ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-04-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ, 2 ಕಳವು ಪ್ರಕರಣಗಳು ಹಾಗು 36 ಚುನಾವಣಾ ಅಕ್ರಮ/ಮುಂಜಾಗ್ರತೆ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್.ನಂ. 24/13 ಕಲಂ. 174 ಸಿ,ಆರ್,ಪಿ.ಸಿ.
ದಿನಾಂಕ: 27-04-2013 ರಂದು ಪಿರ್ಯಾದಿ ಪಾರ್ವತಿ ಬಿನ್. ವಿಜಿಕುಮಾರ್, ಮರಾಠಿ, ನಂ.55. ಬಿ.ಎಂ.ಸಿನಗರ, ಮೈಸೂರು. ರವರು ನೀಡಿದ ದೂರು ಏನೆಂದರೆ ದಿನಾಂಕ: 23-04-2013 ರಂದು ಶ್ರೀರಂಗಪಟ್ಟಣ ಟೌನ್ ನ ಬಳಿ ಅವರ ತಂದೆ ಹಾಗೂ ಅವರ ಮಗ ಸ್ಟವ್ ರಿಪೇರಿ ಮಾಡಲು ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಆ ದಿನ ಪಿರ್ಯಾದಿಯವರ ತಂದೆ ಹಾಗೂ ತಮ್ಮ ಇಲ್ಲೆ ಉಳಿದುಕೊಂಡರು ಬೆಳಿಗ್ಗೆ 06-30 ಗಂಟೆಯಲ್ಲಿ ಪಿರ್ಯಾದಿಯವರ ತಮ್ಮ ಹಾಗೂ ನಾರಾಯಣ, ಕೃಷ್ಣಪ್ಪ, ಮುಜಾರವರುಗಳು ಪೋನ್ ಮಾಡಿ ನಮ್ಮ ತಂದೆ ಸತ್ತು ಹೋಗಿರುತ್ತಾರೆಂದು ತಿಳಿಸಿರುತ್ತಾರೆ ನಮ್ಮ ತಂದೆಯ ಸಾವಿನ ಬಗ್ಗೆ ಅನುಮಾನ ಇರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. ಹೆಂಗಸು ಕಾಣಿಯಾಗಿದ್ದಾಳೆ.
ದಿನಾಂಕ: 27-04-2013 ರಂದು ಪಿರ್ಯಾದಿ ಸಿದ್ದಪ್ಪ ಬಿನ್. ಮಹದೇವಪ್ಪ, ಮಾದರಹಳ್ಳಿ ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಪಾರ್ವತಮ್ಮ ಈಗ್ಗೆ ಸುಮಾರು 6 ವರ್ಷಗಳ ಹಿಂದೆ ತನ್ನ ತಂದೆಯ ಮನೆಯಿಂದ ಹೋಗಿದ್ದು ಬಂದಿರುವುದಿಲ್ಲ ಎಲ್ಲ್ಲಾಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 279, 304(ಎ) ಐ.ಪಿ.ಸಿ.
ದಿನಾಂಕ: 27-04-2013 ರಂದು ಪಿರ್ಯಾದಿ ಎಂ.ಪಿ.ಹರಿಪ್ರಸಾದ್, ಮನೆ ನಂ. #676/2, 2ನೇ ಕ್ರಾಸ್, ಜೈನ್ಸ್ ಸ್ಟ್ರೀಟ್, ಮಸೀದಿ ರಸ್ತೆ, ಮಂಡ್ಯ. ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-04-2013 ರಂದು ರಾತ್ರಿ 09-40 ಗಂಟಿಯಲ್ಲಿ, ಮಂಡ್ಯ ಸಿಟಿ ಸಂತೆಮಾಳದ ಸ್ಕೂಲ್ ಮುಂಭಾಗದ ಬಳಿ ಆರೋಪಿ ಕೆಎ-11/ಡಬ್ಲ್ಯೂ-9849ರ ಮೋಟಾರ್ ಸೈಕಲ್ ಸವಾರ ಹೆಚ್,ಕಾಳೇಗೌಡ, 2ನೇ ಕ್ರಾಸ್, ಜೈನ್ಸ್ ಸ್ಟ್ರೀಟ್ ಮಸೀದಿ ರಸ್ತೆ, ಮಂಡ್ಯ. ರವರು ತಮ್ಮ ಮೋಟಾರ್ ಸೈಕಲ್ನ್ನು ಅತಿವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ಹಾಕಿದ್ದ ಮೋರಿಯ ಡ್ರೈನೇಜಿನ ಮಣ್ಣಿನ ಗುಡ್ಡೆಯ ಮೇಲೆ ಮೋಟಾರ್ ಸೈಕಲ್ನ್ನು ಹತ್ತಿಸಿ ಆಯಾತಪ್ಪಿ ರಸ್ತೆಗೆ ಬಲಮಗ್ಗಲಾಗಿ ಬಿದ್ದಾಗ ಅವರಿಗೆ ತಲೆಗೆ, ಮುಖಕ್ಕೆ ಹಾಗೂ ಇತರೆ ಕಡೆಗಳಿಗೆ ಪೆಟ್ಟಾಗಿದ್ದು, ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದು ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 379 ಐ.ಪಿ.ಸಿ.
ದಿನಾಂಕ: 27-04-2013 ರಂದು ಪಿರ್ಯಾದಿ ನಾಗಮ್ಮ, ಬಿ. ಗೌಡಗೆರೆ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ:27-04-2013ರಂದು ದೇಶಹಳ್ಳಿ ಗ್ರಾಮದ ಪಿರ್ಯಾದಿಯವರ ಸುಮಾರು 48000=00 ರೂ ಬೆಲೆಬಾಳುವ ಮಾಂಗಲ್ಯ ಸರವನ್ನು ಯಾರೋ ಕಳ್ಳರು ಕಿತ್ತುಕೊಂಡಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 379 ಐ.ಪಿ.ಸಿ.
ದಿನಾಂಕ: 27-04-2013 ರಂದು ಪಿರ್ಯಾದಿ ಕ್ರಪಾಲ್ ಸಿಂಗ್ ಶ್ಯಾಮ್, ಬನರ್ಾಡ್ ಲಾಡ್ಜ್, ಬಾತ್ ರೋಡ್, ಕಾನರ್್ಬ್ರೂಕ್, ಯು.ಕೆ. ದೇಶದ ವಾಸಿ ರವರು ನೀಡಿದ ದೂರು ಏನೆಂದರೆ ದಿನಾಂಕ: 27-04-2013 ರಂದು ಬೃಂದಾವನ ಗಾರ್ಡನ್ನ ಸಂಗೀತ ನೃತ್ಯ ಕಾರಂಜಿಯ ಬಳಿ ಯಾರೋ ಅಪರಿಚಿತರು 350 ಪೌಂಡ್ ಸ್ಟರ್ಲಿಂಗ್, 12500/- ರೂ ಹಣವನ್ನು ಹಾಗೂ ಬಾರ್ಕಲೇಯ 1 ಡೆಬಿಟ್ ಕಾರ್ಡನ್ನು ಕಳ್ಳತನ ಮಾಡಿರುತ್ತಾರೆ ಅದನ್ನು ಪತ್ತೆಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment