ಪೊಲೀಸ್ ಸೂಪರಿಂಟೆಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ.
ದಿನಾಂಕಃ09-01-2014.
ದಿನಾಂಕಃ09-01-2014.
ಪ ತ್ರಿ ಕಾ ಪ್ರ ಕ ಟ ಣೆ
ಮಂಡ್ಯ ಉಪವಿಭಾಗದ ಅಪರಾಧ ಪತ್ತೆ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಮಂಡ್ಯದ ಗಾಂಧಿನಗರ 10ನೇ ಕ್ರಾಸ್ನಲ್ಲಿ ದಿನಾಂಕಃ01-01-2014ರಂದು ವೆಂಕಟೇಶನ ಕೊಲೆ ಪ್ರಕರಣದಲ್ಲಿನ 15 ಜನ ಆರೋಪಿಗಳ ಬಂಧನ.
ದಿನಾಂಕಃ01-01-2014ರಂದು ಬೆಳಗಿನ ಜಾವ 00-15 ಗಂಟೆ ಸಮಯದಲ್ಲಿ ಮಂಡ್ಯದ ಗಾಂಧಿನಗರದ 10ನೇ ಕ್ರಾಸ್ನಲ್ಲಿ ಹೊಸವರ್ಷ ಆಚರಣೆ ಮಾಡುತ್ತಿದ್ದ ಸಂಧರ್ಭದಲ್ಲಿ ಅಲ್ಲಿನ ವಾಸಿ ವೆಂಕಟೇಶ ಈತನ ತಮ್ಮ ಶ್ರೀನಿವಾಸ ಇವರುಗಳಿಗೆ ಹಳೇ ದ್ವೇಷದಿಂದ ಮಂಡ್ಯದ ಹೊಸಹಳ್ಳಿ ವಾಸಿಗಳಾದ ನಾಗೇಶ @ ನಾಗ ಹಾಗೂ ಇತನ ಸಹಚರಾದ ಸುಮಾರು 20-25 ಜನರು ಸೇರಿ ಗಾಂಧಿನಗರದ 10ನೇ ಕ್ರಾಸಿಗೆ ದೊಣ್ಣೆ ಮತ್ತು ರೀಪರ್ ಪಟ್ಟಿಗಳಿಂದ ವೆಂಕಟೇಶ ಮತ್ತು ಆತನ ತಮ್ಮ ಶ್ರೀನಿವಾಸ ಹಾಗೂ ಜಗಳ ಬಿಡಿಸಲು ಹೋದ ಅದೇ ಬೀದಿಯ ವಾಸಿ ಶಿವಲಿಂಗಯ್ಯ ರವರಿಗೆ ತಲೆ ಮೇಲೆ ಮತ್ತು ಮೈ ಮೇಲೆ ಹೊಡೆದು ಪರಾರಿಯಾಗಿದ್ದು ಇದರ ಪರಿಣಾಮವಾಗಿ ವೆಂಕಟೇಶ ಮೃತಪಟ್ಟಿದ್ದು ಶ್ರೀನಿವಾಸನಿಗೆ ಮಾರಣಾಂತಿಕವಾಗಿ ಗಾಯಗೊಳಿಸಿದ್ದು ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಆರೋಪಿಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳು ನೀಡಿದ ಸಲಹೆ ಮತ್ತು ಸೂಚನೆಗಳ ಮೇರೆಗೆ ಮಂಡ್ಯ ಉಪವಿಬಾಗದ ಅಪರಾಧ ಪತ್ತೆ ದಳದ ಅಧಿಕಾರಿರವರು ಆರೋಪಿಗಳ ಪತ್ತೆ ಬಗ್ಗೆ 3 ತಂಡ ರಚನೆ ಮಾಡಿದ್ದು ಕಾಯಾನ್ಮುಖವಾದ ತಂಡವು ದಿನಾಂಕಃ05-01-14, 06-01-14 ಮತ್ತು 07-01-14ರಂದು ಈ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿ ಕೇಸಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳು ಹಾಲಿ ಮಂಡ್ಯ ಉಪಕಾರಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ
1. ಜಯರಾಮು @ ನಲ್ಲಿಜಯರಾಮ ಬಿನ್ ನಿಂಗೇಗೌಡ, 30ವರ್ಷ, ಪ್ಲಂಬರ್ ಕೆಲಸ, ವಾಸಃ ಸಕರ್ಾರಿ ಶಾಲೆ ಎಡಭಾಗ, ಹೊಸಹಳ್ಳಿ ಮಂಡ್ಯ
2. ಸಂತೋಷ್ಕುಮಾರ @ ಸಂತೋಷ @ ಪಾನಿಪೂರಿ ಕೆಂಚ @ ಕಿರಣ ಬಿನ್ ಲೇ|| ರಘು, 24ವರ್ಷ, ಮಜಾಕ್ ಹಾಕುವ ಕೂಲಿ ಕೆಲಸ, ವಾಸಃಬೆಟ್ಟೇಗೌಡರ ವಠಾರ, ಬೇವಿನಕಟ್ಟೆ, ಹೊಸಹಳ್ಳಿ ಮಂಡ್ಯ ಸಿಟಿ.
3. ನಾಗೇಶ @ ನಾಗ @ ಗ್ಯಾಸ್ ನಾಗ ಬಿನ್ ನಾಗರಾಜು, 29ವರ್ಷ, ವ್ಯವಸಾಯ, ವಾಸಃ4ನೇ ಕ್ರಾಸ್, ಹೊಸಹಳ್ಳಿ, ಮಂಡ್ಯ ಸಿಟಿ
4. ಡಿ ರಾಘವೇಂದ್ರ @ ರಾಘು ಬಿನ್ ಪಟೇಲ್ ದೇವೇಗೌಡ, 28ವರ್ಷ, ಮರಳು ಜಲ್ಲಿ ಕಂಟ್ರಾಕ್ಟರ್ ಕೆಲಸ, ವಾಸಃ ಹನಿಯಂಬಾಡಿ ರಸ್ತೆ, ಹೂವಿನ ಮಾಲೆ, ಮುತ್ತಿನ ಮಾಲೆ ದೇವಸ್ಥಾನದ ಪಕ್ಕ ಹೊಸಹಳ್ಳಿ, ಮಂಡ್ಯ ಸಿಟಿ.
5. ವಿಜೇಂದ್ರ @ ವಿಜಿ ಬಿನ್ ಶಂಕರೇಗೌಡ, 25ವರ್ಷ, ವ್ಯವಸಾಯ, ಸ್ವಂತ ಸ್ಥಳಃರಾಮಮಂದಿರ ಎದರುಗಡೆ, ಹೊಸಹಳ್ಳಿ, ವಾಸಃ2ನೇ ಕ್ರಾಸ್, ಹರಿಶ್ಚಂದ್ರ ಸರ್ಕಲ್, ಮಂಡ್ಯ ಸಿಟಿ.
6. ಬೋರೇಗೌಡ @ ಬೋರ ಬಿನ್ ರೇವಣ್ಣ, 24ವರ್ಷ, ಕೂಲಿ ಕೆಲಸ, ವಾಸಃ3ನೇ ಕ್ರಾಸ್ ಹೊಸಹಳ್ಳಿ ಮಂಡ್ಯ
7. ಚಲುವರಾಜ್ @ ಚಲುವ @ ಎಗ್ಚಲುವ ಬಿನ್ ಪದ್ಮನರಸಿಂಹಸ್ವಾಮಿ, 24ವರ್ಷ, ವಾಸಃ4ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
8. ಕಿರಣ್ @ ಗುಮ್ಮ ಬಿನ್ ಲೇ||ಸ್ವಾಮಿ, 22ವರ್ಷ, ಟ್ರಾಕ್ಟರ್ ಚಾಲಕ, ವಾಸಃ3ನೇ ಕ್ರಾಸ್, ರಾಮನಹಳ್ಳಿ, ಹನಿಯಂಬಾಡಿ ರಸ್ತೆ, ಹೊಸಹಳ್ಳಿ ಮಂಡ್ಯ ಸಿಟಿ.
9. ಸತೀಶ್ಗೌಡ @ ಚೇತನ @ ಬಂಕ್ ಬಿನ್ ಕೃಷ್ಣ, 23 ವರ್ಷ, ಅಕ್ಕಿ ಅಂಗಡಿಯಲ್ಲಿ ಕೆಲಸ, ವಾಸ ಬಿಸಿಲು ಮಾರಮ್ಮನ ದೇವಸ್ಥಾನದ ಎದುರುಗಡೆ, ಹೊಸಹಳ್ಳಿ, ಮಂಡ್ಯ ಸಿಟಿ.
10. ಮನು @ ಕಪ್ಪೆ ಬಿನ್ ಶಿವರಾಜು, 22ವರ್ಷ ಪೇಂಟ್ ಕೆಲಸ, ವಾಸಃಹನಿಯಂಬಾಡಿ ರಸ್ತೆ, 4ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
11. ಹೇಮಂತ @ ಕಳ್ಳ ಹೇಮಂತ ಬಿನ್ ಲೇ|| ಪ್ರಕಾಸ್, 23ವರ್ಷ, ಪೇಂಟ್ ಕೆಲಸ, ವಾಸಃ ರಾಮಮಂದಿರದ ವಿರುದ್ದ, 2ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ. ಸ್ವಂತ ಸ್ಥಳಃ 2ನೇ ಕ್ರಾಸ್, ಬಸ್ ಸ್ಯಾಂಡ್ ಹತ್ತಿರ ಕಿರುಗಾವಲ, ಮಳವಳ್ಳಿ ತಾಲ್ಲೂಕು.
12. ಹೇಮಂತ್ಕುಮಾರ್ ಆರ್ @ ಹೇಮಂತ @ ಆಟೋ ಹೇಮಂತ ಬಿನ್ ರಾಮಕೃಷ್ಣ, 21ವರ್ಷ, ಬಿಸ್ಲರಿ ಕ್ಯಾನ್ ಸಪ್ಲಯರ್ ಕೆಲಸ, ವಾಸಃಕಾರಸವಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
13. ಶಿವಕುಮಾರ @ ಕಯ್ಯ ಬಿನ್ ದಳ್ಳಾಳ್ಳಿ ಮಂಚೇಗೌಡ, 20ವರ್ಷ, ಮಾಕರ್ೇಟ್ನಲ್ಲಿ ತರಕಾರಿ ಮೂಟೆ ಹೊರುವ ಕೆಲಸ, ವಾಸಃ ಹನಿಯಂಬಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
14. ಜಗದೀಶ @ ಜಗ್ಗ ಬಿನ್ ಲೇ|| ಶ್ರೀನಿವಾಸ, 23ವರ್ಷ, ಸೀಮೆಂಟ್ ಮೂಟೆ ಹೊರುವ ಕೆಲಸ, ವಾಸಃ ರಾಮಮಂದಿರದ 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
15. ಮನು ಹೆಚ್. ಬಿ @ ಕೆಂಚ ಬಿನ್ ಲೇ|| ಬಸವೇಗೌಡ, 21ವರ್ಷ, ಪ್ಲಂಬರ್ ಕೆಲಸ, ವಾಸಃಹನಿಯಂಬಾಡಿ ರಸ್ತೆ, 1ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ಸಿಟಿ.
ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುತ್ತಾರೆ. ಇವರುಗಳ ಪತ್ತೆ ಬಗ್ಗೆ ಪೊಲೀಸ್ನವರು ಬಲೆಬೀಸಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪವಿಭಾಗದ ಆರಕ್ಷಕ ಉಪ ಅಧೀಕ್ಷಕರಾದ ಡಾ|| ಶೋಭಾ ರಾಣಿ ವಿ.ಜೆ., ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಎಂ.ಹರೀಶ್ಬಾಬು, ಸಿಬ್ಬಂದಿಗಳಾದ ಎಎಸ್ಐ ಸಿ.ಕೆ.ಪುಟ್ಟಸ್ವಾಮಿ, ಹೆಡ್ಕಾನ್ಸ್ಟೇಬಲ್ ಗಳಾದ ನಾರಾಯಣ, ಲಿಂಗರಾಜು, ನಟರಾಜು, ನಿಂಗಣ್ಣ, ರಾಮಚಂದ್ರ, ಅರಕೇಶ್ವರಚಾರಿ, ಅಣ್ಣೇಗೌಡ, ಕಾನ್ಸ್ಟೇಬಲ್ಗಳಾದ ಇಪರ್ಾನ್ಪಾಷ, ಪುಟ್ಟಸ್ವಾಮಿ, ಉಮೇಶ, ಮ.ಪಿ.ಸಿ.ಆರ್ಯಾಂಬಿಕಾಗಿರಿ ಹಾಗೂ ಜೀಪ್ ಚಾಲಕರಾದ ಬಲರಾಮೇಗೌಡ, ಶ್ರೀನಿವಾಸ, ಯೋಗೇಶ ಮತ್ತೀತರರು ಪಾಲ್ಗೊಂಡಿದ್ದು ಅವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment