ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-02-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಶಾಲೆ ಕಳ್ಳತನ ಪ್ರಕರಣಗಳು, 2 ಸಾಮಾನ್ಯ/ವಾಹನ ಕಳವು ಪ್ರಕರಣಗಳು, 1 ವಂಚನೆ ಪ್ರಕರಣ, 2 ರಾಬರಿ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಶಾಲೆ ಕಳ್ಳತನ ಪ್ರಕರಣಗಳು :
1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 457-380 ಐ.ಪಿ.ಸಿ.
ದಿನಾಂಕ: 23-02-2013 ರಂದು ಪಿರ್ಯಾದಿ ಡಿ. ಗೋವಿಂದಯ್ಯ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಚೊಟ್ಟನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಾಲೆಯ ಅಡುಗೆ ಮನೆಯ ಬೀಗವನ್ನು ಯಾರೋ ಕಳ್ಳರು ಮೀಟಿ ಮುರಿದು ಹಾಕಿ ಒಳಗಡೆ ಇದ್ದ ಎರಡು ಇಂಡೇನ್ ಗ್ಯಾಸ್ ಸಿಲೆಂಡರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬೆಲೆ ರೂ 1300/-ಗಳಾಗುತ್ತವೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 457-380 ಐ.ಪಿ.ಸಿ.
ದಿನಾಂಕ:23-02-2013 ರಂದು ಪಿರ್ಯಾದಿ ಹೆಚ್.ಎನ್.ನಂಜಪ್ಪ ಬಿನ್ ಜಿ. ನಂಜುಂಡೇಗೌಡ, ಮುಖ್ಯೋಪಾದ್ಯಾಯರು, ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಕೋಡಿದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಶಾಲೆಯ ಅಡಿಗೆ ಮನೆಯಲ್ಲಿ ಡೋರ್ ಲಾಕ್, ಬೀಗ, ಜಡಿದು ಒಳಗಿದ್ದ ಎರಡು ಸಿಲಿಂಡರ್, ಒಂದು ಗ್ಯಾಸ್ ಸ್ಟವ್, 5 ಕೆಜಿ ಬಟ್ಟು, 1 ಕೆಜಿ ಬಟ್ಟು, 2 ಕೆಜಿ ಬಟ್ಟುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 379 ಐ.ಪಿ.ಸಿ.
ದಿನಾಂಕ: 23-02-2013 ರಂದು ಪಿರ್ಯಾದುದಾರ ಪುಟ್ಟಮ್ಮ ಕೋಂ. ಮಲ್ಲಣ್ಣ, ತೈಲೂರು ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ ಜಾತ್ರೆ ಪೂಜಾ ಕಾರ್ಯಕ್ಕೆ ಬಂದಿದ್ದು ಈ ಸಮಯದಲ್ಲಿ ಯಾರೋ ಕಳ್ಳರು ದೇವರ ಪ್ರಸಾದ ಸ್ವೀಕರಿಸಿ ಕೈತೊಳೆಯುತ್ತದ್ದ ಸ್ಥಳದಲ್ಲಿ ಪಿರ್ಯಾಯ ದಿಯವರ 30ಗ್ರಾಂ ಚಿನ್ನದ ಸರ 3ಗ್ರಾಂ ತಾಳಿ 1ಗ್ರಾಂ ಗುಂಡುಗಳು ಒಟ್ಟು 34 ಗ್ರಾಂ ಅಂಜಲಿ ಕಟ್ಟಿಂಗ್ ನ ಚಿನ್ನದ ಮಾಂಗಲ್ಯ ಸರ ಬೆಲೆ-85000/-ರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 379 ಐ.ಪಿ.ಸಿ.
ದಿನಾಂಕ: 23-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಲೇಟ್. ಕಲ್ಲಶೆಟ್ಟಿ, 40ವರ್ಷ, ಚಾಲಕ ವೃತ್ತಿ, ಗಾಣಿಗಶೆಟ್ಟಿ ಜನಾಂಗ, ಸ್ವಂತ ಸ್ಥಳ: ಆಲಕೆರೆ ಗ್ರಾಮ, ಕೆರಗೋಡು ಹೋಬಳಿ, ಹಾಲಿ ವಾಸಳ ಹಳೆಬೂದನೂರು ಗ್ರಾಮ, ಮಂಡ್ಯ ತಾಲ್ಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮನೆಯ ಮುಂದೆ ನಿಲ್ಲಿಸಿದ್ದ ಮಹೀಂದ್ರ ಮ್ಯಾಕ್ಸ್ ಪಿಕ್ಅಪ್ ಗೂಡ್ಸ್ ವಾಹನ. ಸಂಖ್ಯೆ.ಕೆಎ-36-9329 ನ್ನು ದಿ:22-01-2013 ರ ರಾತ್ರಿವೇಳೆ ಯಾರೋ ಕಳ್ಳರು ಕಳುವು ಮಾಡಿರುತ್ತಾರೆ. ಈ ವಾಹನದ ಅಂದಾಜು ಬೆಲೆ 1,00,000/-ರೂಗಳಾಗಿರುತ್ತೆ. ನನ್ನ ವಾಹನವು ಕಳವು ಅಗಿರುವ ಬಗ್ಗೆ ಅಲಕೆರೆ ಗ್ರಾಮದ ನನ್ನ ಅಕ್ಕ ಜಯಮ್ಮ ರವರ ಮಗ ವೆಂಕಟೇಶ, ಅಲಕೆರೆ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯ ತಾಲ್ಲೊಕು ರವರ . ಮೇಲೆ ಅನುಮಾನವಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 75/13 ಕಲಂ. 465-468-471-420 ಐ.ಪಿ.ಸಿ.
ದಿನಾಂಕ: 23-02-2013ರಂದು ಪಿರ್ಯಾದಿ ಆರ್.ಕಾತರ್ಿಕೇಯನ್, ವಿಜಯಾ ಬ್ಯಾಂಕ್ ಮ್ಯಾನೇಜರ್, ಮದ್ದೂರು ಶಾಖೆ, ಮದ್ದೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚೇತನ್ ಪಿ. ಮುಡುಗೋಳು ವಿಜಯ ಬ್ಯಾಂಕ್ ಕ್ಲಕರ್್ ಮದ್ದೂರು ಟೌನ್ ರವರು, ವಿಜಯಾ ಬ್ಯಾಂಕ್ನಲ್ಲಿ ಅವದಿ ಮುಗಿದಿರುವ ಅಕೌಂಟ್ ಗೆ 500/- ರೂ. ಹಣ ಕಟ್ಟಿ ಅಕೌಂಟ್ನ್ನು ತೆರೆದು ಬ್ಯಾಂಕ್ ನ ಚೆಕ್ಗಳನ್ನು ಜಮಾ ಮಾಡಿ ಸದರಿ ಅಕೌಂಟ್ನಿಂದ ಎ.ಟಿ.ಎಂ. ನಿಂದ ಪಡೆದುಕೊಂಡು ಬ್ಯಾಂಕ್ ಗೆ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ, 37/13 ಕಲಂ. 392 ಐ.ಪಿ.ಸಿ.
ದಿನಾಂಕ: 23-02-2013 ರಂದು ಪಿರ್ಯಾದಿ ಸುಶೀಲ ಕೋಂ. ಸೋಮಶೇಖರ್, 25 ವರ್ಷ, ಗಂಗಾಮತ ಜನಾಂಗ, ವಾಸ ಶೆಟ್ಟಹಳ್ಳಿ ರಸ್ತೆ, ಕೋಟೆ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯವರು ಶ್ರೀ. ಪಟ್ಟಲದಮ್ಮನ ದೇವಸ್ಥಾನದ ಬಳಿ ಸಿಡಿ ಹಬ್ಬದ ಸಂಬಂದವಾಗಿ ಕೊಂಡವನ್ನು ನೋಡುತ್ತಾ, ದೇವರಿಗೆ ಕೈ ಮುಗಿಯುತ್ತಾ ನಿಂತ್ತಿದ್ದಾಗ, ಅವರ ಹಿಂಭಾಗದಲ್ಲಿ ದೇವರ ಭಕ್ತರಂತೆ ನಿಂತ್ತಿದ್ದವರುಗಳು ನನ್ನ ಕತ್ತಿಗೆ ಹಿಂದಿನಿಂದ ಕೈ ಹಾಕಿ, ನನ್ನ ಕತ್ತಿನದಲ್ಲಿದ್ದ ಒಂದು ಎಳೆ ಮಾಂಗಲ್ಯ ಸರ, ಎರಡು ಗುಂಡು, ಹಾಗೂ ಎರಡು ಕಾಸುಗಳಿಂದ ಕೂಡಿದ ಸುಮಾರು 33 ಗ್ರಾಂ, ತೂಕದ ಚಿನ್ನದ ಚೈನ್, ಅಂದಾಜು ಬೆಲೆ ಸುಮಾರು 82,500/- ರೂ.ಗಳು. ಕಿತ್ತುಕೊಂಡಿರುತ್ತಾರೆ. ಅದ್ದರಿಂದ ಕಳ್ಳರನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.
ಯು.ಡಿ.ಆರ್. ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 23-02-2013 ರಂದು ಪಿರ್ಯಾದುದಾರ ಕೃಷ್ಣಮೂತರ್ಿ @ ಮೂರ್ತಿ ಬಿನ್. ಲೇ||ನಾಗಪ್ಪ. ಸ್ವಂತ ಊರು. 2 ನೇ ಹಂತ. 10 ನೇ ಅಡ್ಡರಸ್ತೆ. ಮನೆ ನಂ-54 ಬಿ.ಕೆ.ನಗರ. ಯಶವಂತಪುರ. ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಜ್ಯೋತಿ @ ಜ್ಯೋತಮ್ಮ. ಅಂಕನಹಳ್ಳಿ ಗ್ರಾಮ, ದೇವಲಾಪುರ ಹೋ||, ನಾಗಮಂಗಲ ತಾ|| ರವರು ಯಾವುದೋ ವಿಷವನ್ನು ಕುಡಿದು ಒದ್ದಾಡುತ್ತಿದ್ದಳು. ಆಗ ನಮ್ಮ ತೋಟದ ಮಾಲೀಕರಾದ ರಾಮಕೃಷ್ಣ ಮತ್ತು ಕಾರೀನ ಚಾಲಕರಾದ ರಾಮಚಂದ್ರರವರು ತಕ್ಷಣ ಕಾರಿನಲ್ಲಿ ಕುಣಿಗಲ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು. ನಂತರ ಅಲ್ಲಿಂದ ಚಿಕಿತ್ಸೆಗೆ ತುಮಕೂರು ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿರವರು ದಿನಾಂಕಃ 23-02-2013 ರಂದು ಮದ್ಯಾಹ್ನ 01-55 ಗಂಟೆಯ ಸಮಯದಲ್ಲಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment