ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್
ದಿನಾಂಕ 17-07-11 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಜಿ ಕೃಷ್ಣಮೂರ್ತಿ ಪೊಲೀಸ್ ಇನ್ದ್ ಪೆಕ್ಟರ್ ಡಿಸಿಐಬಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಮಂಡ್ಯ ತಾಲ್ಲೋಕು ಕೂಲಕಾರನದೊಡ್ಡಿ ಗ್ರಾಮದ ಚಿಕ್ಕಮೊಗಣ್ಣನವರ ಕಬ್ಬಿನ ಗದ್ದೆಯ ಪಕ್ಕದ ಗಾಡಿ ಜಾಡು ರಸ್ತೆಯಲ್ಲಿ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳಾದ ರಮೇಶ, ಅರಸು ಮತ್ತು ಬಾಬು, ವಿ ರವರೊಡನೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 13.820 ರೂ ಹಣ, ಮೊಬೈಲ್ ಹ್ಯಾಂಡ್ ಸೆಟ್ ಹಾಗೂ 4 ದ್ವಿಚಕ್ರ ವಾಹನಗಳನಗಳನ್ನು ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಪುಟ್ಟರಾಜು ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಕಾನೂನು ರೀತ್ಯೆ ಕ್ರಮ ಕೈಗೊಳ್ಳಲು ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರಿಗೆ ವರದಿ ನೀಡಲಾಗಿ ಸದರಿ ಪಿ.ಎಸ್.ಐ ಮಂಡ್ಯ ಗ್ರಾಮಂತರ ಪೊಲೀಸ್ ಠಾಣೆ ರವರು ತಮ್ಮ ಠಾಣಾ ಮೊ,ಸಂ 287/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್
ದಿನಾಂಕ 17-07-11 ರಂದು ಮಧ್ಯಾಹ್ನ 18-30 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಎ.ಆರ್ ವೆಂಕಟೇಶ ಮೂರ್ತಿ ಸಿ.ಪಿ.ಐ ಶ್ರೀರಂಗಪಟ್ಟಣ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಶ್ರೀರಂಗಪಟ್ಟಣ ಟೌನ್ ಪ್ರವಾಸಿ ಮಂದಿರದ ಹಿಂಭಾಗ ಜನರು ಗುಂಪಾಗಿ ಕುಳಿತು ಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಸೈ ಬಾಹರ್ ಸೈ ಎಂಬ ಇಸ್ಪೀಟು ಜುಜಾಟವಾಡುತ್ತಿದ್ದಾರೆಂದು ಬಂದು ಮಾಹಿತಿಯ ಮೇರೆಗೆ ಪಿರ್ಯಾದಿಯವರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಸದರಿ ಆರೋಪಿಗಳಿಂದ 34500 ರೂ ಹಣ, ವಶಕ್ಕೆ ತೆಗೆದು ಕೊಂಡು ಮತ್ತು ಆರೋಪಿಗಳಾದ ಸಂತೋಷ ಮತ್ತು ಇತರರೆ 4 ಜನರನ್ನು ಹಿಡಿದು ಕೊಂಡು ಬಂದು ಸದರಿಯವರ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ,ಸಂ 490/11 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿ ಪ್ರಕರಣವನ್ನು ತನಿಖೆ ಕ್ರಮ ಕೈಗೊಂಡಿರುತ್ತೆ
No comments:
Post a Comment