Moving text

Mandya District Police

DAILY CRIME REPORT DATED : 26-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 26-01-2013 ರಂದು ಒಟ್ಟು 08 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  2 ಕಳ್ಳತನ ಪ್ರಕರಣಗಳು, 1 ವಾಹನ ಕಳವು ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ರಸ್ತೆ ಅಪಘಾತ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 279, 337, 304(ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ಬಿ.ಟಿ.ರಾಜಣ್ಣ ಬಿನ್ ತಮ್ಮೇಗೌಡ, ಬಾಣಸಮುದ್ರ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮೋಟಾರ್ ಸೈಕಲ್ ಸವಾರ ಮಹೇಶ್ ಕುಮಾರ್, ಡಿ,ಹಲಸಹಳ್ಳಿ ಗ್ರಾಮ ರವರು ತಮ್ಮ ಮೋಟಾರ್ ಸೈಕಲ್ ನಂ. ಕೆಎ-11, ಯು-1847 ಹೊಂಡಾ ಸೈನ್ ನ್ನ ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ನಂಜುಂಡೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಕೆಳಗೆ ಬಿದ್ದಾಗ ಬಲ ಕಪಾಲಕ್ಕೆ, ಬಲ ಕಿಬ್ಬರಿಗೆ ಮತ್ತು ಬಲ ಮಂಡಿಗೆ ಏಟು ಬಿದ್ದು ಮೂಗು, ಬಾಯಿ ಮತ್ತು ಬಲ ಕಪಾಲ ಹೊಡೆದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 279, 304 (ಎ) ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೀರೇಶ್ ಬಿನ್. ಮಹದೇವಪ್ಪ, 27ವರ್ಷ,  ಕಾರು ಚಾಲಕ, ಬೆಂಡರವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜುಬಿನ್ ಗುರುಮಲ್ಲಪ್ಪ, 35ವರ್ಷ, ಕೆ.ಎ.05-ಹೆಚ್ಆರ್-1047ಮೋಟಾರ್ ಬೈಕ್ ಸವಾರ, ಬೆಂಡರವಾಡಿ ಗ್ರಾಮ, ರಸ್ತೆಯಲ್ಲಿ ಚಲಿಸುತ್ತಿದ್ದಾಗ ಹಳ್ಳವನ್ನು ತಪ್ಪಿಸುವ ಸಲುವಾಗಿ ಬೈಕ್ನ್ನು ಪಕ್ಕಕ್ಕೆ ಎಳೆದಾಗ ಬೈಕ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದು ಬೈಕ್ನ್ನು ಓಡಿಸುತ್ತಿದ್ದ ರಾಜುವಿನ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ದುಬಾರಿ ಆದ್ದರಿಂದ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸೋಣವೆಂದು ರಾಜುವನ್ನು ಸದರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಜು  ಮೃತಪಟ್ಟಿರುತ್ತಾನೆಂದು ಮೃತನ ಅಣ್ಣ ಶಿವಮಲ್ಲಪ್ಪ ಬಿನ್ ಗುರುಮಲ್ಲಪ್ಪ ರವರು ಈ ದಿನ ಗಂಟೆ ಸಮಯದಲ್ಲಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣದಲ್ಲಿ ಕಲಂ:304(ಎ) ಐ.ಪಿ.ಸಿಯನ್ನು ಅಳವಡಿಸಿಕೊಂಡು ತನಿಖೆ ಕೈಗೊಂಡಿರುವ ಬಗ್ಗೆ ತುತರ್ುವರದಿ.


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457,380 ಐ.ಪಿ.ಸಿ.

       ದಿನಾಂಕ: 26-01-2013 ರಂದು ಪಿರ್ಯಾದಿ ಜಯಮಾಲ ಬಿನ್. ರಾಚಯ್ಯ, 36ವರ್ಷ,ಅಂಗನವಾಡಿ ಕಾರ್ಯಕತರ್ೆ, ಗೆಂಡೆಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನವಾಡಿಯ ಬಾಗಿಲ ಬೀಗ ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರ. ಇದರ ಬೆಲೆ 2800/- ರೂ. ಆಗುತ್ತದೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457,454,380 ಐ.ಪಿ.ಸಿ.

      ದಿನಾಂಕ: 26-01-2013 ರಂದು ಪಿರ್ಯಾದಿ ಕು. ಸುಮತಿ. ಎನ್.ಎಂ ಬಿನ್. ಮಾದೇಗೌಡ , ಉಪಪ್ರಾಂಶುಪಾಲರು, ಸಕರ್ಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಗ್ರಾಮ, ಹಾಲಿ ವಾಸಃ ನೇರಲಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅಡುಗೆ ಮನೆಯ ಕಿಟಕಿಯ ಎರಡು ಸರಳುಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ, ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ ಗ್ಯಾಸ್ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 1200/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.

ದಿನಾಂಕ: 26-01-2013 ರಂದು ಪಿರ್ಯಾದಿ ವೈ.ಎನ್. ಸಿದ್ದರಾಜು ಬಿನ್ ಲೇಟ್ ನಿಂಗೇಗೌಡ, ಯಲಾದಹಳ್ಳಿ, ಸಿ.ಎ. ಕೆರೆ ಹೋಬಳಿ, ಮದ್ದೂರು ತಾಃ ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ಯಾರೋ ಕಳ್ಳರು ತಾಲ್ಲೂಕು ಕಛೇರಿ ಕಾಂಪೌಂಡ್ ಒಳಗೆ ಮೋಟಾರು ಸೈಕಲ್ ನಂಬರ್ ಕೆಎ-41/ಹೆಚ್-2589 ಸ್ಪ್ಲೆಂಡರ್ ಪ್ಲಸ್ ಹಿರೋ ಹೋಂಡಾ ಗಾಡಿಯನ್ನು ನಿಲ್ಲಿಸಿ ಕಛೇರಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬಂದು ತಾನು ನಿಲ್ಲಿಸಿದ್ದ ಮೋಟಾರ್ ಸೈಕಲ್ ಅನ್ನು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 20000/- ರೂ ಆಗಲಿದ್ದು, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment