ಪೊಲೀಸ್ ಸೂಪರಿಂಟೆಂಡೆಂಟ್
ರವರ ಕಛೇರಿ,
ಮಂಡ್ಯ ಜಿಲ್ಲೆ ಮಂಡ್ಯ ದಿನಾಂಕ: 06.01.2017
ಪತ್ರಿಕಾ ಪ್ರಕಟಣೆ
ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರ ಯಶಸ್ವಿ
ಕಾರ್ಯಾಚರಣೆ,
ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು
ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪಿತರ ಬಂಧನ
ಮಂಡ್ಯ ಜಿಲ್ಲೆಯ ಮೇಲುಕೋಟೆ ಠಾಣೆ ವ್ಯಾಪ್ತಿಯ ಮಂಡ್ಯ-ಮೇಲುಕೋಟೆ ರಸ್ತೆಯ ಮುದ್ದು ಬೆಟ್ಟ
ನೇರದ ತಿರುವಿನ ಹಂಪ್ಸ್ ಬಳಿ ಸ್ಟೇಟ್ ಬ್ಯಾಂಕ್ ಇಂಡಿಯ ಮೇಲುಕೋಟೆ ಶಾಖೆಯ ವ್ಯವಸ್ಥಾಪಕರ ಕಾರನ್ನು
ಅಡ್ಡಗಟ್ಟಿ ಚಿನ್ನದ ಚೈನು, ಮೊಬೈಲ್, 2000 ರೂ ನಗದು ಹಣ ಹಾಗೂ ವಾಚ್ನ್ನು ಮತ್ತು ಮಂಡ್ಯ
ತಾಲ್ಲೋಕಿನ ತೂಬಿನಕೆರೆ ಗ್ರಾಮದ ಕಾಲೇಜು ಗೇಟ್ ಬಳಿ ಟಿಪ್ಪರ್ ಲಾರಿ ಚಾಲಕನನ್ನು ಬೆದರಿಸಿ ಆತನ
ಬಳಿ ಇದ್ದ ನಗದು 2000 ರೂ ಹಣ, ಒಂದು ಮೊಬೈಲ್ನ್ನು ರೇಜರ್ ತೋರಿಸಿ ಬೆದರಿಸಿ ದೋಚಿದ್ದ
4 ಜನ ಆರೋಪಿಗಳನ್ನು ದಿನಾಂಕ: 05-01-2017 ರಂದು ಪತ್ತೆಹಚ್ಚಿ ಬಂಧಿಸಿದ್ದು ಆರೋಪಿತರಿಂದ ಒಟ್ಟು
ಎರಡು ಪ್ರಕರಣಗಳಲ್ಲಿ ಒಂದು ಚಿನ್ನದ ಚೈನು ಸುಮಾರು 15 ಗ್ರಾಂ ತೂಕ (ಬೆಲೆ ಸುಮಾರು 38,000/- ರೂ) ಹಾಗೂ ಎರಡು ಮೊಬೈಲ್ಗಳು (ಮೊಬೈಲ್ಗಳ ಮೌಲ್ಯ ಸುಮಾರು 20,000 ರೂಗಳು), 800 ರೂ. ನಗದು ಹಣವನ್ನು ಒಟ್ಟು 80,000/- ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಆರೋಪಿ 1;- ನಾಗೇಶ @ ಪೃಥ್ವಿ @ ಈರುಳ್ಳಿ ಬಿನ್ ಶಿವಲಿಂಗೇಗೌಡ, 21 ವರ್ಷ, ಸಿದ್ದೇಶ್ವರ ನಗರ, ಕ್ಯಾತುಂಗೆರೆ ಗ್ರಾಮ,
ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೋಕು ಮತ್ತು ಜಿಲ್ಲೆ.
ಆರೋಪಿ 2;- ಲಿಖಿತ್ ಬಿನ್ ರಾಜೇಶ, 19 ವರ್ಷ, ಕಚವಾನಹಳ್ಳಿ ಗ್ರಾಮ,
ಸಾತನೂರು ಹೋಬಳಿ, ಕನಕಪುರ ತಾಲ್ಲೋಕು, ಹಾಲಿ ವಾಸ ಆಲಭೂಜನಹಳ್ಳಿ ರಸ್ತೆ ಕೆ,ಎಂ ದೊಡ್ಡಿ, ಮದ್ದೂರು ತಾಲ್ಲೋಕು, ಮಂಡ್ಯ ಜಿಲ್ಲೆ.
ಬಂಧಿಸಲ್ಪಟ್ಟ ಒಟ್ಟು 04 ಜನ ಆರೋಪಿತರುಗಳಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ
ಬಾಲಕರಾಗಿದ್ದು ಅವರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದ್ದು ಮತ್ತೊಬ್ಬ ಆರೋಪಿಯನ್ನು
ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂದನಕ್ಕೆ
ಆದೇಶಿಸಿರುತ್ತದೆ. ಮತ್ತೊಬ್ಬ ಆರೋಪಿಯನ್ನು ಈ ದಿವಸ ದಿನಾಂಕ: 06/01/2018 ರಂದು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತೆ.
ಆರೋಪಿಗಳ ಮತ್ತು ಸ್ವತ್ತು ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಜಿ. ರಾಧಿಕಾ,
ಐಪಿಎಸ್, ರವರ ಸೂಚನೆ ಮೇರೆಗೆ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಬಿ.ಎನ್.ಲಾವಣ್ಯ
ಮತ್ತು ಮಂಡ್ಯ ಉಪ ವಿಭಾಗದ ಡಿವೈಎಸ್.ಪಿ ಶ್ರೀ ಎನ್.ಎಸ್.ಚಂದ್ರಶೇಖರ್ರವರ ಮಾರ್ಗದರ್ಶನದಲ್ಲಿ
ಶ್ರೀ ಸುರೇಶ್ ಕುಮಾರ್ ಬಿ.ಕೆ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರು ರವರ ನೇತೃತ್ವದಲ್ಲಿ ಮಂಡ್ಯ
ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಶ್ರೀ ಅಜರುದ್ದೀನ್, ಶ್ರೀಮತಿ ಕಮಲಾಕ್ಷಿ ಮ.ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಜೀಸನ್,
ರಘುರಾಜೇ ಅರಸು, ಸತೀಶ್ ರವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ. ಸದರಿ
ಆರೋಪಿಗಳು ಮತ್ತು ಸ್ವತ್ತುಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪತ್ತೆ ತಂಡದ
ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ರಾಧಿಕಾ. ಜಿ. ಐಪಿಎಸ್
ರವರು ಪ್ರಶಂಸಿರುತ್ತಾರೆ.
No comments:
Post a Comment