ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ಮಹಿಳಾ ದೌರ್ಜನ್ಯ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 08-02-2013 ರಂದು ಪಿರ್ಯಾದಿ ಕುಮಾರ ಬಿನ್. ಲೇಟ್. ಬುಂಡಯ್ಯ, ಬಸ್ತಿಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮಗನಾದ ಬಿ.ಕೆ. ಕಿರಣಕುಮಾರ ಕೆ.ಆರ್.ಪೇಟೆ ಟೌನಿನ ಪ್ರಗತಿ ಕಾನ್ವೆಂಟ್ನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ:04-02-2013 ರಂದು ಬಸ್ತಿಹೊಸ ಕೋಟೆಯಿಂದ ಬೆಳಿಗ್ಗೆ 08-30 ಗಂಟೆಗೆ ಕೆ.ಆರ್.ಪೇಟೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಇಲ್ಲಿಯವರೆಗೆ ಶಾಲೆಗಾಗಲಿ, ಹಾಸ್ಟೆಲ್ ಗಾಗಲಿ, ಮನೆಗಾಗಲಿ, ಸಂಬಂಧಿಕರ ಮನೆಗಾಗಲಿ ಹಾಗೂ ಸ್ನೇಹಿತರ ಮನೆಗಾಗಲಿ ಹೋಗಿರುವುದಿಲ್ಲ. ನಾವು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 01/13 ಕಲಂ. 174(ಸಿ) ಸಿ.ಆರ್.ಪಿ.ಸಿ.
ದಿನಾಂಕ: 08-02-2013 ರಂದು ಪಿರ್ಯಾದಿ ಶಿವಸ್ವಾಮಿ, ಕಿಕ್ಕೇರಿ ಗ್ರಾಮ ಮತ್ತು ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಕಿಕ್ಕೇರಿ ಗ್ರಾಮದ ಅಘಲಯದ ಕೃಷ್ಣ ಪೋನ್ ಮಾಡಿ ನಿಮ್ಮ ಅಣ್ಣನ ಹಿರಿಯ ಮಗ ಸತೀಶ.ಕೆ.ವಿ ಬಿನ್. 22 ವರ್ಷ, ವಕ್ಕಲಿಗರು, ಕೋಳಿ ಅಂಗಡಿಯಲ್ಲಿ ಕೆಲಸ ಕಿಕ್ಕೇರಿ ಮಟನ್ ಮಾರಾಟ ಮಾಡುವ ಅಂಗಡಿಯ ಹಿಂಭಾಗದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಸತ್ತಿ ಹೋಗಿರುತ್ತಾನೆಂದು ಹೇಳಿದಾಗ ತಕ್ಷಣ ಹೋಗಿ ನೋಡಲಾಗಿ ಸತೀಶನು ಅನುಮಾನಾಸ್ಪದವಾಗಿ ಸತ್ತಿರುವುದು ಕಂಡುಬಂದಿದೆ. ಮುಂದಿನ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದೆ.
ಮಹಿಳಾ ದೌರ್ಜನ್ಯ ಪ್ರಕರಣ :
ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 143,147,148,323,324,504,506,307,498(ಎ) ಕೂಡ 149 ಐ.ಪಿ.ಸಿ.
ದಿನಾಂಕ: 08-02-2013 ರಂದು ಪಿರ್ಯಾದಿ ಹಚ್.ಎಸ್.ಸಾಕಮ್ಮ ತಂದೆ ಸಿದ್ದೇಗೌಡ, ಹಲ್ಲಗೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಸಿದ್ದೇಗೌಡ, ಮತ್ತು ಇತರ 5 ಮಂದಿ, ಎಲ್ಲರೂ ಹಲ್ಲಗೆರೆ ಗ್ರಾಮ ರವರುಗಳು ಪಿರ್ಯಾದಿಗೆ ಮತ್ತು ಅವರ ತಾಯಿಗೆ ಆರೋಪಿತರು ಮನೆಯ ವಿಚಾರವಾಗಿ ಗುಂಪು ಕಟ್ಟಿಕೊಂಡು ಬೈದು ಕೈಗಳಿಂದ ಹೊಡೆದು ಪಿರ್ಯಾದಿಗೆ ದೊಣ್ಣೆಯಿಂದ ಹೊಡೆದು ಗಲಾಟೆ ಮಾಡಿ ಮಚ್ಚಿನಿಂದ ಕತ್ತರಿಸಲು ಬೀಸಿದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದು ಆರೋಪಿ-1 ರವರು ಕೆಳಕ್ಕೆ ಕೆಡವಿಕೊಂಡು ಕತ್ತಿನ ಮೇಲೆ ಕಾಲು ಇಟ್ಟು ಸಾಯಿಸಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment