ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-02-2013 ರಂದು ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಕಳ್ಳತನ ಪ್ರಕರಣ ಹಾಗು 6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 16-02-2013 ರಂದು ಪಿರ್ಯಾದಿ ಮಾಸ್ತಯ್ಯ ಬಿನ್. ಹುಚ್ಚಯ್ಯ, 38 ವರ್ಷ, ಗಂಗಾಮತಸ್ಥ ಜನಾಂಗ, ಅರಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿಯರ್ಾದಿಯ ಬಾಮೈದ ಮಹದೇವ ಬಿನ್. ರುದ್ರ, 25 ವರ್ಷ, ಗಂಗಾಮತಸ್ಥ ಜನಾಂಗ ರವರು ದಿನಾಂಕ: 02-01-2013 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ಊರು ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಬೆಂಗಳೂರಿಗೂ ಹೋಗದೆ ಪಿರ್ಯಾದಿಯವರ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದರೂ ಸಿಗದಿದ್ದ ಕಾರಣ, ಈ ದಿನ ತಡವಾಗಿ ಬಂದು ಹುಡುಕಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 42/13 ಕಲಂ. ಮಕ್ಕಳು ಕಾಣೆಯಾಗಿದ್ದಾರೆ.
ದಿನಾಂಕ: 16-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಶೀಳನೆರೆ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ 1] ಕೆ.ಎಸ್.ಕಿರಣ್ಕುಮಾರ್. 14 ವರ್ಷ ಹಾಗು 2] ಬಿ. ಕೃಷ್ಣ, 14 ವರ್ಷ. ಭೈರಾಪುರ ಗ್ರಾಮ ರವರುಗಳು ಶಾಲೆಗೆಂದು ಹೋದವರು, ಶಾಲೆಗೆ ಹೋಗಿರುವುದಿಲ್ಲ. ಬ್ಯಾಗುಗಳನ್ನು ಶಾಲೆಯ ಬಳಿ ಇಟ್ಟು ಎಲ್ಲಿಯೋ ಹೊರಟು ಹೋಗಿರುತ್ತಾರೆ ನಾವು ನಮ್ಮ ಸಂಬಂದಿಕರು, ಸ್ನೇಹಿತರನ್ನು ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 457-380 ಐ.ಪಿ.ಸಿ.
ದಿನಾಂಕ: 16-02-2013 ರಂದು ಪಿರ್ಯಾದಿ ತಿಮ್ಮೇಗೌಡ, (ಕಾಳಮ್ಮನ-ಗುಡ್ಡಪ್ಪ) ಕಡಿಲುವಾಗಿಲು, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ: 09/10-01-2013 ರಂದು 1] ಜೋಗಿಶೆಟ್ಟಿ ಬಿನ್. ಟೈಲರ್ ಚಲುವಶೆಟ್ಟಿ, ಕಡಿಲುವಾಗಿಲು ಗ್ರಾಮ ಮತ್ತು 2] ತಿಮ್ಮ, ಬನ್ನಹಳ್ಳಿ ಗ್ರಾಮರವರುಗಳು ವೀರಭದ್ರೇಶ್ವರ ಸ್ವಾಮಿ ದೇವಾಲಯ, ಕಾಳಮ್ಮ ಮತ್ತು ಮದ್ದನಹಟ್ಟಿ ಅಮ್ಮನ ದೇವಾಲಯಗಳ ಬಾಗಿಲುಗಳ ಬೀಗ ಮುರಿದು ಹುಂಡಿಯಲ್ಲಿ ಇದ್ದ ಹಣ ಹಾಗೂ ದೇವರುಗಳ ವಿಗ್ರಹಗಳಲ್ಲಿ ಇದ್ದ ಬೆಳ್ಳಿ ಛತ್ರಿ ಹಾಗೂ ಇತರೆ ಬೆಲೆ ಬಾಳುವ ಪದಾರ್ಥಗಳನ್ನು ಆರೋಪಿಗಳು ಕಳ್ಳತನ ಮಾಡಿರುವುದು ಅನುಮಾನವಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment