ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-03-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ವಂಚನೆ/ಹಣ ದುರಪಯೋಗ ಪ್ರಕರಣ ಹಾಗು 18 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 13-03-2013 ರಂದು ಪಿರ್ಯಾದಿ ಕಾಳಿಂಗ ಬಿನ್. ಲೆಃ ತಮ್ಮಯ್ಯ, ಗೊರವಾಲೆ ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಲ್ಲೋಕ್, ಅವರ ಮಗ ಎನ್.ಟಿ ನಿಂಗರಾಜು ಬಿನ್ ಕಾಳಿಂಗ ವಯಸ್ಸು, 20 ವರ್ಷ, ಸಾದಾರಣ ಮೈಕಟ್ಟು, ವಿದ್ಯಾರ್ಹತೆ : 2 ನೇ ಪಿ.ಯು.ಸಿ. ಎತ್ತರ :- ಸುಮಾರು 5.8 ಅಡಿ , ದುಂಡುಮುಖ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ ಈತನು ದಿನಾಂಕ: 22-02-2013 ರಂದು ಸಂಜೆ 06-00 ಗಂಟೆಯಲ್ಲಿ ಗೊರವಾಲೆ ಗ್ರಾಮದಿಂದ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 498(ಎ) 324-506 ಐ.ಪಿ.ಸಿ.
ದಿನಾಂಕ: 13-03-2013 ರಂದು ಪಿರ್ಯಾದಿ ಶಶಿಕಲಾ ಕೋಂ. ವೈರಮುಡಿ, ಕೆಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇಂದರೆ ಅವರ ಗಂಡ ವೈರಮುಡಿಗೌಡ ಬಿನ್. ಗೌಡಯ್ಯ ಹುಯಿಲಾಳ ಗ್ರಾಮ, ಮೈಸೂರು ಜಿಲ್ಲೆ ರವರು ಪಿರ್ಯಾದಿಯವರಿಗೆ ಮಾನಸಿಕ ಕಿರುಕುಳ ನೀಡಿ ಓನಕೆಯಿಂದ ಹೊಡೆದು ಕೋಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ/ಹಣ ದುರಪಯೋಗ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. 420-405-409-465-468 ಕೂಡ 34 ಐ.ಪಿ.ಸಿ.
ದಿನಾಂಕ: 13-03-2013 ರಂದು ಪಿರ್ಯಾದಿ ಲಿಂಗರಾಜು ಬಿನ್. ಲೇಟ್. ತೂರನಲಿಂಗೇಗೌಡ, ಪಣಕನಹಳ್ಳಿ ಗ್ರಾಮ, ಕಸಭಾ ಹೋಬಳಿ, ಮಂಡ್ಯ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಶ್ರೀಮತಿ ಅನಿತಾ ಎನ್.ಎಂ. ಕೋಂ ಲಿಂಗರಾಜು, 30ವರ್ಷ, ನಗರಕೆರೆ ಗ್ರಾಮ, ಮದ್ದೂರು ತಾಲ್ಲೊಕು ಹಾಗು 2] ಶ್ರೀ ಶಿವಲಿಂಗಯ್ಯ, ಮ್ಯಾನೇಜರ್/ಸೆಕ್ರರೆಟರಿ, ಹನುಮಂತನಗರ ಪ್ರೈಮರಿ ಅಗ್ರಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿ, ಯರಗನಹಳ್ಳಿ ಗ್ರಾಮ, ಮದ್ದೂರು ರವರುಗಳು ಪಿರ್ಯಾದಿ ರವರ ಬಾಬ್ತು ಎಲ್.ಐ.ಸಿ ಪಾಲಿಸಿ ಸಂಖ್ಯೆ 722001368 ರಲ್ಲಿನ ಬೋನಸ್ ಹಣ 19990-00 ಚೆಕ್ ನಂ 127439 ರಲ್ಲಿ ದಿಃ-28-10-2011 ರಲ್ಲಿ ಎಲ್.ಐ.ಸಿ. ಮಂಡ್ಯ ಶಾಖೆಯಿಂದ ಪಿರ್ಯಾದಿರವರ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಬಂದಿದ್ದು ಸದರಿ ವಿಳಾಸದಲ್ಲಿ ವಾಸವಿದ್ದಾಗ ಆರೋಪಿ-1 ರವರು ಮೇಲ್ಕಂಡ ಚೆಕ್ನ್ನು ಪಡೆದು ಆರೋಪಿ-2 ರವರೊಡನೆ ಶಾಮಿಲಾಗಿ ಅವರ ಕೋ-ಅಪರೇಟಿವ್ ಬ್ಯಾಂಕ್ ಮುಖಾಂತರ ಪಿರ್ಯಾದಿರವರಿಗೆ ಒಪ್ಪಿಸದೆ ಅವರ ಗಮನಕ್ಕೆ ಬಾರದಂತೆ ಚೆಕ್ ನಗದೀಕರಿಸಿಕೊಂಡು ತಾನೇ ಸ್ವತಃ ದಿಃ-05-12-2011 ರಂದು ಹಣವನ್ನು ತಮ್ಮ ಸ್ವಂತಕ್ಕೆ ಬಳಿಸಿಕೊಂಡಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment