Moving text

Mandya District Police

PRESS NOTE 09-09-2013

ಪತ್ರಿಕಾ ಪ್ರಕಟಣೆ

ಕೊಲೆ ಮಾಡಿ ಪರಾರಿಯಾಗುತಿದ್ದ ಆರೋಪಿಗಳ ಬಂಧನ


  ದಿನಾಂಕ 08.09.2013 ರಂದು ಬೆಳಗ್ಗೆ 11-15 ಗಂಟೆ ಸಮಯದಲ್ಲಿ ಕುಮಾರ ಬಿನ್ ಶಿವಣ್ಣೇಗೌಡ ಸೋಮನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾಃ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 08.09.2013 ರಂದು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ತನ್ನ ಚಿಕ್ಕಮ್ಮನ ಮಗ ಭಾಸ್ಕರನನ್ನು ಕೆ.ಆರ್.ಪೇಟೆ ಟೌನ್ ಕೆ.ಬಿ.ಸಿ ಬಿಲ್ಡಿಂಗ್ನಲ್ಲಿರುವ ರಾಮ್ದೇವ ಎಲೆಕ್ಟ್ರಿಕಲ್ ಅಂಗಡಿಯ ಬಳಿ ಹಳೇ ದ್ವೇಷದಿಂದ ಕೆ.ಆರ್.ಪೇಟೆ ಟೌನ್ ವಾಸಿಗಳಾದ ಅರುಣ, ಕೌಶಿಕ ಉರುಫ್ ಪುಟ್ಟ, ಮಹದೇವ, ಶ್ರೀಧರ, ವೆಂಕಟೇಶ ಎಲ್ಲರೂ ಸೇರಿಕೊಂಡು ಲಾಂಗ್ನಿಂದ ಭಾಸ್ಕರನ ಕುತ್ತಿಗೆ, ತಲೆಗೆ, ಹೊಡೆದು ಹಾಗೂ ಬಲಗೈ, ಎಡಗೈ, ಹಾಗೂ ಚೂರಿಯಿಂದ ಹೊಟ್ಟೆಯ ಭಾಗಗಳಿಗೆ ಚುಚ್ಚಿರುತ್ತಾರೆ. ನಂತರ ಭಾಸ್ಕರನನ್ನು ತಕ್ಷಣ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆ ಮೇರೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ಹೋದಾಗ ಭಾಸ್ಕರ ಮೃತಪಟ್ಟಿರುತ್ತಾರೆಂದು ತಿಳಿಯಿತು. ಈ ಗಲಾಟೆಯನ್ನು ವಿಜಯಕುಮಾರ, ಮತ್ತು ಜಗದೀಶ ರವರು ನೋಡಿರುತ್ತಾರೆ. ಈ ಕೃತ್ಯಕ್ಕೆ ಸಿಟಿಒ 9995 ಓಮ್ನಿ ಕಾರನ್ನು ಬಳಸಿರುತ್ತಾರೆ. ಆದ್ದರಿಂದ ಮೇಲ್ಕಂಡ ಅರುಣ, ಕೌಶಿಕ ಉರುಫ್ ಪುಟ್ಟ, ಮಹದೇವ, ಶ್ರೀಧರ, ವೆಂಕಟೇಶರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಇತ್ಯಾದಿ ದೂರು ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆಕೊಂಡು ಕೊಲೆ ಮಾಡಿ ಪರಾರಿಯಾಗುತಿದ್ದ ಆರೋಪಿಗಳಾದ 1] ಅರುಣ 2] ಕೌಶಿಕ್ ಉರುಫ್ ಪುಟ್ಟ 3] ಮಹದೇವ  4] ಶ್ರೀಧರ 5] ವೆಂಕಟೇಶ ರವರನ್ನು ಕೆ.ಆರ್ಪೇಟೆ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಸಂದೇಶ್ಕುಮಾರ್ರವರ ನೇತೃತ್ವದಲ್ಲಿ ಕೆ.ಆರ್ಪೇಟೆ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ರಂಗಸ್ವಾಮಿ, ಗ್ರಾಮಾಂತರ ಠಾಣಾ ಪಿಎಸ್ಐ ಧನರಾಜ್ ಎಎಸ್ಐ ಜವರೇಗೌಡ ಸಿಬ್ಬಂದಿರವರಾದ ಕೃಷ್ಣೇಗೌಡ, ಶತ್ರುಘ್ನ ರವರು ಬೆನ್ನಿತ್ತಿ ಹಿಡಿದು ದಸ್ತಗಿರಿ ಮಾಡಿರುತ್ತಾರೆ.

ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮೆಲ್ಕಂಡ  ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ ಭೂಷಣ್ ಜಿ ಬೊರಸೆ ರವರು ಪ್ರಶಂಸಿರುತ್ತಾರೆ.

No comments:

Post a Comment