Moving text

Mandya District Police

Press Note on 22-11-2017

                                                                                              ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
                                                                                               ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ 22.11.2017

                                                             ಪತ್ರಿಕಾ ಪ್ರಕಟಣೆ

ವಿಷಯ:ದಿನಾಂಕ 20.11.2017 ರಂದು ರಾಜ್ಯದ  ಮಾನ್ಯ  ಮುಖ್ಯಮಂತ್ರಿಯವರ    ನಾಗಮಂಗಲ 
          ಟೌನ್‍ನ  ಪ್ರವಾಸ ಕಾರ್ಯಕ್ರಮದ  ಸಮಯದಲ್ಲಿ  ಓರ್ವ ಮಹಿಳೆ  ಚಿಕಿತ್ಸೆಗೆ    ತೆರಳುತ್ತಿದ್ದ
          ಆಂಬ್ಯೂಲೆನ್ಸ್ ಅನ್ನು ಪೊಲೀಸರು ತಡೆದು ತೊಂದರೆ ಉಂಟು ಮಾಡಿರುತ್ತಾರೆಂದು  ಇತ್ಯಾದಿ
          ಯಾಗಿ  ದೃಶ್ಯ/ಪತ್ರಿಕಾ ಮಾದ್ಯಮಗಳಲ್ಲಿ ಸುದ್ದಿ ವರದಿಯಾಗಿರುವ  ಬಗ್ಗೆ  ಸ್ಪಷ್ಟೀಕರಣ ಕುರಿತು.
                                                             
                                                                      ***

      ಮೇಲ್ಕಂಡ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಯವರಿಂದ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ.

ತೊಂದರೆಗೊಳಗಾಗಿದ್ದಾರೆ ಎನ್ನಲಾದ ಮಹಿಳೆ ಮತ್ತು ಈಕೆಯ ಪತಿ ಮತ್ತು ಸಹೋದರನ ಹೇಳಿಕೆ:
     ತೊಂದರೆಗೆ ಒಳಗಾದವರು ಎನ್ನಲಾದ ಮಹಿಳೆ, ಈಕೆಯ ಪತಿ ಮತ್ತು ಮಹಿಳೆಯ ಸಹೋದರನಿಂದ ಹೇಳಿಕೆ ನೀಡಿದ್ದು, ಹೇಳಿಕೆಯಲ್ಲಿ ಸದರಿ ಮಹಿಳೆ ಶ್ರೀಮತಿ ಯಶೋದಾ ಕೋಂ ಶಂಕರ, 35 ವರ್ಷ, ಕೊಣನೂರು ಗ್ರಾಮ,  ನಾಗಮಂಗಲ ತಾ|| ರವರು 5-6 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಪತಿ ಶ್ರೀ ಶಂಕರ ದಿನಾಂಕ 20.11.2017 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಚಿಕಿತ್ಸೆಗಾಗಿ  ಒಂದು ಆಟೋದಲ್ಲಿ ನಾಗಮಂಗಲ  ಟೌನ್‍ಗೆ ಬಂದಿಳಿದು, ನಂತರ ಅಲ್ಲಿಂದ ಬೇರೆ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಈ ಸಮಯದಲ್ಲಿ ಟ್ರಾಫಿಕ್ ಇರುತ್ತದೆ. ಆಗ ಆಟೋ ಡ್ರೈವರ್, ಆಸ್ಪತ್ರೆ ಹತ್ತಿರದಲ್ಲೇ ಇರುವುದರಿಂದ ನಡೆದುಕೊಂಡು ಹೋಗಬಹುದು ಎಂದು ತಿಳಿಸಿದ್ದು, ಅದರಂತೆ ಸದರಿ ಮಹಿಳೆ ತನ್ನ ಪತಿ ಮತ್ತು ಸಹೋದರನೊಡನೆ ನಡೆದುಕೊಂಡು ಹೋಗಿರುವುದಾಗಿದೆ. ಆದರೆ ಈ ವಿಚಾರ ಪೊಲೀಸರಿಗೆ ತಿಳಿದಿರುವುದಿಲ್ಲ ಹಾಗೂ ಪೊಲೀಸರು ತಮ್ಮ ಯಾವುದೇ ವಾಹನವನ್ನು ತಡೆದು ನಿಲ್ಲಿಸಿ ಯಾವುದೇ ತೊಂದರೆ ನೀಡಿಲ್ಲ, ಆಸ್ಪತ್ರೆ ಹತ್ತಿರವೆ ಇದ್ದುದ್ದರಿಂದ ತಾವೇ ಆಟೋದಿಂದ ಇಳಿದು ಆಸ್ಪತ್ರೆಗೆ ನಡೆದುಕೊಂಡು ಹೋಗಿರುತ್ತೇವೆಂದು ತಿಳಿಸಿರುವುದಾಗಿದೆ.

ಡಾ|| ಶಿವಕುಮಾರ್, ವೈದ್ಯಾಧಿಕಾರಿ, ನಾಗಮಂಗಲ ಸರ್ಕಾರಿ ಆಸ್ಪತ್ರೆ ರವರ ಹೇಳಿಕೆ:
   ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಮಧ್ಯಾಹ್ನ 12.45 ಗಂಟೆಗೆ ಶ್ರೀಮತಿ ಯಶೋದಮ್ಮ ಕೋಂ ಶಂಕರ, ಕೊಣನೂರು ಗ್ರಾಮ ಎಂಬುವರು ಸಾಮಾನ್ಯ ಸುಸ್ತಿಗೆಂದು ಚಿಕಿತ್ಸೆ  ಪಡೆಯಲು ಆಸ್ಪತ್ರೆಗೆ ಬಂದಿದ್ದು, ಇವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಮಧ್ಯಾಹ್ನ 03.30 ಗಂಟೆಯಲ್ಲಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ.

ಡಾ|| ಡಿ.ಎಸ್.ವೆಂಕಟೇಶ್, ಮುಖ್ಯ ವೈದ್ಯಾಧಿಕಾರಿ, ನಾಗಮಂಗಲ ಆಸ್ಪತ್ರೆ ರವರ ಹೇಳಿಕೆ:
     ಇವರು ತಮ್ಮ ಹೇಳಿಕೆಯಲ್ಲಿ ದಿನಾಂಕ 20.11.2017 ರಂದು ಯಾವುದೇ ಆಂಬ್ಯೂಲೆನ್ಸ್‍ನಲ್ಲಿ ಯಶೋಧ ಎಂಬುವರನ್ನು ಕರೆ ತಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. 

ಪೊಲೀಸ್ ಸೂಪರಿಂಟೆಂಡೆಂಟ್ ರವರ ಅಭಿಪ್ರಾಯ ಮತ್ತು ಸ್ಪಷ್ಟನೆ:
      ದಿನಾಂಕ 20.11.2017 ರಂದು ನಾಗಮಂಗಲದಲ್ಲಿನ ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಆಂಬ್ಯೂಲ್ಸ್‍ನಲ್ಲಾಗಲಿ ಅಥವಾ 108ರ ವಾಹನದಲ್ಲಾಗಲಿ ಶ್ರೀಮತಿ ಯಶೋಧ ಎಂಬ ಮಹಿಳೆಯನ್ನು ಕರೆದುಕೊಂಡು ಬಂದಿರುವುದಿಲ್ಲ. ಈಕೆಯನ್ನು ಚಿಕಿತ್ಸೆಗಾಗಿ ಆಕೆಯ ಮನೆಯವರು ಒಂದು ಆಟೋದಲ್ಲಿ ನಾಗಮಂಗಲ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದು, ಆ ಸಮಯದಲ್ಲಿ ಟ್ರಾಫಿಕ್ ಇದ್ದುದ್ದರಿಂದ  ಹತ್ತಿರದಲ್ಲಿಯೇ ಆಸ್ಪತ್ರೆಯ ಇದೆ ಎಂದು ತನ್ನ ಮನೆಯವರ ಜೊತೆ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆದು ನಂತರ ಮಧ್ಯಾಹ್ನ 3.30 ಗಂಟೆಗೆ  ವಾಪಸ್ ತೆರಳಿರುವುದಾಗಿದೆ.

     ಮಾನ್ಯ ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ಯಾವುದೆ ಆಂಬ್ಯೂಲೆನ್ಸ್‍ಅನ್ನು ಪೊಲೀಸರು ತಡೆದಿರುವುದಿಲ್ಲ. ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಿಂದ ವರದಿಯಾದ ನಂತರವಷ್ಟೆ ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದ್ದು, ತದ ನಂತರ ಈ ಬಗ್ಗೆ ಮೇಲ್ಕಂಡಂತೆ ವರದಿ ಪಡೆದು ಪರಿಶೀಲಿಸಲಾಗಿ, ಇದು ಸತ್ಯಕ್ಕೆ ದೂರವಾದ ವಿಚಾರವೆಂಬುದಾಗಿರುತ್ತದೆ.

1 comment:

  1. Canara Bank has released 800 PO Vacancy Notification. Candidates may apply through online mode for Canara Bank Recruitment before 13.11.2018.

    ReplyDelete