ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 25-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಕಳವು ಪ್ರಕರಣ, 3 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು 9 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ.04/13 ಕಲಂ,174 ಸಿ.ಆರ್.ಪಿ.ಸಿ.
ದಿನಾಂಕ: 25/02/2013 ರಂದು ಪಿರ್ಯಾದಿ ಗೌರಮ್ಮ ಕೋಂ ಲೇಟ್ ನಾಗೇಗೌಡ @ ಕೆಂಚೇಗೌಡ, 50 ವರ್ಷ, ವಕ್ಕಲಿಗರು, ಮನೆಕೆಲಸ, ಗಾಜನೂರು ಗ್ರಾಮ ರವರು ನೀಡಿದ ದೂರು ಏನೆಂದರೆ ಹೊಟ್ಟೆನೋವಿನ ಬಾಧೆ ತಾಳಲಾರದೇ ಯಾವುದೋ ವಿಷದ ಔಷದಿಯನ್ನು ತೆಗೆದುಕೊಂಡು ಒದ್ದಾಡುತ್ತಿದ್ದನು. ಅದನ್ನು ಕಂಡು ಕೂಗಿಕೊಂಡಾಗ ಅಲ್ಲೇ ಪಕ್ಕದಲ್ಲಿದ್ದ ನಮ್ಮೂರಿನ ಶ್ರೀನಿವಾಸ ಬಿನ ಬಸವರಾಜು, ಹಾಗೂ ಇತರರು ಸೇರಿಕೊಂಡು ತಕ್ಷಣ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಿಸದೆ, ದಿನಾಂಕ: 24-02-2013 ರ ರಾತ್ರಿ 10-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ.
ಕಳವು ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 78/13 ಕಲಂ. 457-380 ಐ.ಪಿ.ಸಿ.
ದಿನಾಂಕ: 25-02-2013 ರಂದು ಪಿರ್ಯಾದಿ ಬಿ.ಎನ್. ಮುಖ್ಯೋಪಾದ್ಯಾಯರು, ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಕೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗಗಳನ್ನು ಹೊಡೆದು ಬಾಗಿಲು ತೆರೆದಿದ್ದು ಕೊಠಡಿಯನ್ನು ಪರಿಶೀಲಿಸಲಾಗಿ ವಾಲಿಬಾಲ್-1, ತ್ರೋಬಾಲ್-1, ಷಟ್ಲ್ ಕಾಕ್ ಬ್ಯಾಟ್-2, ಕ್ರಿಕೆಟ್ ಬ್ಯಾಟ್-1, ಚೆಸ್ ಬೋರ್ಡ್ ಮತ್ತು ಕಾಯಿನ್-1, ಲುಡೋ-1, ಈ ಸಾಮಗ್ರಿಗಳ ಬೆಲೆ ಅಂದಾಜು ಸುಮಾರು ರೂ 1800/- ಗಳಾಗಿದ್ದು ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಮೇಲ್ಕಂಡ ಕ್ರೀಡಾ ಸಾಮಗ್ರಿಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 25-02-2013 ರಂದು ಪಿರ್ಯಾದಿ ಬಾಗ್ಯ ಕೋಂ ಬೋರೇಗೌಡ ದೊದ್ದನಕಟ್ಟೆ ಗ್ರಾಮ, ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗನಾದ ರಂಜನ್, 13 ವರ್ಷ, ಇವನು ಸಂಜೆಯತನಕ ಮನೆಯಲ್ಲೇ ಇದ್ದು, ನಂತರ ಸುಮಾರು 05-00 ಗಂಟೆಯ ವೇಳೆಯಲ್ಲಿ ನಾವುಗಳು ಯಾರು ಇಲ್ಲದ ವೇಳೆಯಲ್ಲಿ ಆತ ಮನೆಬಿಟ್ಟು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 25-02-2013 ರಂದು ಪಿರ್ಯಾದಿ ಪುಟ್ಟಲಕ್ಷ್ಮಮ್ಮ ಕೋಂ. ವೆಂಕಟೇಶ್ಗೌಡ, ಜೆ.ಪಿ.ಎಂ ಬಡಾವಣೆ, ಹಲಗೂರು ಟೌನ್, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಗಂಡನಾದ ಸಿ.ವೆಂಕಟೇಶ್ಗೌಡ, ಹಲಗೂರು ಟೌನ್, ಮಳವಳ್ಳಿ ತಾಲ್ಲೂಕು ರವರು ಮನೆಯಿಂದ ಹೊರಟು ಮಳವಳ್ಳಿಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ಇದುವರೆಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ನಾವು ನಮ್ಮ ಸಂಬಂಧಿಕರು ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ನಮ್ಮ ಯಜಮಾನರು ಸಿಕ್ಕಿರುವುದಿಲ್ಲ ಕಾಣೆಯಾಗಿರುವ ನನ್ನ ಯಜಮಾನರನ್ನು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕಿಕ್ಕೇರಿ ಪೊಲೀಸ್ ಠಾಣೆ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 25-02-2013 ರಂದು ಪಿರ್ಯಾದಿ ರಾಜೇಗೌಡ ಬಿನ್. ಜವರೇಗೌಡ, ಮಾದಾಪುರ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ರವರು ನೀಡಿದ ದೂರು ಏನೆಂದರೆ ದಂಡಿಘಟ್ಟ ದಾಖ್ಲೆಗೆ ಸೇರಿದ ಲಕ್ಷ್ಮೀಪುರ ತೋಟದ ಮನೆ ರಾಮೇಗೌಡರ ಮಗ ರವಿಕುಮಾರ ಎಂಬುವವರಿಗೆ ಮದುವೆ ಮಾತುಕತೆ ಆಗಿದ್ದು ದಿನಾಂಕ: 23-02-2013 ರಂದು ಪಿರ್ಯಾದಿಯವರ ಮೊಬೈಲ್ ಗೆ. ಫೋನ್ ಮಾಡಿ ನನಗೆ ಮದುವೆ ಇಷ್ಟವಿಲ್ಲವೆಂದು ಫೋನ್ ಮಾಡಿ ಕಟ್ ಮಾಡಿ ಹೋದವಳು ಇದುವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment