Moving text

Mandya District Police

PRESS NOTE DATE : 28-12-2013




               ಪೊಲೀಸ್ ಸೂಪರಿಂಟೆಂಡೆಂಟ್ ರವರ   ಕಛೇರಿ
                 ಮಂಡ್ಯ ಜಿಲ್ಲೆ, ಮಂಡ್ಯ
                 ದಿನಾಂಕಃ 28-12-2013

      ಪೊಲೀಸ್ ಪ್ರಕಟಣೆ




ದಿನಾಂಕ; 26-12-2013 ರಾತ್ರಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಡಿ.ಪಿ.ಧನರಾಜ್ ಮತ್ತು ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಶಿವಕುಮಾರ್ ಹಾಗೂ ಅವರ ಸಿಬ್ಬಂದಿರವರು ರಾತ್ರಿ ಗಸ್ತಿನಲ್ಲಿ ಹರಿಹರಪುರ ಗ್ರಾಮದಲ್ಲಿದ್ದಾಗ ವಾಹನ ತಪಾಸಣೆ ಮಾಡುತ್ತಿದ್ದಾಗ ಕೆಎ-04 ಇಡಬ್ಲ್ಯೂ-5108 ರ ಮೋಟಾರ್ ಸೈಕಲನ್ನು ತಪಾಸಣೆ ಸಮಯದಲ್ಲಿ ಸದರಿ ಮೋಟಾರ್ ಸೈಕಲನ್ನು ಕೈಗೋನಹಳ್ಳಿ ಗ್ರಾಮದ ಮೋಹನ ಹಾಗೂ ಕೆ.ಆರ್.ಪೇಟೆ ಟೌನ್ ಅಗ್ರಹಾರದ ರಾಜು ಉ: ಯುವರಾಜ ರವರು ಶ್ರವಣಬೆಳಗೊಳದಲ್ಲಿ ಈಗ್ಗೆ 4 ವರ್ಷಗಳಲ್ಲಿ ಕಳ್ಳತನ ಮಾಡಿ ತಂದಿರುವುದಾಗಿ ತಿಳಿದು ಬಂದು ಪಿ.ಎಸ್.ಐ. ರವರು ಅವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಸಮಯದಲ್ಲಿ ಇವರುಗಳ ಜೊತೆಗೆ ಆಟೋ ಡ್ರೈವರ್ ಗಳಾದ ಕೈಗೋನಹಳ್ಳಿ ಗ್ರಾಮದ ಅರುಣ ಮತ್ತು ಸಿಂಧಘಟ್ಟ ಗ್ರಾಮದ ಆನಂದ ಎಂಬುವರು ಈಗ್ಗೆ 2 ವರ್ಷಗಳ ಹಿಂದೆ ಕೆ.ಆರ್.ಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಕೆಳಕಂಡ ಮೋಟಾರ್ ಸೈಕಲ್ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಸಲುವಾಗಿ ಮೋಹನ ರವರು ತಮ್ಮ ಜಮೀನಿನ ಬಳಿ ಇಟ್ಟಿದ್ದು ಅವುಗಳನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. ಇನ್ನುಳಿಕೆ ಅರೋಪಿಗಳ ಪತ್ತೆ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ.

1)   ಕೆಎ-04 ಇಹೆಚ್-2338 ಕೆಂಪು ಬಣ್ಣದ ಹೀರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್
2)   ಕೆಎ-02 ಅರ್-7848 ಕಪ್ಪು ಬಣ್ಣದ ಹೀರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್
3)   ನಂಬರ್ ಪ್ಲೇಟ್ ಇಲ್ಲದ ಒಂದು ಬಜಾಜ್ ಪಲ್ಸರ್ ಮೋಟಾರ್ ಸೈಕಲ್,
4)   ಕೆಎ-11 ಎಕ್ಸ್ -896 ರ ನಂಬರ್ ಪ್ಲೇಟ್ ಇರುವ  ಮೋಟಾರ್ ಸೈಕಲ್,
5)   ಕೆಎ-11 ಎಕ್ಸ್-49 ರ ಬಿಳಿ ಬಣ್ಣದ ಘಜರಠ ಸ್ಕೂಟರ್
6)   ಕೆಎ-06 ಎಲ್-127 ರ ಸಿ.ಡಿ-100 ಖಖ  ಮೋಟಾರ್ ಸೈಕಲ್
7)   ಕೆಎ-09 ಯು-8708 ರ ಸಿ.ಡಿ-100 ಖಖ  ಮೋಟಾರ್ ಸೈಕಲ್
8)   ಕೆಎ-04 ಇಡಬ್ಲ್ಯೂ -5108 ರ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್. ಇವುಗಳ ಅಂದಾಜು ಬೆಲೆ ಸುಮಾರು 2,50,000/- ರೂ.ಗಳಾಗಿರುತ್ತದೆ.  

    ಈ ಮೇಲ್ಕಂಡ ಪ್ರಕರಣದ ಆರೋಫಿಗಳನ್ನು ಪತ್ತೆ ಮಾಡಿದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ 

No comments:

Post a Comment