ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-05-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿರುತ್ತವೆ ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು, 1 ಕಳ್ಳತನ ಪ್ರಕರಣ, 3 ಮಹಿಳಾ ದೌರ್ಜನ್ಯ /ವರದಕ್ಷಿಣೆ ಕಿರುಕುಳ ಪ್ರಕರಣಗಳು, 1 ಕೊಲೆ/ವರದಕ್ಷಿಣೆ ಸಾವಿನ ಪ್ರಕರಣ, 1 ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ, 4 ರಸ್ತೆಅಪಘಾತ ಹಾಗು ವಿದ್ಯುಚ್ಚಕ್ತಿ ಅಪಥಾತ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 17 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಐ.ಎಂ.ವಿ. ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 174(ಸಿ) ಸಿ.ಆರ್.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಅಕ್ಬರ್ ಬಿನ್. ಇಂತಿಯಾಜ್, ಹರಳಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:18-05-2013 ರಂದು ಪಾಂಟವಪುರ ಟೌನ್ ನ ಚಂದ್ರಶೇಖರಯ್ಯ ರವರ ಕಲ್ಲು ಕೋರೆ ಬಳಿ, ಇಂತಿಯಾಜ್, ಹರಳಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ಎಂಬುವವರು ಮನೆಯಿಂದ ಟೀ ಕುಡಿದುಕೊಂಡು ಬರುತ್ತೇನೆಂದು ಹೇಳಿ ಹೋದವರು ವಾಪಸ್ ಬಂದಿರುವುದಿಲ್ಲ ಒಬ್ಬ ವ್ಯಕ್ತಿ ಮೈಸೂರಿನ ಚಂದ್ರಶೇಖರಯ್ಯ ರವರ ಕಲ್ಲು ಕೋರೆಯ ಬಳಿ ಸತ್ತು ಹೋಗಿದ್ದಾರೆ ಎಂದು ತಿಳಿಸಿದರು. ಆಗ ನಾವು ಅಲ್ಲಿ ಹತ್ತಿರಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯವರ ಶವವಾಗಿತ್ತು. ನಮ್ಮ ತಂದೆಯವರು ದಿನಾಂಕಃ 18-05-2013 ರಂದು ಸಂಜೆ ಎಲ್ಲೋ ಕಲ್ಲು ಬಂಡೆಯಿಂದ ಕೆಳಕ್ಕೆ ಬಿದ್ದು ತಲೆಗೆ ಮೈ ಕೈಗೆ ಪೆಟ್ಟಾಗಿ ಮೂಗು ಬಾಯಲ್ಲಿ ರಕ್ತ ಬಂದು ಸತ್ತಿರುವಂತೆ ಕಂಡು ಬಂದಿರುತ್ತೆ. ಆದರೂ ನಮ್ಮ ತಂದೆಯವರ ಸಾವಿನಲ್ಲಿ ನಮಗೆ ಅನುಮಾನವಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 27/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಹೆಚ್.