ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ
ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ,
ದಿನಾಂಕ: 12-12-2015
ಪತ್ರಿಕಾ ಪ್ರಕಟಣೆ
ಜಾತ್ರೆ, ಬಸ್ಸುಗಳಲ್ಲಿ, ಬಸ್ಸ್ಟ್ಯಾಂಡ್ ಹಾಗೂ ಇತರೆ ಕಡೆಗಳಲ್ಲಿ ಚಿನ್ನದ ಸರ, ವಡವೆಗಳನ್ನು ಕಳುವು ಮಾಡುತ್ತಿದ್ದ ಆರೋಪಿಗಳ ಬಂಧನ
ಮಂಡ್ಯ ತಾಃ
ಶಿವಳ್ಳಿ ಪೊಲೀಸ್ ಠಾಣಾ ಸರಹದ್ದಿನ ಹುಲಿಕೆರೆ ಗ್ರಾಮದ ಮಹದೇಶ್ವರ ಸ್ವಾಮಿ ಜಾತ್ರೆಯಲ್ಲಿ ಹೆಂಗಸರಿಂದ
ಚನ್ನದ ಸರ ಕಳುವು ಮಾಡಿದ್ದ ಸಂಬಂಧವಾಗಿ ಶಿವಳ್ಳಿ ಠಾಣಾ ಮೊ.ಸಂ:183/2015 ಮತ್ತು 184/2015ರ ಪ್ರಕರಣಗಳು
ದಾಖಲಾಗಿದ್ದು ಈ ಪ್ರಕರಣಗಳ ಪತ್ತೇಕಾರ್ಯದಲ್ಲಿ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷರಾದ ಶ್ರೀ ಲೋಕೇಶ್‍ರವರು
ಅಪರಾಧ ತಂಡವನ್ನು ರಚಿಸಿಕೊಂಡು ನಿರಂತರ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡು ಜಾತ್ರೆ, ಬಸ್ಸು, ಹಾಗೂ
ಇತರೆ ಕಡೆಗಳಲ್ಲಿ ಕಳುವು ಮಾಡಿದ್ದ ಈ ಕೆಳಕಂಡ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡು
ಆರೋಪಿಗಳಿಂದ ಶಿವಳ್ಳಿ ಪೊಲೀಸ್ ಠಾಣೆಯ 2 ಪ್ರಕರಣಗಳು,
ಮಂಡ್ಯ ಗ್ರಾಮಾಂತರ ಠಾಣೆಯ 1 ಪ್ರಕರಣ ಹಾಸನ ಜಿಲ್ಲೆಯ ಬೇಲೂರು ಠಾಣೆಯ 1 ಪ್ರಕರಣ, ಹಾಗೂ ಮಂಡ್ಯ ಪಶ್ಚಿಮ
ಪೊಲೀಸ್ ಠಾಣೆಯ 5 ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳನ್ನು ಪತ್ತೆಮಾಡಿದ್ದು ಅವರುಗಳಿಂದ ಒಟ್ಟು
7ಲಕ್ಷದ 20 ಸಾವಿರ ರೂ ಬೆಲೆಯ 276.7 ಗ್ರಾಂ ಚಿನ್ನದ ವಡವೆಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಆರೋಪಿಗಳ
ವಿವರ
1] ಜ್ಯೋತಿ
ಕೋಂ ಹನುಮಂತ, 30 ವರ್ಷ, ಕೂಲಿ ಕೆಲಸ, ವಾಸ ಶಾಂತಮ್ಮ ರವರ ಮನೆಯಲ್ಲಿ ಬಾಡಿಗೆ ಮನೆ ವಾಸ, 3 ನೇ ಕ್ರಾಸ್,
ಗಣೇಶ ದೇವಸ್ಥಾನದ ಬೀದಿ, ಕೋಳಿ ಪಾರಂ ಲೇಔಟ್, ಆನೆಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಸ್ವಂತ
ಊರು ಗೆಂಡೆಹೊಸಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು.
2] ಗಿರೀಶ್
@ ಗಿರಿ ಬಿನ್ ಲೇಟ್ ಸ್ವಾಮಿ, 29 ವರ್ಷ, ಕೊರಮ ಜನಾಂಗ, ಕಲ್ಲು ಹೊಡೆಯುವ ಕೆಲಸ, ಹಾಲಿ ವಾಸ ನಾರಾಯಣಪ್ಪ
ಎಂಬುವರ ಮನೆಯಲ್ಲಿ ಬಾಡಿಗೆ ವಾಸ, 7ನೇ ಕ್ರಾಸ್, ಬಸ್ಸು ನಿಲ್ದಾಣದ ಪಕ್ಕ, ಪಾಪರೆಡ್ಡಿ ಲೇ ಔಟ್, ಜಿಗಣಿ,
ಆನೆಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಸ್ವಂತ ಊರು ಗೂಳಘಟ್ಟ ಗ್ರಾಮ, ಮಳವಳ್ಳಿ ತಾಲ್ಲೂಕು,
ಮಂಡ್ಯ ಜಿಲ್ಲೆ.
3] ರಾಜು
@ ಮೋಡರಾಮ್ @ ರಾಜೀವ್‍ಗಾಂಧಿ @ ಅಶೋಕ್ @ ಸೇಟು ರಾಜು ಬಿನ್ ಡೋಲಾರಾಮ್, 34 ವರ್ಷ, ಸೀರ್ವಿ ಜನಾಂಗ,
ಬೆಂಗಳೂರಿನ ಭನ್ನೇರಘಟ್ಟ ರಸ್ತೆಯಲ್ಲಿ ಗೊಟ್ಟಿಗೆರೆ ಗ್ರಾಮದಲ್ಲಿರುವ ಕೂನಿಬಾಯಿ ರವರ ಹಾಯ್ ಮಾತಾಜಿ
ಜ್ಯೂವೆಲರಿ ಅಂಗಡಿಯಲ್ಲಿ ಕೆಲಸ, ವಾಸ 1 ನೇ ಕ್ರಾಸ್, ಕೆಂಬತ್ತಹಳ್ಳಿ ರೋಡ್, ಶಾರದಮ್ಮ ಬಿಲ್ಡಿಂಗ್,
ಗೊಟ್ಟಿಗೆರೆ ಗ್ರಾಮ, ಭನ್ನೇರಘಟ್ಟ ಗ್ರಾಮ, ಬೆಂಗಳೂರು ಗ್ರಾಮಾಂತರ, ಸ್ವಂತ ಊರು ಕೋಕ್ರಾ ಗ್ರಾಮ ಸೋಜತ್
ಸಿಟಿ, ಪಾಲಿ ಜಿಲ್ಲೆ. ರಾಜಸ್ಥಾನ್ ರಾಜ್ಯ
ಈ ಮೇಲ್ಕಂಡ ಪ್ರಕರಣಗಳ ಪತ್ತೆಕಾರ್ಯದಲ್ಲಿ ಪಾಲ್ಗೊಂಡಿದ್ದ
ಮಂಡ್ಯ ಗ್ರಾಮಾಂತರ ವೃತ್ತನಿರೀಕ್ಷಕರಾದ ಶ್ರೀ ಲೋಕೇಶ್, ಮ.ಪಿಎಸ್‍ಐ ಶ್ರೀಮತಿ ಭವಿತ, ಮತ್ತು ಅಪರಾಧ
ಪತ್ತೆ ಸಿಬ್ಬಂದಿಯವರಾದ ಶ್ರೀ ಚಿಕ್ಕಯ್ಯ, ಮಹೇಶಕುಮಾರ್, ಅನಿಲ್‍ಕುಮಾರ್, ಉಮರ್‍ಅಹಮದ್, ಕರಿಗಿರಿಗೌಡ,
ಶ್ರೀರಾಮ, ಉಮೇಶ, ಆಂತೋಣಿರವರು ಚಾಲಕ ಪುಟ್ಟರಾಜು ರವರುಗಳನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರು,
ಮಂಡ್ಯ ಜಿಲ್ಲೆ, ಮಂಡ್ಯರವರು ಪ್ರಶಂಶಿಸಿರುತ್ತಾರೆ.
No comments:
Post a Comment