ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 27-03-2013.
ಪತ್ರಿಕಾ ಪ್ರಕಟಣೆ
ಅರಕೆರೆ ಪೊಲೀಸ್ ಠಾಣಾ ಮೊ.ನಂ.33/2013 ಕಲಂ 302 ಐಪಿಸಿ ಪ್ರಕರಣದ ಪತ್ತೆ ಬಗ್ಗೆ.
* * * * * *
ಶ್ರೀ ಎನ್.ಎಸ್ ನವೀನ [ಬಿನ್ ಶಿವಶಂಕರ್, 27 ವರ್ಷ, ಶಿವಾರ್ಚಕರು ಜನಾಂಗ, ಅರ್ಚಕ ವೃತ್ತಿ, ನಂ. 621, ಸುಬ್ಬಪ್ಪ ಗೋಡೌನ್ ಹಿಂಭಾಗ, 13ನೇ ಕ್ರಾಸ್,] ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ಮಂಡ್ಯ ಸಿಟಿ. ಸ್ವಂತ ಊರುಃ ನೇರಲೆಕೆರೆಗ್ರಾಮ. ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ಎಂಬುವರು ದಿಃ12/02/2013 ರಂದು ಅರಕೆರೆ ಪೊಲೀಸ್ ಠಾಣೆಯಲ್ಲಿ ಒಂದು ಪಿರ್ಯಾದನ್ನು ನೀಡಿ ಅದರಲ್ಲಿ ತಾನು ಮತ್ತು ತನ್ನ ತಮ್ಮ ಮಂಡ್ಯದಲ್ಲಿ [ಜೈಲ್ ಬಳಿ ಇರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ] ಅರ್ಚಕರಾಗಿ ಕೆಲಸ ಮಾಡಿಕೊಂಡು ಮಂಡ್ಯದಲ್ಲೇ ಇರುತ್ತೇವೆ. ತಮ್ಮ ಸ್ವಂತ ಊರು ಶ್ರೀರಂಗಪಟ್ಟಣ ತಾಲ್ಲೂಕು ನೇರಲೆಕೆರೆ ಗ್ರಾಮವಾಗಿರುತ್ತದೆ. ತನ್ನ ತಂದೆ ಶಿವಶಂಕರ ರವರು ದಿಃ 07/02/2013 ರಂದು ಮಂಡ್ಯದಿಂದ ಮನೆ ನೋಡಿಕೊಂಡು ಬರುತ್ತೇನೆಂದು ನೇರಲೆಕೆರೆಗೆ ಹೋಗಿದ್ದರು ಅವರು ಹೋದ 3-4 ದಿವಸದಲ್ಲೇ ಹಿಂದಕ್ಕೆ ಮಂಡ್ಯಕ್ಕೆ ಬಂದು ಬಿಡುತ್ತಿದ್ದರು. ಈ ಸಾರಿ 5 ದಿವಸವಾದರೂ ವಾಪಸ್ ನಮ್ಮ ಮನೆಗೆ ಬಾರದ ಕಾರಣ ತಂದೆಯ ಮೊಬೈಲ್ಗೆ ಕರೆ ಮಾಡಿದಾಗ ಯಾವುದೇ ಉತ್ತರ ಬರದೇ ಸ್ವಿಚ್ ಆಫ್ ಆಗಿತ್ತು. ಅವರು ಯಾವ ದಿನದಲ್ಲೂ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿರಲಿಲ್ಲ. ಅಲ್ಲಿನ ಪಕ್ಕದ ಮನೆಯವರನ್ನು ಇರುವಿಕೆಯ ಬಗ್ಗೆ ಕೇಳಿದಾಗ, ಅವರು ನಾವು ನಿಮ್ಮ ತಂದೆಯವರನ್ನು 5 ದಿವಸದಿಂದ ನೋಡಲಿಲ್ಲ. ನಿಮ್ಮ ಮನೆಯ ಕಾಂಪೌಂಡಿನ ಗೇಟ್ ತೆಗೆದಿದ್ದು, ನಿಮ್ಮ ತಂದೆಯವರು ಮೆಟ್ಟಿಕೊಳ್ಳುವ ಶೂ ಬಾಗಿಲಿನ ಮುಂದೆ ಇದೆ, ಬಾಗಿಲಿಗೆ ಬೀಗ ಹಾಕಿದೆ ಎಂದು ತಿಳಿಸಿದ್ದ ಮೇರೆ ಸಹೋದರ ಪೃಥ್ವಿರಾಜನ ಜೊತೆ ದಿಃ11/02/2013 ರಂದು ರಾತ್ರಿ ನೇರಲೆಕೆರೆ ಗ್ರಾಮಕ್ಕೆ ಬಂದು ನೋಡಿದಾಗ ಮನೆಯ ಗೇಟ್ ತೆಗೆದಿದ್ದು, ಶೂಗಳು ಅಲ್ಲೇ ಇದ್ದು, ಮನೆಯ ಬಾಗಿಲಿಗೆ ಬೀಗ ಹಾಕಿದ್ದು, ಮನೆಯ ಒಳಗಡೆ ಲೈಟ್ ಉರಿಯುತ್ತಿದ್ದು, ಬಾಗಿಲಿನ ಸಮೀಪಕ್ಕೆ ಹೋಗಿ ನೋಡಿದಾಗ ಒಳಗಡೆ ದುವರ್ಾಸನೆ ಬಂದ ಮೇರೆಗೆ 2-3 ಬಾರಿ ಕರೆದಾಗ ಯಾವುದೇ ಉತ್ತರ ಬಾರದ ಕಾರಣ ಮನೆಯ ಮೇಲಕ್ಕೆ ಹತ್ತಿ, ಹೆಂಚನ್ನು ತೆಗೆಸಿ, ಬ್ಯಾಟರಿ ಹಾಕಿ ನೋಡಿದಾಗ ನಮ್ಮ ತಂದೆಯು ನಮ್ಮ ಮನೆಯ ಹಾಲಿನಲ್ಲಿರುವ ದಿವಾನ್ ಕಾಟಿನ ಮೇಲೆ ಅಂಗಾತವಾಗಿ ಸತ್ತು ಮಲಗಿದ್ದು, ಮೈಮೇಲೆಲ್ಲಾ ಚರ್ಮವು ಸುಲಿದುಕೊಂಡಿರುವಂತೆ ಕೊಳೆತು ದುವರ್ಾಸನೆ ಬರುತ್ತಿದ್ದು, ಎರಡೂ ಕಣ್ಣು ಮುಚ್ಚಿದ್ದು, ನಾಲಿಗೆಯು ಬಾಯಿಯಿಂದ ಹೊರಬಂದಿದ್ದು, ಮನೆಯ ಬೀಗವನ್ನು ಹೊಡೆದು, ಮನೆಯೊಳಗೆ ಹೋಗಿ ನೋಡಿದಾಗ ಯಾರೋ ದುರಾತ್ಮರು ಯಾವುದೋ ದುರುದ್ದೇಶದಿಂದ ನನ್ನ ತಂದೆಯ ಕತ್ತನ್ನು ಹಿಸುಕಿಯೋ ಅಥವಾ ಯಾವುದೋ ಆಯುಧದಿಂದ ಅವರಿಗೆ ಹೊಡೆದು ಸಾಯಿಸಿರುವಂತೆ ಕಂಡು ಬರುತ್ತದೆ. ಈ ಬಗ್ಗೆ ಸಂಬಂದಿಕರಿಗೆ ತಿಳಿಸಿ ದಿನಾಂಕಃ 12-02-2013 ರಂದು ಬೆಳಿಗ್ಗೆ ತಡವಾಗಿ ಕಂಪ್ಲೆಂಟ್ನ್ನು ಕೊಟ್ಟಿದ್ದ ಮೇರೆ ಅರಕೆರೆ ಪೊಲೀಸ್ ಸಬ್-ಇನ್ಸ್ಪೆಕ್ಟರ್ ರವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.
ಗ್ರಾಮದಲ್ಲಿ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿಯಂತೆ ಮೃತ ಶಿವಶಂಕರನ ಹೆಂಡ್ತಿ ಈಗ್ಗೆ 5 ವರ್ಷದಲ್ಲಿ ಮೃತಪಟ್ಟಿರುತ್ತಾರೆಂದು ಇತ್ತೀಚೆಗೆ ಹೆಚ್ಚಾಗಿ ನೇರಲೆಕೆರೆ ಗ್ರಾಮದಲ್ಲೇ ಇರುತಿದ್ದನೆಂದು ತಿಳಿದು ಬಂದಿರುತ್ತದೆ. ಮೃತನ ಮನೆಯ ಎದುರುಗಡೆ ವಾಸಿ ನಾಗರಾಜು ಎಂಬುವರ ಮಗ ನಿಂಗರಾಜು @ ಕೆಂದ 36 ವರ್ಷ ಎಂಬುವನನ್ನು ವಿಚಾರಣೆ ಸಲುವಾಗಿ ಪ್ರಕರಣದ ತನಿಖಾಕಾರಿ ಸಿಪಿಐ ಶ್ರೀರಂಗಪಟ್ಟಣ ರವರು ಕರೆದುಕೊಂಡು ಬಂದು ತೀವ್ರವಾಗಿ ವಿಚಾರಣೆ ಒಳಪಡಿಸಲಾಗಿ ಮೃತ ಶಿವಶಂಕರನು ನಿಂಗರಾಜುವಿನ ಹೆಂಡ್ತಿಯೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿರುತ್ತಾನೆಂಬ ಅನುಮಾನದ ಕಾರಣದಿಂದ ಸಂಶಯ ಬಂದು ಈತನನ್ನು ಏನಾದರೂ ಮಾಡಿ ಮುಗಿಸಿದರೆ ತಾನು ತನ್ನ ಹೆಂಡ್ತಿಯೊಂದಿಗೆ ಚೆನ್ನಾಗಿ ಸಂಸಾರ ನಡೆಬಹುದೆಂದು ಯೋಚಿಸಿ ದಿಃ07/02/2013 ರಂದು ರಾತ್ರಿ 10-00 ಗಂಟೆಯಲ್ಲಿ ಮನೆಯಲ್ಲಿ ಟಿ.ವಿ ನೋಡುತ್ತಾ ಮನೆಯ ಬಾಗಿಲು ಹಾಕಿಕೊಳ್ಳದೆ ಹಾಗೇ ಮಲಗಿದ್ದ ಶಿವಶಂಕರನ ಮನೆಗೆ ನಿಂಗರಾಜ ಹೋಗಿ ಶಿವಶಂಕರನ ಮುಖದ ಮೇಲೆ ದೊಣ್ಣೆಯಿಂದ ಹೊಡೆದು ಆತನ ಕತ್ತನ್ನು ಕೈಗಳಿಂದ ಹಿಸುಕಿ ಕೊಲೆ ಮಾಡಿರುತ್ತಾನೆಂದು ವಿಚಾರಣಾ ತನಿಖಾ ಕಾಲದಲ್ಲಿ ತಿಳಿದು ಬಂದಿರುತ್ತದೆ.
ಸದರಿ ನಿಂಗರಾಜುವನ್ನು ದಿಃ26/03/2013 ರಂದು ದಸ್ತಗಿರಿ ಮಾಡಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ಅತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚಿದ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ ಕೆ.ಅರ್. ಪ್ರಸಾದ್ ರವರು ಮತ್ತು ಅವರ ಅದಿಕಾರಿ ಮತ್ತು ಸಿಬ್ಬಂದಿಯವರಾದ ಆರಕ್ಷಕ ಉಪ ನಿರೀಕ್ಷಕರಾದ ಎನ್.ಎಂ. ಪೂಣಚ್ಚ ಹಾಗೂ ಸಿಬ್ಬಂದಿರವರನ್ನು ಮಾನ್ಯ ಅರಕ್ಷಕ ಅಧೀಕ್ಷಕರಾದ ಶ್ರೀ ¨ಣ ಗುಲಾಬರಾವ್ ಬೊರಸೆ, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.
No comments:
Post a Comment