Moving text

Mandya District Police

DAILY CRIME REPORT DATED : 15-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-05-2013 ರಂದು ಒಟ್ಟು 29 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 3 ಅಕ್ರಮ ಮರಳು ಕಳವು ಮತ್ತು ಸಾಗಾಣಿಕೆ/ವಾಹನ ಕಳವು/ಸಾಮಾನ್ಯ ಕಳವು ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ ಹಾಗು 24 ಇತರೆ ಐ.ಪಿ.ಸಿ.ಸಿ./ಸಿ.ಆರ್.ಪಿ.ಸಿ./ಅಬಕಾರಿ ಪ್ರಕರಣಗಳು ವರದಿಯಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 172/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 15-05-2013 ರಂದು ಪಿರ್ಯಾದಿ ವೆಂಕಟಾಚಲ, ನಯನಕ್ಷತ್ರಿಯ ಜನಾಂಗ, ಅರಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎ.ವಿ ದಿವ್ಯಶ್ರೀ, 20 ವರ್ಷ, ಮನೆಕೆಲಸ, ಅರಕೆರೆ ರವರು ದಿನಾಂಕ: 07-05-2013 ರಂದು ಸಂಜೆ 04-30 ಅರಕೆರೆ ಟೌನ್ ನ, ಫಿರ್ಯಾದಿಯವರ ಮನೆಯಿಂದ ಬಿಸಿಲು ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಅಕ್ರಮ ಮರಳು ಕಳವು ಮತ್ತು ಸಾಗಾಣಿಕೆ/ವಾಹನ ಕಳವು/ಸಾಮಾನ್ಯ ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 223/13 ಕಲಂ. 504-143-147-149-188-379-353 ಐ.ಪಿ.ಸಿ.

       ದಿನಾಂಕ: 15-05-2013 ರಂದು ಪಿರ್ಯಾದಿ ರವಿ ಜೆ. ಸಕರ್ಾರಿ ನೌಕರರು ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಪ್ರಕಾಶ್, ಮಹದೇವ, ಜಯರಾಮು, ನಂಜೇಗೌಡ, ನಂಜುಡೇಗೌಡ ಬನ್ನಹಳ್ಳಿ ಗ್ರಾಮ ರವರುಗಳು ಅಕ್ರಮವಾಗಿ ಮರಳನ್ನು ಎತ್ತಿನ ಗಾಡಿಯಿಂದ ಸಾಗಿಸುತ್ತಿದ್ದಾಗ ಮೇಲ್ಕಂಡವರನ್ನು, ಮರಳು ಸಾಗಿಸುವುದನ್ನು ತಡೆಗಟ್ಟಲು ಮುಂದಾದಾಗ ಬನ್ನಹಳ್ಳಿ ಗ್ರಾಮದ ಪ್ರಕಾಶ್ ಬಿನ್ ಹುಲೀಗೌಡ, ಮಹದೇವು ಬಿನ್. ಬಳ್ಳೇಗೌಡ ರವರು ರವಿ ಜೆ.ಮೇಲೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಶಟರ್್ನ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿರುತ್ತಾರೆ. ಹಾಗೂ ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಗರಾದ ದೇವಪ್ಪ ರವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾ ಸರ್ಕಾರಿ  ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಕಲಂ. 41 ಕ್ಲಾಸ್.-ಡಿ, 102 ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ಸಂತೋಷ್ ಕಶ್ಯಪ್, ಪಿಎಸ್ಐ, ಕೆ.ಆರ್.ಪೇಟೆ ಗ್ರಾ. ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:15-05-2013 ರಂದು ಮಧ್ಯಾಹ್ನ 02-00 ಗಂಟೆಯಲ್ಲಿ, ಅಂಚನಹಳ್ಳಿ ಗ್ರಾಮದ ಬೋರ್ವೆಲ್ ಹಳ್ಳದ ಹತ್ತಿರ ಪಿಎಸ್ಐ ರವರು ಸಿಬ್ಬಂದಿಯವರ ಜೊತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆರೋಪಿ ಕೆಎ-12-ಎಲ್-1659 ರ ಹಿರೋಹೊಂಡಾ ಬೈಕನ್ನು ಓಡಿಸಿಕೊಂಡು ಬರುತ್ತಿದ್ದು ಪಿರ್ಯಾದಿಯವರನ್ನು ನೋಡಿ ಬೈಕನ್ನು ಬಿಟ್ಟು ಓಡುತ್ತಿದ್ದಾಗ ಆಸಾಮಿಯನ್ನು ಹಿಡಿದು ಬೈಕಿನ ಬಗ್ಗೆ ಪ್ರಶ್ನಿಸಲಾಗಿ ಸರಿಯಾದ ಮಾಹಿತಿ ನೀಡದೆ ತಡವರಿಸುತ್ತಾ ಯಾವುದೇ ದಾಖಲೆಯನ್ನು ಹಾಜರುಪಡಿಸದಿದ್ದರಿಂದ ಆಸಾಮಿಯನ್ನು ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಆಸಾಮಿಯು ತಾನು ಈ ಹಿಂದೆ ಕೆಎ-12-ಎಲ್-1659 ರ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಐ.ಸಿ.ಎಲ್. ಫ್ಯಾಕ್ಟರಿಯ ಹತ್ತಿರ ಕಳವು ಮಾಡಿರುವುದಾಗಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



3.  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 447-506-379 ಕೂಡ 34 ಐ.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ಮಂಟೆಸ್ವಾಮಿ, ಕೆ.ಆರ್. ಕ್ಯಾತಘಟ್ಟ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಸಿದ್ದೇಗೌಡ, 2] ಸಿದ್ದರಾಜು, 3] ಭಾಗ್ಯ, 4] ಲಕ್ಷ್ಮಿ, ಎಲ್ಲರೂ ಕ್ಯಾತಘಟ್ಟ ಗ್ರಾಮದವರು ಇವರುಗಳು ಹಿಂದಿನಿಂದ ತೊಂದರೆ ನೀಡುತ್ತಿದ್ದು ದಿನಾಂಕ:11-05-2013 ರಂದು ಕ್ಯಾತಘಟ್ಟ ಗ್ರಾಮದ ಸರ್ವೆ. ನಂ.68/5ಬಿ ಪಿರ್ಯಾದಿಯವರ ಪಿತಾರ್ಜಿತ  ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ತೆಂಗಿನ ಫಸಲನ್ನು ಕಟಾವು ಮಾಡಿರುತ್ತಾರೆ ಹಾಗೂ ತೊಂದರೆ ನೀಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 15-05-2013 ರಂದು ಪಿರ್ಯಾದಿ ದೇವಮ್ಮ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ, ಮಂಡ್ಯ ತಾಲೊಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪುಷ್ಪಲತಾ, 30 ವರ್ಷ, ಒಕ್ಕಲಿಗರು, ಗೃಹಿಣೆ, ವಾಸ ಟಿ. ಮಲ್ಲಿಗೆರೆ ಗ್ರಾಮ, ಮಂಡ್ಯ ತಾ. ರವರಿಗೆ ಸರಿಯಾಗಿ ಮಾತು ಬರುತ್ತಿರಲ್ಲಿ, 8 ವರ್ಷಗಳ ಹಿಂದೆ ಟಿ.ಮಲ್ಲಿಗೆರೆ ಗ್ರಾಮದ ಲೇಟ್. ಕೆಂಪೇಗೌಡರ ಮಗನಾದ ಪ್ರಕಾಶನಿಗೆ ಮದುವೆಮಾಡಿದ್ದು, ನನ್ನ ಮಗಳು ಗಭರ್ಿಣಿಯಾಗಿದ್ದು, ನಮ್ಮಮನೆಗೆ ಬಂದಿದ್ದಳು, ದಿನಾಂಕ: 02-05-2013 ರಂದು ರಾತ್ರಿ 09-00 ಗಂಟೆಯಲ್ಲಿ ನಮ್ಮ ಮಗಳ ಗಂಡನಾದ ಪ್ರಕಾಶ ಮನೆಗೆ ಬಂದಿದ್ದು, ನನ್ನ ಮಗಳು ಹಾಲು ಕಾಯಿಸಲು ಪುಷ್ಪಲತಾ ಸೀಮೇಎಣ್ಣೆ ಸ್ಟೌವ್ ಹಚ್ಚಲು ಸ್ಟೌವ್ ಪಂಪ್ ಮಾಡುತ್ತಿದ್ದು, ಸೀಮೆಎಣ್ಣೆ ಹೊರಚಿಮ್ಮಿ ದಗ್ ಎಂದು ಚೆಂಕಿ ಹತ್ತಿಕೊಂಡು ಆಕಸ್ಮಿಕವಾಗಿ ಬೆಂಕಿ ನನ್ನ ಮಗಳು ತೊಟ್ಟಿದ ನೈಟಿಗೆ ತಗುಲಿ ಬೆಂಕಿ ಹತ್ತಿಕೊಂಡು ನನ್ನ ಅಳಿಯ ಪ್ರಕಾಶ್ ಓಡಿಹೋಗಿ ಬೆಂಕಿಹಾರಿಸಿದರು, ಇದರಿಂದ ನನ್ನ ಮಗಳಿಗೆ ಮುಖ ಎದೆಭಾಗ ಹೊಟ್ಟೆ, ಮತ್ತು ಮಂಡಿಯಿಂದ ಕೆಳಗಡೆ ಸುಟ್ಟಗಾಯವಾಗಿದ್ದು ನನ್ನ ಅಳಿಯನಿಗೂ ಬಲಕೈ ಸುಟ್ಟಗಾಯವಾಗಿತ್ತು ನಂತರ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದು, ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ನನ್ನ ಮಗಳ ಮೃತದೇಹವು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ, ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಇತ್ಯಾದಿ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

No comments:

Post a Comment