ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ-22-09-2013.
ಪತ್ರಿಕಾ ಪ್ರಕಟಣೆ
ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಯ ಬೆಟ್ಟಿಂಗ್
ನಡೆಸುತ್ತಿದ್ದವರ ಮೇಲೆ ದಾಳಿ ನಾಲ್ವರ ಬಂಧನ
ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿದ್ದ ಟಿ-20 ಪಂದ್ಯದ ವೇಳೆ ಸುಭಾಷ್ನಗರದ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಪರ ಪೊಲೀಸ್ ವರಿಷ್ಟಾಧಿಕಾರಿಗಳು, ಮಂಡ್ಯ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರು ಮತ್ತು ಮಂಡ್ಯ ನಗರ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಪಿಎಸ್ಐ ನಿರಂಜನ ಕೆ.ಎಸ್. ಮತ್ತು ಸಿಬ್ಬಂದಿಗಳಾದ ಎಎಸ್ಐ ಎಂ.ಜೆ. ವೆಂಕಟರಮಣಸ್ವಾಮಿ, ಹೆಡ್ಕಾನ್ಸ್ಟೇಬಲ್ ಅಣ್ಣೇಗೌಡ, ಪೊಲೀಸ್ ಕಾನ್ಸ್ಟೇಬಲ್ಗಳಾದ ಮಂಜುನಾಥ್, ವೀರಪ್ಪ, ಶಿವಕುಮಾರ್, ಮಹದೇವಸ್ವಾಮಿ ರವರುಗಳ ತಂಡ ಮಂಡ್ಯ ನಗರದ ಸುಭಾಷ್ನಗರ 6ನೇ ಕ್ರಾಸ್ ಮತ್ತು ವಿನೋಬಾ ರಸ್ತೆಗೆ ಹೊಂದಿಕೊಂಡಂತಿರುವ ಮನೆಯೊಂದರ ಮೇಲೆ ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಬಂದಿತರಿಂದ 93,500-00 ರೂ ನಗದು ಹಣ, ಬೆಟ್ಟಿಂಗ್ಗೆ ಬಳಸುತ್ತಿದ್ದ ಒಂದು ಟಿ.ವಿ. ಲ್ಯಾಪ್ಟಾಪ್ ಮತ್ತು 8 ಮೊಬೈಲ್ಹ್ಯಾಂಡ್ಸೆಟ್ಗಳನ್ನು ವಶಪಡಿಸಿಕೊಂಡಿದ್ದು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಂಧಿತರ ವಿವರ
1. ರಂಜಿತ ಬಿನ್ ಶಿವಣ್ಣ, 24 ವರ್ಷ, ವಾಸಃ ನಂ-1436, 1ನೇಕ್ರಾಸ್, ಅಶೋಕನಗರ, ಮಂಡ್ಯ.
2. ಮಂಜುನಾಥ್ ಬಿನ್ ಬಿ.ಕೆ.ಚಂದ್ರಶೇಖರ್, 24ವರ್ಷ, ವಾಸಃ3ನೇಕ್ರಾಸ್, ಹಾಲಹಳ್ಳಿ, ಮಂಡ್ಯ ಸಿಟಿ.
3. ನವೀನ ಬಿನ್ ಮರೀಗೌಡ, 29 ವರ್ಷ ವಾಸಃ ನಂ.3909, 3ನೇ ಕ್ರಾಸ್, ಶಂಕರ್ ನಗರ, ಮಂಡ್ಯ
4. ನವೀನ್ ಬಿನ್ ಜಯರಾಮು, 35 ವರ್ಷ, ವಾಸಃ ನಂ. 2378, 4ನೇ ಕ್ರಾಸ್, ಗಾಂಧೀನಗರ, ಮಂಡ್ಯ
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂಧಿಯವರುಗಳ ಪತ್ತೆ ಕಾರ್ಯದ ಬಗ್ಗೆ ಮಾನ್ಯ ಎಸ್.ಪಿ. ಸಾಹೇಬರವರು ಶ್ಲಾಘಿಸಿರುತ್ತಾರೆ.
No comments:
Post a Comment