ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ಅಪಹರಣ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣ :
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 279-304(ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯಿದೆ.
ದಿನಾಂಕ: 27-01-2013 ರಂದು ಪಿರ್ಯಾದಿ ಎನ್.ಆನಂದ ಬಿನ್ ನಟರಾಜು ಮಾರುತಿನಗರ ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-11 ಟಿ-1634 ಟ್ರಾಕ್ಟರ್ ಚಾಲಕ (ಹೆಸರು ವಿಳಾಸ ತಿಳಿದಿಲ್ಲ) ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ರಾಜೇಶನ ತಲೆಗೆ ತೀವ್ರ ತರಹದ ಪೆಟ್ಟಾಗಿ ಕೆ.ಆರ್.ಪೇಟೆ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಆದ್ದರಿಂದ ಅಪಘಾತ ಉಂಟು ಮಾಡಿದ ಕೆಎ-11 ಟಿ-1634 ರ ಟಾಕ್ಟರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೋರಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 363-366 (ಎ) ಐ.ಪಿ.ಸಿ.
ದಿನಾಂಕ: 27-01-2013 ರಂದು ಪಿರ್ಯಾದಿ ಜಯಮ್ಮ ಕೋಂ. ರಮೇಶಚಾರಿ. ಹೊಸಕನ್ನಂಬಾಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದಾಗ, ನೆಲಮನೆ ಗ್ರಾಮದ ಆರೋಪಿ ಶ್ರೀಕಂಠ ಬಿನ್ ಸುಬ್ಬಾಚಾರಿ, ನೆಲಮನೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ, ಕಾನೂನು ರೀತ್ಯಾ ಕ್ರಮ ಕೈಗೊಂಡು, ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 27-01-2013 ರಂದು ಪಿರ್ಯಾದಿ ಪಾಲಲೋಚನ ಬಿನ್. ಗಂಗಾಧರಯ್ಯ, 4 ನೇ ಕ್ರಾಸ್, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ಅಂತಿಮ ಬಿ.ಎ. ವಿದ್ಯಾಥರ್ಿನಿ ರವರು ದಿನಾಂಕ:: 22-01-2013 ರಂದು ಸಂಜೆ 04-00 ಗಂಟೆೆಯಲ್ಲಿ ಮಳವಳ್ಳಿ ಟೌನ್ ನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 27-01-2013 ರಂದು ಪಿರ್ಯಾದಿ ನಾಗರಾಜು ಬಿನ್. ರಾಮಣ್ಣ ಮಂಡ್ಯ ಸಿಟಿ, ಗೂಬೇಹಳ್ಳ, 7 ನೇ ಕ್ರಾಸ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನಮ್ಮ ಮಗಳು ಅನಿತಾಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 379 ಐ.ಪಿ.ಸಿ.
ದಿನಾಂಕ: 27-01-2013 ರಂದು ಪಿರ್ಯಾದಿ ಸಿ.ಎಸ್.ಡಾಲಿ ಬಿನ್ ಸುಬ್ಬಯ್ಯ, ಹೆಚ್.ಎಸ್.ಆರ್ ಲೇಔಟ್, ಮಡಿವಾಳ ಬೆಂಗಳೂರು-79 ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ತನ್ನ ಬಾಬ್ತು ಕೆಎ-51, ಜಡ್-7839 ಮಹೀಂದ್ರಾ ಜೈಲೋ ಕಾರಿನಲ್ಲಿ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದು ಕಾರ್ ನಿಲ್ಲಿಸಿ ಕಾವೇರಿ ನದಿಯ ಹೊಳೆ ಕಡೆ ಹೋಗಿದ್ದಾಗ ಯಾರೋ ದುಷ್ಕಮರ್ಿಗಳು ಕಾರಿನ ಗ್ಲಾಸ್ಗಳನ್ನು ಹೊಡೆದು ಕಾರಿನಲ್ಲಿದ್ದ ಮೊಬೈಲ್ಗಳು, ಕ್ರೆಡಿಟ್ ಕಾಡರ್್ಗಳು, ಡೆಬಿಟ್ ಕಾಡರ್್ಗಳು, ಆರ್.ಸಿ ಬುಕ್, ಡಿ.ಎಲ್, ನಗದು 13,500/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 27-01-2013 ರಂದು ಪಿರ್ಯಾದಿ ವಿ.ಎಂ ಗಂಗಾಧರನ್ ಬಿನ್ ಮೋಹನ್, ಸಿವಿಲ್ ಇಂಜಿನಿಯರ್, ಮದುರೈ, ತಮಿಳುನಾಡು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಿವನಸಮುದ್ರದಲ್ಲಿ ಬಿ.ಡಬ್ಯೂ.ಎಸ್.ಎಸ್.ಬಿ. ಕಾಮಗಾರಿಯನ್ನು ಕಂಟ್ರಾಕ್ಟ ಪಡೆದುಕೊಂಡು ನಿರ್ವಹಿಸುತ್ತಿದ್ದು, ಇವರ ಬಳಿ ಕೂಲಿಕೆಲಸ ಮಾಡಿಕೊಂಡಿದ್ದ ಲಿಂಗುಡು ಪ್ರಜಾ @ ಕೃಷ್ಣ, ಅಸ್ಸಾಂ ರಾಜ್ಯ ರವರು ರಾತ್ರಿವೇಳೆಯಲ್ಲಿ ಮಲವಿಸರ್ಜನೆಗೆ ಹೋಗಿ ನೀರು ತೆಗೆದುಕೊಳ್ಳಲು ಚಾನೆಲ್ಗೆ ಹೋದಾಗ ಕಾಲು ಜಾರಿ ಕೊಚ್ಚಿಕೊಂಡು ಸತ್ತುಹೋಗಿರುತ್ತಾನೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment