Moving text

Mandya District Police


ಪತ್ರಿಕಾ ಪ್ರಕಟಣೆ






         ದಿಃ 30-10-2013 ರಂದು ನಾಗಮಂಗಲ ತಾಃ ಬೆಳ್ಳೂರು ಠಾಣಾ ವ್ಯಾಪ್ತಿಯ ಗೊಂದಿಹಳ್ಳಿ ಗ್ರಾಮದ ಫಿರ್ಯಾಧುದಾರರಾದ ಲಕ್ಷ್ಮಮ್ಮ ರವರ ಮನೆಯಲ್ಲಿ ವಾಸ ಇದ್ದ ನಾಗೇಂದ್ರ ರವರು ಚಿನ್ನದ ಆಭರಣ ಮತ್ತು ಬೆಳ್ಳಿಯ ಪಧಾರ್ಥಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ವಿಚಾರದಲ್ಲಿ ಬೆಳ್ಳೂರು ಪೊಲೀಸ್ ಠಾಣಾ ಮೊ.ನಂ 296/13 ಕಲಂ 380 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು ಸಿ.ಪಿ.ಐ ನಾಗಮಂಗಲ ಹಾಗೂ ಪಿ.ಎಸ್.ಐ ಬೆಳ್ಳೂರು ಮತ್ತು ಸಿಬ್ಬಂಧಿಗಳು ಈ ಪ್ರಕರಣದ ಪತ್ತೆ ಬಗ್ಗೆ ಕ್ರಮವಹಿಸುತ್ತಿರುವಾಗ ದಿನಾಂಕ 01-11-2013 ರಂದು ಹಾಸನ ಜಿಲ್ಲೆ. ಚನ್ನರಾಯಪಟ್ಟಣ  ತಾಲ್ಲೋಕು, ಕಾರೇಹಳ್ಳಿ ಬಳಿಯಿರುವ, ರೇಚಿಹಳ್ಳಿ ಗ್ರಾಮದ, ನಾಗೇಂದ್ರ, ಎಂಬುವವನ್ನು ತಲಾಸು ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು ಆತನು ಮೇಲ್ಕಂಡ ಪ್ರಕರಣದ ಮಾಲುಗಳನ್ನು ತಾನು ಕಳುವು ಮಾಡಿರುದಾಗಿ  ತಿಳಿಸಿದ್ದು ಈತನಿಂದ ಕಳುವಾಗಿದ್ದ 22 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಒಂದು ಜೊತೆ 13 ಗ್ರಾಂ ತೂಕದ ಮುತ್ತಿನ ಚಿನ್ನದ ಓಲೆ ಹಾಗೂ ಜುಮುಕಿ, 10 ಗ್ರಾಂ ತೂಕದ ಕತ್ತಿನ ಚಿನ್ನದ ಚೈನ್, ಒಂದು 12 ಗ್ರಾಂ ತೂಕದ ಚಿನ್ನದ ಬಿಳಿಕಲ್ಲು ಓಲೆ ಮತ್ತು ಹ್ಯಾಂಗಿಂಗ್ಸ್, 7 ಗ್ರಾಂ ತೂಕದ ಚಿನ್ನದ ಸಾದ ಓಲೆ ಮತ್ತು ಹ್ಯಾಂಗಿಂಗ್ಸ್, 7 ಗ್ರಾಂ ತೂಕದ ಚಿನ್ನದ ಲಕ್ಷ್ಮಿ ಓಲೆ, 7 ಗ್ರಾಂ ತೂಕದ ಚಿನ್ನದ ಒಂದು ಸಾದ ಉಂಗುರ, 10 ಗ್ರಾಂ ತೂಕದ ಚಿನ್ನದ ಬ್ರಾಶ್ಲೇಟ್, 6 ಗ್ರಾಂ ತೂಕದ ಗೆಜ್ಜೆ ಮಾಟಿ, 6 ಗ್ರಾಂ ತೂಕದ ಚಿನ್ನದ ಕೆನ್ನೆ ಚೈನ್, 5 ಗ್ರಾಂ ತೂಕದ ಚಿನ್ನದ ಒಂದು ಜೊತೆ ಫ್ಯಾನ್ಸಿ ಓಲೆ, 8 ಗ್ರಾಂ ತೂಕದ ಚಿನ್ನದ ಕತ್ತಿನ ಚೈನ್, 3 ಗ್ರಾಂ ತೂಕದ ಚಿನ್ನದ ಸಾದ ಉಂಗುರ, 2 ಗ್ರಾಂ ತೂಕದ ಚಿನ್ನದ ಉಂಗುರ, ಒಂದು ಬೆಳ್ಳಿ ಸೊಂಟದ ಉಡುದಾರ,  10 ಗ್ರಾಂ ತೂಕದ ಚಿನ್ನದ ಕತ್ತಿನ ಚೈನ್, ಒಂದು 9 ಗ್ರಾಂ ತೂಕದ ಹಸಿರು ಹರಳಿನ ದಪ್ಪಕಲ್ಲಿನ ಚಿನ್ನದ ಉಂಗುರ, 7 ಗ್ರಾಂ ತೂಕದ ಸಾದ ಚಿನ್ನದ ಉಂಗುರ, 30 ಗ್ರಾ ತೂಕದ ಚಿನ್ನದ ಮಾಂಗಲ್ಯದ ಚೈನ್, 6 ಗ್ರಾಂ ತೂಕದ ಒಂದು ಚಿನ್ನದ ಉಂಗುರ, 7 ಗ್ರಾಂ ತೂಕದ ಒಂದು ಜೊತೆ ಮುತ್ತಿನ ಓಲೆ, 7 ಗ್ರಾಂ ತೂಕದ ಒಂದು ಜೊತೆ ಕೆಂಪುಕಲ್ಲಿನ ಚಿನ್ನದ ಓಲೆ, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಒಂದು ಜೊತೆ ಬೆಳ್ಳಿ ಕಾಲು ಚೈನ್ ಗಳು ಒಟ್ಟು 201 ಗ್ರಾಂ ಚಿನ್ನ ಮತ್ತು 100 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆಭರಣದ ಅಂದಾಜು ಮೌಲ್ಯ 6,10,000/-ರೂ ಗಳಾಗಿರುತ್ತೆ. 

  ಈ ಪತ್ತೆ ಕಾರ್ಯದಲ್ಲಿ ಕ್ರಮಕೈಗೊಂಡ  ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾಃ ಶೋಭಾರಾಣಿ, ವಿ.ಜೆ. ನಾಗಮಂಗಲ ವೃತ್ತದ ಸಿಪಿಐರವರಾದ ಶ್ರೀ ವಸಂತ ಹೆಚ್.ಎಸ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕೆ.ಎಸ್. ನಿರಂಜನ್ ಮತ್ತು ಎ.ಎಸ್.ಐ ಪುಟ್ಟಸ್ವಾಮಿ ಹೆಚ್.ಟಿ ಹಾಗೂ  ಸಿಬ್ಬಂಧಿಗಳಾದ ಹೆಚ್.ಸಿ.298 ಹಿರಿಯಣ್ಣ, ಸಿ.ಹೆಚ್.ಸಿ 165 ಚನ್ನಪ್ಪ, ಸಿಪಿಸಿ 509 ಎನ್.ಎಸ್.ಸೋಮಶೇಖರ್, ಸಿಪಿಸಿ 605 ಪುರುಷೋತ್ತಮ್, ಸಿಪಿಸಿ18 ಅರುಣ, ಸಿಪಿಸಿ223 ಉಮೇಶ್, ಸಿಪಿಸಿ 432 ನಟರಾಜ ಕೆ.ಎಸ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ. 

No comments:

Post a Comment