಸಮಯದಲ್ಲಿ ಟ್ರಾಫಿಕ್ ಇದ್ದುದ್ದರಿಂದ ಹತ್ತಿರದಲ್ಲಿಯೇ ಆಸ್ಪತ್ರೆಯ ಇದೆ ಎಂದು ತನ್ನ ಮನೆಯವರ ಜೊತೆ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆದು ನಂತರ ಮಧ್ಯಾಹ್ನ 3.30 ಗಂಟೆಗೆ ವಾಪಸ್ ತೆರಳಿರುವುದಾಗಿದೆ.
ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೆ ಆಂಬ್ಯೂಲೆನ್ಸ್‍ಅನ್ನು ಪೊಲೀಸರು ತಡೆದಿರುವುದಿಲ್ಲ. ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಿಂದ ವರದಿಯಾದ ನಂತರವಷ್ಟೆ ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದ್ದು, ತದ ನಂತರ ಈ ಬಗ್ಗೆ ಮೇಲ್ಕಂಡಂತೆ ವರದಿ ಪಡೆದು ಪರಿಶೀಲಿಸಲಾಗಿ, ಇದು ಸತ್ಯಕ್ಕೆ ದೂರವಾದ ವಿಚಾರವೆಂಬುದಾಗಿರುತ್ತದೆ.
ಪ್ರತಿಕಾ ಪ್ರಕಟಣೆ
ಬ್ಯಾಂಕ್ ಸಿಬ್ಬಂದಿಗೆ ಹಲ್ಲೆ ಮಾಡಿ ನಗದು ಹಣವನ್ನು ದರೋಡೆ ಮಾಡಿದ್ದ ಆರೋಪಿಗಳ ಬಂಧನ ಮತ್ತು ಆರೋಪಿಗಳಿಂದ 15,25,800 ರೂ ನಗದು ಹಣ ವಶ
ದಿ:30-10-2017 ರಂದು ರಾತ್ರಿ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಮೊ.ಸಂ.146/2017 ಕಲಂ 454, 380 ಐಪಿಸಿ ಕೇಸಿನಲ್ಲಿ ಆರೋಪಿ ಮತ್ತು ಮಾಲು ಪತ್ತೆಯ ಬಗ್ಗೆ ಪೊಲೀಸ್ ಇನ್ಸ್‍ಪೆಕ್ಟರ್ ಎಸ್ ಗಂಗಾಧರ್ ಹಾಗೂ ಕ್ರೈಂ ಸಿಬ್ಬಂದಿಗಳಾದ ಠಾಣೆಯ ಹೆಚ್.ಸಿ.115 ಸಿದ್ದರಾಜು, ಹೆಚ್.ಸಿ.60 ಅಂಜನಮೂರ್ತಿ, ಹೆಚ್.ಸಿ.181 ಎಂ.ಡಿ.ಸತೀಶ್, ಪಿ.ಸಿ. 142 ಹರ್ಷವರ್ಧನ, ಪಿಸಿ 492 ಪ್ರಶಾಂತ್‍ಕುಮಾರ್, ಪಿಸಿ 306 ಭಾನುಪ್ರಕಾಶ್ ರವರೊಂದಿಗೆ ರಾತ್ರಿ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ 31-10-2017 ರಂದು ಬೆಳಗಿನ ಜಾವ 2-00 ಗಂಟೆಯ ಸಮಯದಲ್ಲಿ ಕೋಟೆ ಕಾಳಮ್ಮನ ಗುಡಿ ಬೀದಿಯಲ್ಲಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರವಿರುವ ಅಪೋಲೋ ಬಟ್ಟೆ ಅಂಗಡಿಯ ಸಂದಿಯ ಗೋಡೆಯ ಮರೆಯಲ್ಲಿ ಒಬ್ಬ ಆಸಾಮಿ ತನ್ನ ಮುಖವನ್ನು ಮಾರೆ ಮಾಚಿಕೊಂಡು ನಿಂತಿದ್ದವನೇ ಪೊಲೀಸ್ ಜೀಪನ್ನು ಕಂಡು ತನ್ನ ಹೆಗಲಿಗೆ ನೇತು ಹಾಕಿಕೊಂಡಿದ್ದ ಬ್ಯಾಗಿನ ಸಮೇತ ಓಡಿ ಹೋಗುತ್ತಿದ್ದವನ ಮೇಲೆ ಅನುಮಾನ ಬಂದು ಕೂಡಲೇ ಜೀಪನ್ನು ನಿಲ್ಲಿಸಿ ಆತನನ್ನು ಹಿಂಬಾಲಿಸಿ ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ವಿಚಾರ ಮಾಡಲಾಗಿ ಆತನು ತನ್ನ ಹೆಸರು ನೀತೀಶ್ ತಂದೆ ವೆಂಕಟೇಶ ವಯಸ್ಸು 21 ವರ್ಷ ವಕ್ಕಲಿಗರು ಕೇಬಲ್ ಕೆಲಸ ವಾಸ ನಂದಿನಿ ಲೇ ಔಟ್ ಡಾ: ರಾಜಕುಮಾರ್ ಸಮಾಧಿ ಹತ್ತಿರ, ಬೆಂಗಳೂರು ಸ್ವಂತ ಸ್ಥಳ ಬಾಣಗÀಹಳ್ಳಿ ಗ್ರಾಮ ಮಳವಳ್ಳಿ ತಾಲ್ಲೋಕು ಎಂತಲು ತಿಳಿಸಿದ್ದು ಆತನ ಬಳಿ ಇದ್ದ ಬ್ಯಾಗ್ ಅನ್ನು ಪರಿಶೀಲಿಸಿ ನೋಡಲಾಗಿ ನಗದು ಹಣವಿದ್ದು ಸದರಿ ಹಣದ ಬಗ್ಗೆ ವಿಚಾರ ಮಾಡಲಾಗಿ 10 ಲಕ್ಷ ಇದೆ ಎಂತಲೂ, ಮತ್ತೊಮ್ಮೆ 12 ಲಕ್ಷ ಇದೆ ಎಂತಲೂ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಪೊಲೀಸ್ ಇನ್ಸ್‍ಪೆಕ್ಟರ್‍ರವರಿಗೆ ಅನುಮಾನ ಬಂದು ಪಂಚರ ಸಮಕ್ಷಮ ಬ್ಯಾಗಿನಲ್ಲಿದ್ದ ನಗದು ಹಣ ಎಣಿಕೆ ಮಾಡಿ ನೋಡಲಾಗಿ 15,25,800 ರೂಗಳು ಇದ್ದು, ಜೊತೆಯಲ್ಲಿ ಒಂದು ಬಟನ್ ಚಾಕು ಸಹ ಇದ್ದು ಸದರಿ ಆಸಾಮಿಯನ್ನು ನಗದು ಹಣವಿದ್ದ ಬ್ಯಾಗ್‍ನ ಸಮೇತ ಮುಂದಿನ ಕಾನೂನು ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಆತನು ನೀಡಿದ ಮಾಹಿತಿಯ ಮೇರೆಗೆ ಬೆಂಗಳೂರು ನಗರದ ಭಾಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ದಿನಾಂಕ 30-10-2017 ರಂದು ನಡೆದಿದ್ದ ಎ.ಟಿ.ಎಂ. ಯಂತ್ರಕ್ಕೆ ಹಣ ತುಂಬುವ ಸಿಬ್ಬಂದಿಗೆ ಹಲ್ಲೆ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಸದರಿ ಆರೋಪಿಯ ಕೃತ್ಯಕ್ಕೆ ಬಳಸಿದ ಬೈಕ್ ನೀಡಿ ಸಹಕರಿಸಿದ ಮತ್ತೊಬ್ಬ ಆರೋಪಿ ರಾಕೇಶ ಎಂಬಾತನನ್ನು ಸಹ ಪತ್ತೆ ಮಾಡಿ ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಅನ್ನು ಸಹ ವಶಕ್ಕೆ ಪಡೆದುಕೊಂಡಿರುತ್ತದೆ. ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಮೇಲ್ಕಂಡ ಕೃತ್ಯದ ಆರೋಪಿಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗು ಸಿಬ್ಬಂಧಿರವರ ಬಗ್ಗೆ ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರು ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ.
House breaking theft case detection -Mandya Central PS Press Note
ಮಂಡ್ಯ ಜಿಲ್ಲಾ ಪೊಲೀಸ್
ಪತ್ರಿಕಾ ಪ್ರಕಟಣೆ.
16-10-2017
ದಿನಾಂಕ:17-09-2017 ರಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ಸರಹದ್ದಿನ ಷುಗರ್ ಟೌನ್ ನ ಮರಿಸ್ವಾಮಿ ಎಂಬುವರು ತನ್ನ ಮನೆಗೆ ರಾತ್ರಿ 09-00 ಗಂಟೆಗೆ ಬೀಗ ಹಾಕಿಕೊಂಡು ಷುಗರ್ ಫ್ಯಾಕ್ಟರಿಗೆ ಸೆಕ್ಯೂರಿಟಿ ಕೆಲಸಕ್ಕೆ ಹೋಗಿದ್ದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮಿಟಿ ಮನೆಯೊಳಗಡೆ ಪ್ರವೇಶ ಮಾಡಿ ಮನೆಯ ಬೀರುವಿನಲ್ಲಿಟ್ಟಿದ್ದ 28 ಗ್ರಾಂ ಚಿನ್ನದ ಚೈನು, 8 ಗ್ರಾಂ ಉಂಗುರ , ಒಂದು ವಾಚ್, 8 ಸಾವಿರ ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ನಂ:110/2017 ಕಲಂ:457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಅಪರಾಧ ಸಿಬ್ಬಂದಿಯರುಗಳಾದ ಸಿಪಿಸಿ-656, 114 ರವರುಗಳನ್ನು ನೇಮಿಸಿದ್ದು ಸದರಿಯವರು ಆರೋಪಿಗಳ ಪತ್ತೆಯ ಬಗ್ಗೆ ಮಂಡ್ಯ ನಗರದ ರೈಲ್ವೆ ನಿಲ್ದಾಣ, ಷುಗರ್ ಟೌನ್, ಅಸಿಟೆಟ್‍ಟೌನ್, ಪೇಟೆ ಬೀದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಪೇಟೆ ಬೀದಿಯ ನಕ್ಷತ್ರ ಗೋಲ್ಡ್ ಗಿರವಿ ಅಂಗಡಿಯ ಮುಂಭಾಗದಲ್ಲಿ ಅನುಮಾನದಿಂದ ಓಡಾಡುತ್ತಿದ್ದ, ಈ ಕೆಳಕಂಡ ಆರೋಪಿಗಳಾದ
1] ತಿಪ್ಪೇಶ @ ಯುವರಾಜ @ ಕೆಪ್ಪತಿಪ್ಪ ಬಿನ್ ಕುರುಡ ತಿಪ್ಪಣ್ಣ @ ಕುರುಡತಿಪ್ಪ, 34 ವರ್ಷ, ಕೊರಚರು ಜನಾಂಗ, ವ್ಯವಸಾಯ, ಚಿಕ್ಕಹಬ್ಬಿಗೆರೆ ಗ್ರಾಮ, ಸಂತೆಬನ್ನೂರು ಹೋಬಳಿ, ಚೆನ್ನಗಿರಿ ತಾ: ದಾವಣಗೆರೆ ಜಿಲ್ಲೆ. ಎಂತಲೂ ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ
2] ಸೈಯ್ಯದ ಬಾಷಾ @ ಭಾಷ ಬಿನ್ ಸೈಯ್ಯದ್ ಹುಸೇನ್ ಸಾಬ್, 28ವರ್ಷ, ಮುಸ್ಲಿಂ ಜನಾಂಗ, ಟೈಲರ್ ಕೆಲಸ ಕೆಂಪನಹಳ್ಳಿ ಚಿಕ್ಕನಾಯಕನಹಳ್ಳಿ ತಾ: ತುಮಕೂರು ಜಿಲ್ಲೆ ಎಂಬುವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ ಪಡಿಸಿದ ಮೇರೆಗೆ, ಸದರಿ ಆರೋಪಿಗಳನ್ನು ಕೂಲಂಕಷವಾಗಿ ವಿಚಾರ ಮಾಡಲಾಗಿ, ಸದರಿ ಮೇಲ್ಕಂಡ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 1] ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ 2] ಕೆರಗೋಡು ಪೊಲೀಸ್ ಠಾಣೆ 3] ಶಿವಳ್ಳಿ ಪೊಲೀಸ್ ಠಾಣೆ 4] ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಈ ಕೆಳಕಂಡಂತೆ ಪ್ರಕರಣಗಳು ಪತ್ತೆಯಾಗಿರುತ್ತವೆ.
1] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 77/2017 ಕಲಂ 457-380 ಐಪಿಸಿ
2] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 110/2017 ಕಲಂ 457-380 ಐಪಿಸಿ
3] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 39/2017 ಕಲಂ 457-380 ಐಪಿಸಿ
4] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 40/2017 ಕಲಂ 457-380 ಐಪಿಸಿ
5] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 41/2017 ಕಲಂ 457-380 ಐಪಿಸಿ
6] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 42/2017 ಕಲಂ 457-380 ಐಪಿಸಿ
7] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 43/2017 ಕಲಂ 457-380 ಐಪಿಸಿ
8] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 44/2017 ಕಲಂ 457-380 ಐಪಿಸಿ
9] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ85/2017 ಕಲಂ 457-380 ಐಪಿಸಿ
10] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ90/2017 ಕಲಂ 457-380 ಐಪಿಸಿ
11] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ172/2016 ಕಲಂ 457-380 ಐಪಿಸಿ
12] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ174/2016 ಕಲಂ 457-380 ಐಪಿಸಿ
13] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ175/2016 ಕಲಂ 457-380 ಐಪಿಸಿ
ಮೇಲ್ಕಂಡ 13 ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು 230 ಗ್ರಾಂ ಚಿನ್ನದ ಆಭರಣಗಳು ಮತ್ತು 1 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 7,00000/- ರೂಗಳಾಗಿರುತ್ತದೆ
ಇವರು ಕುಖ್ಯಾತ ಕಳ್ಳತನ ಮಾಡುವ ಕಳ್ಳರಾಗಿದ್ದು,ದಾವಣಗೆರೆ, ಚಿತ್ರದುರ್ಗ,ತುಮಕೂರು,ಕಾರವಾರ, ಶಿವಮೊಗ್ಗ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಇವರುಗಳ ಇರುದ್ಧ ಪ್ರಕರಣಗಳು ದಾಖಲಾಗಿ ವಿಚಾರಣೆಯಲ್ಲಿರುತ್ತವೆ.
ಈ ಪ್ರಕರಣಗಳನ್ನು ಶ್ರೀಮತಿ ಜಿ.ರಾಧಿಕಾ ಐ.ಪಿ.ಎಸ್, ಜಿಲ್ಲಾ ವರಿಷ್ಠಾಧಿಕಾರಿ,ಮಂಡ್ಯ ಜಿಲ್ಲೆ, ಶ್ರೀಮತಿ.ಲಾವಣ್ಯ ಕೆ.ಎಸ್.ಪಿ.ಎಸ್,ಅಪರ ಜಿಲ್ಲಾ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆ ಹಾಗೂ ಶ್ರೀ.ಎನ್.ಎಸ್ ಚಂದ್ರಶೇಖರ್ ಕೆ.ಎಸ್.ಪಿ.ಎಸ್, ಡಿವೈ.ಎಸ್.ಪಿ, ಮಂಡ್ಯ ಉಪ-ವಿಭಾಗ, ಮಂಡ್ಯ ರವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀ.ಕೆ.ಸಂತೋಷ್, ಮಂಡ್ಯ ನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ ಆನಂದಕುಮಾರ್.ಹೆಚ್ ಪಿಎಸ್‍ಐ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರುಗಳಾದ ಎಎಸ್‍ಐ ಸಿದ್ದರಾಜು, ಎಎಸ್‍ಐ ಪುಟ್ಟಸ್ವಾಮಿ,ಸಿಹೆಚ್.ಸಿ-23 ಮೃತ್ಯುಂಜಯಸ್ವಾಮಿ ಎಸ್.ಪಿ, ಸಿಹೆಚ್.ಸಿ-56 ಚಿಕ್ಕಯ್ಯ, ಸಿಹೆಚ್.ಸಿ-158 ಎನ್.ನಾರಾಯಣ, ಹೆಚ್.ಸಿ 147 ಸುಂದರ್ ರಾಜು ಹೆಚ್.ಸಿ 210 ಶ್ರೀನಿವಾಸ್, ಹೆಚ್.ಸಿ 228 ಮಂಜುನಾಥ ಎಂ.ಪಿ, ಸಿಹೆಚ್‍ಸಿ 108 ಸತೀಶ್, ಸಿಪಿಸಿ-114 ಮಂಜುನಾಥ, ಪಿಸಿ-160 ಸಚ್ಚಿನ್, ಪಿಸಿ 170 ಮಹೇಶ್ ಕುಮಾರ್,ಸಿಪಿಸಿ-322 ಅಕ್ಬರ್ ಎಸ್.ಬಂದುಗೋಳ, ಸಿಪಿಸಿ-363 ಶ್ರೀನಿವಾಸ, ಸಿಪಿಸಿ-409 ಸೈಯದ್ ಗೌಸ್, ಸಿಪಿಸಿ 656 ಮಂಜುನಾಥ ಕೆ.ಬಿ, ಸಿಪಿಸಿ 330 ಶ್ರೀಕಾಂತ, ಮಪಿಸಿ-612 ಸುಕನ್ಯ .ಎಸ್, ಮಪಿಸಿ 739 ಶ್ರೀಮತಿ ರತ್ನಮ್ಮ ಬಿ.ಕೆ ಮತ್ತು ಎಹೆಚ್.ಸಿ-29 ಕಾಂತರಾಜು, ಎ.ಪಿ.ಸಿ-159 ಸಿದ್ದೇಗೌಡ,ಸಿಪಿಸಿ-280 ರವಿಕಿರಣ ಸಿಪಿಸಿ-105 ಲೋಕೇಶ್ ಮತ್ತು ಬೆರಳಚ್ಚು ತಜ್ಞರಾದ ರಾಜೇಂದ್ರ ರವರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯದ ಬಂಧನಕ್ಕೆ ಒಳಪಡಿಸಿರುತ್ತೆ.
ಪತ್ರಿಕಾ ಪ್ರಕಟಣೆ
2017ನೇ ಸಾಲಿನ ಮೈಸೂರು ದಸರಾ
ಮಹೋತ್ಸವದ ಸಂಬಂಧ ಸಮೂಹ ವಾದ್ಯ ವೃಂದದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮಂಡ್ಯ ಜಿಲ್ಲೆಯ
ಪೊಲೀಸ್ ವಾದ್ಯ ವೃಂದದ ತಂಡವನ್ನು ಮೈಸೂರಿಗೆ ನಿಯೋಜಿಸಿ ಕಳುಹಿಸಲಾಗಿದ್ದು, ದಿ:19-09-2017 ರಂದು ನಡೆದ ಸಮೂಹ
ವಾದ್ಯ-ವೃಂದ ಸ್ವರ್ಧೆಯಲ್ಲಿ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯ-ವೃಂದದ ತಂಡವು ಪೈಪ್
ಬ್ಯಾಂಡ್ ನುಡಿಸಿ, ರಾಜ್ಯಕ್ಕೆ
ದ್ವಿತೀಯ ಸ್ಥಾನವನ್ನು ಪಡೆದುದರಿಂದ ಮಾನ್ಯ ಐ.ಜಿ. & ಡಿ.ಜಿ.ಪಿ ಸಾಹೇಬರವರು
ಸ್ವರ್ಧೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಪದಕದೊಂದಿಗೆ ತಲಾ ರೂ.365/- ಗಳ ನಗದು ಬಹುಮಾನವನ್ನು
ನೀಡಿರುತ್ತಾರೆ. ಈ ಬಗ್ಗೆ ಬಹುಮಾನ
ಪಡೆದ ಸಿಬ್ಬಂದಿಯವರನ್ನು ಮಂಡ್ಯ ಜಿಲ್ಲಾ ಪೊಲೀಸ್
ವರಿಷ್ಟಾಧಿಕಾರಿಗಳು ಪ್ರಶಂಸಿರುತ್ತಾರೆ.
ಬಹುಮಾನವನ್ನು ಪಡೆದ ಅಧಿಕಾರಿ/ ಸಿಬ್ಬಂದಿರವರುಗಳ ವಿವರಃ-
ಕ್ರ.ಸಂ ಹೆಸರು ಪದನಾಮ
1. ರುಕ್ಮಾಂಗದ, ಎಆರ್‍ಎಸ್‍ಐ
2. ರಮೇಶ್ ಡಿ, ಎಆರ್‍ಎಸ್‍ಐ
3. ಮಹೇಶ ಕೆ.ಎಂ., ಎಹೆಚ್‍ಸಿ-06
4. ಶಿವಣ್ಣ, ಎಹೆಚ್‍ಸಿ-87
5. ಸಿದ್ದಶೆಟ್ಟಿ, ಎಹೆಚ್‍ಸಿ-102
6. ಗುರುರಾಜು, ಎಹೆಚ್‍ಸಿ-109
7. ಬೀರೇಶ, ಎಪಿಸಿ-67
8. ಶಿವಕುಮಾರ್, ಎಪಿಸಿ-174
9. ಕೃಷ್ಣ ಹೆಚ್.ಜಿ., ಎಪಿಸಿ-169
10. ಚಂದನ್‍ಕುಮಾರ್, ಎಪಿಸಿ-270
11. ಚಂದ್ರು ಸಿ.ಎಂ., ಎಪಿಸಿ-275
12. ನಂದೀಶ್, ಎಪಿಸಿ-277
Press Note 20-08-2017
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 20-08-2017
-:ಪತ್ರಿಕಾ ಪ್ರಕಟಣೆ:-
ದಿಃ19/08/2017 ರಂದು ಸಂಜೆ ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಪಕ್ಕದ ಪಾಲಹಳ್ಳಿಯ ರಜತ ಎಂಬುವರು ‘ಮಾರ್ಗಡಾಬ’ ಹೋಟೆಲು ಮತ್ತು ಇದಕ್ಕೆ ಹೊಂದಿಕೊಂಡಿರುವ ರೂಮುಗಳನ್ನು ಇಟ್ಟುಕೊಂಡು ಅನೈತಿಕ ವ್ಯವಹರಣೆ ನಡೆಸುತಿದ್ದು, ಇವರ ಡಾಬಗೆ ಹೊಂದಿಕೊಂಡಿರುವ ರೂಮುಗಳಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಪಂಚರ ಸಮಕ್ಷಮ ಪರಿಶೀಲಿಸಲು ಹೋದಾಗ, ಡಾಬಾ ಉಸ್ತುವಾರಿ ನೋಡಿಕೊಳ್ಳುತಿದ್ದವರು ಡಾಬಾ ಹೋಟೆಲಿಗೆ ಹೊಂದಿಕೊಂಡಿರುವ ರೂಮುಗಳ ಬಾಗಿಲುಗಳನ್ನು ಹಾಕಿಕೊಂಡಿದ್ದು, ನಂತರ ವಿಚಾರ ಮಾಡಿ ಬಾಗಿಲು ತೆರೆಸಿ ನೋಡಿದಾಗ ಡಾಬ ನೋಡಿಕೊಳ್ಳುವವರಲ್ಲದೆ ಒಟ್ಟು 19 ಜನ ಪುರಷ ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ. ಇವರು ವೇಶ್ಯವಾಟಿಕೆಯಲ್ಲಿ ತೊಡಗಿದ್ದರೆಂದು ಕಂಡು ಬಂದಿದ್ದು, ಪರಿಶೀಲಿಸಿದಾಗ ರೂಮುಗಳಲ್ಲಿ ಯಾವ ಮಹಿಳೆಯರು ಇರಲಿಲ್ಲದ ಕಾರಣ ಅನುಮಾನ ಬಂದು ಪರಿಶೀಲಿಸಿದ ಕಾಲದಲ್ಲಿ, ರೂಮಿನ ಗೋಡೆಗೆ ಅಂಟಿಸಿದಂತೆ ಇದ್ದ ಗೋಡೆಯ ಟೈಲ್ಸ್‍ಗಳನ್ನು ತೆರವುಗೊಳಿಸಿ ನೋಡಿದಾಗ ಸಂದಿಯೊಳಗೆ ಕೊಠಡಿಯೊಂದು ಇದ್ದು ಅದರೊಳಗೆ 7 ಜನ ಮಹಿಳೆಯರು ಬಚ್ಚಿಟ್ಟುಕೊಂಡಿದ್ದುದು ತಿಳಿದು ಬಂದಿರುತ್ತದೆ. ವೇಶ್ಯವಾಟಿಕೆ ನಡೆಸುತಿದ್ದ ವ್ಯಕ್ತಿಗಳು ಪೊಲೀಸರು ದಾಳಿ ಮಾಡಿದ ಕಾಲದಲ್ಲಿ ಮಹಿಳೆಯರನ್ನು ಬಚ್ಚಿಟ್ಟುಕೊಳ್ಳಲು ಗುಹೆಯಂತಹ ಕೊಠಡಿಯನ್ನು ಪೂರ್ವಯೋಜಿತವಾಗಿ ನಿರ್ಮಿಸಿಕೊಂಡು, ದಾಳಿಮಾಡಿದವರಿಗೆ ಗೋಡೆ ಎಂದು ತಿಳಿದುಕೊಳ್ಳಲು ಮರೆಮಾಚಿರುವುದು ಕಂಡು ಬಂದಿರುತ್ತದೆ. ದಾಳಿ ಕಾಲದಲ್ಲಿ ಒಟ್ಟು 7 ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದು ನಿಯಮಾನುಸಾರ ಅವರುಗಳನ್ನು ವಾರಸುದಾರರು ಬಂದು ಕರೆದುಕೊಂಡು ಹೋಗುವವರೆಗೆ ಮಹಿಳಾ ಶಾಂತ್ವಾನ ಕೇಂದ್ರಕ್ಕೆ ಬಿಡಲಾಗುತ್ತಿದೆ.
‘ಮಾರ್ಗ ಡಾಬ’ ದ ರೂಮುಗಳಿಗೆ ಸಂತೋಷ ಎಂ. @ ಸಂದೇಶ ಬನ್ನಿಮಂಟಪ ಮೈಸೂರು, ನಂದಕುಮಾರ್ ಹೆಚ್.ಡಿ. @ ನಂದನ್ ಹುಚ್ಚೇಗೌಡನದೊಡ್ಡಿ ಗ್ರಾಮ ಮಳವಳ್ಳಿ ತಾಲ್ಲೂಕು, ನಾಗೇಶ ನಾಗಮಂಗಲ ಟೌನ್ ಮತ್ತು ಕಿರಣ ಎಂಬುವರು ಮಹಿಳೆಯರನ್ನು ವೇಶ್ಯವಾಟಿಕೆ ಉದ್ದೇಶಕ್ಕಾಗಿ ಕರೆತರುತಿದ್ದರೆಂದು ತಿಳಿದು ಬಂದಿರುತ್ತದೆ. ಜಗದೀಶ ಉತ್ತರಕನ್ನಡ ಜಿಲೆ,್ಲ ದರ್ಶನ ಕೆ.ಎನ್. ಕದಬಳ್ಳಿ ಗ್ರಾಮ ನಾಗಮಂಗಲ ತಾಲ್ಲೂಕು. ಭರತೇಶ ಹೆಚ್.ಸಿ. ಹೊನ್ನಶೆಟ್ಟಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು, ಮಣಿ @ ತಿಪ್ಪೇಶ ಹೊಸಹಳ್ಳಿ ಗ್ರಾಮ ದಾವಣಗೆರೆ ತಾಲ್ಲೂಕು, ಹುಲಿಗಪ್ಪ ಮಲ್ಲಪ್ಪ ನರಗುಂದ ಸುರುಕೋಡು ಗ್ರಾಮ ನರಗುಂದ ತಾಲ್ಲೂಕು ರವರುಗಳು ಡಾಬ ರೂಮುಗಳ ಉಸ್ತುವಾರಿ ನೋಡಿಕೊಂಡು ಗುಹೆಯಂತಹ ಕೊಠಡಿಯಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸಿ ಹಣ ಸಂಪಾದಿಸಿ ಮಾಲೀಕರು ಸೇರಿದಂತೆ ಎಲ್ಲರೂ ಹಂಚಿಕೊಂಡು ಜೀವನ ನಡುಸುತಿದ್ದರೆಂದು ಕಂಡು ಬಂದಿದೆ. ಈ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗಿರಾಕಿಗಳಾದ ಸುರೇಶ, ಮಹಮದ್ ಬಸೀರ್, ಜೆಸಿಲ್ ಟಿ.ಕೆ ಷಹಾಹನ್, ಹರೀಶ ಕುಮಾರ್ ಕೇರಳ ರಾಜ್ಯರವರಾಗಿದ್ದು ಮಿತೀಶ್ ರಂಜನ್ ಜಾರ್ಖಂಡ್ ರಾಜ್ಯ, ನಾಗರಾಜು ತುಮಕೂರು ಜಿಲ್ಲೆ, ಮೆಹಬೂಬ್ ಪಾಷ, ರಾಯಿಲ್ ಖಾನ್, ಸೈಯದ್ ಮುಜಾಹಿಲ್, ಖಾದಿರ್ ಖಾನ್ ಮೈಸೂರು ನಗರದವರಾಗಿರುತ್ತಾರೆ.
ಪಾಲಹಳ್ಳಿ ಗ್ರಾಮದ ಪಿ.ವಿ.ಶೇಷಪ್ಪ ರವರು ಇದಕ್ಕಾಗಿ ‘ಟೂರಿಸ್ಟ್ ಹೋಂ’ ಎಂಬ ಹೆಸರಿನಲ್ಲಿ ತಮ್ಮ ಜಮೀನಿನಲ್ಲಿ ರೂಮುಗಳನ್ನು ನಿರ್ಮಿಸಿ, ಮೈಸೂರು ಸಿಟಿ ಟೀಚರ್ಸ್ ಬಡಾವಣೆಯ ಸಿ.ಎಸ್.ಮನು ಎಂಬುವರು ಬಾಡಿಗೆ ಕರಾರು ಮಾಡಿಕೊಂಡು ಇವರೆಲ್ಲರೂ ತಿಳಿದು ತಿಳಿದೇ ಕಾನೂನು ಬಾಹಿರವಾಗಿ ವೇಶ್ಯವಾಟಿಕೆ ಚಟುವಟಿಗೆ ನಡೆಸಿ ಸಂಪಾದಿಸಿದ ಹಣವನ್ನು ಹಂಚಿಕೊಂಡು ವ್ಯವಹಾರ ನಡೆಸುತಿದ್ದರೆಂದು ಕಂಡು ಬಂದಿರುತ್ತದೆ ಹಾಗೂ ತಲೆ ಮರೆಸಿಕೊಂಡಿರುತ್ತಾನೆ.
ದಾಳಿ ಮಾಡಿದ ಕಾಲದಲ್ಲಿ ವೇಶ್ಯವಾಟಿಕೆ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದ ಒಟ್ಟು ನಗದು 50345/- ರೂ ನಗದು, 17 ಮೊಬೈಲ್ ಪೋನುಗಳು, 1 ಚವರ್ಲೆಟ್ ತವೆರಾ ಕಾರು, 4 ಮೊಟಾರು ಬೈಕುಗಳು, ಸ್ಥಳದಲ್ಲಿ ದೊರೆತ ಹಲವಾರು ಕಾಂಡೂಮ್ಸ್ ಪ್ಯಾಕೆಟುಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಮುಖ್ಯ ಆರೋಪಿ ಪಾಲಹಳ್ಳಿ ರಜತ ಮತ್ತು ಕಿರಣ್ ತಲೆಮರೆಸಿಕೊಂಡಿರುತ್ತಾರೆ.
ಸದರಿ ದಾಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀಮತಿ ರಾಧಿಕ, ಐ.ಪಿ.ಎಸ್., ಅಡಿಷನಲ್ ಎಸ್.ಪಿ., ಶ್ರೀಮತಿ ಲಾವಣ್ಯ.ಬಿ.ಎನ್.,ಕೆ.ಎಸ್.ಪಿ.ಎಸ್., ರವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕರಾದ ಶ್ರೀ ವಿಶ್ವನಾಥ್ ರವರು ಪಿಎಸ್‍ಐ ಶ್ರೀರಂಗಪಟ್ಟಣ ಟೌನ್, ಗ್ರಾಮಾಂತರ, ಕೆ.ಆರ್.ಸಾಗರ ಮತ್ತು ವಿಶೇಷವಾಗಿ ಮಹಿಳಾ ಪಿಎಸ್‍ಐ ಅರಕೆರೆ ಠಾಣೆ ಹಾಗೂ ಸಿಬ್ಬಂದಿಗಳು ಬಾಗಿಯಾಗಿ ಮರೆಮಾಚಲು ಗುಹೆಯಂತಹ ಕೊಠಡಿಯಲ್ಲಿದ್ದ ಮಹಿಳೆಯರನ್ನು ಪತ್ತೆ ಮಾಡಿ ರಕ್ಷಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 20-08-2017
-:ಪತ್ರಿಕಾ ಪ್ರಕಟಣೆ:-
ದಿಃ19/08/2017 ರಂದು ಸಂಜೆ ಶ್ರೀರಂಗಪಟ್ಟಣ ತಾಲ್ಲೂಕು ನಗುವನಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಪಕ್ಕದ ಪಾಲಹಳ್ಳಿಯ ರಜತ ಎಂಬುವರು ‘ಮಾರ್ಗಡಾಬ’ ಹೋಟೆಲು ಮತ್ತು ಇದಕ್ಕೆ ಹೊಂದಿಕೊಂಡಿರುವ ರೂಮುಗಳನ್ನು ಇಟ್ಟುಕೊಂಡು ಅನೈತಿಕ ವ್ಯವಹರಣೆ ನಡೆಸುತಿದ್ದು, ಇವರ ಡಾಬಗೆ ಹೊಂದಿಕೊಂಡಿರುವ ರೂಮುಗಳಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಪಂಚರ ಸಮಕ್ಷಮ ಪರಿಶೀಲಿಸಲು ಹೋದಾಗ, ಡಾಬಾ ಉಸ್ತುವಾರಿ ನೋಡಿಕೊಳ್ಳುತಿದ್ದವರು ಡಾಬಾ ಹೋಟೆಲಿಗೆ ಹೊಂದಿಕೊಂಡಿರುವ ರೂಮುಗಳ ಬಾಗಿಲುಗಳನ್ನು ಹಾಕಿಕೊಂಡಿದ್ದು, ನಂತರ ವಿಚಾರ ಮಾಡಿ ಬಾಗಿಲು ತೆರೆಸಿ ನೋಡಿದಾಗ ಡಾಬ ನೋಡಿಕೊಳ್ಳುವವರಲ್ಲದೆ ಒಟ್ಟು 19 ಜನ ಪುರಷ ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ. ಇವರು ವೇಶ್ಯವಾಟಿಕೆಯಲ್ಲಿ ತೊಡಗಿದ್ದರೆಂದು ಕಂಡು ಬಂದಿದ್ದು, ಪರಿಶೀಲಿಸಿದಾಗ ರೂಮುಗಳಲ್ಲಿ ಯಾವ ಮಹಿಳೆಯರು ಇರಲಿಲ್ಲದ ಕಾರಣ ಅನುಮಾನ ಬಂದು ಪರಿಶೀಲಿಸಿದ ಕಾಲದಲ್ಲಿ, ರೂಮಿನ ಗೋಡೆಗೆ ಅಂಟಿಸಿದಂತೆ ಇದ್ದ ಗೋಡೆಯ ಟೈಲ್ಸ್‍ಗಳನ್ನು ತೆರವುಗೊಳಿಸಿ ನೋಡಿದಾಗ ಸಂದಿಯೊಳಗೆ ಕೊಠಡಿಯೊಂದು ಇದ್ದು ಅದರೊಳಗೆ 7 ಜನ ಮಹಿಳೆಯರು ಬಚ್ಚಿಟ್ಟುಕೊಂಡಿದ್ದುದು ತಿಳಿದು ಬಂದಿರುತ್ತದೆ. ವೇಶ್ಯವಾಟಿಕೆ ನಡೆಸುತಿದ್ದ ವ್ಯಕ್ತಿಗಳು ಪೊಲೀಸರು ದಾಳಿ ಮಾಡಿದ ಕಾಲದಲ್ಲಿ ಮಹಿಳೆಯರನ್ನು ಬಚ್ಚಿಟ್ಟುಕೊಳ್ಳಲು ಗುಹೆಯಂತಹ ಕೊಠಡಿಯನ್ನು ಪೂರ್ವಯೋಜಿತವಾಗಿ ನಿರ್ಮಿಸಿಕೊಂಡು, ದಾಳಿಮಾಡಿದವರಿಗೆ ಗೋಡೆ ಎಂದು ತಿಳಿದುಕೊಳ್ಳಲು ಮರೆಮಾಚಿರುವುದು ಕಂಡು ಬಂದಿರುತ್ತದೆ. ದಾಳಿ ಕಾಲದಲ್ಲಿ ಒಟ್ಟು 7 ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದು ನಿಯಮಾನುಸಾರ ಅವರುಗಳನ್ನು ವಾರಸುದಾರರು ಬಂದು ಕರೆದುಕೊಂಡು ಹೋಗುವವರೆಗೆ ಮಹಿಳಾ ಶಾಂತ್ವಾನ ಕೇಂದ್ರಕ್ಕೆ ಬಿಡಲಾಗುತ್ತಿದೆ.
‘ಮಾರ್ಗ ಡಾಬ’ ದ ರೂಮುಗಳಿಗೆ ಸಂತೋಷ ಎಂ. @ ಸಂದೇಶ ಬನ್ನಿಮಂಟಪ ಮೈಸೂರು, ನಂದಕುಮಾರ್ ಹೆಚ್.ಡಿ. @ ನಂದನ್ ಹುಚ್ಚೇಗೌಡನದೊಡ್ಡಿ ಗ್ರಾಮ ಮಳವಳ್ಳಿ ತಾಲ್ಲೂಕು, ನಾಗೇಶ ನಾಗಮಂಗಲ ಟೌನ್ ಮತ್ತು ಕಿರಣ ಎಂಬುವರು ಮಹಿಳೆಯರನ್ನು ವೇಶ್ಯವಾಟಿಕೆ ಉದ್ದೇಶಕ್ಕಾಗಿ ಕರೆತರುತಿದ್ದರೆಂದು ತಿಳಿದು ಬಂದಿರುತ್ತದೆ. ಜಗದೀಶ ಉತ್ತರಕನ್ನಡ ಜಿಲೆ,್ಲ ದರ್ಶನ ಕೆ.ಎನ್. ಕದಬಳ್ಳಿ ಗ್ರಾಮ ನಾಗಮಂಗಲ ತಾಲ್ಲೂಕು. ಭರತೇಶ ಹೆಚ್.ಸಿ. ಹೊನ್ನಶೆಟ್ಟಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು, ಮಣಿ @ ತಿಪ್ಪೇಶ ಹೊಸಹಳ್ಳಿ ಗ್ರಾಮ ದಾವಣಗೆರೆ ತಾಲ್ಲೂಕು, ಹುಲಿಗಪ್ಪ ಮಲ್ಲಪ್ಪ ನರಗುಂದ ಸುರುಕೋಡು ಗ್ರಾಮ ನರಗುಂದ ತಾಲ್ಲೂಕು ರವರುಗಳು ಡಾಬ ರೂಮುಗಳ ಉಸ್ತುವಾರಿ ನೋಡಿಕೊಂಡು ಗುಹೆಯಂತಹ ಕೊಠಡಿಯಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯವಾಟಿಕೆ ನಡೆಸಿ ಹಣ ಸಂಪಾದಿಸಿ ಮಾಲೀಕರು ಸೇರಿದಂತೆ ಎಲ್ಲರೂ ಹಂಚಿಕೊಂಡು ಜೀವನ ನಡುಸುತಿದ್ದರೆಂದು ಕಂಡು ಬಂದಿದೆ. ಈ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗಿರಾಕಿಗಳಾದ ಸುರೇಶ, ಮಹಮದ್ ಬಸೀರ್, ಜೆಸಿಲ್ ಟಿ.ಕೆ ಷಹಾಹನ್, ಹರೀಶ ಕುಮಾರ್ ಕೇರಳ ರಾಜ್ಯರವರಾಗಿದ್ದು ಮಿತೀಶ್ ರಂಜನ್ ಜಾರ್ಖಂಡ್ ರಾಜ್ಯ, ನಾಗರಾಜು ತುಮಕೂರು ಜಿಲ್ಲೆ, ಮೆಹಬೂಬ್ ಪಾಷ, ರಾಯಿಲ್ ಖಾನ್, ಸೈಯದ್ ಮುಜಾಹಿಲ್, ಖಾದಿರ್ ಖಾನ್ ಮೈಸೂರು ನಗರದವರಾಗಿರುತ್ತಾರೆ.
ಪಾಲಹಳ್ಳಿ ಗ್ರಾಮದ ಪಿ.ವಿ.ಶೇಷಪ್ಪ ರವರು ಇದಕ್ಕಾಗಿ ‘ಟೂರಿಸ್ಟ್ ಹೋಂ’ ಎಂಬ ಹೆಸರಿನಲ್ಲಿ ತಮ್ಮ ಜಮೀನಿನಲ್ಲಿ ರೂಮುಗಳನ್ನು ನಿರ್ಮಿಸಿ, ಮೈಸೂರು ಸಿಟಿ ಟೀಚರ್ಸ್ ಬಡಾವಣೆಯ ಸಿ.ಎಸ್.ಮನು ಎಂಬುವರು ಬಾಡಿಗೆ ಕರಾರು ಮಾಡಿಕೊಂಡು ಇವರೆಲ್ಲರೂ ತಿಳಿದು ತಿಳಿದೇ ಕಾನೂನು ಬಾಹಿರವಾಗಿ ವೇಶ್ಯವಾಟಿಕೆ ಚಟುವಟಿಗೆ ನಡೆಸಿ ಸಂಪಾದಿಸಿದ ಹಣವನ್ನು ಹಂಚಿಕೊಂಡು ವ್ಯವಹಾರ ನಡೆಸುತಿದ್ದರೆಂದು ಕಂಡು ಬಂದಿರುತ್ತದೆ ಹಾಗೂ ತಲೆ ಮರೆಸಿಕೊಂಡಿರುತ್ತಾನೆ.
ದಾಳಿ ಮಾಡಿದ ಕಾಲದಲ್ಲಿ ವೇಶ್ಯವಾಟಿಕೆ ಉದ್ದೇಶಕ್ಕಾಗಿ ಇಟ್ಟುಕೊಂಡಿದ್ದ ಒಟ್ಟು ನಗದು 50345/- ರೂ ನಗದು, 17 ಮೊಬೈಲ್ ಪೋನುಗಳು, 1 ಚವರ್ಲೆಟ್ ತವೆರಾ ಕಾರು, 4 ಮೊಟಾರು ಬೈಕುಗಳು, ಸ್ಥಳದಲ್ಲಿ ದೊರೆತ ಹಲವಾರು ಕಾಂಡೂಮ್ಸ್ ಪ್ಯಾಕೆಟುಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಮುಖ್ಯ ಆರೋಪಿ ಪಾಲಹಳ್ಳಿ ರಜತ ಮತ್ತು ಕಿರಣ್ ತಲೆಮರೆಸಿಕೊಂಡಿರುತ್ತಾರೆ.
ಸದರಿ ದಾಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀಮತಿ ರಾಧಿಕ, ಐ.ಪಿ.ಎಸ್., ಅಡಿಷನಲ್ ಎಸ್.ಪಿ., ಶ್ರೀಮತಿ ಲಾವಣ್ಯ.ಬಿ.ಎನ್.,ಕೆ.ಎಸ್.ಪಿ.ಎಸ್., ರವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕರಾದ ಶ್ರೀ ವಿಶ್ವನಾಥ್ ರವರು ಪಿಎಸ್‍ಐ ಶ್ರೀರಂಗಪಟ್ಟಣ ಟೌನ್, ಗ್ರಾಮಾಂತರ, ಕೆ.ಆರ್.ಸಾಗರ ಮತ್ತು ವಿಶೇಷವಾಗಿ ಮಹಿಳಾ ಪಿಎಸ್‍ಐ ಅರಕೆರೆ ಠಾಣೆ ಹಾಗೂ ಸಿಬ್ಬಂದಿಗಳು ಬಾಗಿಯಾಗಿ ಮರೆಮಾಚಲು ಗುಹೆಯಂತಹ ಕೊಠಡಿಯಲ್ಲಿದ್ದ ಮಹಿಳೆಯರನ್ನು ಪತ್ತೆ ಮಾಡಿ ರಕ್ಷಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
Press Note - Srirangapatana Rural PS Murder Case Detected
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 09-08-2017
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 09-08-2017
ಪತ್ರಿಕಾ ಪ್ರಕಟಣೆ
ದಿಃ03/08/2017 ರಂದು ಮುಂಜಾನೆ ಪಾಂಡವಪುರ ತಾಲ್ಲೂಕು ಕೆ.ಬೆಟ್ಟಹಳ್ಳಿ ಬಳಿ ಚಾಗಶೆಟ್ಟಹಳ್ಳಿ ಗ್ರಾಮದ ಕಡೆಯ ರಸ್ತೆಯಲ್ಲಿ ದೊರೆತ ಮಹಿಳಾ ಶವವು ಕೆ.ಬೆಟ್ಟಹಳ್ಳಿ ಗ್ರಾಮದ ರಘು ಎಂಬುವರ ಹೆಂಡತಿ 38 ವರ್ಷದ ಮಮತ ರವರ ಶವ ದೊರೆತಿದ್ದು, ಈಕೆಯು ದಿಃ02/08/2017 ರಂದು ರಾತ್ರಿ 8.30 ಗಂಟೆಯಲ್ಲಿ ಮನೆಯಿಂದ ಹೋಗಿದ್ದು ಈಕೆಯನ್ನು ಯಾರೋ, ಯಾವುದೋ ರೀತಿಯಲ್ಲಿ ಕೊಲೆ ಮಾಡಿ ರುವ ಬಗ್ಗೆ ಅನುಮಾನ ಇರುವುದಾಗಿ ಮೃತಳ ಮಗ ಸಂಧೀಪ ನೀಡಿದ ದೂರಿನಂತೆ ಕೊಲೆ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.240/2017 ಕಲಂ 302, 201 ಐಪಿಸಿ ವರದಿಯಾಗಿತ್ತು.
ಮೃತಳು ಹಾಗೂ ಹಾರೋಹಳ್ಳಿ ಗ್ರಾಮದ ಗಾರೆಕೆಲಸದ ಕೃಷ್ಣನಿಗೆ ಸಂಬಂಧಿಸಿದಂತೆ ತಳಮಟ್ಟದಿಂದ ಮಾಹಿತಿಯನ್ನು ಸಂಗ್ರಹಿಸಿ ತಲೆಮರೆಸಿಕೊಂಡಿದ್ದ ಹಾರೋಹಳ್ಳಿ ಗ್ರಾಮದ ಕೃಷ್ಣನನ್ನು ದಿಃ07/08/2017 ರಂದು ಮುಂಜಾನೆ ಪಾಂಡವಪುರದಲ್ಲಿ ತನಿಖಾಧಿಕಾರಿಗಳು ಪತ್ತೆ ಮಾಡಿ ತನಿಖೆ ನಡೆಸಿದಾಗ, ಕೃಷ್ಣ ಹಾರೋಹಳ್ಳಿ ಗ್ರಾಮ ಈತನು ಮೃತೆ ಮಮತಳೊಂದಿಗೆ 12 ವರ್ಷಗಳಿಂದ ಪರಿಚಯ ಇಟ್ಟುಕೊಂಡಿದ್ದು, ತನ್ನೊಂದಿಗೆ ಗಾರೆಕೆಲಸಕ್ಕೆ ಕರೆದುಕೊಂಡು ಹೋಗುತಿದ್ದು ಇತ್ತೀಚೆಗೆ ಈಕೆ ತನಗಿಂತ ಬೇರೆಯವರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿರಬಹುದೆಂಬ ದ್ವೇಷವನ್ನು ಹೊಂದಿ, ಕೊಲೆ ಮಾಡುವ ಉದ್ದೇಶದಿಂದ ದಿಃ02/08/2017 ರಂದು ರಾತ್ರಿ ಆಕೆಯನ್ನು ಹಾರೋಹಳ್ಳಿಯ ರಾಮಕೃಷ್ಣೆಗೌಡರ ಬೋರೆಹೊಲದ ಬಳಿ ಹೇಮಾವತಿ ಪಾಳು ಸೀಳು ನಾಲೆಯ ಬಳಿಗೆ ಕರೆದುಕೊಂಡು ಹೋಗಿ ಆಕೆಗೆ ಮದ್ಯಪಾನ ಮಾಡಿಸಿ, ಆಕೆಯ ಕುತ್ತಿಗೆಗೆ ಟವಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಈ ಅಪರಾದ ತನ್ನ ಮೇಲೆ ಬರದಂತೆ ಮುಚ್ಚಿಹಾಕಿ ಸಾಕ್ಷಿ ನಾಶಗೊಳಿಸುವ ಉದ್ದೇಶದಿಂದ ಶವವನ್ನು ಅದೇ ರಾತ್ರಿ ಕೆ.ಬೆಟ್ಟಹಳ್ಳಿಯ ಬಳಿಗೆ ಬೈಕಿನಲ್ಲಿ ಸಾಗಿಸಿ, ಆಕೆಯೇ ವಿಷ ಕುಡಿದು ಸತ್ತಿರುತ್ತಾಳೆಂದು ಭಾವಿಸಿಕೊಳ್ಳಲೆಂದು, ಹೆಣದ ಬಳಿಗೆ ಹೈಡ್ರೋಜನ್ ಪೆರಾಕ್ಸ್‍ಡ್ ಖಾಲಿ ಡಬ್ಬಿಯನ್ನು ಇಟ್ಟು ಹೊರಟು ಹೋಗಿದುದು ತನಿಖೆಯಿಂದ ತಿಳಿದು ಬಂದಿರುತ್ತದೆ
ಸದರಿ ಪ್ರಕರಣವನ್ನು ಡಿ.ಎಸ್.ಪಿ. ಶ್ರೀ. ವಿಶ್ವನಾಥ್‍ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ.ಎಂ.ಚಂದ್ರಶೇಖರ್, ಯೋಗಾಂಜನಪ್ಪ, ಪಿ.ಎಸ್.ಐ,. ಶ್ರೀರಂಗಪಟ್ಟಣ ಟೌನ್, ಪಿಎಸ್‍ಐ ಬ್ಯಾಟರಾಯಗೌಡ, ಹಾಗೂ ಸಿಬ್ಬಂದಿಯವರಾದ ವಿಜಯ್‍ಕುಮಾರ್, ಕೆ.ಕುಮಾರ, ವರದರಾಜ, ರವೀಶ.ಎಸ್.ಇವರುಗಳು ಪ್ರಕರಣವನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಲು ಶ್ರಮಿಸಿರುತ್ತಾರೆ. ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಇವರೆಲ್ಲರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆರವರು ಪ್ರಶಂಶಿಸಿರುತ್ತಾರೆ.
ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ
ಜಿಲ್ಲೆ, ಮಂಡ್ಯ, ದಿನಾಂಕ: 11-05-2017.
ಪತ್ರಿಕಾ
ಪ್ರಕಟಣೆ
ಇತ್ತೀಚೆಗೆ ಬೀಗ ಹಾಕಿದ ಮನೆಗಳ
ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು ಸಾರ್ವಜನಿಕರು ಒಂದು ದಿನದ ಮೇಲ್ಪಟ್ಟು
ತಮ್ಮ ಮನೆಗೆ ಬೀಗ ಹಾಕಿಕೊಂಡು
ಬೇರೆ ಊರಿಗೆ ಹೋಗುವಾಗ ತಪ್ಪದೆ
ನಿಮ್ಮ ಮನೆಯ ವಿಳಾಸ ಮತ್ತು
ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ
ನೀಡುವುದು ಮತ್ತು ಮಂಡ್ಯ ಕಂಟ್ರೋಲ್
ರೂಂನ ದೂರವಾಣಿ ಸಂಖ್ಯೆ 9480804800 ಗೆ
ನಿಮ್ಮ ಮೊಬೈಲ್ ವಾಟ್ಸಾಪ್ನಿಂದ
ನಿಮ್ಮ ಮನೆಯ ಲೊಕೇಶನ್ ನೊಂದಿಗೆ
ವಿಳಾಸವನ್ನು ವಾಟ್ಸಾಪ್ ಮಾಡುವುದು. ಪೊಲೀಸ್ ಇಲಾಖಾ ವತಿಯಿಂದ
ಅಂತಹ ಸ್ಥಳಗಳಲ್ಲಿ ರಾತ್ರಿ ಗಸ್ತನ್ನು ಬಿಗಿಗೊಳಿಸಲಾಗುವುದು.
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಮನೆ ಕಳ್ಳತನಗಳನ್ನು ತಡೆಯುವಲ್ಲಿ
ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖಾ ವತಿಯಿಂದ
ಕೋರಲಾಗಿದೆ.
Press Note Date: 07-04-2017
ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ,
ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
ದಿನಾಂಕಃ 31.03.17. ರಂದು ಬೆಳಿಗ್ಗೆ 9-30 ಗಂಟೆ
ಸಮಯದಲ್ಲಿ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅರ್.
ಶಶಿಭೂಷಣ್ ಇವರ ಕುತ್ತಿಗೆಯನ್ನು ಕುಯ್ದು ಕೊಲೆ ಮಾಡಿದ್ದು ಈ ಸಂಬಂದsವಾಗಿ ಕೆ.ಎಂ.ದೊಡ್ಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಈ
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಸಂಬಂಧ ಕೆ.ಎಂ.ದೊಡ್ಡಿ ವೃತ್ತದ ಸಿಪಿಐ ಶ್ರೀ ಶಿವಮಲವಯ್ಯ
ಇವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಹಿಡಿಯುವಲ್ಲಿ ಕೆ.ಎಂ.ದೊಡ್ಡಿ ಠಾಣೆಯ
ಪಿಎಸ್‍ಐ ಆಯ್ಯನಗೌಡ, ಹಲಗೂರು ಠಾಣೆ ಪಿಎಸ್‍ಐ ಬಿ.ಎಸ್. ಶ್ರೀಧರ್, ಅರಕೆರೆ ಠಾಣಾ ಪಿಎಸ್‍ಐ, ಅಜರುದ್ದೀನ್,
ಶ್ರೀರಂಗಪಟ್ಟಣ (ಗ್ರಾ) ಠಾಣಾ ಪಿಎಸ್‍ಐ ಪುನೀತ್ ಹಾಗೂ ಸಿಬ್ಬಂದಿಗಳಾದ ಎಎಸ್‍ಐ ಗೋವಿಂದಪ್ಪ, ಗಯಾಜï
ಉದ್ದೀನ್ ಖಾನ್, ಮಹದೇವ, ಜಯರಾಮೇಗೌಡ, ಜಯರಾಮು ಹಾಗೂ ಚಾಲಕರುಗಳಾದ ಮಂಜುನಾಥ್ ಮತ್ತು ರವಿ ಇವರುಗಳ
ಸಹಾಯದಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಈ ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ.
1] ಮೃತ
ಶಶಿಭೂಷಣ್ ಇವರ ಪತ್ನಿ ಶ್ರೀಮತಿ ಶಾಂತಮ್ಮ ಇವರನ್ನು ದಸ್ತಗಿರಿ ಮಾಡಿ ಇವರಿಂದ ಒಂದು ಮೊಬೈಲ್ ಪೋನ್
ವಶಕ್ಕೆ ಪಡೆದು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
2] ಮೃತ
ಶಶಿಭೂಷಣ್ ಇವರ ಮಗಳು ನವ್ಯಶ್ರೀ ಈಕೆಯನ್ನು ದಸ್ತಗಿರಿ ಮಾಡಿ ಈಕೆಯಿಂದ ಒಂದು ಮೊಬೆಲ್ ವಶಕ್ಕೆ ಪಡೆದು
ಈಕೆಯನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
3] ಸುರೇಶ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರು ಬ್ಯಾಂಕ್ ಪಾಸ್ ಪುಸ್ತಕಗಳು,
ಐದು ಕೀ ಗಳಿರುವ ಗೊಂಚಲು, ಒಂದು ಹಣ ಇರುವ ಪರ್ಸ್, ಒಂದು ಡೈರಿ, ಎರಡು ಮೊಬೈಲ್ ಪೋನ್‍ಗಳು ಹಾಗೂ ಕೃತ್ಯಕ್ಕೆ
ಮುಂಗಡವಾಗಿ ಪಡೆದಿದ್ದ 7740/- ರೂ ನಗದು ಹಣ ವಶಕ್ಕೆ ಪಡೆದಿರುತ್ತೆ.
4] ವೆಂಕಟೇಶ್
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರನ್ನು ವಶಕ್ಕೆ ಪಡೆದಿರುತ್ತೆ.
5] ಮಹದೇವ
@ ಶಾಕಾ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚನ್ನು ವಶಕ್ಕೆ
ಪಡೆದಿರುತ್ತೆ.
6] ಸಂತೋಷ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚು ಹಾಗೂ ಒಂದು ಮೊಬೈಲ್
ವಶಕ್ಕೆ ಪಡೆದಿರುತ್ತೆ.
7] ನಂಜುಂಡ
@ ನಂಜಪ್ಪ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಮೃತನ ಒಂದು ಮೊಬೆಲ್ ಪೋನನ್ನು ಈತನ ಮನೆಯಿಂದ
ವಶಕ್ಕೆ ಪಡೆದಿರುತ್ತೆ.
ಆರೋಪಿ
ವೆಂಕಟೇಶ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅರೋಪಿ ಸುರೇಶ ಮತ್ತು ಮಹದೇವ @ ಶಾಕಾ ಇವರನ್ನು
ಪೆÇಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿ ಇವರ ಮಾಹಿತಿ ಮೇರೆಗೆ ಅರೋಪಿಗಳಾದ ಸಂತೋಷ ಮತ್ತು ನಂಜುಂಡ
@ ನಂಜಪ್ಪ ಇವರನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
Subscribe to:
Posts (Atom)


