Moving text

Mandya District Police

Press Note - Pandavapura Dacoity Case

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ, ದಿನಾಂಕಃ 14-11-2015.

-: ಪತ್ರಿಕಾ ಪ್ರಕಟಣೆ :-

ದಿನಾಂಕ: 25-10-2015 ರಂದು ರಾತ್ರಿ ಸಮಯದಲ್ಲಿ ಪಾಂಡವಪುರ ತಾಲ್ಲೂಕು ಪಟ್ಟಸೋಮನಹಳ್ಳಿ ಗ್ರಾಮದ ಶ್ರೀ. ಶಿವಶೈಲ ಕ್ಷೇತ್ರದಲ್ಲಿ ವಾಸವಾಗಿರುವ ನಿವೃತ್ತ ಜಸ್ಟೀಸ್ ಶ್ರೀ ಶಿವಪ್ಪ ರವರ ಮನೆಗೆ 10 ಜನ ದುಷ್ಕರ್ಮಿಗಳು ನುಗ್ಗಿ ಶಿವಪ್ಪ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹಲ್ಲೆ ಮಾಡಿ ಕಟ್ಟಿ ಹಾಕಿ, ಸುಮಾರು 12,70,000/- ರೂ. ಬೆಲೆ ಬಾಳುವ ಒಡವೆ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದು, ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆ ಮೊ.ಸಂ. 378/2015. ಕಲಂಃ 395 ಕೂಡ 149 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

     ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರೀ. ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪೊಲೀಸ್ ಇನ್ಸ್‍ಪೆಕ್ಟರ್, ಪಾಂಡವಪುರ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಮಂಡ್ಯ ಗ್ರಾಮಾಂತರ ವೃತ್ತ, ಶ್ರೀ ಪ್ರೀತಂ ದತ್ತ ಶ್ರೇಯಾಕರ, ಸಿ.ಪಿ.ಐ. ಮಂಡ್ಯ ನಗರ ವೃತ್ತ, ಶ್ರೀ ಹರೀಶ್‍ಬಾಬು, ಪೊಲೀಸ್ ಇನ್ಸ್‍ಪೆಕ್ಟರ್, ಡಿ.ಸಿ.ಐಬಿ, ಡಿಪಿಓ, ಮಂಡ್ಯ, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಶ್ರೀ ಚಂದ್ರಶೇಖರ್, ಪಿ.ಎಸ್.ಐ. ಮೇಲುಕೋಟೆ, ಶ್ರೀ ಮಹೇಶ್, ಪಿ.ಎಸ್.ಐ. ಶ್ರೀರಂಗಪಟ್ಟಣ ಅಪರಾಧ ವಿಭಾಗ. ಶ್ರೀ ಸುನೀಲ್‍ಕುಮಾರ್, ಪಿ.ಎಸ್.ಐ. ಶ್ರೀರಂಗಪಟ್ಟಣ, ಶ್ರೀ ಆನಂದ್‍ಕುಮಾರ್, ಮಂಡ್ಯ ಗ್ರಾಮಾಂತರ ಠಾಣೆ, ಶ್ರೀ ಸತೀಶ್‍ನಾಯಕ್, ಪಿ.ಎಸ್.ಐ. ಕೆರಗೋಡು ಠಾಣೆ, ಶ್ರೀ ಕೆ.ಆರ್.ಸತೀಶ್, ಸಿಹೆಚ್‍ಸಿ-33, ಶ್ರೀ ತಾಂಡವಮೂರ್ತಿ, ಸಿಹೆಚ್‍ಸಿ-69, ಶ್ರೀ ಚಿಕ್ಕಯ್ಯ, ಸಿಹೆಚ್‍ಸಿ-56, ಶ್ರೀ ಕೃಷ್ಣೇಗೌಡ, ಸಿಪಿಸಿ-678, ಶ್ರೀ ಮಹೇಶ್‍ಕುಮಾರ್, ಪಿಸಿ-170, ಶ್ರೀ ಉಮರ್, ಸಿಪಿಸಿ-173, ಶ್ರೀ ಅನಿಲ್, ಪಿಸಿ-56, ಶ್ರೀ ಪ್ರದೀಪ್, ಪಿಸಿ-224, ಶ್ರೀ ಮುಕ್ರಂಜಾನ್, ಪಿಸಿ-733, ಶ್ರೀ ರಾಜೇಶ್, ಪಿಸಿ-257, ಶ್ರೀ ರೇವಣ್ಣ, ಪಿಸಿ-393, ಶ್ರೀ ಮಣಿಕಂಠಸ್ವಾಮಿ, ಪಿಸಿ-150, ಶ್ರೀ ಶ್ರೀನಿವಾಸ್, ಪಿಸಿ-471, ಶ್ರೀಮತಿ ಶೋಭ.ಜೆ. ಮಪಿಸಿ-46, ಹಾಗೂ ಸಿ.ಡಿ.ಆರ್. ವಿಭಾಗದ ರವಿಕಿರಣ್, ಲೋಕೇಶ್ ಮತ್ತು ಜೀಪ್ ಚಾಲಕರುಗಳಾದ ಅಶೋಕ, ಭಾರ್ಗವ, ಮತ್ತು ಪುಟ್ಟರಾಜುರವರುಗಳನ್ನೊಳಗೊಂಡಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.

     ಈ ಪ್ರಕರಣದ ಆರೋಪಿಗಳು ಹಾಗೂ ಮಾಲುಗಳನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಮೇಲ್ಕಂಡ  ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ. 

1 comment:

  1. Great,how many people have involved to caught these fellows

    ReplyDelete