ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ. ದಿನಾಂಕಃ 30-12-2015
ಪತ್ರಿಕಾ ಪ್ರಕಟಣೆ
2016 ರ ನೂತನ ವರ್ಷಾಚರಣೆಯ ಸಂಬಂsದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸ್ ಇಲಾಖಾ ವತಿಯಿಂದ ಕೈಗೊಳ್ಳಲಾಗಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ 2015 ನೇ ಸಾಲಿನ ನವೆಂಬರ್ ಮಾಹೆಯವರೆಗೆ ಒಟ್ಟು 115 ಜನರು ಮೃತಪಟ್ಟಿರುವುದು ವರದಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ, ಎಡಮುರಿ, ಕೆ.ಆರ್. ಸಾಗರದ ಹಿನ್ನೀರಿನ ಕಡೆ ಮತ್ತು ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗ್ರಾಮದ ಕಾವೇರಿ ನದಿ ಪಾತ್ರಗಳಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಮುಂಜಾಗ್ರತೆಯಾಗಿ 2016 ರ ಹೊಸವರ್ಷ ಆಚರಣೆ ಸಂಬಂದs ದಿಃ 31-12-2015 ಮತ್ತು ದಿಃ 01-01-2016 ರಂದು ಮೇಲ್ಕಂಡ ಸ್ದಳಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಮಾನ್ಯ ಜಿಲ್ಲಾದಿಕಾರಿಗಳು ಆದೇಶ ಹೊರಡಿಸಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಸದರಿ ಸ್ದಳಗಳ ಬಳಿ ತೆರಳದಂತೆ ಕೋರಲಾಗಿದೆ.
1] ಜಿಲ್ಲೆಯಲ್ಲಿ ಇರುವ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ ನಡೆಸುವ ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 1230 ಗಂಟೆಯೊಳಗೆ ಮುಕ್ತಾಯಗೊಳಿಸಲು ತಿಳಿಸಲಾಗಿದೆ.
2] ಹೊಟೇಲ್, ರೆಸ್ಟೋರೆಂಟ್, ಕ್ಲಬ್ ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ಆಯಾಯ ಹೋಟೆಲ್ ಹಾಗೂ ಸಂಸ್ಥೆಗಳ ಒಳ ಆವರಣದಲ್ಲಿಯೇ ನಡೆಯಬೇಕು ಹಾಗೂ ಕಾರ್ಯಕ್ರಮಗಳು ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅದರ ಮಾಲೀಕರು ಹಾಗೂ ಕಾರ್ಯಕ್ರಮ ಆಯೋಜಕರು ನೋಡಿಕೊಳ್ಳುವುದು, ಒಂದು ಪಕ್ಷ ಯಾವುದಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
3] ಯಾವುದೇ ವ್ಯಕ್ತಿಗಳು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಸೂಚಿಸಲಾಗಿದ್ದು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
4] ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಹೊಸವರ್ಷ ಆಚರಣೆ ನೆಪದಲ್ಲಿ ಬಲವಂತವಾಗಿ ನಿಲ್ಲಿಸಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡದಂತೆ ಹಾಗೂ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ ಅಸಭ್ಯವಾಗಿ ವರ್ತಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
5] ನೀರಿನ ತಾಣಗಳಾದ ಕೆ.ಅರ್. ಸಾಗರದ ಬಳಿ, ಬಲಮುರಿ, ಎಡಮುರಿ, ಕಾವೇರಿ ಹೊಳೆ, ಗೋಶಾಯಿಘಾಟ್, ಮುತ್ತತ್ತಿ ಹಾಗೂ ಇನ್ನಿತರೆ ನೀರಿರುವ ಸ್ಥಳಗಳ ಬಳಿ ತೆರಳದಂತೆ ಈ ಮೂಲಕ ಕೋರಲಾಗಿದೆ.
6] ಹೊಸವರ್ಷ ಆಚರಣೆ ಸಂಬಂsದ ಏರು sದ್ವನಿಯಲ್ಲಿ sದ್ವನಿವರ್ದಕಗಳನ್ನು ಬಳಸದಂತೆ ಹಾಗೂ ರಾತ್ರಿ 1000 ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸದಂತೆ ಸೂಚಿಸಲಾಗಿದೆ.
ಜಿಲ್ಲೆಯ ಸಮಸ್ತ ಜನತೆಗೆ 2016 ನೇ ಸಾಲಿನ ಹೊಸವರ್ಷದ ಶುsಬಾಷಯಗಳನ್ನು ಹಾಗೂ ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲೆಂದು ಪೊಲೀಸ್ ಇಲಾಖಾ ವತಿಯಿಂದ ಹಾರೈಸಲಾಗಿದೆ."
"ಎಲ್ಲರೊಳಗೊಂದಾಗು ಮಂಕುತಿಮ್ಮ"
No comments:
Post a Comment