ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 06-02-2014
ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಮತ್ತು ಮಂಡ್ಯ ನಗರ ಪೊಲೀಸರ ಕಾರ್ಯಚರಣೆ, ದೇವಸ್ಥಾನ ಕಳವು ಹಾಗೂ ಸರಕಳ್ಳತನ ಸೇರಿದಂತೆ 52 ಪ್ರಕರಣಗಳ ಪತ್ತೆ.
ಮಂಡ್ಯ ಜಿಲ್ಲೆಯ ಹೊಳಲು, ಮಂಡ್ಯ ಕೊಪ್ಪಲು ಹಾಗೂ ಮಂಡ್ಯ ನಗರ, ಅರಕೆರೆ, ಬೆಸಗರಹಳ್ಳಿ, ಮೇಲುಕೋಟೆ ವಿವಿದೆಡೆಗಳಲ್ಲಿ ವರದಿಯಾಗಿದ್ದ ಹಲವು ದೇವಸ್ಥಾನ ಹಾಗೂ ಸರಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಲೋಕೇಶ್ ಮತ್ತು ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ. ಹರೀಶ್ಬಾಬು ರವರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ಡಿಎಸ್ಪಿ, ಮಂಡ್ಯ ಉಪವಿಬಾಗ ರವರ ನೇತೃತ್ವದಲ್ಲಿ ನೇಮಿಸಲಾಗಿತ್ತು. ಸದರಿ ತಂಡಗಳ 2-3 ದಿನಗಳ ಸತತ ಪ್ರಯತ್ನದಿಂದ ಒಟ್ಟು 14 ಜನ ಆರೋಪಿಗಳನ್ನು ಬಂದಿಸಿದ್ದು, ಒಟ್ಟು 52 ಪ್ರಕರಣಗಳ ಪತ್ತೆಯಾಗಿರುತ್ತವೆ. ಸದರಿ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
1] 422.5 ಗ್ರಾಂ ಚಿನ್ನಾಬರಣಗಳು. 330 ಗ್ರಾಂ ಬೆಳ್ಳಿ. ಒಟ್ಟು ಮೌಲ್ಯ ಸುಮಾರು 13 ಲಕ್ಷ ರೂಗಳು.
3] ಎರಡು ನೋಕಿಯಾ ಕಂಪನಿಯ ಮೊಬೈಲ್ಗಳು
4] ದೇವಸ್ಥಾನ ಹುಂಡಿಯ ಸುಮಾರು 10, 000 ರೂ ಹಣ.
5] ಕೃತ್ಯಕ್ಕೆ ಬಳಸಿದ ನಾಲ್ಕು ದ್ವಿಚಕ್ರ ವಾಹನಗಳು
ಮೇಲ್ಕಂಡ 52 ಪ್ರಕರಣಗಳಲ್ಲಿ ಒಟ್ಟು ಹತ್ತು ಸರಗಳ್ಳತನ ಪ್ರಕರಣಗಳು, ಅರಕರೆ ಮತ್ತು ಹೊಳಲುವಿನಲ್ಲಿ ನಡೆದ 02 ಡಕಾಯಿತಿ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.
No comments:
Post a Comment