ಪತ್ರಿಕಾ ಪ್ರಕಟಣೆ
ಇತ್ತೀಚಿಗೆ ಮಹಿಳೆಯರ ಮಾಂಗಲ್ಯ ಸರ ಅಪಹರಣ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳ ಪತ್ತೆ ಮಾಡಲು ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನರಸಿಂಹಯ್ಯ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ ಕೆ.ಮಂಜು, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಕಾರ್ಯಪ್ರವೃತ್ತರಾಗಿ ದಿನಾಂಕ:13-10-2011 ರಂದು ಆರೋಪಿ 1. ರಾಜೇಶ ಬಿನ್ ಪುಟ್ಟಸ್ವಾಮಿ, 28 ವರ್ಷ, ಬೈಕ್ ಮೆಕಾನಿಕ್ ಕೆಲಸ, ಹೊಸಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು. 2. ಅನಂತಕುಮಾರ್ ಬಿನ್ ವರದರಾಜು, 28 ವರ್ಷ, ಕುಂಬಾರಕೊಪ್ಪಲು, ಮೈಸೂರು ರವರನ್ನು ಪಾಂಡವಪುರ ಠಾಣಾ ಮೊ.ಸಂ.445/11 ಕಲಂ 392-511 ಐಪಿಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿ ವಿಚಾರಣೆ ಕೈಗೊಂಡು ನಂತರ ದಿನಾಂಕ:14-10-2011 ರಿಂದ ದಿನಾಂಕ:17-10-2011 ರವರೆಗೆ ಇಬ್ಬರೂ ಆರೋಪಿಗಳನ್ನು ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿ 1 ರಾಜೇಶನು ತಾನು ಮತ್ತು ಮತ್ತೊಬ್ಬ ಆರೋಪಿ ಪುರುಷೋತ್ತಮ ಬಿನ್ ರುದ್ರಪ್ಪ, 23 ವರ್ಷ, ಟೈಲರ್ ಕೆಲಸ, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ|| ಇಬ್ಬರೂ ಸೇರಿ ಮಂಡ್ಯ, ಪಾಂಡವಪುರ ಮತ್ತು ಮೈಸೂರುಗಳಲ್ಲಿ ಸರ ಅಪಹರಣದ ಕೃತ್ಯವೆಸಗಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ರಾಜೇಶನು ಕೊಟ್ಟ ಮಾಹಿತಿಯಂತೆ ಪಾಂಡವಪುರ ಠಾಣಾ ಮೊ.ಸಂ.296/2011 ಕಲಂ 392 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಆರೋಪಿ ಅನಂತ ಕುಮಾರನ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿಕೊಂಡು ಆರೋಪಿ ಪುರುಷೋತ್ತಮನ ಪತ್ತೆ ಬಗ್ಗೆ ಬಲೆ ಬೀಸಲಾಗಿತ್ತು.
ನಂತರ ದಿನಾಂಕ 01-11-2011 ರಂದು 3 ನೇ ಆರೋಪಿ ಪುರುಷೋತ್ತಮ ಬಿನ್ ರುದ್ರಪ್ಪ, 23 ವರ್ಷ, ಟೈಲರ್ ಕೆಲಸ, ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾ|| ಈತನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದಾಗ ತಾನು ಮತ್ತು ಮೇಲ್ಕಂಡ 1 ನೇ ಆರೋಪಿ ರಾಜೇಶ ಬಿನ್ ಪುಟ್ಟಸ್ವಾಮಿ(ಈಗಾಗಲೇ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ) ಜೊತೆ ಸೇರಿ ಸರ ಅಪಹರಣದ ಪ್ರಕರಣಗಳನ್ನು ಎಸಗಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ಪುರುಷೋತ್ತಮನನ್ನು ದಿ:02-11-2011 ರಿಂದ 04-11-2011 ರವರೆಗೆ ಪೊಲೀಸ್ ಬಂಧನಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಮಂಡ್ಯ ಗ್ರಾಮಾಂತರ ಠಾಣಾ ಮೊ.ಸಂ.239/11 ಕಲಂ 392 ಐಪಿಸಿ ಕೇಸಿಗೆ ಸಂಬಂಧಿಸಿದ 15 ಗ್ರಾಂ ಚಿನ್ನದ ಚೈನು, 2 ಗ್ರಾಂ, 3 ಮಿಲಿಯ 2 ಚಿನ್ನದ ಕಾಸುಗಳು, 5 ಗ್ರಾಂ ಚಿನ್ನದ ತಾಳಿಯನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.
ನಂತರ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ರಾಜೇಶನನ್ನು ದಿನಾಂಕ:03-11-11 ರಿಂದ 05-11-11 ರವರೆಗೆ ಪೊಲೀಸ್ ಬಂಧನಕ್ಕೆ ಪಡೆದುಕೊಂಡು ಆರೋಪಿಗಳಿಬ್ಬರನ್ನೂ ಜೊತೆಯಾಗಿ ವಿಚಾರಣೆ ಮಾಡಿ ತನಿಖೆ ಕೈಗೊಂಡಿದ್ದು, ಅವರು ಕೊಟ್ಟ ಮಾಹಿತಿಯ ಮೇರೆಗೆ ಈ ಕೆಳಕಂಡ ಪ್ರಕರಣಗಳಲ್ಲಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ಮೊ.ಸಂ.137/11 ಕಲಂ 392 ಐಪಿಸಿ
ದಿನಾಂಕ 21-05-11 ರಂದು ರಾತ್ರಿ ಶ್ರೀಮತಿ ರಾಣಿ ಕೋಂ ಚಂದ್ರಶೇಖರ್, ಮಂಡ್ಯ ರವರು ಷುಗರ್ ಫ್ಯಾಕ್ಟರಿ ಕಲ್ಯಾಣ ಮಂಟಪಕ್ಕೆ ತನ್ನ ಗಂಡನ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಆಕೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಮತ್ತು ಮುತ್ತಿನ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ 18 ಗ್ರಾಂ, 150 ಮಿಲಿಯುಳ್ಳ ಚಿನ್ನದ ಚೈನ್ ನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ಮೊ.ಸಂ.143/11 ಕಲಂ 392 ಐಪಿಸಿ
ದಿನಾಂಕ 26-05-11 ರಂದು ರಾತ್ರಿ ಶ್ರೀಮತಿ ಮನೋರಮಣಿ, ಮಂಡ್ಯ ರವರು ಮಂಡ್ಯ ಗ್ರೀನ್ ಪ್ಯಾಲೇಸ್ ಕಲ್ಯಾಣ ಮಂಟಪಕ್ಕೆ ತಮ್ಮ ಮಗಳ ಜೊತೆ ತಮ್ಮ ಬಾಬ್ತು ಹೊಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಜ್ಯೋತಿ ರವರ ಕತ್ತಿನಲ್ಲಿದ್ದ ಚಿನ್ನದ ಲಾಂಗ್ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ 17 ಗ್ರಾಂ ಚಿನ್ನದ ಚೈನ್ ನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮೈಸೂರು ಸಿಟಿ ಅಶೋಕಪುರಂ ಪೊಲೀಸ್ ಠಾಣಾ ಮೊ.ಸಂ.18/11 ಕಲಂ 392 ಐಪಿಸಿ
ದಿನಾಂಕ 07-03-11 ರಂದು ಮೈಸೂರು ಸಿಟಿ ನಿವಾಸಿ ಶ್ರೀಮತಿ ವಾಣಿ ಎಂಬುವವರು ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹೊಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಹೋದ ಆರೋಪಿಗಳು ವಾಣಿ ರವರ ಕತ್ತಿನಲ್ಲಿದ್ದ ಚಿನ್ನದ ಚೈನ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದರು, ಈ ಸಂಬಂಧ 32 ಗ್ರಾಂ, 670 ಮಿಲಿ ಚಿನ್ನದ ಚೈನ್ ನ್ನು ಆರೋಪಿಗಳಿಂದ ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮೇಲ್ಕಂಡ ಆರೋಪಿಗಳಾದ ಪುರುಷೋತ್ತಮ ಮತ್ತು ರಾಜೇಶ ರವರು ನೀಡಿದ ಮಾಹಿತಿಯ ಮೇರೆಗೆ ಒಟ್ಟು ಆರು ಪ್ರಕರಣಗಳನ್ನು ಮತ್ತೆ ಮಾಡಿದ್ದು, ಸದರಿ ಆಸಾಮಿಗಳ ನೀಡಿದ ಸುಳುವಿನ ಮೇರೆಗೆ ಒಟ್ಟು ಎರಡು ಲಕ್ಷ ಎಪ್ಪತ್ತೇಳು ಸಾವಿರ ಬೆಲೆ ಬಾಳುವ 110 ಗ್ರಾಂ ಚಿನ್ನದ ವಡವೆಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನರಸಿಂಹಯ್ಯ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ ಕೆ.ಮಂಜು, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment