ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 19-11-2013.
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ಪೊಲೀಸ್ ಠಾಣೆ ಮೊ.ಸಂ. ಮೊಃ ಸಂಃ 136/12 ಕಲಂಃ 302, 201 ಐಪಿಸಿ
ಕೇಸಿನ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಸುಪಾರಿ ಕೊಲೆ ಪ್ರಕರಣ ಪತ್ತೆ ಬಗ್ಗೆ.
ದಿನಾಂಕಃ 20.07.12. ರಂದು ಕೆ.ಅರ್.ಪೇಟೆ ತಾಲ್ಲೋಕು, ಸಂತೇಬಾಚಹಳ್ಳಿ ಹೋಬಳಿ, ಕೊಟಗಹಳ್ಳಿ ಜಿಟಿಅರ್ ಅರಣ್ಯ ಪ್ರದೇಶದಲ್ಲಿ ಯಾರೋ ದುಷ್ಕಮರ್ಿಗಳು ಒಬ್ಬ ಅಪರಿಚಿತ ಹೆಂಗಸನ್ನು ಕೊಲೆ ಮಾಡಿ ಗುಂಡಿಯಲ್ಲಿ ಹಾಕಿದ್ದು, ಈ ಬಗ್ಗೆ ಕೆ.ಅರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊಃ ಸಂಃ 136/12 ಕಲಂಃ 302, 201 ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ಕೊಲೆಯಾದ ಹೆಂಗಸಿನ ವಾರಸುದಾರರು ಮತ್ತು ಅರೋಪಿಗಳ ಪತ್ತೆ ಬಗ್ಗೆ ಎಲ್ಲಾ ರೀತಿಯ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಸದರಿ ಪ್ರಕರಣದ ಪತ್ತೆ ಕೈಗೊಂಡ ಶ್ರೀ ಕೆ.ರಾಜೇಂದ್ರ, ಸಿ.ಪಿ.ಐ. ಕೆ.ಆರ್.ಪೇಟೆ, ಕೆ.ಆರ್.ಪೇಟೆ ಸರ್ಕಲ್ ಠಾಣೆಗಳಾದ ಕೆ.ಆರ್.ಪೇಟೆ ಗ್ರಾಮಾಂತರ ಹಾಗೂ ಟೌನ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ರಚನೆಮಾಡಿಕೊಟ್ಟು, ಈ ಪ್ರಕರಣದ ಪತ್ತೆ ಬಗ್ಗೆ ಶ್ರೀರಂಗಪಟ್ಟಣ ಉಪವಿಭಾಗದ ಡಿ.ಎಸ್.ಪಿ. ಶ್ರೀಮತಿ. ಗೀತಾ.ಎಂ.ಎಸ್. ರವರ ನಿರ್ದೆಶನದಂತೆ ಮೇಲ್ಕಂಡ ತಂಡದ ಅದಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣದಲ್ಲಿ ಕೊಲೆಯಾಗಿರುವ ಹೆಂಗಸು ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ಇವರು ಕಾಣೆಯಾಗಿರುವ ಬಗ್ಗೆ ಮಹಾರಾಷ್ಟ್ರ ರಾಜ್ಯದ ವಿರಾರ್ ಪೊಲೀಸ್ ಠಾಣೆಯಲ್ಲಿ ಮೊಃಸಂಃ 157/12 ರಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿಯನ್ನು ಸಂಗ್ರಹಿಸಿ, ಮಹಾರಾಷ್ಟ್ರ ರಾಜ್ಯದ ವಿರಾರ್ ಪೊಲೀಸ್ ಠಾಣೆಗೆ ಬೇಟಿ ನೀಡಿ ಮಾಹಿತಿ ಪಡೆದು ದೂರುದಾರರನ್ನು ಸಂಪರ್ಕಿಸಿ ವಿಚಾರ ಮಾಡಿ, ಮೃತೆ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ಇವರ ಮಕ್ಕಳಾದ ಪ್ರವೀಣ, ಗಣೇಶ ಮತ್ತು ಮಗಳು ರೂಪಾಲಿ ಇವರುಗಳಿಗೆ ಪ್ರಕಟಣೆಗಳನ್ನು ತೋರಿಸಿ ಗುರುತು ಹಚ್ಚಿದ ನಂತರ ಅವರನ್ನು ಕೆ.ಅರ್.ಪೇಟೆ ಟೌನ್ ಪೊಲೀಸ್ ಠಾಣೆಗೆ ಕರೆತಂದು ಮೃತೆಯ ಶವದ ಪೋಟೋ ಹಾಗೂ ಬಟ್ಟೆಗಳನ್ನು ತೋರಿಸಿದಲ್ಲಿ ಸದರಿಯವರು ತಮ್ಮ ತಾಯಿ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್ ರವರ ಪೋಟೋ ಮತ್ತು ಬಟ್ಟೆಗಳನ್ನು ಗುರುತಿಸಿದ್ದು ಈ ಪ್ರಕರಣದಲ್ಲಿ ತಮ್ಮ ಮನೆಯ ಬಳಿ ಇದ್ದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೋಕು ನುಗ್ಗೆಹಳ್ಳಿ ಹೋಬಳಿ, ಅತ್ತಿಹಳ್ಳಿ ಗ್ರಾಮದ ಸುರೇಶ @ ಸುರೇಶಗೌಡ ಬಿನ್ ತಿಮ್ಮೇಗೌಡ ಹಾಗೂ ಇದೇ ಚನ್ನರಾಯಪಟ್ಟಣ ತಾಲ್ಲೋಕು, ದಂಡಿಗನಹಳ್ಳಿ ಹೋಬಳಿ, ದೊಡ್ಡಮತ್ತಿಘಟ್ಟ ಗ್ರಾಮದ ಶ್ರೀಮತಿ ಲೀಲಾಶ್ರೀದರರಾವ್ ಇವರ ಮೇಲೆ ಅನುಮಾನ ವ್ಯಕ್ತಪಡಿಸಿ ಇದಕ್ಕೆ ಕಾರಣ ತಮ್ಮ ತಾಯಿಯವರು ತಮ್ಮ ಅಂಗಡಿ ಮಳಿಗೆಯನ್ನು ವಿರಾರ್ ವೆಸ್ಟ್ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಒತ್ತೆ ಇಟ್ಟು 11 ಲಕ್ಷ ರೂ.ಗಳನ್ನು ಕಷ್ಟಕ್ಕೆ ಬೇಕೆಂದು ಕೇಳಿದ್ದ ಶ್ರೀಮತಿ ಲೀಲಾಶ್ರೀದರರಾವ್ ಇವರಿಗೆ ಕೊಟ್ಟಿದ್ದು ಈ ಹಣವನ್ನು ಕೇಳಿದಕ್ಕೆ ಬೆಂಗಳೂರಿನಲ್ಲಿ ನಮ್ಮ ಅಸ್ತಿ ಇದೆ ಮಾರಾಟ ಮಾಡಿ ಕೊಡುವುದಾಗಿ ಹೇಳಿ ದಿನಾಂಕಃ 13.07.12. ರಂದು ಬೆಂಗಳೂರಿಗೆ ರೈಲ್ವೆ ಟಿಕೆಟ್ ಬುಕ್ ಮಾಡಿಸಿ ಲೀಲಾರಾವ್ ರವರು ತಮ್ಮ ಪರಿಚಯದವರಾದ ಸುರೇಶ್ಗೌಡ ರವರ ಜೊತೆ ಕಳುಹಿಸಿದ್ದು ತಮ್ಮ ತಾಯಿ ನಿರಂತರವಾಗಿ ದೊರವಾಣಿ ಸಂಪರ್ಕದಲ್ಲಿದ್ದು, ನಂತರ ದಿನಾಂಕಃ 15.07.12. ರಂದು ತಮ್ಮ ತಾಯಿಯವರಿಗೆ ಪೋನ್ ಮಾಡಿದಾಗ ಸ್ವೀಚ್ ಅಪ್ ಬಂದಿದ್ದು ಇದರಿಂದ ಅನುಮಾನಗೊಂಡು ದಿನಾಂಕಃ 23.07.13. ರಂದು ವೀರಾರ್ ಪೊಲೀಸ್ ಸ್ಟೇಷನ್ಗೆ ತಮ್ಮ ತಾಯಿ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಕೇಸು ದಾಖಲು ಮಾಡಿಸಿರುವುದಾಗಿ ಹೇಳಿರುತ್ತಾರೆ.
ಈ ಆದಾರದ ಮೇರೆಗೆ ಶ್ರೀಮತಿ ಲೀಲಾಶ್ರೀದರರಾವ್ ಮತ್ತು ಸುರೇಶ್ @ ಸುರೇಶ್ಗೌಡ ಇವರನ್ನು ಪತ್ತೆ ಮಾಡಿ ಕರೆತಂದು ಅದುನಿಕ ತಂತ್ರಜ್ಞಾನ ಮೂಲಕ ವಿಚಾರಣೆ ಕೈಗೊಂಡು ಕೊಲೆ ಮಾಡಿರುವ ಸತ್ಯಾಂಶ ಹೊರ ಬಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾದ ಚಂದ್ರ ಬಿನ್ ತಿಮ್ಮೇಗೌಡ ಈತನನ್ನು ಸಹ ದಸ್ತಗಿರಿ ಮಾಡಿದ್ದು ಮತ್ತೊಬ್ಬ ಆರೋಪಿಯಾದ ಶೇಖರ ಈತನು ಪತ್ತೆಯಾಗಬೇಕಾಗಿರುತ್ತೆ. ಪತ್ತೆ ಕಾರ್ಯ ಮುಂದುವರೆದಿರುತ್ತೆ.
ಮೇಲ್ಕಂಡ ಕೊಲೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಶ್ರೀ ಕೆ.ರಾಜೇಂದ್ರ, ಸಿ.ಪಿ.ಐ. ಕೆ.ಆರ್.ಪೇಟೆ, ಹಾಗೂ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಡಿ.ಪಿ. ಧನ್ರಾಜ್ ಮತ್ತು ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಎಂ.ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಕೃಷ್ಣೇಗೌಡ, ನಂದೀಶ್, ಕಿರಣ್ಕುಮಾರ್, ಶತೃಜ್ಞ, ಪುನೀತ್, ಶಿವಣ್ಣ, ಜಯರಾಮೇಗೌಡ.ಕೆ. ಕುಮಾರ.ಕೆ.ಕ. ಮಹಿಳಾ ಸಿಬ್ಬಂದಿಗಳಾದ ರೇಖಾ, ಜ್ಯೋತಿ, ಪೂಣರ್ಿಮ ಹಾಗೂ ಜೀಪ್ ಚಾಲಕ ಲೋಕೇಶ್ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
ಮೃತೆ ಶ್ರೀಮತಿ ಲಕ್ಷ್ಮಿ ಹನುಮಾನ್ ಜೂಲು ಬೆನೂರ್
ಆರೋಪಿ ಲೀಲಾರಾವ್
ಆರೋಪಿಗಳಾದ ಸುರೇಶ @ ಸುರೇಶಗೌಡ ಹಾಗೂ ಚಂದ್ರ ಬಿನ್ ತಿಮ್ಮೇಗೌಡ
No comments:
Post a Comment