ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು, 3 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ, 1 ಕಳವು ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ವೆಂಕಟೇಶ್, ಬಸ್ತೀಪುರ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಲಕ್ಷ್ಮಮ್ಮ ರವರ ಗಂಡ ವೆಂಕಟೇಶ್ ಬಿನ್ ದಾಸಯ್ಯ, 40 ವರ್ಷ, ಬಿಇಎಂಎಲ್ ನೌಕರ, ಗಂಗಾಮತ, ವಾಸಃ ಬಸ್ತೀಪುರ ಗ್ರಾಮ, ರವರಿಗೆ ಕಳೆದ 5 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದು, ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವರನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆ ಮೈಸೂರಿನ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿರುತ್ತೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲ. ಶವದ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 (|||) ಸಿ.ಆರ್.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ಮಧು, 32ವರ್ಷ, ವಕ್ಕಲಿಗ, ವ್ಯವಸಾಯ, ಹೆಬ್ಬಕವಾಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಶಂಕರ ಬಿನ್ ಮುದ್ದೇಗೌಡ, ವಕ್ಕಲಿಗರು, ವ್ಯವಸಾಯ, ಹೆಬಕವಾಡಿ ಗ್ರಾಮ ಎಂಬುವವರು ಮರ ಒಂದಕ್ಕೆ ಲುಂಗಿ ಮತ್ತು ಟವಲ್ನಿಂದ ಕತ್ತಿಗೆ ಮತ್ತು ಮರಕ್ಕೆ ಕಟ್ಟಿಕೊಂಡು ಮರಣ ಹೊಂದಿರುತ್ತಾನೆ, ಸದರಿಯವರ ಸಾವಿನ ಬಗ್ಗೆ ಅನುಮಾನವಿರುತ್ತೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ಯೋಗನರಸಿಂಹ ಬಿನ್. ರಾಜಣ್ಣ, ರಂಗನಾಥಸ್ವಾಮಿ ದೇವಸ್ಥಾನದ ಪಾರುಪತ್ತೆದಾರರು, ಕೊಳದ ಗರಡಿ ಬೀದಿ ರವರು ನೀಡಿದ ದೂರಿನ ವಿವರವೇನೆಂದರೆ ಸುಮಾರು 40-45 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡಸು ದೇವಸ್ಥಾನದ ಹಿಂಬಾಗದ ಹಕರ್ಿಲೆಸ್ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದು, ಬಿಳಿಯ ಶರ್ಟ, ಕಪ್ಪು ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. .
4. ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ಡಿ.ವೈ.ಪ್ರಸನ್ನ ಬಿನ್. ಡಿ.ಎಸ್.ಯೋಗನಂದೇಗೌಡ, ಡಿ.ಎನ್.ಪುರ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಸಹೋದರ ಡಿ.ವೈ. ಸತೀಶ ಬಿನ್ ಡಿ.ಎಸ್. ಯೋಗಾನಂದೇಗೌಡರವರಿಗೆ ಈಗ್ಗೆ 02 ವರ್ಷಗಳಿಂದ ವಾಸಿಯಾಗದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದರಿಂದ ಮನನೊಂದು ತನ್ನ ಜಮೀನಿನ ಬಳಿ ಯಾವುದೋ ಕ್ರಿಮಿನಾಶಕ ವಿಷ ಔಷಧಿಯನ್ನು ಸೇವನೆ ಮಾಡಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 08-30 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 14/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 10-02-2013 ರಂದು ಪಿರ್ಯಾದಿ ಜವರಯ್ಯ ಬಿನ್. ಗೆಂಡಯ್ಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಹೆಂಡತಿ ಅರಸಮ್ಮ ಕೋಂ. ಜವರಯ್ಯ 70 ವರ್ಷ, ಗಂಗಾಮತ ಜನಾಂಗ, ಕನ್ನಲಿ ಗ್ರಾಮ. ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದ ಸರಳ ಸಮೂಹಿಕ ಮದುವೆಗೆ ಗ್ರಾಮದವರ ಜೊತೆಯಲ್ಲಿ ಲಾರಿಯಲ್ಲಿ ಮದುವೆ ಬಂದಿದ್ದು ವಾಪಸ್ಸ್ ಕನ್ನಲಿ ಗ್ರಾಮಕ್ಕೆ ಬರಲಿಲ್ಲ ಪಿರ್ಯಾದಿಯವರು ಜೊತೆಯಲ್ಲಿ ಬಂದಿದ್ದರವರನ್ನು ವಿಚಾರ ಮಾಡಲಾಗಿ ಸದರಿಯವರುಗಳು ಅರಸಮ್ಮಳು ನಾವು ಬರುವಾಗ ನಮ್ಮಗಳ ಜೊತೆಯಲ್ಲಿ ಬರಲಿಲ್ಲವೆಂದು ತಿಳಿಸಿರುತ್ತಾರೆ ನಾವು ಇದುವರೆಗೂ ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 10-02-2013 ರಂದು ಪಿರ್ಯಾದಿ ಹೊನ್ನೇಗೌಡ ಬಿನ್ ರಾಜಪ್ಪ, 40ವರ್ಷ, ವಕ್ಕಲಿಗರು, ಮೊಬೈಲ್ಅಂಗಡಿಯಲ್ಲಿ ವ್ಯಾಪಾರ, ಕೆಂಪೇಗೌಡ ವೃತ್ತ, ಬೆಳ್ಳೂರು ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕಃ 01-02-2013ನೇ ತಾರೀಖಿನಂದು ಡಿ.ಕೋಡಿಹಳ್ಳಿಯಿಂದ ಕಿರಣ್ ಬಿನ್ ತಮ್ಮಣ್ಣ, 14ವರ್ಷ, ವಕ್ಕಲಿಗರು, 8ನೇ ತರಗತಿಯ ವಿದ್ಯಾಥರ್ಿ, ವಾಸ ಡಿ. ಕೋಡಿಹಳ್ಳಿ ಗ್ರಾಮ, ಬಿಂಡಿಗನವಿಲೆ ಹೋಬಳಿ ಎಂಬ ಹುಡುಗ ಬೆಳ್ಳೂರಿನಲ್ಲಿರುವ ನಮ್ಮ ಮನೆಗೆ ಬಂದಿದ್ದು, ಎರಡು ಮೂರು ದಿನಗಳು ಇಲ್ಲಿಯೇ ಇದ್ದು, ದಿನಾಂಕಃ 04-02-2013 ನೇ ತಾರೀಖಿನಂದು ಸೋಮವಾರ ಬೆಳಿಗ್ಗೆ ಮನೆಯಿಂದ ಡಿ.ಕೋಡಿಹಳ್ಳಿಯಲ್ಲಿರುವ ಅವರ ತಾಯಿಯ ಮನೆಗೆ ಹೋಗುತ್ತೇನೆಂದು ತಿಳಿಸಿ ಹೋದವನು ಅಲ್ಲಿಗೂ ಹೋಗದೆ ಶಾಲೆಗೂ ಸಹ ಹೋಗದೆ ಇರುವುದು. ನಮಗೆ ತಿಳಿದು ಬಂದಿರುತ್ತದೆ. ಸದರಿ ಕಾಣೆಯಾದ ಬಾಲಕನನ್ನು [ಕಿರಣ] ಪತ್ತೆಮಾಡಿ ಕೊಡಬೇಕೆಂದು ದೂರು ನೀಡಿರುತ್ತಾರೆ. ನಮ್ಮ ಸಂಬಂದಿಕರ ಎಲ್ಲಾ ಊರುಗಳಲ್ಲಿ ಹುಡುಕಿ ಈ ದಿನ ತಡವಾಗಿ ದೂರು ನೀಡಿರು- ತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 10-02-2013 ರಂದು ಪಿರ್ಯಾದಿ ಕೃಷ್ಣಾಚಾರಿ ಬಿನ್. ಲೇ|| ಸಿದ್ದಪ್ಪಾಜಿ, 39 ವರ್ಷ, ವಿಶ್ವಕರ್ಮ ಜನಾಂಗ, ವಾಸ ಕಬ್ಬನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕ್ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಅವರ ಹೆಂಡತಿ ಸುಶೀಲ ಕೋಂ. ಕೃಷ್ಣಚಾರಿ, ಮಂಡ್ಯ ಸುರಭಿ ನರ್ಸಿಂಗ್ ಹೋಂ. ಮಂಡ್ಯ, ಕಬ್ಬನಹಳ್ಳಿ ಗ್ರಾಮ ರವರು ದಿನಾಂಕ: 07-02-2013 ರಂದು ಸಂಜೆ 07-30 ಗಂಟೆಯಲ್ಲಿ, ಅಶೋಕ ನಗರದ ಸುರಭಿ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ವೈದ್ಯರಿಗೆ ಹೇಳಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬಂದಿರುವುದಿಲ್ಲಾ ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 62/13 279-337-304(ಎ) ಐ.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ವೀರಣ್ಣ ಕೆ.ಎ-42-ಎಫ್-205, ಕೆ.ಎಸ್.ಆರ್.ಟಿ.ಸಿ. ಚಾಲಕ, ಬಿಲ್ಲೆ. ಸಂಖ್ಯೆ 583, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-28-ಎಂ.ಬಿ-8888 ಟಾಟಾ ಸುಮೊ ಚಾಲಕ , ಮಹೆೇಶ, ಬೆಂಗಳೂರು ರವರು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆಯಲ್ಲಿ ಕೆಎ-28-ಎಂ.ಬಿ.-8888 ರ ಚಾಲಕನು ಟಾಟಾ ಸುಮೋದಲ್ಲಿ ಮೈಸೂರು ಕಡೆಗೆ ಹೋಗುತ್ತಿದ್ದು, ಟಿ.ಎಂ.ಹೊಸೂರು ಗೇಟ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿವ್ಶೆಡರ್ ಗೆ, ಡಿಕ್ಕಿ ಮಾಡಿಸಿದ ಪರಿಣಾಮ ಟಾಟಾ ಸುಮೋವು ಪಲ್ಟಿ ಹೊಡೆದು ಮೈಸೂರು - ಬೆಂಗಳೂರು ರಸ್ತೆಯಲ್ಲಿ ಸ್ವಲ್ಪ ದೂರು ಉಜ್ಜಿಕೊಂಡು ಹೋಗಿ ಮಂಡ್ಯದ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನ ಬಲಬದಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಟಾಟಾ ಸುಮೋದಲ್ಲಿದ್ದ 3 ಜನ ಪುರಷರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಟಾಟಾ ಸುಮೋದಲ್ಲಿದ್ದ 06 ಜನರಿಗೆ ಪೆಟ್ಟಾಗಿರುತ್ತದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 379 ಐ.ಪಿ.ಸಿ.
ದಿನಾಂಕ: 10-02-2013 ರಂದು ಪಿರ್ಯಾದಿ ಡಾ. ಪ್ರವೀಣ್ ಕುಮಾರ್ ಬಿನ್. ಲೇಟ್. ಕೆ.ಬೋರೇಗೌಡ, 40 ವರ್ಷ, ಗೋಪಾಲಪುರ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ-09-02-13ರಂದು ರಾತ್ರಿ ಯಾರೋ ಕಳ್ಳರು ಗೋಪಾಲಪುರ ಗ್ರಾಮದ ಸರ್ವೆ. ನಂ. 36/7 ರಲ್ಲಿ ಬೆಳೆದಿದ್ದ ಸುಮಾರು 30 ತೇಗದ ಮರಗಳ ಪೈಕಿ 5 ತೇಗದ ಮರಗಳನ್ನು ಕಡಿದುಕೊಂಡು ಹೋಗಿರುತ್ತಾರೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment