ಪತ್ರಿಕಾ ಪ್ರಕಟಣೆ
ಕೊಪ್ಪ ಪೊಲೀಸ್ ಠಾಣೆ ಮೊ.ನಂಃ181/13 ಕಲಂಃ 302 ಐ.ಪಿ.ಸಿ.ರ ಪ್ರಕರಣದ ಆರೋಪಿಯ ಬಂದನ
ಮದ್ದೊರು ತಾಲ್ಲೂಕು, ಡಿ. ಮಲ್ಲಿಗೆರೆ ಗ್ರಾಮದ ಎನ್.ಮಾಸ್ತೀಗೌಡ ಬಿನ್ ಬಾವಿಮನೆನಂಜೇಗೌಡ, 41ವರ್ಷ ಮತ್ತು ಪುಟ್ಟಸ್ವಾಮಿ ಬಿನ್ ಬಾವಿಮನೆ ನಂಜೇಗೌಡ, 48 ವರ್ಷ, ರವರುಗಳು ಸ್ವಂತ ಅಣ್ಣತಮ್ಮಂದಿರಾಗಿದ್ದು ಇವರು ವಿಬಾಗವಾಗಿ ಒಂದೇ ಮನೆಯಲ್ಲಿ ತಮ್ಮ ಸಂಸಾರ ಸಮೇತ ಬೇರೆಯಾಗಿ ವಾಸವಾಗಿದ್ದು ಇಬ್ಬರಿಗೂ ಆಗಾಗ ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಜಗಳ ಮಾಡಿಕೊಳ್ಳುತ್ತಿದ್ದು ದಿನಾಂಕಃ15-10-13 ರಂದು ರಾತ್ರಿ ಸುಮಾರು 0930 ಗಂಟೆಯಲ್ಲಿ ಎನ್. ಮಾಸ್ತಿಗೌಡ ಮತ್ತು ಆತನ ಹೆಂಡತಿ ಶ್ರೀಮತಿ. ಪ್ರೇಮ ಇಬ್ಬರೂ ಟಿ.ವಿ ನೋಡುತ್ತಾ ಕುಳಿತಿದ್ದಾಗ ಮಾಸ್ತಿಗೌಡನ ಸಹೋದರ ಪುಟ್ಟಸ್ವಾಮಿ ಟಿ.ವಿ ಶಬ್ದ ಜಾಸ್ತಿಯಾಗಿದ್ದು ಕಡಿಮೆ ಮಾಡುವಂತೆ ತಿಳಿಸಿದಾಗ ಒಬ್ಬರಿಗೊಬ್ಬರಿಗೆ ಮಾತು ಬೆಳೆದು ಜಗಳ ಶುರುವಾಗಿ ಪುಟ್ಟಸ್ವಾಮಿಯು ಒಂದು ಕಬ್ಬಿಣದ ಪೈಪನ್ನು ತಂದು ಮಾಸ್ತಿಗೌಡನ ಹೆಂಡತಿ ಶ್ರೀಮತಿ. ಪ್ರೇಮಳ ತಲೆಗೆ ಹೊಡೆದು ಗಾಯಗೊಳಿಸಿದ್ದು ಕೂಡಲೇ ಆರೋಪಿಯು ಅದೇ ಕಬ್ಬಿಣದ ಪೈಪನ್ನು ತೆಗೆದುಕೊಂಡು ಪುಟ್ಟಸ್ವಾಮಿಯ ತಲೆಗೆ ಬಲವಾಗಿ ಹೊಡೆದು ತೀವ್ರ ಗಾಯಗೊಳಿಸಿದ್ದು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಮದ್ದೊರು ಸಾರ್ವಜನಿಕ ಅಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ತೀವ್ರ ಗಾಯಗೊಂಡಿದ್ದ ಪುಟ್ಟಸ್ವಾಮಿಯು ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದು, ಮೇಲ್ಕಂಡ ಘಟನೆ ನಡೆದ ನಂತರ ಆರೋಪಿಯು ಗ್ರಾಮ ಬಿಟ್ಟು ತಲೆಮರೆಸಿಕೊಂಡು ಹೊರಟು ಹೋಗಿರುತ್ತಾನೆ. ಈ ವಿಚಾರವಾಗಿ ಮೃತನ ಹೆಂಡತಿ ನೀಡಿದ ಪಿಯರ್ಾದುವಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪಿಎಸ್ಐ, ಕೊಪ್ಪ ಠಾಣೆ ರವರು ಆರೋಪಿಯ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ದಿನಾಂಕಃ16-10-13 ರಂದು ಮದ್ದೊರು ತಾಲ್ಲೂಕು, ಸೊಳ್ಳೇಪುರ ಗ್ರಾಮದಲ್ಲಿ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು, ನಂತರ ಕೊಪ್ಪ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಸಿಪಿಐ, ಮದ್ದೊರು ರವರ ಮುಂದೆ ಹಾಜರುಪಡಿಸಿದ್ದು, ಆತನನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ.
No comments:
Post a Comment