Moving text

Mandya District Police

DAILY CRIME REPORT DATED : 24-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು,  1 ವಂಚನೆ/ಕಳವು ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    


ವಾಹನ ಕಳವು :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ವೈ ನರಸಿಂಹಯ್ಯ ಬಿನ್. ಲೇಟ್. ಯರಪ್ಪ, ಎಲ್.ಐ.ಜಿ. 21 ಕೆ.ಹೆಚ್.ಬಿ ಕಾಲೋನಿ, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಕ್ಸ್-3142ರ ಟಿವಿಎಸ್ ಎಕ್ಸೆಲ್ ಹೆವಿ ಡ್ಯೂಟಿ ಮೊಪೆಡ್ನ್ನು  ಯಾರೋ ಕಳ್ಳರು ಕಳವು ಮಾಡಿರುತ್ತಾರೆ, ಕಳುವಾಗಿರುವ ನನ್ನ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 379-462-468-471-417-419-420-465-120(ಬಿ)-404-500 ಐ.ಪಿ.ಸಿ.

ದಿನಾಂಕ: 24-01-2013 ರಂದು ಪಿರ್ಯಾದಿ ಬಿ.ಸಿ.ಮಾದಪ್ಪ ಬಿನ್. ಲೇಟ್. ಚಿಕ್ಕಚನ್ನಯ್ಯ, ಒಕ್ಕಲಿಗರು, ಮಲ್ಲಯ್ಯನದೊಡ್ಡಿ ಗ್ರಾಮ, ಮಂಡ್ಯ  ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯ ಮಗ ಆರೋಪಿಯ ಬಳಿ ಸಾಲ ಪಡೆಯಲು ಪಿರ್ಯಾದಿಯವರ ಸಿಂಡಿಕೇಟ್ ಬ್ಯಾಂಕಿಗೆ ಸೇರಿದ 498358 ನಂಬರಿನ ಚೆಕ್ಕನ್ನು ಆರೋಪಿಗೆ ಕೊಟ್ಟಿದ್ದು ಆದರೆ ಆರೋಪಿಯು ಚೆಕ್ ಗೆ ಸಾಲವನ್ನು ನೀಡದೆ ಇದು ಫೋರ್ಜರಿ ಸಹಿವುಳ್ಳ ಚೆಕ್ಕೆಂದು ನಮ್ಮ ಮೇಲೆ ಗಲಾಟೆ ಮಾಡಿ ಚೆಕ್ಕನ್ನು ದುರುಪಯೋಗಪಡಿಸಿಕೊಂಡಿದ್ದು, ಪಿರ್ಯಾದಿಗೆ ಸೇರಿದ್ದ ಖಾಲಿ ಚೆಕ್ಕನ್ನು ತನ್ನದಲ್ಲವೆಂದು ಗೊತ್ತಿದ್ದರೂ ಸಹ ತನ್ನ ಬಳಿ ಇಟ್ಟುಕೊಂಡು ಪಿರ್ಯಾದಿಯವರಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಮಂಜುನಾಥ ಬಿನ್. ಭಿಮಪ್ಪ ತಳವಾರ್, ನೀಲನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಸಂತೋಷ 13 ವರ್ಷ, ಶಾಲೆ ಬಿಟ್ಟು ನಂತರ ವಾಪಸ್ಸು ಬಂದಿರುವುದಿಲ್ಲಾ  ಪತ್ತೆ  ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 24-01-2013 ರಂದು ಪಿರ್ಯಾದಿ ಪಿ.ಕೃಷ್ಣಕುಮಾರ್. ಬಿನ್. ಎಸ್.ಪುಟ್ಟಸ್ವಾಮಿ, ಜೀವನ ಜ್ಯೋತಿ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಡ್ಯದ ಜೀವನ ಜ್ಯೋತಿ ವಿದ್ಯಾರ್ಥಿ  ನಿಲಯದಲ್ಲಿದ್ದ ವಿದ್ಯಾರ್ಥಿ ಎಸ್.ಕೃಷ್ಣ ಬಿನ್ ಶಿವಣ್ಣ, 15 ವರ್ಷ, ರವರು, ಎಲ್ಲರಂತೆ ಮಲಗಿಕೊಂಡಿದ್ದು ದಿನಾಂಕ: 24-01-2013 ರಂದು ಬೆಳ್ಳಿಗೆ ಹಾಜರಾತಿ ವೇಳಿಯಲ್ಲಿ ಆತನು ಕಾಣೆಯಾಗಿರುತ್ತಾನೆ ಆದ್ದರಿಂದ ಕಾಣೆಯಾಗಿರುವ ಹುಡುಗನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮದ್ದೂರು ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 24-01-2013 ರಂದು ಪಿರ್ಯಾದಿ ಕಾಳಶೆಟ್ಟಿ ಬಿನ್. ಕರಿಶೆಟ್ಟಿ, ಉಪ್ಪಾರದೊಡ್ಡಿ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕಮಲಮ್ಮಳು ತಮ್ಮ ಮನೆಯಿಂದ ಕೆ.ಎಂ.ದೊಡ್ಡಿ ಕಡೆಗೆ ಹೋದವಳು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂಬುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. ಯುಡಿಆರ್ ನಂ 01/13

ದಿನಾಂಕ: 24-01-2013 ರಂದು ಪಿರ್ಯಾದಿ ಕೃಷ್ಣ ಬಿನ್. ಲೇಟ್. ಕೆಂಡೇಗೌಡ, 40 ವರ್ಷ, ಹೊಸಕೆರೆ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಸ್ವಾಮಿ ಬಿನ್ ಕುಳ್ಳೇಗೌಡ, 46 ವರ್ಷ, ಹೊಸಕೆರೆ ಗ್ರಾಮ ಎಂಬುವವರು ಸಂಕ್ರಾಂತಿ ಹಬ್ಬದಲ್ಲಿ ದನ ಕಿಚಾಯಿಸುವಾಗ ದನಗಳ ಹಗ್ಗ ಮೃತನ ಕಾಲಿಗೆ ಸಿಕ್ಕಿಹಾಕಿಕೊಂಡು ಬೆಂಕಿ ತಗುಲಿ ಸುಟ್ಟಗಾಯಗಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 498(ಎ) 494, 506, ಕೂಡ 34 ಐ.ಪಿ.ಸಿ.

      ದಿನಾಂಕ: 24-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಲಿಂಗರಾಜು, ಸುಣ್ಣದದೊಡ್ಡಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಗೆ ಮಕ್ಕಳಾಗದೆ ಇರುವುದರಿಂದ  ಆರೋಪಿಗಳಾದ 1] ಲಿಂಗರಾಜು, 2] ಮಾಲಮ್ಮ  3] ರಾಜು, ಎಲ್ಲರೂ ಸುಣ್ಣದದೊಡ್ಡಿ ಗ್ರಾಮ ರವರುಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದು,  ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿದರೂ ಪ್ರಯೋಜವಾಗದೆ ಈಗ್ಗೆ  ಒಂದು ವರ್ಷಗಳ ಹಿಂದೆ ಪಿರ್ಯಾದಿ ತನ್ನ ತಂದೆ-ತಾಯಿ ಮನೆಯಲ್ಲಿ ವಾಸವಿದ್ದು  ಈ ಸಮಯದಲ್ಲಿ  ಪಿಯರ್ಾದಿ ಗಂಡ ಮತ್ತೊಂದು ಮದುವೆಯಾಗಿದ್ದು  ಇದನ್ನು ಕೇಳಲು ಹೋದ ಪಿರ್ಯಾದಿಗೆ   ಈಕೆಯ ಗಂಡ, ಅತ್ತೆ, ಮತ್ತು ಪಿಯರ್ಾದಿ ಸ್ನೇಹಿತ ಪೋನಿನಲ್ಲಿ ಕೊಲೆ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 498(ಎ), 504, 427, 307,114 ಕೂಡ 34 ಐ.ಪಿ.ಸಿ.

        ದಿನಾಂಕ: 24-01-2013 ರಂದು ಪಿರ್ಯಾದಿ ವಿಜಯಲಕ್ಷ್ಮಿ ಕೋಂ.ಕರಿಯಪ್ಪ, 35 ವರ್ಷ, ವಕ್ಕಲಿಗರು, ಮನೆಕೆಲಸ, ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1) ಕರಿಯಪ್ಪ. 2) ತರಕಾರಿ ಶಿವಣ್ಣ. 3) ಚೇತನ ಎಲ್ಲರೂ ಮಳವಳ್ಳಿ ಟೌನ್ ರವರುಗಳು ಮನೆಯ ಬಾಗಿಲಿಗೆ ಕಲ್ಲನ್ನು ಎತ್ತಿ ಹಾಕಿ ಜಖಂಗೊಳಿಸಿ ಮನೆಯ ಟಿ.ವಿ ಇನ್ನಿತರ ಬೆಲೆ ಬಾಳುವ ಸಾಮಾನು ಗಳನ್ನು ಜಖಂಗೊಳಿಸಿ ನನಗೆ ನಿಮ್ಮ ತಂದೆ ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿ, ಒಂದು ಮಚ್ಚನ್ನು ತೆಗೆದು ಕೊಂಡು ನಿನ್ನನ್ನು ಇದೆ ಮಚ್ಚಿನಿಂದ ಕೊಲೆ ಮಾಡುತ್ತೇನೆಂದು  ಓಡಾಡಿಸಿ ಕೊಂಡು ಅಟ್ಟಾಡಿಸಿಕೊಂಡು ಮಚ್ಚ ನ್ನು ಬೀಸಿದಾಗ ಅದೃಷ್ಟವಶಾತ್ ನಾನು ತಪ್ಪಿಸಿಕೊಂಡೆನು. ಮಚ್ಚನ್ನು ಹಿಡಿದುಕೊಂಡು ಮತ್ತೆ ನನ್ನನ್ನು ಎಲ್ಲ ಕಡೆಯೂ ಮನೆಯ ಮುಂಭಾಗ ಓಡಾಡಿಸಿ ನಿನ್ನನ್ನು ಈ ದಿನ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೇಳಿದ್ದು, ಆಸ್ತಿಯ ವಿಚಾರದಲ್ಲಿ ಇದಕ್ಕೆಲ್ಲ  ಅವರ ಅಣ್ಣ ಮತ್ತು ಅವರ ತಂಗಿಯ ಮಗ ಚೇತನ ರವರ ಕುಮ್ಮಕ್ಕು ಇರುತ್ತದೆ ಎಂದು ನೀಡಿದ ದೂರಿನ ಮೇರೆಗೆ.

No comments:

Post a Comment