ಪತ್ರಿಕಾ ಪ್ರಕಟಣೆ
7 ಜನ ದರೋಡೆಕೋರರ ಬಂಧನ : 5 ಕಾರುಗಳು ಹಾಗೂ ಚಿನ್ನಾಭರಣ ವಶ
ನಾಗಮಂಗಲದಲ್ಲಿ ದಿನಾಂಕ:22-10-2011 ರಂದು ಬೆಳಗಿನ ಜಾವ 02.30 ಗಂಟೆಯಲ್ಲಿ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದಾಗ ನಾಗಮಂಗಲ-ಕೋಟೆಬೆಟ್ಟ ರಸ್ತೆಯ ಪಾಲ ಅಗ್ರಹಾರದ ಹಳ್ಳದ ಸಮೀಪ ರಸ್ತೆಯ ಬದಿಯಲ್ಲಿ ಒಂದು ಇಂಡಿಕಾ ಕಾರ್ ನಿಂತಿದ್ದು, ಅನುಮಾನಗೊಂಡ ಪೊಲೀಸರು ಕಾರಿನ ಹತ್ತಿರ ಹೋಗಿ ಒಳಗಿದ್ದವರನ್ನು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿದ್ದವರ ಬಳಿ ಲಾಂಗು, ಚೈನು ಹಾಗೂ ಚಾಕು ಇದ್ದು, ಸದರಿಯವರುಗಳನ್ನು ಕಾರು ಮತ್ತು ಆಯುಧಗಳ ಸಮೇತ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವರುಗಳ ಹೆಸರುಗಳನ್ನು ಈ ಕೆಳಕಂಡಂತೆ ತಿಳಿಸಿರುತ್ತಾರೆ.
1. ಗೋವಿಂದರಾಜು ಬಿನ್ ಚೆನ್ನರಾಯಪ್ಪ, ದೇಗನಹಳ್ಳಿ ಗ್ರಾಮ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.
2. ರವಿಕುಮಾರ್ ಬಿನ್ ಲೇ|| ಮಲ್ಲೇಶ್, ಗಂಕಾರ್ ನಹಳ್ಳಿ ಗ್ರಾಮ, ಮಧುಗಿರಿ ತಾ||, ತುಮಕೂರು ಜಿಲ್ಲೆ.
3. ವೆಂಕಟೇಶ ಬಿನ್ ಮುನಿಯಪ್ಪ, ಮಾಕಳ್ಳಿ, ಬೆಂಗಳೂರು.
4. ಶ್ರೀಕಾಂತ.ಎಂ. ಬಿನ್ ಲೇ|| ಮಲ್ಲೇಶ, ಮಾವಿನಹಳ್ಳಿ ಗ್ರಾಮ , ಹಾಸನ ಟೌನ್.
5. ರಮೇಶ ಜಿ. ಬಿನ್ ಗಂಗನರಸಯ್ಯ, ನೆಲಮಂಗಲ ತಾ||, ಬೆಂಗಳೂರು ಗ್ರಾ ಜಿಲ್ಲೆ.
ಮೇಲ್ಕಂಡವರುಗಳನ್ನು ಆ ಸಮಯದಲ್ಲಿ ಹಾಗೂ ಆ ಸ್ಥಳದಲ್ಲಿ ಇದ್ದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಇದ್ದುದರಿಂದ ಸದರಿಯವರುಗಳನ್ನು ಠಾಣೆಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿ ಅವರುಗಳು ಆ ಸ್ಥಳದಲ್ಲಿ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ದರೋಡೆ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಇವರುಗಳನ್ನು ದಿನಾಂಕ:23-10-2011 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖಾ ಸಂಬಂಧ ನಾಗಮಂಗಲ ಪೊಲೀಸ್ ಅಧಿಕಾರಿಗಳು ಪೊಲೀಸ್ ವಶಕ್ಕೆ ತೆಗದುಕೊಂಡು ವಿಚಾರಣೆಗೆ ಒಳಪಡಿಸಲಾಗಿ, ಇವರ ಜೊತೆಗೆ 6] ರೋಷನ್ ಬಿನ್ ಕರೀಂಷ ರೀಪ್, ಸದಾಶಿವನಗರ, ನೆಲಮಂಗಲ ಟೌನ್, 7] ಪಿ.ಶರತಚಂದ್ರ ಬಿನ್ ಪುಟ್ಟಸ್ವಾಮಿ, ಪ್ರಮೋದ್ ಲೇಔಟ್, ಬೆಂಗಳೂರು ರವರುಗಳನ್ನು ದಿನಾಂಕ:26-10-2011 ರಂದು ದಸ್ತಗಿರಿ ಮಾಡಿದ್ದು, ಮೇಲ್ಕಂಡ ಎಲ್ಲಾ ಆರೋಪಿಗಳು ಈ ಕೆಳಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.
ಡಾಬಸ್ ಪೇಟೆ ಬಳಿ ಒಂದು ಟಾಟಾ ಸುಮೋ, 2 ಇಂಡಿಕಾ ಕಾರು, ನಂಜನಗೂಡು ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಬಿಂಡಿಗನವಿಲೆ ಠಾಣಾ ವ್ಯಾಪ್ತಿಯ ಎನ್.ಹೆಚ್.48 ರಸ್ತೆಯಲ್ಲಿ ಒಂದು ಇಂಡಿಕಾ ಕಾರು, ಡ್ರಾಪ್ ಕೇಳುವ ನೆಪದಲ್ಲಿ ಕಾರಿಗೆ ಹತ್ತಿಕೊಂಡು ಚಾಲಕರುಗಳಿಗೆ ಲಾಂಗ್ ಮತ್ತು ಚಾಕು ತೋರಿಸಿ ಹೆದರಿಸಿ ಅವರಿಂದ ಕಾರು ಹಾಗೂ ಮೊಬೈಲ್ ಗಳನ್ನು ದೋಚಿಕೊಂಡು ಹೋಗಿರುವುದಾಗಿಯೂ ಅದೇ ರೀತಿ ಬೆಳ್ಳೂರು ವ್ಯಾಪ್ತಿಯ ಗುರುದರ್ಶನ ಹೋಟೆಲ್-ಅಗಚಹಳ್ಳಿ ಮಧ್ಯೆ ಸರ್ವಿಸ್ ರಸ್ತೆಯ ಬಳಿ ಹಾಗೂ ತುಮಕೂರು ರಸ್ತೆಯ ಪಾಳ್ಯದಹಳ್ಳಿ ಗೇಟ್ ಬಳಿ ಮತ್ತು ತುಮಕೂರು ಜಿಲ್ಲೆಯ ಕೊರಟಿಕೆರೆಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸರಿಗೆ ಲಾಂಗ್ ನಿಂದ ಹೆದರಿಸಿ ಕತ್ತಿನಲ್ಲಿದ್ದ ಸರಗಳನ್ನು ಕಿತ್ತುಕೊಂಡಿರುವುದಾಗಿ ತಿಳಿಸಿರುತ್ತಾರೆ. ಅವರ ಹೇಳಿಕೆ ಅನುಸಾರ ಮೇಲ್ಕಂಡವರುಗಳಿಂದ ಸುಮಾರು 22 ಲಕ್ಷ ಬೆಲೆ ಬಾಳುವ 5 ಕಾರುಗಳು, ಚಿನ್ನದ ಆಭರಣಗಳು ಹಾಗೂ ಮೊಬೈಲ್ ಪೋನ್ ಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ನಾಗಮಂಗಲ ವೃತ್ತ ನಿರೀಕ್ಷಕರಾದ ಶ್ರೀ ಟಿ.ಡಿ.ರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಿನಯ್ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment