ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-05-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು, 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು, 2 ವಂಚನೆ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಬಾಲ್ಯ ವಿವಾಹ ತಡೆ ಕಾಯಿದೆ ಅಧಿನಿಯಮ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣಗಳು :
1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 153/13 ಕಲಂ. 457-380 ಐ.ಪಿ.ಸಿ.
ದಿನಾಂಕ: 31-05-2013 ರಂದು ಪಿರ್ಯಾದಿ ನಿಂಗನಾಯಕ, ಮುಖ್ಯೋಪಾದ್ಯಾಯರು, ಬಾಬುರಾಜೇಂದ್ರ ಪ್ರಸಾದ್ ಸ್ಮಾರಕ ಪ್ರೌಢಶಾಲೆ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ರಾತ್ರಿವೇಳೆ ಯಾರೋ ಕಳ್ಳರು ಶಾಲೆಯ ಕೊಠಡಿಯ ಬೀಗವನ್ನು ಮುರಿದು ಒಳಗಡೆ ಪ್ರವೇಶಮಾಡಿ ಅಕ್ಷರ ದಾಸೋಹಕ್ಕೆ ಕೊಟ್ಟಿದ್ದ 4 1/2 ಕ್ವಿಂಟಾಲ್ ಅಕ್ಕಿ, 1 1/2 ಕ್ವಿಂಟಾಲ್ ಬೇಳೆ ಹಾಗೂ ಇಲಾಖೆವತಿಯಿಂದ ಕೊಟ್ಟಿದ್ದ ಪೆನಾಸೋನಿಕ್ ಕಂಪನಿಯ 14 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಸದರಿ ವಸ್ತುಗಳ ಅಂದಾಜು ಬೆಲೆ 1.00.000/- ರೂಪಾಯಿಗಳಾಗಿರುತ್ತವೆ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 457-380 ಐ.ಪಿ.ಸಿ.
ದಿನಾಂಕ: 31-05-2013 ರಂದು ಪಿರ್ಯಾದಿ ಶೋಭ ಕೋಂ. ಗವಿಗೌಡ, ಅಂಗನವಾಡಿ ಕಾರ್ಯಕತರ್ೆ, ನಲ್ಲಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 30-05-2013 ರಂದು ಸಂಜೆ 04-00 ಗಂಟೆಯಿಂದ ರಾತ್ರಿ 08-15 ಗಂಟೆ ನಡುವೆ ನಲ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಬಾಗಿಲ ಬೀಗ ಹೊಡೆದು ಒಳಗೆ ಹೋಗಿ ಒಳಗಡೆ ಇಟ್ಟಿದ್ದ, 1) ಹೆಚ್.ಪಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ರೆಗ್ಯೂಲೇಟರ್, ಮತ್ತು 2).ಒಂದು ಸ್ಟೀಲ್ ಪಾತ್ರೆ ಮತ್ತು ಮುಚ್ಚಳ, 3) 5 ಲೀಟರ್ ಕುಕ್ಕರ್, 4) ಅಡುಗೆ ಎಣ್ಣೆ 4 ಲೀಟರ್ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಬೆಲೆ 2,500/- ರೂ ಆಗಿರುತ್ತೆಂದು ಇತ್ಯಾದಿಯಾಗಿ ನೀಡಿದ ದೂರಿನೆ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :
1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 123/13 ಕಲಂ. 143-504-506-498(ಎ)-354-114-323 ಕೂಡ 149 ಐ.ಪಿ.ಸಿ.
ದಿನಾಂಕ:31-05-2013 ರಂದು ಪಿರ್ಯಾದಿ ಜಯಶೀಲ ಕೋಂ|| ಗೋವಿಂದರಾಜು, ವಕ್ಕಲಿಗರು, ವ್ಯವಸಾಯ, ದಡುಮುಡಿಕೆ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಮುಂಗಮ್ಮ ಕೊಂ. ವೆಂಕಟಪ್ಪ ಇತರೆ 4 ಜನರು ಎಲ್ಲರೂ ದಡಮುಡಿಕೆ ಗ್ರಾಮ ಅವರುಗಳು ಸೇರಿ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ ನೀಡಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 171/13 ಕಲಂ. 498(ಎ) 506-ಕೂಡ 34ಐ.ಪಿ.ಸಿ. ಮತ್ತು ಕಲಂ 3 & 4 ಡಿ.ಪಿ. ಆಕ್ಟ್.
ದಿನಾಂಕ:31-05-2013 ರಂದು ಪಿರ್ಯಾದಿ ಡಿ.ಪುಟ್ಟಸ್ವಾಮಿ, ಬಿನ್. ಚನ್ನೇಗೌಡ, ಗೌಡಯ್ಯನದೊಡ್ಡಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ಮಂಡ್ಯ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಅವರ ಮಗಳನ್ನು ಆರೋಪಿ-1 .ಸುರೇಂದ್ರಕುಮಾರ್ ರವರ ಜೊತೆಯಲ್ಲಿ ಮದುವೆಯಾಗಿದ್ದು ಮದುವೆ ಕಾಲದಲ್ಲಿ ವರದಕ್ಷಣೆಯಾಗಿ 1 ಲಕ್ಷ ನಗದು ಹಣ, 150ಗ್ರಾಂ ಚಿನ್ನ ಹಾಗೂ ಒಂದು ಸ್ಪ್ಲಂಡರ್ ಸ್ಕೂಟರ್ನ್ನು ಕೊಟ್ಟು ಮದುವೆ ಮಾಡಿದ್ದು ಆರೋಪಿಗಳು 6 ತಿಂಗಳು ಜಿ.ಪಿ. ತನುಜಾರವರನ್ನು ಚೆನ್ನಾಗಿ ನೋಡಿಕೊಂಡಿದ್ದು ನಂತರ ಹೆಚ್ಚಿನ ವರದಕ್ಷಣೆಗಾಗಿ ಒತ್ತಾಯಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ-ಕಿರುಕುಳ ನೀಡುತ್ತಿದ್ದು ದಿನಾಂಕ:28-05-2013ರಂದು ಈ ಕೇಸಿನ ಇತರೆ ಆರೋಪಿಗಳಾದ 2] ಸಿ.ಕೃಷ್ಣೇಗೌಡ, 3] ಸಿ.ಉಮೇಶ, 4] ಚನ್ನಮ್ಮ ಹಾಗು 5] ಚೌಡೇಗೌಡ ರವರುಗಳು ವರದಕ್ಷಣೆ ತರದಿದ್ದರೆ ಬಿಡುಗಡೆ ಪತ್ರಕ್ಕೆ ಸಹಿ ಮಾಡು, ತಪ್ಪಿದರೆ ನಿನ್ನನ್ನು ಮತ್ತು ನಿನ್ನ ತಂದೆ ತಾಯಿಯರನ್ನು ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ ಇದರಿಂದ ಮನನೊಂದ ಜಿ.ಪಿ.ತನುಜಾಳು ನಿದ್ರೆ ಮಾತ್ರೆ ತೆಗೆದುಕೊಂಡು ಪ್ರಜ್ಞಾಹೀನಳಾಗಿದ್ದಾಳೆ. ಈ ಬಗ್ಗೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ
ವಂಚನೆ ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 255/13 ಕಲಂ. 420-506 ಕೂಡ 34 ಐ.ಪಿ.ಸಿ.
ದಿನಾಂಕ:31-05-2013 ರಂದು ಪಿರ್ಯಾದಿ ಶಫಾಕತ್ ಆಲಿ ಖಾನ್ ಬಿನ್. ಮಹಮ್ಮದ್ ಆಲಿ ಖಾನ್, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ರುದ್ರಾಕ್ಷಿಪುರ ಗ್ರಾಮ ಸ.ನಂ.2 ರಲ್ಲಿ, 2 ಎಕರೆ, 0-15, 02-88 ಗುಂಟೆ ಹಾಗು ಸರ್ವೆ. ನಂ. 4 ರಲ್ಲಿ 1 ಎಕರೆ 0-35, 01-44 ಗುಂಟೆ ಜಮೀನುಗಳನ್ನು ಕ್ರಯಕ್ಕೆ ನೀಡುವುದಾಗಿ ಈ ಕೇಸಿನ ಪಿರ್ಯಾದಿ ಎಂ.ಶಫಾಕತ್ ಎಂಬುವವರಿಗೆ ಅಗ್ರಿಮೆಂಟ್ ಮಾಡಿಕೊಟ್ಟು 30,000/- ಹಣ ಮುಂಗಡ ಹಣ ಪಡೆದಿದ್ದು ಆ ನಂತರದ ದಿನಗಳಲ್ಲಿ ಪಿರ್ಯಾದುದಾರರಿಗೆ ಮೋಸ ಮಾಡುವ ಉದ್ದೇಶದಿಂದ ಸದರಿ ಜಮೀನನ್ನು ಹೆಚ್ಚಿನ ಬೆಲೆ ನಿಗದಿ ಮಾಡಿ ಬೇರೊಬ್ಬರಿಗೆ ಅಗ್ರಿಮೆಂಟ್ ಮಾಡಿದ್ದು ಇದನ್ನು ಕೇಳಿದ್ದಕ್ಕೆ ಪಿರ್ಯಾದಿ ಪ್ರಾಣ ಬೆದರಿಕೆಯನ್ನುಂಟುಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 171 (ಜಿ)-176-177-181-199-420 ಐ.ಪಿ.ಸಿ.
ದಿನಾಂಕ:31-05-2013 ರಂದು ಪಿರ್ಯಾದಿ ಸಿ.ಎಸ್.ಸುರೇಶ್, ಎ.ಇ.ಇ. ಕಾವೇರಿ ನೀರಾವರಿ ನಿಗಮ(ನಿ), ನಾಗಮಂಗಲ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಜಯಲಕ್ಷ್ಮಮ್ಮ @ ಜಯಲಕ್ಷ್ಮಿ ಕೊಂ. ಡಿ.ಎಸ್.ರಾಮಕೃಷ್ಣ, ದೇವರ-ಮಲ್ಲನಾಯಕನಹಳ್ಳಿ ಗ್ರಾಮ ರವರು ದಿನಾಂಕಃ 31-05-2013ರ ಹಿಂದಿನ ದಿನಗಳಲ್ಲಿ 2011ರ ತಾಲ್ಲೂಕ್ ಪಂಚಾಯ್ತಿ ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಸುವಾಗ ಸುಳ್ಳು ದಾಖಲಾತಿಗಳನ್ನು ನೀಡಿರುತ್ತಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
ಕೆ.ಎಂದೊಡ್ಡಿ ಪೊಲೀಸ್ ಠಾಣೆ ಮೊ.ನಂ. 170/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ:31-05-2013 ರಂದು ಪಿರ್ಯಾದಿ ಡಿ.ಹೇಮಂತ್ಕುಮಾರ್ ಬಿನ್. ದಾಸೇಗೌಡ, ಅರಕೆರೆ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಹೆಚ್. ಪ್ರಮೋದ, 18 ವರ್ಷ, ಐ.ಟಿ.ಐ. ವಿದ್ಯಾರ್ಥಿ ಕಪ್ಪು ಪ್ಯಾಂಟು, ಸಿಮೆಂಟ್ ಕಲರ್ ಷರಟು ಧರಿಸಿರುತ್ತಾನೆ ದಿನಾಂಕ:24-05-2013 ರಂದು ಕೆ.ಪಿ. ದೊಡ್ಡಿಯಿಂದ ಐ.ಟಿ.ಐ. ಕಾಲೇಜಿಗೆ ಹೋಗುತ್ತೇನೆಂದು ಈವರೆವಿಗೂ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಿ ಸಿಗದ ಕಾರಣ ಪ್ರಕರಣ ದಾಖಲಿಸಲಾಗಿದೆ.
ಬಾಲ್ಯ ವಿವಾಹ ತಡೆ ಕಾಯಿದೆ ಅಧಿನಿಯಮ ಪ್ರಕರಣ :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 121/13 ಕಲಂ. 9-10 ಪ್ರೊಹಿಬಿಷನ್ ಆಫ್ ಚೈಲ್ಡ್ ಮ್ಯಾರೀಯೆಜ್ ಆಕ್ಟ್.
ದಿನಾಂಕ:31-05-2013 ರಂದು ಪಿರ್ಯಾದಿ ಅರುಂಧತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮಳವಳ್ಳಿ ಟೌನ್, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಚಂದ್ರು ಹಾಗು ಇತರೆ 4 ಜನರು, ನೆಟ್ಕಲ್, ಬಿ.ಜಿ ಪುರ ಹೋ|| ಮಳವಳ್ಳಿ ತಾ|| ರವರು ದಿನಾಂಕ: 31-05-2013 ರಂದು ಬೆಳಿಗ್ಗೆ 8.30 ರ ಸಮಯದಲ್ಲಿ. ಮಳವಳ್ಳಿ ಟೌನ್ ನಲ್ಲಿ 16 ವರ್ಷದ ಶೃತಿ ಎಂಬವವಳನ್ನು ಅವರ ಪೋಷಕರು ಬಾಲ್ಯ ವಿವಾಹ ಮಾಡುತ್ತಿರುವುದಾಗಿ ಪಿರ್ಯಾದು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment