ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯಜಿಲ್ಲೆ. ಮಂಡ್ಯ
ದಿನಾಂಕಃ 04-04-2012
ಪತ್ರಿಕಾ ಪ್ರಕಟಣೆ.
ನಾಗಮಂಗಲ ಟೌನಿನಲ್ಲಿರುವ ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್. ಮದ್ಯದ ಅಂಗಡಿಯಲ್ಲಿ ಕಳುವಾಗಿದ್ದ ಮದ್ಯದ ಬಾಟಲಿಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ.
ದಿನಾಂಕ:01-04-2012 ರಂದು ಮದ್ಯರಾತ್ರಿ ನಾಗಮಂಗಲ ಟೌನಿನ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್.ನ ಮದ್ಯಮಾರಾಟದ ಅಂಗಡಿಗೆ ಹಾಕಿದ್ದ ಷೆಟರ್ ಬಾಗಿಲನ್ನು ಮುರಿದು ತೆಗೆದು ಸದರಿ ಮಳಿಗೆಯಲ್ಲಿದ್ದ 750 ಎಂ.ಎಲ್ನ 3 ಮದ್ಯದ ಬಾಟೆಲ್ಗಳು ಹಾಗೂ 94,908 .ರೂ. ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಎಂಎಸ್ಐಎಲ್ ಜಿಲ್ಲಾ ಮೆಲ್ವಿಚಾರಕರಾದ ಹೆಚ್.ಎಂ.ಶಂಕರಯ್ಯ ರವರು ನೀಡಿದ್ದ ದೊರಿನ ಮೇರೆಗೆ ನಾಗಮಂಗಲ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸ್ಥಳೀಯ ಪೊಲೀಸ್ ಅದಿಕಾರಿಗಳು ತನಿಖೆ ಕೈಗೊಂಡಿದ್ದರು.
ಈ ವಿಚಾರದಲ್ಲಿ ಪ್ರಕರಣದ ತನಿಖಾದಿಕಾರಿಗಳಾದ ಶ್ರೀ. ಟಿ.ಡಿ. ರಾಜು, ಸಿಪಿಐ, ನಾಗಮಂಗಲ ವೃತ್ತ, ಶ್ರೀ. ವೆಂಕಟೇಗೌಡ, ಪಿಎಸ್ಐ, ನಾಗಮಂಗಲ ಟೌನ್ ಠಾಣೆ ಹಾಗೂ ಸಿಬ್ಬಂದಿಯವರು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಸದರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 1] ಮಹೇಂದ್ರ ಬಿನ್ ಮಾಯಣ್ಣಗೌಡ, 32 ವರ್ಷ, ಬಸ್ತಿ ಗ್ರಾಮ, ಬೂಕರನಕೆರೆ ಹೋಬಳಿ ಕೆ.ಆರ್. ಪೇಟೆ ತಾಲ್ಲೊಕು, 2] ಮಹೇಶ ಬಿನ್ ಬಸಪ್ಪ 25ವರ್ಷ, ಚೋಕನಹಳ್ಳಿ, ವರುಣಾ ಹೋಬಳಿ, ಮೈಸೂರು ಜಿಲ್ಲೆ. 3] ರಾಮಲಿಂಗೇಗೌಡ ಬಿನ್ ಮರಿಗೌಡ, 32 ವರ್ಷ, ಬೇಬಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೊಕು, ರವರುಗಳನ್ನು ದಿನಾಂಕಃ 03-04-2012 ರಂದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ, ತಾವು ಮೂರು ಜನರು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಎಲ್ಲರೂ ಮಾತನಾಡಿಕೊಂಡು ದಿನಾಂಕ 01-04-2012 ರ ರಾತ್ರಿ ಜಾಕ್ನಿಂದ ಅಂಗಡಿಯ ರೋಲಿಂಗ್ ಷೆಟರ್ ಅನ್ನು ಎತ್ತಿ ಹಣ ಮತ್ತು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪನ್ನು ಒಪ್ಪಿಸಿಕೊಂಡಿರುತ್ತಾರೆ. ಅವರ ಹೇಳಿಕೆ ಅನ್ವಯ ಆರೋಪಿತರಿಂದ ಕಳುವು ಮಾಡಿದ್ದ ಹಣದ ಪೈಕಿ ರೂ. 80,900 ಹಣ ಹಾಗೂ ಒಂದು ಕಾರಿನ ಜಾಕ್ ಅನ್ನು ವಶಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತದೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ವೃತ್ತನಿರೀಕ್ಷಕರಾದ ಶ್ರೀ. ಟಿ.ಡಿ.ರಾಜು, ನಾಗಮಂಗಲ ಪುರ ಠಾಣೆಯ ಪಿ.ಎಸ್.ಐ ಶ್ರೀ. ವೆಂಕಟೇಗೌಡ ಹಾಗೂ ಸಿಬ್ಬಂದಿಯವರು ರವರನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ.
No comments:
Post a Comment