ಪೊಲೀಸ್ ಸೂಪರಿಂಟೆಂಡೆಂಡ್ ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ
ದಿನಾಂಕಃ 29-03-2012
ಪತ್ರಿಕಾ ಪ್ರಕಟಣೆ.
ಬೆಂಗಳೂರಿನ ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ ಎಂಬುವವರ ಅಪಹರಣವನ್ನು ಮಂಡ್ಯ ಜಿಲ್ಲಾ ಪೊಲೀಸರು ಚಾಕಚಕ್ಯತೆಯಿಂದ ಪತ್ತೆ ಹಚ್ಚಿ ಅವರ ಪ್ರಾಣ ರಕ್ಷಣೆ ಮಾಡಿರುವ ಬಗ್ಗೆ.
ಶ್ರೀ. ಕೆ.ಆರ್ ಶಿವಾನಂದ ಬಿನ್ ರಾಮಪ್ಪ, 44 ವರ್ಷ, ಮೆಟ್ರೋದಲ್ಲಿ ಡೆಪ್ಯೂಟಿ ಚೀಪ್ ಇಂಜಿನಿಯರ್. ಬೆಂಗಳೂರು ರವರು ದಿನಾಂಕಃ 28/03/2012 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ಬೆಂಗಳೂರಿನ ಶಾಂತಿನಗರದ ಮೆಟ್ರೋ ರೈಲ್ ಕಾರ್ಪೊ ರೇಷನ್ ಲಿಮಿಟೆಡ್ ಕಛೇರಿಯ ಕಾರ್ ಪಾರ್ಕಿಂಗ್ ಬಳಿ ಟಾಟಾ ಇಂಡಿಕಾ ಕಾರ್ ಕೆ.ಎ-50-2011 ನ್ನು ಹತ್ತಿದಾಗ ಅದರಲ್ಲಿ ಇಬ್ಬರು ಆರೋಪಿತರು ಕುಳಿತುಕೊಂಡಿದ್ದು ನಂತರ ಮತೋಬ್ಬ ವ್ಯಕ್ತಿ ಕಾರಿಗೆ ಹತ್ತಿಕೊಂಡು, ಚಾಲಕ ಜಯಂತ್ ಎಂಬುವವನೊಂದಿಗೆ ಸೇರಿಕೊಂಡು ಕೆ.ಅರ್. ಶಿವಾನಂದ ರವರನ್ನು ಅಲ್ಲಿಂದ ಅಪಹರಣ ಮಾಡಿ ಹಣ ಸುಲಿಗೆ ಮಾಡುವ ಸಲುವಾಗಿ, ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ಬಿಗಿದು ಹಲ್ಲೆ ಮಾಡಿ, ಬೆಂಗಳೂರಿನಿಂದ ಹೊರಟು ಮೈಸೂರು ರಸ್ತೆಯಲ್ಲಿ ಸಂಚರಿಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣ ಹಾಗೂ ಬ್ಯಾಂಕ್ನ ಎ.ಟಿ.ಎಂ ಕಾರ್ಡ್ ಗಳನ್ನು ಸುಲಿಗೆ ಮಾಡಿ ಪ್ರಾಣ ಬೆದರಿಕೆ ಹಾಕಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ ಅದೇ ಕಾರಿನಲ್ಲಿ ಸಂಚರಿಸುತ್ತಿರುವಾಗ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಂಡವಪುರದ ಪೊಲೀಸರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸದೇ ಮುಂದೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಚೆಕ್ ಪೋಸ್ಟ್ನ ಪೊಲೀಸ್ ಸಿಬ್ಬಂದಿಗಳು ಮುಂದಿನ ಚೆಕ್ಪೋಸ್ಟ್ಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ವಾಹನದ ಬಗ್ಗೆ ಮಾಹಿತಿ ನೀಡಿದ್ದು ಪಾಂಡವಪುರ - ಮೇಲುಕೋಟೆ ಮುಖ್ಯ ರಸ್ತೆಯ ಜಕ್ಕನಹಳ್ಳಿ ಚೆಕ್ ಪೋಸ್ಟ್ ಬಳಿ ಬೆಳಗಿನ ಜಾವ 2-30 ಗಂಟೆಗೆ ಅಲ್ಲಿನ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ವಾಹನವನ್ನು ಪರಿಶ್ರಮ ಹಾಗೂ ಚಾಕಚಕ್ಯತೆಯಿಂದ ತಡೆದು, ಪರಿಶೀಲನೆ ಮಾಡಿ ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ಕುಮಾರ್ ಬಿನ್ ಬಸವರಾಜು, 24ವರ್ಷ, ಕೊಪ್ಪಳ ಈತನನ್ನು ವಶಕ್ಕೆ ತೆಗೆದುಕೊಂಡು ಅಪಹರಣಕ್ಕೊಳಗಾಗಿದ್ದ ಇಂಜಿನಿಯರ್ ಶ್ರೀ. ಕೆ.ಆರ್. ಶಿವಾನಂದ ರವರನ್ನು ರಕ್ಷಣೆ ಮಾಡಿರುತ್ತಾರೆ. ಇನ್ನುಳಿಕೆ ಮೂರು ಜನ ಆರೋಪಿಗಳು ಕಾರಿನಿಂದ ಕತ್ತಲೆಯಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಎರಡು ಬ್ಲೇಡ್ ಕಟರ್ ಗಳು , ವೈರ್ ಹಾಗೂ ಸುಲಿಗೆ ಮಾಡಿದ್ದ ಎ.ಟಿ.ಎಂ. ಕಾರ್ಡ್, ಚೆಕ್ ಗಳನ್ನು ಮೇಲುಕೋಟೆ ಪೊಲೀಸರು ವಶಪಡಿಸಿಕೊಂಡು, ಮೆಲ್ಕಂಡ ಇಂಜಿನಿಯರ್ ಕೆ.ಆರ್. ಶಿವಾನಂದ್ ರವರು ನೀಡಿದ ಪಿರ್ಯಾದಿ ನ ಮೇರೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡು, ಅವರಿಗೆ ಕೂಡಲೇ ಚಿಕಿತ್ಸೆಯನ್ನು ಕೊಡಿಸಲಾಗಿರುತ್ತದೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ವಿಷಯ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅದಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಈ ಅಪಹರಣ ಪ್ರಕರಣವನ್ನು ಕ್ಷಣಾರ್ದದಲ್ಲಿ ಶ್ರಮವಹಿಸಿ ಪತ್ತೆ ಹಚ್ಚಿದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಸಿರುತ್ತಾರೆ.
No comments:
Post a Comment