ಪತ್ರಿಕಾ ಪ್ರಕಟಣೆ
ದಿನಾಂಕ 17-12-2011 ರಂದು ಶ್ರೀರಂಗಪಟ್ಟಣ ಠಾಣೆಯ ಅಪರಾಧ ಪತ್ತೆ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಸಿಪಿಸಿ-01 ,ಕೆ.ಎನ್. ಸಿದ್ದರಾಜು, ಸಿಪಿಸಿ - 638 ಪ್ರಕಾಶ್, ಸಿಪಿಸಿ-633 ಕೃಷಶೆಟ್ಟಿ ರವರುಗಳು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ಬಳಿ ಬೆಳಿಗ್ಗೆ 0715 ಗಂಟೆಯಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ಅಸಾಮಿಗಳನ್ನು ಹಿಡಿದು ಪ್ರಶ್ನಿಸಲಾಗಿ ತಮ್ಮ ಹೆಸರು 1] ರಘು ಡಿ ಕೆ ಬಿನ್ ಲೇಟ್ ಕಾಳೇಗೌಡ 20 ವರ್ಷ, ಒಕ್ಕಲಿಗರು ವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕ್. 2] ನಿಂಗೇಗೌಡ @ ನಿಂಗ ಬಿನ್ ತಮ್ಮೇಗೌಡ 24 ವರ್ಷ, ವಕ್ಕಲಿಗರುವ್ಯವಸಾಯ ವಾಸ ಕಂಪೇಗೌಡ ಸರ್ಕಲ್ ದೊಡ್ಡ ಬ್ಯಾಡರಹಳ್ಳಿ ಗ್ರಾಮ ಪಾಂಡವಪುರ ತಾಲ್ಲೂಕು ಎಂತಲೂ ತಿಳಿಸಿದ್ದು, ಅವರ ಬಳಿ ಇದ್ದ ಮೊಟಾರ್ ಸೈಕಲ್ ಮತ್ತು ಪಂಪ್ಸೆಟ್ನ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ ಇದ್ದಾಗ ಅವರುಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸ್ಐ ರವರ ಮುಂದೆ ಹಾಜರು ಪಡಿಸಲಾಗಿ ಪಿಎಸ್ಐ ರವರು ಮೆಲ್ಕಂಡವರುಗಳನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ, ಸದರಿ ಆಸಾಮಿಗಳು ಮತ್ತೊಬ್ಬ ಕಾಳೇನಹಳ್ಳಿ ಕುಮಾರನ ಜೊತೆಯಲ್ಲಿ ಸೇರಿ ಪಾಂಡವಪುರ ತಾಲ್ಲೂಕು, ತಿಮ್ಮನ ಕೊಪ್ಪಲು, ತಿರುಮಾಲಾಪುರ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು, ಗಣಂಗೂರು ಗ್ರಾಮಗಳಲ್ಲಿ ಜಮೀನಿಗೆ ಅಳವಡಿಸಿದ್ದ ಪಂಪ್ಸೆಟ್ ಮೋಟಾರ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಅವರ ಸ್ವಯಿಚ್ಚಾ ಹೇಳಿಕೆ ಮೇರೆಗೆ ಮೇಲ್ಕಂಡಂತೆ ಆರೋಪಿಗಳು ಕಳುವು ಮಾಡಿರುವ ಒಟ್ಟು 5 ಪಂಪ್ಸೆಟ್ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿರುವ ಹಿರೋ ಹೊಂಡಾ ಮೊಟಾರ್ ಸೈಕಲ್ ನಂ. ಕೆಎ 09-ಈಜಿ-6119 ನ್ನು ಅಮಾನತ್ತುಪಡಿಸಿದ್ದು, ಅವುಗಳ ಅಂದಾಜು ಬೆಲೆ 1 ಲಕ್ಷ ರೂಗಳಾಗಿರುತ್ತದೆ. ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.
No comments:
Post a Comment