ಎಲ್. ಹರೀಶ, ಹಾರೋಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷಮ್ಮ 73 ವರ್ಷ ಹಾರೋಹಳ್ಳೀ ಗ್ರಾಮ ಎಂಬುವರಿಂದ ನರ್ಸ್ ಅನುಸೂಯ ಎಂಬುವವರು ಮನೆಯನ್ನು ಕ್ರಯಕ್ಕೆ ತೆಗೆದುಕೊಂಡಿದ್ದು ನಂತರ ಆಕೆಯನ್ನು ಮಡುವಿನಕೋಡಿ ಗ್ರಾಮದ ಗೌರಮ್ಮನ ಮನೆಗೆ ಬಿಟ್ಟಿದ್ದು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆಕೆಯನ್ನು ದಿನಾಂಕ:17-5-2013 ರಂದು ಪಾಂಡವಪುರ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಮೈಸೂರು ಜಯದೇವ ಆಸ್ಪತ್ರೆಗೆ ಸೇರಿಸಿದ್ದು ಅವರು ದಿನಾಂಕ:18-5-2013 ರಂದು ಸಂಜೆ 07-00 ಗಂಟೆಯಲ್ಲಿ ಮೃತಪಟ್ಟಿದ್ದು ಆಕೆಯ ಸಾವಿನಲ್ಲಿ ಅನುಮಾನವಿದೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಕಳ್ಳತನ ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 380, ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಯೋಗೇಶ್ ಚಂದನ್, ಬಿನ್. ಶ್ರೀ. ನಾರಯಣ್, 40 ವರ್ಷ, ರಾಜಸ್ಥಾನ, ಬಿ-92, ತಲವಂಡಿ, ಕೋಟ- 324005 ಚಾಟರ್ೆಡ್ ಅಕೌಂಟ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:18-05-2013 ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಪಂಪ್ ಹೌಸ್ ಸರ್ಕಲ್ ಬಳಿ ಇರುವ ನ್ಯೂ ಶಾರದ ರೆಸಾಟರ್್ಗೆ ಬೇಟಿ ನೀಡಿದ್ದು, ರೆಸಾರ್ಸ್ ನಲ್ಲಿ ರಾತ್ರಿ ಮಲಗಿದ್ದಾಗ ಈ ದಿನ ಮದ್ಯರಾತ್ರಿಯಿಂದ ಬೆಳಗಿನ ವೇಳೆಯಲ್ಲಿ ಅವರ ಬಳಿಯಿದ್ದ 35.000 ರೂ ಹಣವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ /ವರದಕ್ಷಿಣೆ ಕಿರುಕುಳ/ನಿಷೇಧ ಕಾಯಿದೆ ಪ್ರಕರಣಗಳು :
1.ಕೊಪ್ಪ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 498(ಎ) ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಎ.ಅಭಿಲಾಷ ಬಿನ್. ಶಿವರಾಮೇಗೌಡ, 24ವರ್ಷ. ಒಕ್ಕಲಿಗರು, ಗೃಹಿಣಿ. ಅರಗಿನಮೆಳೆ ಗ್ರಾಮ. ಕೊಪ್ಪ ಹೋ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಗಂಡ ಅನ್ಯೊನ್ಯವಾಗಿದ್ದು ತದ ನಂತರ ನನಗೆ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದನು. ಗಂಡನ ಮನೆ ಕೋಡಿನಾಗನಹಳ್ಳಿಯಲ್ಲಿ ಗಂಡ ಎನ್.ರಘು, ಅತ್ತೆ ಪುಟ್ಟರಾಜಮ್ಮ, ನಂಜೇಗೌಡ( ಮಾವ), ಮೈದ ಪ್ರಸನ್ನ, ನಾದಿನಿ ಚಂದ್ರಕಲಾ, ಎಲ್ಲರೂ ಕೋಡಿನಾಗನಹಳ್ಳಿ ಗ್ರಾಮ, ಕೊಪ್ಪ ಹೋ. ಮದ್ದೂರು ಸಹಾ ನನ್ನೊಡನೆ ಪ್ರತಿನಿತ್ಯ ಗಲಾಟೆ ಮಾಡುವುದು ಎಲ್ಲರೂ ಕೈಯಿಂದ ಹೊಡೆದು ಕಾಲಿನಿಂದ ತುಳಿದು ದೈಹಿಕವಾಗಿ ಹಿಂಸೆ ನೀಡುವುದು ಮಾಡುತ್ತಿರುತ್ತಾರೆ ಎನ್.ರಘು ನನ್ನೊಡನೆ ಬಾಳ್ವೆ ಮಾಡುವುದಿಲ್ಲ, ಐವತ್ತು ಸಾವಿರ ರೂ ಹಣ ನೀಡುತ್ತೇನೆ ನೀನು ನಿನ್ನ ತಂದೆ ಮನೆಯಲ್ಲಿಯೇ ಇರು ಎಂದು ಸಬೂಬು ಹೇಳಿದನು. ಈ ವರೆವಿಗೂ ಸಹಾ ನನ್ನೊಡನೆ ಬಾಳ್ವೆ ಮಾಡಲೂ ಸಹಾ ಮುಂದಾಗದೆ ತೊಂದರೆ ನೀಡುತ್ತಿರುವುದನ್ನೆ ಮುಂದುವರೆಸುತ್ತಿರುವ ಮೇಲ್ಕಂಡವರ ಮೇಲೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ: 19-05-2013 ರಂದು ಪಿರ್ಯಾದಿ ಸರೋಜ ಕೊಂ. ನಂದೀಶ, ವಕ್ಕಲಿಗರು, ರಾಂಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ನಂದೀಶ ಬಿನ್. ಕೃಷ್ಣಗೌಡ, ರಾಂಪುರ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ಪಿರ್ಯಾದಿಯವರ ಶೀಲವನ್ನು ಶಂಕಿಸಿ ಮಾನಸಿಕವಾಗಿ ದೈಹಿಕವಾಗಿ ಹಿಂಸೆಕಿರುಕುಳ ನೀಡಿ ದಿನಾಂಕ:19-05-2013 ರಂದು ಸಂಜೆ 06-30 ಗಂಟೆಯಲ್ಲಿ ಕೂಡಗೂಲಿನಿಂದ ತಲೆಗೆ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 143-498(ಎ)-506 ಕೂಡ 3 ಮತ್ತು 4 ಡಿ ಪಿ ಆಕ್ಟ್
ದಿನಾಂಕ: 19-05-2013 ರಂದು ಪಿರ್ಯಾದಿ ಶೃತಿ ಕೊಂ. ಎಂ. ಬಾಬು ರಾಜೇಂದ್ರ ಪ್ರಸಾದ್, ಬಿನ್. ಪಾರ್ಥಸಾರಥಿ, ಅರಳಕುಪ್ಪೆ ಗ್ರಾಮ, ಶ್ರಿರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಅವರ ಗಂಡ 1)ಎಂ. ಬಾಬು ರಾಜೇಂದ್ರಪ್ರಸಾದ್ 2)ಸುಲೋಚನ 3) ಮರೀಗೌಡ ಇವರೂ ಅರಳಕುಪ್ಪೆ ಗ್ರಾಮ ಹಾಗು 4) ಸೌಮ್ಯ 5) ದಿವಾಕರ, ಕಪ್ಪರನ ಕೊಪ್ಪಲು ಗ್ರಾಮ ಇವರುಗಳು ಪಿರ್ಯಾದಿಯವರಿಗೆ ಸಮಾನ ಉದ್ದೇಶದಿಂದ ವರದಕ್ಷಿಣೆ ತೆಗುದುಕೊಂಡು ಬಾ ಎಂದು ಮಾನಸಿಕ ಹಾಗೂ ಮತ್ತು ದೈಹಿಕ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿರುತ್ತೇರೆಂದು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ/ವರದಕ್ಷಿಣೆ ಸಾವಿನ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 221/13 ಕಲಂ. 143, 304[ಬಿ], 302 ಕೂಡ 149 ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಸಿ.ದೇವರಾಜು ಬಿನ್. ಚನ್ನೇಗೌಡ, 50 ವರ್ಷ, ಒಕ್ಕಲಿಗರು, ವಾಸ ಬೊಮ್ಮನಾಯ್ಕನಹಳ್ಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ. ಹಾಲಿ ವಾಸ ನಂ, 28, 4ನೇ ಮೈನ್, 4ನೇ ಕ್ರಾಸ್, 7ನೇ ಬ್ಲಾಕ್, ಬಿಎಸ್ಕೆ 3ನೇ ಹಂತ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18-05-2013 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ಮಂಡ್ಯದಿಂದ ರೈಸ್ಮಿಲ್ ಗುರು ಎಂಬುವರು ಫಿರ್ಯಾದಿಗೆ ಪೋನ್ ಮಾಡಿ ನಿಮ್ಮ ಮಗಳು ತೇಜುಗೆ ಉಷಾರಿಲ್ಲದೆ ಮಂಡ್ಯದ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಮೃತಪಟ್ಟಿರುತ್ತಾಳೆಂದು ತಿಳಿಸಿದ್ದು ಕೂಡಲೇ ಫಿರ್ಯಾದಿಯು ತಮ್ಮ ಸಂಬಂಧಿಕರೊಂದಿಗೆ ಆಸ್ಪತ್ರೆಗೆ ಬಂದು ತಮ್ಮ ಮಗಳ ಶವವನ್ನು ನೋಡಲಾಗಿ ಆಕೆಯ ಕುತ್ತಿಗೆಯಲ್ಲಿ ಯಾವುದೋ ವಸ್ತುವಿನಿಂದ ಕೊರೆದಿರುವಂತಹ ಗುರುತು ಕಂಡು ಬಂದಿರುತ್ತದೆ. ತಮ್ಮ ಮಗಳಿಗೆ ಆರೋಪಿತರಾದ 1] ಡಾ|| ರಾಘವೇಂದ್ರ (ಗಂಡ) 2] ಇಂದ್ರಮ್ಮ (ಅತ್ತೆ) 3] ಲಿಂಗೇಗೌಡ (ಮಾವ) 4] ಶ್ವೇತ (ನಾದಿನಿ) 5] ಸ್ಮಿತ (ನಾದಿನಿ ಗಂಡನ ಅಕ್ಕ) 6] ಶಂಕರೇಗೌಡ (ಗಂಡನ ಸೋದರ ಮಾವ) ಎಲ್ಲರೂ ಕಲ್ಲಹಳ್ಳಿ, ಮಂಡ್ಯ ಸಿಟಿ. ರುಗಳೆಲ್ಲರೂ ಸೇರಿಕೊಂಡು ಇನ್ನು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ದಿನಾಂಕ: 18-05-2013 ರಂದು ಯಾವುದೋ ವಸ್ತುವಿನಿಂದ ತಮ್ಮ ಮಗಳ ಕುತ್ತಿಗೆಯನ್ನು ಬಿಗಿದು ನಂತರ ಆಸ್ಪತ್ರೆಗೆ ತಂದು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 436 ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಮಲ್ಲನಗೌಡ ಪಾಟೀಲ್ ಬಿನ್. ಲೇಟ್ ಫಕೀರ್ಗೌಡ, ಮ್ಯಾನೇಜರ್, ವಿ.ಆರ್.ಎಲ್. ಲಾಜಿಸ್ಟಿಕ್ ಲಿಮಿಟೆಡ್ ಕಂಪನಿ, ಮಂಡ್ಯ ಶಾಖೆ. ವಾಸ ಎಂ.ಸಿ.ರಸ್ತೆ, ಕಲ್ಲಹಳ್ಳಿ, ಮಂಡ್ಯ ಸಿಟಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-05-2013 ರಂದು ಬೆಳಗಿನ ಜಾವ 03-00 ಗಂಟೆಯಲ್ಲಿ ಯಾರೋ ದುಷ್ಕಮರ್ಿಗಳು ತಮ್ಮ ಕಂಪನಿಯ ಕಾಂಪೌಂಡ್ ಮೇಲೆ ನೆಗೆದು ಒಳಪ್ರವೇಶಿಸಿ ರಾತ್ರಿ ಪಾಳಯದಲ್ಲಿದ್ದ ವಾಚ್ಮನ್ ಶಿವಣ್ಣನನ್ನು ತಳ್ಳಿ ಒಂದು ಕಡೆ ಕೂರಿಸಿ ತಮ್ಮ ಗೋದಾಮಿನ ಒಳ ಆವರಣದಲ್ಲಿ ವ್ಯಾಪಾರಸ್ಥರಿಗೆ ವಿತರಿಸಲು ಇಟ್ಟಿದ್ದ ದಾಸ್ತಾನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾರೆ. ಇದರಿಂದಾಗಿ ಬಟ್ಟೆಗಳು, ಆಟೋಮೊಬೈಲ್ ಸಂಬಂಧಿತ ವಸ್ತುಗಳು, ಫ್ರಿಡ್ಜ್, ಕಂಪ್ಯೂಟರ್ ಮತ್ತು ಸಾಮಾಗ್ರಿಗಳು, ಔಷಧಿ ಮತ್ತು ಸಂಬಂಧಿಸಿದ ವಸ್ತುಗಳು, ಟಿ.ವಿ., ಕಛೇರಿಯ ಕೆಲವು ಪ್ರಮುಖ ದಾಖಲೆ ಪತ್ರಗಳು ಇನ್ನು ಹಲವಾರು ವಸ್ತುಗಳು ಸುಟ್ಟು ಕರಕಲಾಗಿದ್ದು ಇದರಿಂದ ಸುಮಾರು 8 ರಿಂದ 10 ಲಕ್ಷ ರೂ.ಗಳು ನಷ್ಟ ಉಂಟಾಗಿರುತ್ತದೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಹಾಗು ವಿದ್ಯುಚ್ಚಕ್ತಿ ಅಪಥಾತ ಪ್ರಕರಣಗಳು :
1. ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 279, 304(ಎ) ಐಪಿಸಿ ರೆಃವಿ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 19-05-2013 ರಂದು ಪಿರ್ಯಾದಿ ಸ್ವಾಮಿ ಜಿ.ವಿ. ಬಿನ್. ವೆಂಕಟರಾಮು, 36 ವರ್ಷ, ನಂ. 27, 1ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ಕಸ್ತೂರಿ ಬಾ ನಗರ, ಮೈಸೂರು ರೋಡ್ ಬೆಂಗಳೂರು-26 ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾವುದೋ ಒಂದು ಅಪರಿಚಿತ ಕಾರಿನ ಚಾಲಕ, ಕಾರಿನ ನಂಬರ್. ಹೆಸರು ವಿಳಾಸ ತಿಳಿಯಬೇಕಾಗಿದೆ ಇವರು ದಿನಾಂಕ: 18-05-2013 ರಂದು ರಾತ್ರಿ 10-30 ಗಂಟೆಗೆ ಮದ್ದೂರು ಟೆೌನಿನ, ಕೊಲ್ಲಿ ಸರ್ಕಲ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೋಗಿ ನೋಡಲಾಗಿ ಈ ಅಪಘಾತವಾಗಿ ಬಿದ್ದಿದ್ದ ವ್ಯಕ್ತಿ ನಮ್ಮ ಮದುವೆಗೆ ಬಂದಿದ್ದ ನಮ್ಮ ಬಡಾವಣೆಯ ಜಯಶಂಕರ್ ಆಗಿದ್ದು ಆ ಸಮಯದಲ್ಲಿ ಅವರು ಪ್ರಜ್ಞಾಹೀನರಾಗಿದ್ದು ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಮದ್ದೂರು ಸಕರ್ಾರಿ ಆಸ್ಪತ್ರೆಗೆ ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಸೇರಿಸಿ ನಂತರ ಮದ್ದೂರು ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಚಿಕಿತ್ಸೆಯನ್ನು ನೀಡುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಕೆ. ಬಿ ಆಶ್ವಥ ಬಿನ್. ಬೋರೇಗೌಡ. 23 ವರ್ಷ. ಒಕ್ಕಲಿಗರು. ವ್ಯವಸಾಯ ವಾಸ ಟಿ . ಕಾಗೇಪುರ. ಕಿರುಗಾವಲು ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: ದಿನಾಂಕ 19-05-2013 ರಂದು ರಾತ್ರಿ 07-30 ಗಂಟೆಯ ಸಮಯದಲ್ಲಿ ಸೈಕಲ್ ಸವಾರ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಭುಗತಗಹಳ್ಳಿ, ಎಂ.ಬಸವನಪುರ ಗೇಟ್ ಹತ್ತಿರ ಹೋಟೆಲ್ನಲ್ಲಿ ಊಟಮಾಡಿಕೊಂಡು ವಾಪಸ್ ಕಾಗೇಪುರಕ್ಕೆ ಹೋಗುವ ಉದ್ದೇಶ ದಿಂದ ಸೈಕಲ್ನಲ್ಲಿ ಮಳವಳ್ಳಿ - ಮದ್ದೂರು ರಸ್ತೆಯ ಎಂ ಬಸವನಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕಾಗೇಪುರ ಕಡೆಗಾದಂತೆ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಮದ್ದೂರು ಕಡೆಯಿಂದ ಬಂದ ಮನೋಹರ, ಕೆಎ10 ಎಪ್ 0015ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಬಲಬಾಗಕ್ಕೆ ಬಂದು ಸೈಕಲ್ಗೆ ಮುಖಾಮುಖಿ ಡಿಕ್ಕಿ ಮಾಡಿದ ಪರಿಣಾಮ ಲಕ್ಷ್ಮಣನಿಗೆ ಬಲಬಾಗದ ಹಣೆ, ಬಲತೋಳು ಮತ್ತು ಎಢ ಮೊಣಕಾಲಿನ ಹತ್ತಿರ ಪೆಟ್ಟಾಗಿ ಚಿಕಿತ್ಸೆಗಾಗಿ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 08.20 ಗಂಟೆಯ ಸಮಯದಲ್ಲಿ ಮೃಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 157/13 ಕಲಂ. 304(ಎ) ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಹೆಚ್.ಬಿ.ಕಾಂತರಾಜು ಬಿನ್. ಹೆಚ್.ಎಸ್. ಬೋರೇಗೌಡ, ಬಿದರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:19-05-2013 ರಂದು ಮದ್ಯಾಹ್ನ 03-30 ಗಂಟೆಯಲ್ಲಿ, ಬಿದರಹೊಸಳ್ಳಿ-ಯಲಾದಳ್ಳಿ ಮುಖ್ಯ ರಸ್ತೆಯ ಕೆಜ್ಜೆಯರ ಸೇತುವೆ ಬಳಿ ಇರುವ ಟ್ರಾನ್ಸಫಾರಂ ಬಳಿ ಪಿರ್ಯಾದಿಯವರ ತಮ್ಮ ಯೋಗೇಶನು ಗದ್ದೆಯ ಹತ್ತಿರ ಹೋಗುತ್ತಿದ್ದಾಗ ಟ್ರಾನ್ಸಫಾರಂನಿಂದ ತುಂಡಾಗಿ ಬಿದಿದ್ದ ತಂತಿ ತಗುಲಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ, ಇದಕ್ಕೆ ಕೆ.ಇ.ಬಿ. ಅಧಿಕಾರಿಗಳ ನಿರ್ಲಕ್ಷತೆ ಕಾರಣವಾಗಿರುತ್ತೆ. ಈ ಬಗ್ಗೆ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 192/13 ಕಲಂ. 304, 201 ಐ.ಪಿ.ಸಿ.
ದಿನಾಂಕ: 19-05-2013 ರಂದು ಪಿರ್ಯಾದಿ ಕೆ. ನರೇಂದ್ರ ಕುಮಾರ್, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಕೆಂಪಣ್ಣ @ ಕೆಂಪಪ್ಪ, ಬೇಬಿ ಗ್ರಾಮ, ಪಾಂಡವಪುರ ತಾಲ್ಲೂಕು ಎಂಬುವವರಿಗೆ ದಿನಾಂಕ: ದಿನಾಂಕಃ 09-04-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ, ಬೇಬಿ ಗ್ರಾಮದ ಜಮೀನಿನ ಬಳಿ ದಿನಾಂಕ: 18-05-2013 ರಂದು ಎಫ್.ಎಸ್.ಎಲ್. ವರದಿಯನ್ನು ಪಡೆದಿದ್ದು ವರದಿಯನ್ನು ಪರಿಶೀಲಿಸಿ ನೋಡಲಾಗಿ ವೈದ್ಯರು ತಮ್ಮ ಅಭಿಪ್ರಾಯದಲ್ಲಿ ಮೃತನು I am of the opinion that the cause is due to Cardio Respiratory arrest due to Electrical Injury ಎಂದು ಅಬಿಪ್ರಾಯ ನೀಡಿದ ವರದಿಯನ್ನು ನೀಡಿದ್ದು ಸದರಿ ವರದಿಯನ್ನು ದಿನಾಂಕ:-19-05-2013ರಂದು ಬೇಳಿಗ್ಗೆ 10-00ಗಂಟೆಗೆ ಸ್ವೀಕರಿಸಿಕೊಂಡಿರುತ್ತೆ. ಸದರಿ ಮೃತನ ಕೆಂಪಣ್ಣ @ ಕೆಂಪಪ್ಪ ರವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರಿಂದ ಈ ಬಗ್ಗೆ ತನಿಖೆ ಕೈಗೊಳ್ಳಬೇಕಾಗಿರುವುದರಿಂದ ಈಗಾಗಲೆ ದಾಖಲಾಗಿರುವ ಯು.ಡಿ.ಆರ್. ನಂ. 13/2013 ಕಲಂ: 174[ಸಿ]ಸಿಆರ್ಪಿಸಿ. ಪ್ರಕರಣವನ್ನು ಬದಲಾಯಿಸಿ ಮೊ. ನಂ. 192/2013 ಕಲಂ: 304-201 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 19-05-2013 ರಂದು ಪಿರ್ಯಾದಿ ಪುಟ್ಟರಾಜಮ್ಮ ಕೋಂ. ನಾಗರಾಜು @ ಎಮ್ಮೆನಾಗ, ವ್ಯವಸಾಯ, ಶಶಿಯಾಲಪುರ ಗ್ರಾಮ, ಮಳವಳ್ಳಿ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-05-2013 ರಂದು ಮಳವಳ್ಳಿ ತಾಲ್ಲೂಕು, ಶಶಿಯಾಲಪುರ ಗ್ರಾಮದಲ್ಲಿ ಸಾಯಂಕಾಲದ ವೇಳೆಯಲ್ಲಿ ಪಿರ್ಯಾದಿಯವರ ಗಂಡನಾದ ನಾಗರಾಜು @ಎಮ್ಮೆ ನಾಗರವರು ದಿನಾಂಕ: 11-05-2013 ರಂದು ತಮ್ಮ ಗ್ರಾಮದ ಗೋಪಾಲನ ಮಗ ರವಿಯವರ ಮದುವೆಗೆಂದು ಬೆಂಗಳೂರಿಗೆ ಹೋಗಿದ್ದು ಮದುವೆ ಮುಗಿದ ನಂತರ ಕಾಡುಗೋಡಿಯಲ್ಲಿರುವ ತನ್ನ ಸಂಬಂಧಿಕರನ್ನು ನೋಡಲು ತಮ್ಮ ಗ್ರಾಮದ ಸಿದ್ದರಾಜು @ಮಣಕ ಎಂಬುವರ ಜೊತೆ ರಾತ್ರಿ 08-00 ಗಂಟೆ ಸಮಯದಲ್ಲಿ ಹೋಗುತ್ತಿದ್ದು ಟ್ರಾಫಿಕ್ ಜಾಮ್ ಆಗಿದ್ದು ನಾಗರಾಜು ಆ ಸಮಯದಲ್ಲಿ ಎಲ್ಲೋ ಕಾಣೆಯಾಗಿದ್ದು ಮನೆಗೂ ಬಂದಿರುವುದಿಲ್ಲ ಮತ್ತು ನಮ್ಮ ಸಂಬಂಧಿಕರ ಮನೆಗೂ ಹೋಗಿರುವುದಿಲ್ಲ ಎಲ್ಲೋ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment