Moving text

Mandya District Police

DAILY CRIME REPORT DATED : 27-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 27-06-2013ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  2 ಅಕ್ರಮ ಗ್ಯಾಸ್ ರಿಫೀಲಿಂಗ್ ಪ್ರಕರಣಗಳು ಹಾಗು 8 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತವೆ. 

ರಾಬರಿ ಪ್ರಕರಣ:

ಬೆಳ್ಳೂರು ಪೊಲೀಸ್ ಠಾಣೆ ಮೊ.ಸಂ.186/13 ಕಲಂ. 392ಐ.ಪಿ.ಸಿ

    ದಿನಾಂಕ : 27-06-2013 ರಂದು ಪಿರ್ಯಾದಿ ಶ್ರೀಮತಿ ಆಶಾ ಕೋಂ ನಾಗರಾಜು 20ವರ್ಷ ರಮಾನಂದನಗರ ಗ್ರಾಮ ಬೆಳ್ಳೂರು ಹೋಬಳಿ ನಾಗಮಂಗಲ ತಾ|| ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 27-06-2013 ರಂದು 08-30 ಎ.ಎಂ ಗಂಟೆಯಲ್ಲಿ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಶ್ರೀಆಧಿಚುಂಚನಗಿರಿ ಕ್ಷೇತ್ರದ ಬಳಿ ಬೆಳಿಗ್ಗೆ 8-15 ಗಂಟೆಗೆ ಶಾಲೆಯಿಂದ ನಡೆದುಕೊಂಡು ಶ್ರಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹೊಸದಾಗಿ ನಿಮರ್ಾಣವಾಗಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮಾರ್ಗವಾಗಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 8-30 ಗಂಟೆ ಸಮಯದಲ್ಲಿ, ನನ್ನ ಹಿಂದಿನಿಂದ ಒಂದು  ಕಪ್ಪುಬಣ್ಣದ ಪಲ್ಸರ್ ಮೋಟಾರ್ ಸೈಕಲ್ನಲ್ಲಿ ಬಂದ ಯಾರೋ ಇಬ್ಬರು ಅಪರಿಚಿತರು  ಸುಮಾರು  20 ರಿಂದ 25 ವರ್ಷ ವಯಸ್ಸಿನವರು ಮೋಟಾರ್ ಸೈಕಲ್ ಸವಾರರು, ನನ್ನನ್ನು ಹಲೋ ಮೇಡಂ ಎಂದು ಕರೆದರು. ಆಗ ನಾನು ಅವರ ಕಡೆ ತಿರುಗಿ ನೋಡಿದಾಗ ಮೋಟಾರ್ ಸೈಕಲ್ನ ಹಿಂಭಾಗದಲ್ಲಿ ಕುಳಿತಿದ್ದವನು ನನ್ನ ಕತ್ತಿಗೆ ಕೈ ಹಾಕಿ, ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಚೈನನ್ನು ಹಿಡಿದು ಎಳೆದುಕೊಂಡು ನನ್ನನ್ನು ನೂಕಿದನು ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 ಮನುಷ್ಯ ಕಾಣೆಯಾದ ಪ್ರಕರಣಗಳು :

1.ಶಿವಳ್ಳಿ ಪೊಲೀಸ್ ಠಾಣೆ ಮೊ.ಸಂ.113/13 ಕಲಂ.ಮನುಷ್ಯ ಕಾಣೆಯಾಗಿದ್ದಾನೆ,

ದಿನಾಂಕ : 27-06-2013 ರಂದು ಪಿರ್ಯಾದಿ ಯಾಲಕ್ಕಿಗೌಡ ಬಿನ್ ಲೇ|| ಕಾರ್ಲಾ ತಿಮ್ಮೇಗೌಡ. 73 ವರ್ಷ, ಒಕ್ಕಲಿಗರು, ಮಾರನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 08-12-2011 ರಂದು ಬೆಳಿಗ್ಗೆ 10-00ಯಲ್ಲಿ ನನ್ನ ಮಗ ಉಮೇಶನು ಮಾರನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದಾನೆ.   ಉಮೇಶ, ವಯಸ್ಸು ಸುಮಾರು 33 ವರ್ಷ, ಎತ್ತರ ಸುಮಾರು 5.5 ಅಡಿ, ಗೋದಿ ಬಣ್ಣದ ಅಗಲವಾದ ಮುಖ, ಬಲಕಾಲಿನ ಮಂಡಿಯ ಕೆಳಗೆ ಗಾಯದ ಮಚ್ಚೆ ಮತ್ತು ಬೆನ್ನಿನ ಕೆಳಗೆ ನಡುವಿನ ಮೇಲೆ ಎಡಗಡೆ ಕಪ್ಪು ಬಣ್ಣದ ಮತ್ತಿ ಇರುತ್ತದೆ ಕಾಣೆಯಾಗಿರುವ ನನ್ನ ಮಗ ಉಮೇಶನನ್ನು ತಾವುಗಳು ಪತ್ತೆಮಾಡಿಕೊಡಬೇಕಾಗಿ ಕೇಳಿಕೊಳ್ಳತ್ತೇನೆ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 258/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ : 27-06-2013 ರಂದು ಪಿರ್ಯಾದಿ ವಹೀದ ಬೇಗಂ ಕೋಂ. ಅಜ್ಮಲ್ ಷರೀಫ್, ವಾಸ ಮನೆ ನಂ,168/ಎ, 11ನೇ ಕ್ರಾಸ್, ನೂರಾನಿ ಮೊಹಲ್ಲಾ,  ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅಜ್ಮಲ್ ಷರೀಫ್ ಬಿನ್ ಲೇ|| ಮೊಹಮ್ಮದ್ ಷರೀಫ್ ಎಂಬುವವರು ದಿನಾಂಕಃ 25-06-2013ರಲ್ಲಿ ಸುಮಾರು 12-00 ಪಿ.ಎಂ. ರಲ್ಲಿ ಮನೆಯಿಂದ ಹೊರೆಹೋಗಿದ್ದು ಇಲ್ಲಿಯವರೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನನ್ನ ಗಂಡನ ವಯಸ್ಸು 45 ವರ್ಷ, 5.6 ಅಡಿ ಎತ್ತರವಿರುತ್ತಾರೆ ಅವರು ಮನೆಯಿಂದ ಹೋಗುವಾಗ ಸಿಮೆಂಟ್ ಕಲರ್ ಪ್ಯಾಂಟ್. ಸಿಮೆಂಟ್ ಕಲರ್ ರೈನ್ ಕೋಟ್,  ಚೆಕ್ಸ್ ಶರಟು ಧರಿಸಿರುತ್ತಾರೆ. ಕಪ್ಪು ಬಣ್ಣ. ದೃಢಕಾಯ ಶರೀರ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ಕಳವು ಪ್ರಕರಣ : 

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 266/13 ಕಲಂ. 379 ಐ.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಎನ್.ಕುಮಾರ ಬಿನ್. ಯಜಮಾನ್, ನಿಂಗೇಗೌಡ, 35 ವರ್ಷ, ಚನ್ನಪ್ಪನದೊಡ್ಡಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರಂದು, ಕಲ್ಲಹಳ್ಳಿ,ಯಲ್ಲಿರುವ ಸೋಮೇಶ್ವರ ಸಮುದಾಯ ಭವನಕ್ಕೆ ಅವರ ಮೋಟಾರ್ ಸೈಕಲ್ ನಲ್ಲಿ ಮದುವೆಗೆ ಹೋಗಿದ್ದು, ನಂತರ ವಾಪಸ್ಸು ರಾತ್ರಿ 10-00 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 15,000/- ರೂ. ಗಳಾಗಿರುತ್ತೆ ಅದನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಯು.ಡಿ.ಆರ್. ಪ್ರಕರಣ:

ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಅರ್.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಪುಟ್ಟಸ್ವಾಮಿಗೌಡ ಬಿನ್. ಲೇಟ್. ಕ್ಯಾತೇಗೌಡ,  ಮೇಣಾಗರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 26-06-2013 ರಂದು ರಾತ್ರಿ 10-30ಗಂಟೆಯಲ್ಲಿ ಗಾಣದಾಳು ಗ್ರಾಮದಲ್ಲಿ ಅವರ ಹೆಂಡತಿ ತನ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೊಟ್ಟೆನೋವು ಬಂದು ತಾಳಲಾರದೆ, ತಾನೇ ಮೈ-ಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯಗಳಾಗಿ ಕಿರುಚಾಡುವಾಗ ಅಕ್ಕಪಕ್ಕದವರು ಮತ್ತು ತನ್ನ ಗಂಡ ಬಂದು ಆಕೆಯನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 27-06-2013ರಂದು ಬೇಳಗಿನ ಜಾವ 4 ಗಂಟೆಯಲ್ಲಿ ಸತ್ತುಹೋಗಿರುವುದಾಗಿ ಹಾಗೂ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.

ಅಕ್ರಮ ಗ್ಯಾಸ್ ರಿಫೀಲಿಂಗ್ ಪ್ರಕರಣಗಳು :

1.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 256/13 ಕಲಂ. 285 ಐ.ಪಿ.ಸಿ. 

ದಿನಾಂಕ : 27-06-2013 ರಂದು ಪಿರ್ಯಾದಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ನೀಡಿದ ದೂರಿನ ವಿವರವೇನೆಂದರೆ, ಅವರಿಗೆ ದಿನಾಂಕ: 27-06-2013 ರಂದು ಬೆಳಿಗ್ಗೆ  10-30 ಘಂಟೆಯಲ್ಲಿ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿ ಏನೆಂದರೆ ಮಂಡ್ಯ ಸಿಟಿ, ಲೇಬರ್ ಕಾಲೋನಿ, 6 ನೇ ಕ್ರಾಸ್ನಲ್ಲಿರುವ, ಆರೋಪಿತನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಅವಿನಾಶ್ ಬಿನ್. ಕೆಂಪಲಿಂಗೇಗೌಡ, 20 ವರ್ಷ, ವಕ್ಕಲಿಗರು, ಆಟೋಚಾಲಕ, ವಾಸ  6ನೇ ಕ್ರಾಸ್, ಲೇಬರ್ ಕಾಲೋನಿ, ಮಂಡ್ಯ ಸಿಟಿ ರವರು ತಮ್ಮ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ದೊಡ್ಡ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಆಟೋ ರಿಕ್ಷಾಗಳಿಗೆ ಬಳಸುವ ಚಿಕ್ಕ ಚಿಕ್ಕ ಸಿಲಿಂಡರ್ ಗಳಿಗೆ  ರೀಫಿಲ್ ರಾಡ್ ಮೂಲಕ ರೀಫಿಲ್ಲಿಂಗ್ ಮಾಡಿ  ಕೆಜಿ 1ಕ್ಕೆ 70 /- ರೂ ನಂತೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ, ಇದು ಜನ ಸಂದಣಿಯ ಸ್ಥಳವಾಗಿದ್ದು ಮಾನವ ಜೀವಕ್ಕೆ ಅಪಾಯವಾಗುವ ಸಾದ್ಯತೆಗಳು ಇರುತ್ತದೆ ಎಂದು ತಿಳಿದು ಬಂದ ಮೇರೆಗೆ ಸದರಿ ಸ್ಥಳಕ್ಕೆ ದಾಳಿಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.

2.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 257/13 ಕಲಂ. 285 ಐ.ಪಿ.ಸಿ.

ದಿನಾಂಕ : 27-06-2013 ರಂದು ಪಿರ್ಯಾದಿ ಕೆ.ಲಕ್ಷ್ಮೀನಾರಾಯಣ, ಪಿ.ಎಸ್.ಐ. ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 27-06-2013ರಂದು ಸಂಜೆ 05-30 ಘಂಟೆಯಲ್ಲಿ. ಮಂಡ್ಯ ಸಿಟಿ, ಗಿರಿಜಾ ಸ್ಲಂ, 1 ನೇ ಕ್ರಾಸ್ನ,  ಪುಟ್ಟಸ್ವಾಮಿ ರವರ ಮನೆಯ ಮುಂದಿನ ಖಾಲಿ ಜಾಗದ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಆರೋಪಿ ಸಂತೋಷ್ ಬಿನ್ ಪುಟ್ಟೇಗೌಡ, 22 ವರ್ಷ,ವಕ್ಕಲಿಗರು, ಆಟೋಚಾಲಕ, ವಾಸ ಗಿರಿಜಾ ಸ್ಲಂ, ಷುಗರ್ ಪ್ಯಾಕ್ಟರಿ ಸರ್ಕಲ್, ಮಂಡ್ಯ ಸಿಟಿ ರವರು ಅವರ ಮನೆಯ ಮುಂದಿನ ಖಾಲಿ ಜಾಗದ ಸಾರ್ವಜನಿಕ ರಸ್ತೆ ಪಕ್ಕ ಸಂತೋಷ ಎಂಬುವನು  ಅಕ್ರಮವಾಗಿ ದೊಡ್ಡ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟು ಕೊಂಡು ಆಟೋ ರಿಕ್ಷಾಗಳಿಗೆ ಬಳಸುವ ಚಿಕ್ಕ ಚಿಕ್ಕ ಸಿಲಿಂಡರ್ಗಳಿಗೆ  ರೀಫಿಲ್ ರಾಡ್ ಮೂಲಕ ರೀಫಿಲ್ಲಿಂಗ್ ಮಾಡಿ ಕೆಜಿ 1 ಕ್ಕೆ 70.00 ರೂ ನಂತೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ. ಇದು ಜನ ಸಂದಣಿಯ ಸ್ಥಳವಾಗಿದ್ದು ಮಾನವ ಜೀವಕ್ಕೆ ಅಪಾಯವಾಗುವ ಸಾದ್ಯತೆಗಳು ಇರುತ್ತದೆ ಎಂದು ತಿಳಿದು ಪ್ರಕರಣ ದಾಖಲು ಮಾಡಿರುತ್ತೆ.

No comments:

Post a Comment