Moving text
Press Note Date: 07-04-2017
ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ,
ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
ಇತ್ತೀಚೆಗೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್
ಬ್ಯಾಂಕ್‍ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಡನೆ ವಿಲೀನಗೊಂಡಿರುತ್ತವೆ. ಈ ಹಿನ್ನಲೆಯಲ್ಲಿ ಮೇಲ್ಕಂಡ
ಬ್ಯಾಂಕಿನ ಗ್ರಾಹಕರುಗಳಿಗೆ ಕೆಲವು ಹ್ಯಾಕರ್‍ಗಳು ದೂರವಾಣಿ ಕರೆ ಮಾಡಿ ಅಕೌಂಟ್‍ನ ಎ.ಟಿ.ಎಂ. ಕಾರ್ಡ್‍ಗಳನ್ನು
ಹೊಸದಾಗಿ ನೀಡಬೇಕಾಗುತ್ತಿರುವುದರಿಂದ ನಿಮ್ಮ ಎ.ಟಿ.ಎಂ. ಕಾರ್ಡ್ ನಂಬರ್ ಮತ್ತು ಪಿನ್ ನಂಬರ್‍ಗಳನ್ನು
ನೀಡುವಂತೆ ಕರೆ ಮಾಡಿ ಮಾಹಿತಿ ಪಡೆದು ಅಕೌಂಟ್‍ಗಳಿಂದ ಹಣವನ್ನು ಡ್ರಾ ಮಾಡಿ ಮೋಸ ಮಾಡುವ ವಂಚಕರು ಇರುತ್ತಾರೆ.
ಆದುದರಿಂದ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್
ಬ್ಯಾಂಕ್‍ಗಳ ಗ್ರಾಹಕರು ಇಂತಹ ಯಾವುದೇ ಫ್ರಾಡ್ ಕಾಲರ್‍ಗಳ ಮಾತಿಗೆ ಮರುಳಾಗದೆ ಹಾಗೂ ನಿಮ್ಮ ಅಕೌಂಟ್‍ನ
ಮಾಹಿತಿಯನ್ನು ಯಾರಿಗೂ ನೀಡದೆ ಮೋಸಕ್ಕೆ ಒಳಗಾಗದಂತೆ ಎಚ್ಚರದಿಂದ ಇರುವಂತೆ ಪೊಲೀಸ್ ಇಲಾಖೆಯ ವತಿಯಿಂದ
ಕೋರಲಾಗಿದೆ.
Press Note Date: 07-04-2017
ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ,
ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
ದಿನಾಂಕಃ 31.03.17. ರಂದು ಬೆಳಿಗ್ಗೆ 9-30 ಗಂಟೆ
ಸಮಯದಲ್ಲಿ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅರ್.
ಶಶಿಭೂಷಣ್ ಇವರ ಕುತ್ತಿಗೆಯನ್ನು ಕುಯ್ದು ಕೊಲೆ ಮಾಡಿದ್ದು ಈ ಸಂಬಂದsವಾಗಿ ಕೆ.ಎಂ.ದೊಡ್ಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಈ
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಸಂಬಂಧ ಕೆ.ಎಂ.ದೊಡ್ಡಿ ವೃತ್ತದ ಸಿಪಿಐ ಶ್ರೀ ಶಿವಮಲವಯ್ಯ
ಇವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಹಿಡಿಯುವಲ್ಲಿ ಕೆ.ಎಂ.ದೊಡ್ಡಿ ಠಾಣೆಯ
ಪಿಎಸ್‍ಐ ಆಯ್ಯನಗೌಡ, ಹಲಗೂರು ಠಾಣೆ ಪಿಎಸ್‍ಐ ಬಿ.ಎಸ್. ಶ್ರೀಧರ್, ಅರಕೆರೆ ಠಾಣಾ ಪಿಎಸ್‍ಐ, ಅಜರುದ್ದೀನ್,
ಶ್ರೀರಂಗಪಟ್ಟಣ (ಗ್ರಾ) ಠಾಣಾ ಪಿಎಸ್‍ಐ ಪುನೀತ್ ಹಾಗೂ ಸಿಬ್ಬಂದಿಗಳಾದ ಎಎಸ್‍ಐ ಗೋವಿಂದಪ್ಪ, ಗಯಾಜï
ಉದ್ದೀನ್ ಖಾನ್, ಮಹದೇವ, ಜಯರಾಮೇಗೌಡ, ಜಯರಾಮು ಹಾಗೂ ಚಾಲಕರುಗಳಾದ ಮಂಜುನಾಥ್ ಮತ್ತು ರವಿ ಇವರುಗಳ
ಸಹಾಯದಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಈ ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ.
1] ಮೃತ
ಶಶಿಭೂಷಣ್ ಇವರ ಪತ್ನಿ ಶ್ರೀಮತಿ ಶಾಂತಮ್ಮ ಇವರನ್ನು ದಸ್ತಗಿರಿ ಮಾಡಿ ಇವರಿಂದ ಒಂದು ಮೊಬೈಲ್ ಪೋನ್
ವಶಕ್ಕೆ ಪಡೆದು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
2] ಮೃತ
ಶಶಿಭೂಷಣ್ ಇವರ ಮಗಳು ನವ್ಯಶ್ರೀ ಈಕೆಯನ್ನು ದಸ್ತಗಿರಿ ಮಾಡಿ ಈಕೆಯಿಂದ ಒಂದು ಮೊಬೆಲ್ ವಶಕ್ಕೆ ಪಡೆದು
ಈಕೆಯನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
3] ಸುರೇಶ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರು ಬ್ಯಾಂಕ್ ಪಾಸ್ ಪುಸ್ತಕಗಳು,
ಐದು ಕೀ ಗಳಿರುವ ಗೊಂಚಲು, ಒಂದು ಹಣ ಇರುವ ಪರ್ಸ್, ಒಂದು ಡೈರಿ, ಎರಡು ಮೊಬೈಲ್ ಪೋನ್‍ಗಳು ಹಾಗೂ ಕೃತ್ಯಕ್ಕೆ
ಮುಂಗಡವಾಗಿ ಪಡೆದಿದ್ದ 7740/- ರೂ ನಗದು ಹಣ ವಶಕ್ಕೆ ಪಡೆದಿರುತ್ತೆ.
4] ವೆಂಕಟೇಶ್
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರನ್ನು ವಶಕ್ಕೆ ಪಡೆದಿರುತ್ತೆ.
5] ಮಹದೇವ
@ ಶಾಕಾ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚನ್ನು ವಶಕ್ಕೆ
ಪಡೆದಿರುತ್ತೆ.
6] ಸಂತೋಷ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚು ಹಾಗೂ ಒಂದು ಮೊಬೈಲ್
ವಶಕ್ಕೆ ಪಡೆದಿರುತ್ತೆ.
7] ನಂಜುಂಡ
@ ನಂಜಪ್ಪ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಮೃತನ ಒಂದು ಮೊಬೆಲ್ ಪೋನನ್ನು ಈತನ ಮನೆಯಿಂದ
ವಶಕ್ಕೆ ಪಡೆದಿರುತ್ತೆ.
ಆರೋಪಿ
ವೆಂಕಟೇಶ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅರೋಪಿ ಸುರೇಶ ಮತ್ತು ಮಹದೇವ @ ಶಾಕಾ ಇವರನ್ನು
ಪೆÇಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿ ಇವರ ಮಾಹಿತಿ ಮೇರೆಗೆ ಅರೋಪಿಗಳಾದ ಸಂತೋಷ ಮತ್ತು ನಂಜುಂಡ
@ ನಂಜಪ್ಪ ಇವರನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
POLICE FLAG DAY PRESS NOTE
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:01-04-2017.
ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
ಗೆ,
ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ.
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:01-04-2017.
ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
ದಿನಾಂಕ:02-04-2017 ರಂದು ಬೆಳಿಗ್ಗೆ 0800 ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಮಂಡ್ಯ ನಗರದ ಡಿಎಅರ್ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ. ಆದುದ್ದರಿಂದ ದಯವಿಟ್ಟು ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರು ದಿನಾಂಕ: 02-04-2017 ರಂದು ಬೆಳಿಗ್ಗೆ 0750 ಗಂಟೆಗೆ ಮಂಡ್ಯ ನಗರದ ಡಿಎಅರ್ ಪೊಲೀಸ್ ಕವಾಯತು ಮೈದಾನದಲ್ಲಿ ಭಾಗವಹಿಸಬೇಕೆಂದು ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.
ತಮ್ಮ ವಿಶ್ವಾಸಿ
ಪೊಲೀಸ್ ಸೂಪರಿಂಟೆಂಡೆಂಟ್
ಮಂಡ್ಯ ಜಿಲ್ಲೆ.
ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ.
Subscribe to:
Posts (Atom)