-ಃ ಪತ್ರಿಕಾ ಪ್ರಕಟಣೆ ಃ-
ಮಂಡ್ಯ ನಗರದ ಎಂ.ಸಿ. ರಸ್ತೆಯಲ್ಲಿರುವ ಸಕರ್ಾರಿ ಮಹಾವಿದ್ಯಾಲಯದ ಬಳಿ ಹೊಂಚುಹಾಕುತ್ತಿದ್ದ 3 ಜನ ದರೋಡೆಕಾರರಾದ ಕೆ.ಪಿ. ಚಂದ್ರ @ ದರಸಗುಪ್ಪೆ ಚಂದ್ರ, ಮೋಹನ ಕುಮಾರ @ ಪುರಿಬಟ್ಟಿ ಮೋಹನ, ವಿನಯ @ ಗಾಂಧಿ ಇವರುಗಳ ಬಂಧನ ಇವರುಗಳಿಂದ, ಒಂದು ಮೋಟಾರ್ ಸೈಕಲ್ ಮತ್ತು ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ರಿವಾಲ್ವಾರ್ ಹಾಗೂ 4 ಗುಂಡುಗಳ ವಶ
ದಿನಾಂಕ 01-12-11 ರಂದು ಬೆಳಗಿನ ಜಾವ 0435 ಗಂಟೆಯ ಸಮಯದಲ್ಲಿ ಮಂಡ್ಯ ನಗರ ಸರ್ಕಲ್ ಇನ್ಸ್ಪೆಕ್ಟರ್ ಅಪ್ ಪೊಲೀಸ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ, ಮಂಡ್ಯ ನಗರ ರವರು ಸಿಬ್ಬಂದಿಯವರ ಸಮೇತ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಬಳಿ ದರೋಡೆಮಾಡಲು ಹೊಂಚುಹಾಕುತ್ತಿದ್ದ ಈ ಕೆಳಕಂಡ ಅಸಾಮಿಗಳ ಮೇಲೆ ದಾಳಿ ಮಾಡಿ ಅವರ ವಶದಲ್ಲಿದ್ದ ಅಪಾಯಕಾರಿ ವಸ್ತುಗಳಾದ ಲಾಂಗು ಮಚ್ಚು, ಒಂದು ಚೂರಿ, ಖಾರದ ಪುಡಿ ಪೊಟ್ಟಣ, 2 ಹಗ್ಗಗಳು, ಎರಡು ಕಾಡು ಮರದ ದೊಣ್ಣೆಗಳು, ಮೂರು ಮಂಕಿ ಕ್ಯಾಪ್, ರೂ. 1000/- ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ, ಒಂದು ಹಿರೋಹೊಂಡಾ ಎಸ್ಎಸ್ ಸಿಡಿ 100 ಮೋಟಾರ್ ಸೈಕಲ್, 4 ಮೊಬೈಲ್ ಹ್ಯಾಂಡ್ಸೆಟ್ಗಳ ಸಮೇತ ಹಿಡಿದು ವಶಕ್ಕೆ ತೆಗೆದುಕೊಂಡು ಠಾಣಾ.ಮೊ.ಸಂ. 326/11 ಕಲಂ. 399-402 ಭಾ.ದ.ಸಂ. ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಆರೋಪಿಗಳ ಹೆಸರು ವಿಳಾಸ ಕೆಳಕಂಡಂತಿರುತ್ತದೆ.
1] ಕೆ.ಪಿ. ಚಂದ್ರ @ ಪಿ.ಕೆ. @ ದರಸಗುಪ್ಪೆ ಚಂದ್ರ ಬಿನ್ ಪುಟ್ಟೇಗೌಡ, 28ವರ್ಷ, ವಕ್ಕಲಿಗರು, ವ್ಯವಸಾಯ ವಾಸ-ಕಪ್ಪರನಕೊಪ್ಪಲು [ದರಸಗುಪ್ಪೆ] ಗ್ರಾಮ, ಶ್ರೀರಂಗಪಟ್ಟಣ ತಾ, ಮಂಡ್ಯ ಜಿಲ್ಲೆ
2] ಮೋಹನ್ಕುಮಾರ @ ಮೋಹನ @ ಪುರಿಬಟ್ಟಿ ಮೋಹನ ಬಿನ್ ಲೇ. ವೆಂಕಟಪ್ಪ, 27ವರ್ಷ, ಗಾಣಿಗಶೆಟ್ಟರ ಜನಾಂಗ, ನಾರಾಯಣಪ್ಪರ ಪುರಿಬಟ್ಟಿಯಲ್ಲಿ ಕೆಲಸ,ವಾಸ-3ನೇ ಕ್ರಾಸ್, ಸಿಹಿನೀರುಕೊಳ, ಮಂಡ್ಯ
3] ವಿನಯ @ ಗಾಂಧಿ ಬಿನ್ ಕೃಷ್ಣೇಗೌಡ, 22ವರ್ಷ, ವಕ್ಕಲಿಗರು, ವಾಸ-ಕೊಮ್ಮೇರಹಳ್ಳಿ ಗ್ರಾಮ, ಮಂಡ್ಯ ತಾಲ್ಲೋಕು
ನಂತರ ಮೆಲ್ಕಂಡ ಆರೋಪಿಗಳನ್ನು ಅ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ವಶಕ್ಕೆ ಪಡೆದುಕೊಂಡು ನಂತರ ವಿಚಾರಣೆ ಕಾಲದಲ್ಲಿ ಮೇಲ್ಕಂಡ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಅನಧಿಕೃತವಾಗಿ ಪರವಾನಿಗೆ ಇಲ್ಲದ ಒಂದು ರಿವಾಲ್ವಾರ್ ಮತ್ತು 4 ಗುಂಡುಗಳನ್ನು ಮಂಡ್ಯ ತಾಲ್ಲೋಕು ರಾಗಿಮುದ್ದನಹಳ್ಳಿ ಬಳಿ ಇರುವ ತೆಂಗಿನ ತೋಟ ಒಂದರಲ್ಲಿ ಬಚ್ಚಿಟ್ಟಿದ್ದನ್ನು ಅವರುಗಳ ಮುಖಾಂತರ ತನಿಖಾದಿಕಾರಿಗಳು ವಶಪಡಿಸಿಕೊಂಡಿರುತ್ತಾರೆ
ಮೆಲ್ಕಂಡ ಆರೋಪಿಗಳು ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳೊಂದಿಗೆ ಸೇರಿ ತಮ್ಮ ಎದುರಾಳಿಗಳನ್ನು ಕೊಲೆ ಮಾಡಲು ಸಂಚು ಮಾಡಿದ್ದು, ಅದಕ್ಕೆ ಉಪಯೋಗಿಸಲು ಬಚ್ಚಿಟ್ಟಿರುವುದಾಗಿ ವಿಚಾರಣೆ ಕಾಲದಲ್ಲಿ ತಿಳಿದು ಬಂದಿರುತ್ತೆ. ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ನಂತರ ಆರೋಪಿಗಳನ್ನು ಈ ದಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರುಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಮೆಲ್ಕಂಡ ಪ್ರಕರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ.ಕೆ.ಆರ್ ಕಾಂತರಾಜ್, ಮಂಡ್ಯ ಪಶ್ಚಿಮ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶ್ರೀ ಜೆ. ಮಂಜು, ಅಪರಾಧ ವಿಭಾಗದ ಪಿಎಸ್ಐ ಶ್ರೀ ಕೆ. ಪ್ರಭಾಕರ್, ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಿ. ಕೆ. ಪುಟ್ಟಸ್ವಾಮಿ, ನಿಂಗಣ್ಣ, ನಾರಾಯಣ, ಅರ್ಕೇಶ, ಟಿ. ಲಿಂಗರಾಜು, ಮಂಜುನಾಥ್, ತಿಲಕ್ಕುಮಾರ್, ಪರಶುರಾಮ, ಪುಟ್ಟಸ್ವಾಮಿ, ಭರತ್, ಮುದ್ದುಮಲ್ಲಪ್ಪ, ಜೀಪ್ ಚಾಲಕರಾದ ರವಿ, ಶ್ರೀನಿವಾಸ ಹಾಗೂ ಇತರೆ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment