Moving text

Mandya District Police

DAILY CRIME REPORT DATED : 21-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು,  1 ಕಳವು ಪ್ರಕರಣ,  1 ವಂಚನೆ ಕಳವು ಪ್ರಕರಣ,  4 ಯು.ಡಿ.ಆರ್. ಪ್ರಕರಣಗಳು ಹಾಗು 7 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 21-01-2013 ರಂದು ಪಿರ್ಯಾದಿ ಸಿದ್ದರಾಮು ಬಿನ್. ಲೇಟ್. ನಿಂಗೇಗೌಡ, ಹೊಳಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿರವರ ಮಗ ಹೆಚ್.ಎಸ್. ಹೇಮಂತ್, 17 ವರ್ಷರವರು ತಮ್ಮ ಮನೆಯಿಂದ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 20/2013 ಕಲಂ. ಹುಡುಗಿ  ಕಾಣೆಯಾಗಿದ್ದಾಳೆ.

ದಿನಾಂಕ: 21-01-2013 ರಂದು ಪಿರ್ಯಾದಿ ಜಯರಾಮೇಗೌಡ ಬಿನ್. ಲೇ|| ಕರಿಗೌಡ, ಗಾಂದಿನಗರರವರು ನೀಡಿದ ದೂರು ಏನೆಂದರೆ ಅವರ ಮಗಳು ಸೌಮ್ಯ ಬಿನ್ ಜಯರಾಮೇಗೌಡ, ಗಾಂದಿನಗರ ಗ್ರಾಮ ರವರು ದಿನಾಂಕ: 16-01-2013 ರಂದು ಯಾರು ಇಲ್ಲದ ಸಮಯದಲ್ಲಿ ಮನೆಯನ್ನು ಬಿಟ್ಟು ಹೋಗಿರುತ್ತಾಳೆ ಇದುವರೆವಿಗೂ ಎಲ್ಲಿಯೂ ಹುಡುಕಿದರೂ ಸಿಕ್ಕಿರುವುದಿಲ್ಲ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ಕಿರುಕುಳ/ವರದಕ್ಷಿಣೆ ಪ್ರಕರಣಗಳು :

 1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 498(ಎ)-323-504 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಪದ್ಮ ಕೋಂ.ಸತೀಶ, ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಆರೋಪಿ ಸತೀಶ ಬಿನ್. ಸುಭಾಷ್ ಕೆ.ಹಾಗಲಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಾಯಿಗೆ ಬಂದಂತೆ ಬೈಯ್ದು ಹೊಡೆಯುವುದು ಮಾಡುತ್ತಿದ್ದು, ಪಿರ್ಯಾದಿಯವರ ಮೇಲೆ ಅನುಮಾನ ಪಡುವುದು ಹಾಗೂ ಯಾರ್ಯಾರ ಜೊತೆ ಹೋಗಿದ್ದೆ ಎಂದು ಮನೆಗೆ ಸೇರಿಸಿದೆ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ. & ಕಲಂ3 &4 ಡಿ.ಪಿ.ಕಾಯಿದೆ.

ದಿನಾಂಕ: 21-01-2013 ರಂದು ಪಿರ್ಯಾದಿ ಭವ್ಯಶ್ರೀ ಬಿ.ಎಸ್ ಕೋಂ ಸಿದ್ದರಾಜು, 22 ವರ್ಷ, ಒಕ್ಕಲಿಗರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಗಂಡ ಸಿದ್ದರಾಜು, ನಾದಿನಿ ಪ್ರಮಿಳಾ, ಮಾವ ದೇವೇಗೌಡ, ಅತ್ತೆ ಸಣ್ಣಮ್ಮ, ಎಲ್ಲರೂ ಬೆಳ್ಳಾಳೆ ಗ್ರಾಮರವರುಗಳು ಸೇರಿಕೊಂಡು ಪಿರ್ಯಾದಿಗೆ ಹಣವನ್ನು ತರುವಂತೆ ಒತ್ತಾಯಿಸಿ ಮನೆಯಿಂದ ಆಚೆಗೆ ತಳ್ಳಿ ಸೀಮೆಎಣ್ಣೆ ಸುರಿದು ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಕಳವು ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 379 ಐ.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗೇಶ್ ಬಾಬು, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಮಹಾಸಭಾ (ರಿ) ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಖಿತ ಭಾರತ ವೀರಶೈವ ಸಮಾಜದ ಕಛೇರಿಯ ಕಟ್ಟಡವನ್ನು ನಿರ್ಮಿಸಲಾಗಿದೆ ಹಾಗೂ ಈ ಕಟ್ಟಡಕ್ಕೆ ರೂ 10,000/- ಮೌಲ್ಯದ 2 ಬಾಗಿಲುಗಳನ್ನು ಅಳವಡಿಸಿರುವುದು ಸರಿಯಷ್ಟೆ. ನಮ್ಮ ಸಮಾಜದ ಕಟ್ಟಡದ ಕಛೇರಿಯ ಕಡೆ ನೋಡಲಾಗಿ ಬಾಗಿಲುಗಳು ಇಲ್ಲದಿರುವುದು ಅವರ ಗಮನಕ್ಕೆ ಬಂದು ಸದರಿ ವಿಷಯವನ್ನು ನಮ್ಮ ಸಮಾಜದ ಮುಖಂಡರುಗಳಿಗೆ ಖುದ್ದಾಗಿ ಬಂದು ತಿಳಿಸಿರುತ್ತಾರೆ. ನಮ್ಮ ಸಮಾಜದ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಈ ಕೃತ್ಯವನ್ನು ನಂದೀಶ ಬಿನ್ ಡಿ.ಎಸ್.ಬಸವರಾಜಸ್ವಾಮಿ ಮತ್ತು ಇತರರು ಸೇರಿ ಕಳ್ಳತನ ಮಾಡಿರುವುದು ದೃಢಪಟ್ಟಿರುತ್ತದೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಕಳವು ಪ್ರಕರಣ :

ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 406 ಐ.ಪಿ.ಸಿ.

       ದಿನಾಂಕ: 21-01-2013 ರಂದು ಪಿರ್ಯಾದಿ ರವಿ ಬಿನ್. ಮರಿಯಾಚಾರ್, ಕೆ.ಎಂ.ದೊಡ್ಡಿ ಟೌನ್ ರವರು ನೀಡಿದ ದೂರು ಏನೆಂದರೆ ಆರೋಪಿ 1.ಸೋಮ ಶೇಖರ್ @ ಸ್ವಾಮಿ ಮಡೆನಹಳ್ಳಿ ಗ್ರಾಮ ರವರು  ಪಿರ್ಯಾದಿಯವರ ಕಾರಿನ ಚಾಲಕನಾಗಿದ್ದು ಪಿರ್ಯಾದಿಯವರು ಚಿನ್ನದ ಒಡವೆಗಳನ್ನು ತರಲು ಆರೋಪಿಯನ್ನು ಕರೆದುಕೊಂಡು ಹೋಗಿದ್ದು ವಾಪಸ್ಸು ಕೆ.ಎಂ.ದೊಡ್ಡಿಗೆ ಬಂಧು ಪಿರ್ಯಾದಿಯವರು ಹಣ್ಣನ್ನು ತರಲು ಇಳಿದು ಹೋಗಿದ್ದಾಗ ಆರೋಪಿಯು ಪಿರ್ಯಾದಿಯವರು ಕಾರಿನಲ್ಲಿ ಇಟ್ಟಿ ಹೋಗಿದ್ದ ಒಂದು ಮಾವಿನ ಕಾಯಿ ಡಿಸೈನ್ ಇರುವ 73.5 ಗ್ರಾಂ ನ ಚಿನ್ನದ ಲಾಂಗ್ ಸರ. ಹಾಗು ಒಂದು ಕೆಂಪು ಬಿಳಿ ಹರಳಿನ 5.5 ಗ್ರಾಂ. ನ ಲೇಡಿಸ್ ಉಂಗುರ. ಚಿನ್ನದ ಒಡವೆಗಳನ್ನು ಎತ್ತಿಕೊಂಡಿರುತ್ತಾನೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕಾಳಯ್ಯ ಬಿನ್. ಲೇ|| ಮೋಟಯ್ಯ, ನೆಲ್ಲೂರುಪಾಲ, ಹನಗೋಡು, ಹೋ|| ಹುಣಸೂರು, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗ ಸೋಮಶೇಖರ @ ಸೋಮ ಬಿನ್. ಕಾಳಯ್ಯ, 24 ವರ್ಷ, ನೆಲ್ಲೂರುಪಾಲ, || ಮೈಸೂರು ಜಿಲ್ಲೆ ರವರು ಹಾಗು ರಮ್ಯ ಇಬ್ಬರು ಪ್ರೀತಿಸುತ್ತಿದ್ದು ನನ್ನ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಡಾ|| ರವಿಶ್ರೀ, ವೈದ್ಯರು, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವಮ್ಮ ಕೋಂ ಸಿದ್ದೇಗೌಡ, ತೆಂಕಹಳ್ಳಿ ಗ್ರಾಮ, ಮಳವಳ್ಳಿ ತಾ|| ಎಂಬುವವರಿಗೆ ತೆಂಕಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ 296/12 ಕಲಂ 174 ಸಿಆರ್ಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಈ ದಿನ ಸದರಿ ಠಾಣೆಯವರು ಬೆಳಕವಾಡಿ ಠಾಣೆಗೆ ವಗರ್ಾವಣೆ ನೀಡಿರುವ ಮೇರೆಗೆ ಪ್ರತಮ ವರ್ತಮಾನ ವರದಿ ದಾಖಲಿಸಲಾಗಿದೆ.  


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ಕುಮಾರ ಬಿನ್. ಚನ್ನಂಕೇಗೌಡ, ಟಿ. ಎಂ. ಹೊಸೂರು ಗ್ರಾಮ,  ಶ್ರೀರಂಗಪಟ್ಟಣ ತಾ. ರವರು ನೀಡಿದ ಪರ್ಯಾದು ಏನೆಂದರೆ ಮಹೇಶ್ ಬಿನ್. ಚೆನ್ನೇಗೌಡ  49 ವರ್ಷ, ಟಿ ಎಂ ಹೊಸೂರು ಗ್ರಾಮ, ಶ್ರೀರಂಗಪಟ್ಟಣ ತಾ. ರವರಿಗೆ ಆಗಾಗ ಬೆನ್ನು ನೋವು ಬರುತ್ತಿದ್ದು, ಬೆನ್ನು ನೋವು ಜಾಸ್ತಿಯಾಗಿ ನೋವಿನ ಭಾದೆಯನ್ನು ತಾಳಲಾರದೆ  ಮನೆಯಲ್ಲಿ ಬೆಳಿಗಳಿಗೆ  ಸಿಂಪಡಿಸಲು ಇಟ್ಟಿದ್ದ ಯಾವುದೋ ವಿಷವನ್ನು ಔಷದಿ ಎಂದು ಭಾವಿಸಿ ಕುಡಿದು ಒದ್ದಾಡುತ್ತಿದ್ದು, ಕೂಡಲೇ ಮೈಸೂರಿನ ಕೆ..ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ  ಫಲಕಾರಿಯಾಗದೆ  ಮೃತಪಟ್ಟಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 21-01-2013 ರಂದು ಪಿರ್ಯಾದಿ ನಾಗರಾಜು ಬಿನ್. ಸಿದ್ದೇಗೌಡ, ತೊರೆಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಚಿಕ್ಕಪ್ಪನವರ ಮಗ ಮಧು @ ಸಿದ್ದೇಗೌಡ ಬಿನ್ ಚಿಕ್ಕೋನು, 25 ವರ್ಷ, ತೊರೆಶೆಟ್ಟಹಳ್ಳಿ ಗ್ರಾಮ ಎಂಬುವವನಿಗೆ ಅಗಾಗ್ಗೆ ಹೊಟ್ಟೆನೋವು ಬರುತ್ತಿದ್ದು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದು ಎಂದಿನಂತೆ ಸಂಜೆ ಸಮಯದಲ್ಲಿ ಔಷದಿಯನ್ನು ಸೇವಿಸುವಾಗ ಹೊಟ್ಟೆನೋವಿನ ಔಷಧಿ ಎಂದು ತಿಳಿದು ಹಿಪ್ಪನೇರಳೆ ಕಡ್ಡಿಗೆ ಸಿಂಪಡನೆ ಮಾಡಲು ತಂದಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾನೆ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment