ತೂಬಿನಕೆರೆ ಕೈಗಾರಿಕಾ ಪ್ರದೇಶದ ಸಂಪತ್ ರೀಫೈನ್ಡ್ ಪ್ರೈ.ಲಿ ನಲ್ಲಿ
5 ಕಾರ್ಮಿಕರ ದುರ್ಮರಣ
ಮಂಡ್ಯ ತಾಲ್ಲೂಕಿನ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ರೀಫೈನ್ಡ್ ಪ್ರೈ.ಲಿ, ನಲ್ಲಿ ಸುಮಾರು 10 ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಉಪಯೋಗಿಸಲ್ಪಟ್ಟ ಗೇರ್ ಆಯಿಲ್ಅನ್ನು ಸಂಸ್ಕರಿಸಿ ಇದೇ ಕಾರ್ಖಾನೆಯ ಬೆಂಗಳೂರು ಶಾಖೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಮಾಲಿಕರಾದ ಅರುಣ್, ಕುಮಾರ್ ಅಥವಾ ರೈಟರ್ ಅಮೃತ್ ರಾಜ್ ರವರ ಸೂಚನೆಯ ಮೇರೆಗೆ ಲೋಡಿಂಗ್, ಅನ್ಲೋಡಿಂಗ್, ಮತ್ತಿತರೆ ಕೆಲಸ ಮಾಡಿಕೊಂಡಿದ್ದರು. ಕಳೆದ 10 ದಿನಗಳಿಂದ ಕಾರ್ಖಾನೆಯ ರಿಯಾಕ್ಟರ್ನಲ್ಲಿ ಬೋಲ್ಡ್ ಸಡಿಲಗೊಂಡು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದ ಕಾರಣ ಈ ದಿನ ದಿನಾಂಕ;6-3-14 ರಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಕಾರ್ಖಾನೆಯ ಮಾಲಿಕರಾದ ಅರುಣ್ ರವರು ರೈಟರ್ ಅಮೃತ್ ರಾಜ್ ಮಾಡಿ ರಿಯಾಕ್ಟರ್ ಒಳಗೆ ಇಳಿದು ಬೋಲ್ಡ್ ಸರಿಪಡಿಸುವಂತೆ ತಿಳಿಸಿದ್ದರು. ಅದರಂತೆ ಈ ದಿನ ಬೆಳಿಗ್ಗೆ 11-00 ಗಂಟೆಯಲ್ಲಿ ಅಮೃತ್ರಾಜ್ ಕಾರ್ಖಾನೆಯ ಕಾರ್ಮಿಕರಾದ ಶ್ರೀರಾಮ್ಗೆ ರಿಯಾಕ್ಟರ್ನ ಒಳಗೆ ಇಳಿದು ಬೋಲ್ಟ್ ಸರಿಪಡಿಸಿ ಕ್ಲೀನ್ ಮಾಡುವಂತೆ ತಿಳಿಸಿದರು. ಆಗ ಶ್ರೀರಾಮ ಒಳಗೆ ಇಳಿದು, ಚೇತು ಮೇಲೆ ನೋಡುತ್ತಿದ್ದಾಗ, ಶ್ರೀರಾಮ ಪ್ರಜ್ಞೆತಪ್ಪಿ ಒಳಗೆ ಬಿದ್ದಿದ್ದಾನೆಂದು ಹೇಳಿ ಮೇಲಕ್ಕೆ ಎತ್ತಿತರುತ್ತೇನೆಂದು ಹೇಳಿ ಇಳಿದವನು ಹೊರಗೆ ಬಾರದಿದ್ದಾಗ ಒಬ್ಬರ ನಂತರ ಒಬ್ಬೊಬ್ಬರಾಗಿ ರಾಜು, ಗಾಮ, ಮತ್ತು ಬಬ್ಲು ರವರುಗಳು ರಿಯಾಕ್ಟರ್ ಒಳಗೆ ಇಳಿದಿದ್ದು, ಇವರುಗಳು ಯಾರೂ ಅರ್ಧಗಂಟೆಯಾದರೂ ಹೊರಗೆ ಬಾರದಿದ್ದಾಗ, ಪಿರ್ಯಾದಿ ಮತ್ತು ರೈಟರ್ ಅಮೃತ್ರಾಜ್ ರವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಪೋನ್ ಮಾಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿ ರಿಯಾಕ್ಟರ್ ನ ತಳಬಾಗವನ್ನು ಕಟ್ ಮಾಡಿ ನೋಡಲಾಗಿ ಕೆಳಬಾಗದಲ್ಲಿ ಸಿಕ್ಕಿಕೊಂಡಿದ್ದ ಮೇಲ್ಕಂಡ ಐದು ಮಂದಿ ಉಸಿರುಕಟ್ಟಿ ಮೃತಪಟ್ಟಿದ್ದರು. ಕಾರ್ಖಾನೆಯ ಮಾಲಿಕರಾದ ಅರುಣ್ ಮತ್ತು ಕುಮಾರ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರೈಟರ್ ಅಮೃತ್ ರಾಜ್ ರವರುಗಳು ಕಾರ್ಮಿಕರ ಸುರಕ್ಷತೆಯ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಉಸಿರಾಡಲು ಕಷ್ಟಕರವಾಗಿರುವ ರಿಯಾಕ್ಟರ್ ನ ಒಳಗೆ ಇಳಿಸಿ ನಿರ್ಲಕ್ಷತೆ ವಹಿಸಿರುವುದರಿಂದ ಮೇಲ್ಕಂಡವರು ಮೃತಪಟ್ಟಿರುತ್ತಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ ನಂ 140/2014, ಕಲಂ 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತದೆ.
ಮೃತರು,
1] ಗಾಮ ಬಿನ್ ಸಿಂಘಾಸನ್, 25 ವರ್ಷ, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ:, ಬಿಹಾರ,
2] ಬಬ್ಲು ಬಿನ್ ಸಿಂಘಾಸನ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
3] ಶ್ರೀರಾಮ ಬಿನ್ ಬೋಚ್, ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
4] ಚೇತುಬಿನ್ ಮುನಾರ್ ಮುಸ್ತಾಫಾಬಾದ್ ಗ್ರಾಮ, ಘೋರಿಯಾ ಕೋಟಿ ತಾ: ಬಿಹಾರ,
5] ರಾಜು ಬಿನ್ ಮಿಠಾಯ್ಲಾಲ್, ಮುಲ್ಲಾ ಜನಾಂಗ, ಲೋಗ್ರೋರಾ ಗ್ರಾಮ, ಉಚೆಹರ ತಾ: ಮಧ್ಯಪ್ರದೇಶ
No comments:
Post a Comment