Moving text

Mandya District Police

House breaking theft case detection -Mandya Central PS Press Note


ಮಂಡ್ಯ ಜಿಲ್ಲಾ ಪೊಲೀಸ್
ಪತ್ರಿಕಾ ಪ್ರಕಟಣೆ.
16-10-2017



          ದಿನಾಂಕ:17-09-2017 ರಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ಸರಹದ್ದಿನ ಷುಗರ್ ಟೌನ್ ನ ಮರಿಸ್ವಾಮಿ ಎಂಬುವರು ತನ್ನ ಮನೆಗೆ ರಾತ್ರಿ 09-00 ಗಂಟೆಗೆ ಬೀಗ ಹಾಕಿಕೊಂಡು ಷುಗರ್ ಫ್ಯಾಕ್ಟರಿಗೆ ಸೆಕ್ಯೂರಿಟಿ ಕೆಲಸಕ್ಕೆ ಹೋಗಿದ್ದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮಿಟಿ ಮನೆಯೊಳಗಡೆ ಪ್ರವೇಶ ಮಾಡಿ ಮನೆಯ ಬೀರುವಿನಲ್ಲಿಟ್ಟಿದ್ದ 28 ಗ್ರಾಂ ಚಿನ್ನದ ಚೈನು, 8 ಗ್ರಾಂ ಉಂಗುರ , ಒಂದು ವಾಚ್, 8 ಸಾವಿರ ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ನಂ:110/2017 ಕಲಂ:457-380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

     ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಅಪರಾಧ ಸಿಬ್ಬಂದಿಯರುಗಳಾದ ಸಿಪಿಸಿ-656, 114 ರವರುಗಳನ್ನು ನೇಮಿಸಿದ್ದು ಸದರಿಯವರು ಆರೋಪಿಗಳ ಪತ್ತೆಯ ಬಗ್ಗೆ  ಮಂಡ್ಯ ನಗರದ ರೈಲ್ವೆ ನಿಲ್ದಾಣ, ಷುಗರ್ ಟೌನ್, ಅಸಿಟೆಟ್‍ಟೌನ್, ಪೇಟೆ ಬೀದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಪೇಟೆ ಬೀದಿಯ ನಕ್ಷತ್ರ ಗೋಲ್ಡ್ ಗಿರವಿ ಅಂಗಡಿಯ ಮುಂಭಾಗದಲ್ಲಿ ಅನುಮಾನದಿಂದ ಓಡಾಡುತ್ತಿದ್ದ, ಈ ಕೆಳಕಂಡ ಆರೋಪಿಗಳಾದ 
     
    1] ತಿಪ್ಪೇಶ @ ಯುವರಾಜ @ ಕೆಪ್ಪತಿಪ್ಪ ಬಿನ್ ಕುರುಡ ತಿಪ್ಪಣ್ಣ @ ಕುರುಡತಿಪ್ಪ, 34 ವರ್ಷ, ಕೊರಚರು ಜನಾಂಗ, ವ್ಯವಸಾಯ, ಚಿಕ್ಕಹಬ್ಬಿಗೆರೆ ಗ್ರಾಮ, ಸಂತೆಬನ್ನೂರು ಹೋಬಳಿ, ಚೆನ್ನಗಿರಿ ತಾ: ದಾವಣಗೆರೆ ಜಿಲ್ಲೆ. ಎಂತಲೂ ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ
    
    2] ಸೈಯ್ಯದ ಬಾಷಾ @ ಭಾಷ ಬಿನ್ ಸೈಯ್ಯದ್ ಹುಸೇನ್ ಸಾಬ್, 28ವರ್ಷ, ಮುಸ್ಲಿಂ ಜನಾಂಗ, ಟೈಲರ್ ಕೆಲಸ ಕೆಂಪನಹಳ್ಳಿ ಚಿಕ್ಕನಾಯಕನಹಳ್ಳಿ ತಾ: ತುಮಕೂರು ಜಿಲ್ಲೆ   ಎಂಬುವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ ಪಡಿಸಿದ ಮೇರೆಗೆ, ಸದರಿ ಆರೋಪಿಗಳನ್ನು ಕೂಲಂಕಷವಾಗಿ ವಿಚಾರ ಮಾಡಲಾಗಿ, ಸದರಿ ಮೇಲ್ಕಂಡ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 1] ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ 2] ಕೆರಗೋಡು ಪೊಲೀಸ್ ಠಾಣೆ 3] ಶಿವಳ್ಳಿ ಪೊಲೀಸ್ ಠಾಣೆ 4] ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಈ ಕೆಳಕಂಡಂತೆ ಪ್ರಕರಣಗಳು ಪತ್ತೆಯಾಗಿರುತ್ತವೆ.

1] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 77/2017 ಕಲಂ 457-380 ಐಪಿಸಿ
2] ಮಂಡ್ಯ ಸೆಂಟ್ರಲ್ ಠಾಣೆ ಮೊ.ಸಂ 110/2017 ಕಲಂ 457-380 ಐಪಿಸಿ
3] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 39/2017 ಕಲಂ 457-380 ಐಪಿಸಿ
4] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 40/2017 ಕಲಂ 457-380 ಐಪಿಸಿ
5] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 41/2017 ಕಲಂ 457-380 ಐಪಿಸಿ
6] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 42/2017 ಕಲಂ 457-380 ಐಪಿಸಿ
7] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 43/2017 ಕಲಂ 457-380 ಐಪಿಸಿ
8] ಕೆರೆಗೋಡು ಪೊಲೀಸ್ ಠಾಣೆಯ ಮೊ.ಸಂ 44/2017 ಕಲಂ 457-380 ಐಪಿಸಿ                           
9] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ85/2017 ಕಲಂ 457-380 ಐಪಿಸಿ
10] ಮಂಡ್ಯ [ಗ್ರಾಂ] ಪೊಲೀಸ್ ಠಾಣೆಯ ಮೊ.ಸಂ90/2017 ಕಲಂ 457-380 ಐಪಿಸಿ
11] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ172/2016 ಕಲಂ 457-380 ಐಪಿಸಿ
12] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ174/2016 ಕಲಂ 457-380 ಐಪಿಸಿ
13] ಶಿವಳ್ಳಿ ಪೊಲೀಸ್ ಠಾಣೆಯ ಮೊ.ಸಂ175/2016 ಕಲಂ 457-380 ಐಪಿಸಿ
     
       ಮೇಲ್ಕಂಡ 13 ಪ್ರಕರಣಗಳಲ್ಲಿ ಆರೋಪಿಗಳಿಂದ ಒಟ್ಟು 230 ಗ್ರಾಂ ಚಿನ್ನದ ಆಭರಣಗಳು ಮತ್ತು 1 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 7,00000/- ರೂಗಳಾಗಿರುತ್ತದೆ

    ಇವರು ಕುಖ್ಯಾತ ಕಳ್ಳತನ ಮಾಡುವ ಕಳ್ಳರಾಗಿದ್ದು,ದಾವಣಗೆರೆ, ಚಿತ್ರದುರ್ಗ,ತುಮಕೂರು,ಕಾರವಾರ, ಶಿವಮೊಗ್ಗ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಇವರುಗಳ ಇರುದ್ಧ ಪ್ರಕರಣಗಳು ದಾಖಲಾಗಿ ವಿಚಾರಣೆಯಲ್ಲಿರುತ್ತವೆ. 

     ಈ ಪ್ರಕರಣಗಳನ್ನು ಶ್ರೀಮತಿ ಜಿ.ರಾಧಿಕಾ ಐ.ಪಿ.ಎಸ್, ಜಿಲ್ಲಾ ವರಿಷ್ಠಾಧಿಕಾರಿ,ಮಂಡ್ಯ ಜಿಲ್ಲೆ, ಶ್ರೀಮತಿ.ಲಾವಣ್ಯ ಕೆ.ಎಸ್.ಪಿ.ಎಸ್,ಅಪರ ಜಿಲ್ಲಾ ವರಿಷ್ಠಾಧಿಕಾರಿ, ಮಂಡ್ಯ ಜಿಲ್ಲೆ ಹಾಗೂ ಶ್ರೀ.ಎನ್.ಎಸ್ ಚಂದ್ರಶೇಖರ್ ಕೆ.ಎಸ್.ಪಿ.ಎಸ್, ಡಿವೈ.ಎಸ್.ಪಿ, ಮಂಡ್ಯ ಉಪ-ವಿಭಾಗ, ಮಂಡ್ಯ ರವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀ.ಕೆ.ಸಂತೋಷ್, ಮಂಡ್ಯ ನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ ಆನಂದಕುಮಾರ್.ಹೆಚ್ ಪಿಎಸ್‍ಐ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರುಗಳಾದ ಎಎಸ್‍ಐ ಸಿದ್ದರಾಜು, ಎಎಸ್‍ಐ ಪುಟ್ಟಸ್ವಾಮಿ,ಸಿಹೆಚ್.ಸಿ-23 ಮೃತ್ಯುಂಜಯಸ್ವಾಮಿ ಎಸ್.ಪಿ, ಸಿಹೆಚ್.ಸಿ-56 ಚಿಕ್ಕಯ್ಯ, ಸಿಹೆಚ್.ಸಿ-158 ಎನ್.ನಾರಾಯಣ, ಹೆಚ್.ಸಿ 147 ಸುಂದರ್ ರಾಜು ಹೆಚ್.ಸಿ 210 ಶ್ರೀನಿವಾಸ್, ಹೆಚ್.ಸಿ 228 ಮಂಜುನಾಥ ಎಂ.ಪಿ, ಸಿಹೆಚ್‍ಸಿ 108 ಸತೀಶ್, ಸಿಪಿಸಿ-114 ಮಂಜುನಾಥ, ಪಿಸಿ-160 ಸಚ್ಚಿನ್, ಪಿಸಿ 170 ಮಹೇಶ್ ಕುಮಾರ್,ಸಿಪಿಸಿ-322 ಅಕ್ಬರ್ ಎಸ್.ಬಂದುಗೋಳ, ಸಿಪಿಸಿ-363 ಶ್ರೀನಿವಾಸ, ಸಿಪಿಸಿ-409 ಸೈಯದ್ ಗೌಸ್, ಸಿಪಿಸಿ 656 ಮಂಜುನಾಥ ಕೆ.ಬಿ, ಸಿಪಿಸಿ 330 ಶ್ರೀಕಾಂತ, ಮಪಿಸಿ-612 ಸುಕನ್ಯ .ಎಸ್, ಮಪಿಸಿ 739 ಶ್ರೀಮತಿ ರತ್ನಮ್ಮ ಬಿ.ಕೆ ಮತ್ತು ಎಹೆಚ್.ಸಿ-29 ಕಾಂತರಾಜು, ಎ.ಪಿ.ಸಿ-159 ಸಿದ್ದೇಗೌಡ,ಸಿಪಿಸಿ-280 ರವಿಕಿರಣ ಸಿಪಿಸಿ-105 ಲೋಕೇಶ್ ಮತ್ತು ಬೆರಳಚ್ಚು ತಜ್ಞರಾದ ರಾಜೇಂದ್ರ ರವರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯದ ಬಂಧನಕ್ಕೆ ಒಳಪಡಿಸಿರುತ್ತೆ. 

No comments:

Post a Comment