ಪೊಲೀಸ್ ಸೂಪರಿಂಟೆಂಡ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 29-04-2012
ಪತ್ರಿಕಾ ಪ್ರಕಟಣೆ.
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ, ಮತ್ತು ರವಿ ಬಿನ್ ವೆಂಕಟೇಗೌಡ, 28ವರ್ಷ ಎಂಬುವವರನ್ನು ಬಂದಿಸಿ 9 ಲಕ್ಷ ಬೆಲೆ ಬಾಳುವ ಮಾಲುಗಳ ವಶ.
ಕಳವು ಮಾಡಿದ ಮೊಟಾರ್ ಬೈಕನ್ನು ಮಾರಾಟಮಾಡಲು ದಿನಾಂಕಃ 26-04-2012ರಂದು ಸಂಜೆ 05.00 ಗಂಟೆ ಸಮಯದಲ್ಲಿ, ನಾಗಮಂಗಲ ಟೌನ್ನಲ್ಲಿ ಪ್ರಯತ್ನಿಸುತ್ತಿದ್ದಾಗ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟೇಗೌಡ ರವರು ಕೆ.ಆರ್. ಪೇಟೆ ತಾಲ್ಲೂಕು, ಸಿಂಗಾಪುರದ ನಿವಾಸಿಗಳಾದ 1] ಮಂಜ @ ಮಂಜೇಗೌಡ ಬಿನ್ ಸಿದ್ದೇಗೌಡ, 23ವರ್ಷ ಮತ್ತು 2] ರವಿ ಬಿನ್ ವೆಂಕಟೇಗೌಡ, 28ವರ್ಷ ಎಂಬುವವರನ್ನು ಮೊಟಾರ್ ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು ಕೂಲಂಕುಶವಾಗಿ ವಿಚಾರಣೆಮಾಡಿದಾಗ 2 ವರ್ಷದ ಹಿಂದೆ ಬೋಗಾದಿಯಲ್ಲಿ ಬಟ್ಟೆ ಒಗೆದುಕೊಂಡು ಬರುತ್ತಿದ್ದ ಹೆಂಗಸಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, 1 ತಿಂಗಳ ಹಿಂದ ಚೀಣ್ಯಾ ಗ್ರಾಮದ ಬಳಿ ನೀರು ಕುಡಿಯಲು ಕೇಳಿ ಬಟ್ಟೆ ತೊಳೆಯುತ್ತಿದ್ದ ಹೆಂಗಸಿನ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ, ಕಳೆದ 15 ದಿವಸಗಳ ಹಿಂದೆ ಸಂಕನಹಳ್ಳಿ ಗ್ರಾಮದ ಬಳಿ ದನಕರುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಹೆಂಗಸಿನ ಬಳಿ ಸರ ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದಾಗಿ, 95 ಗ್ರಾಂ ತೂಕದ 2 ಚಿನ್ನದಮಾಂಗಲ್ಯ ಸರಗಳನ್ನು ಕೆ.ಆರ್.ಪೇಟೆಯ ಶ್ರೀ ದುಗರ್ಾ ಬ್ಯಾಂಕರ್ಸ್ನ ಮಾಲೀಕರಾದ ಪುಕ್ರಾಜ್ ಎಂಬಾತನಿಗೆ ಮಾರಾಟಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅದೊ ಅಲ್ಲದೇ 1] ರಂಗಸ್ವಾಮಿ @ ಸ್ವಾಮಿ, ಕುದೂರು ಗ್ರಾಮ ಮತ್ತು 2] ಸಂತೋಷ @ ಪರಾಕ್ ಬಿಲ್ಲೇನಹಳ್ಳಿ ಗ್ರಾಮ, ಇವರುಗಳೊಂದಿಗೆ ಸೇರಿಕೊಂಡು ನಾಗಮಂಗಲ, ಬೆಳ್ಳೂರು, ಪಾಂಡವಪುರ ಮತ್ತು ಕೆ,ಆರ್.ಪೇಟೆ ಕಡೆಗಳಲ್ಲಿಯೂ ಸಹ ಮೊಟಾರ್ ಬೈಕ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ 11 ಮೊಟಾರ್ ಬೈಕ್ಗಳನ್ನು ಸಹಾ ವಶಪಡಿಸಿಕೊಂಡಿದ್ದು ಮೇಲ್ಕಂಡ ಚಿನ್ನಾಭರಣ ಮತ್ತು ದ್ವಿಚಕ್ರಗಳ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ನಾಗಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿರುತ್ತಾರೆ.
ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಗವಹಿಸಿದ್ದ ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ವೆಂಕಟೇಗೌಡ, ಸಿಬ್ಬಂದಿಗಳಾದ ಶ್ರೀ ಪ್ರಶಾಂತ್, ಶ್ರೀ ಅನಿಲ್ ಕುಮಾರ್, ಶ್ರೀ ಹಫೀಸ್ ಪಾಷ, ಹಾಗೂ ಚಂದ್ರಶೇಖರ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳನ್ನು ಪ್ರಶಂಸಿರುತ್ತಾರೆ.
No comments:
Post a Comment