Moving text

Mandya District Police

DCR Of Mandya Dist As on 23-02-2012

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿ ಅದರಲ್ಲಿ 2 ರಸ್ತೆ ಅಪಘಾತ ಪ್ರಕರಣ. 2 ಕಳ್ಳತನ ಪ್ರಕರಣ. 3 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ ಮತ್ತು ಇತರೆ 8 ಪ್ರಕರಣಗಳು ವರದಿಯಾಗಿರುತ್ತೆ

ಕಳ್ಳತನ ಪ್ರಕರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 38/12 ಕಲಂ 457-380 ಐಪಿಸಿ ದಿನಾಂಕಃ 21-02-12ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆ, ಸುನುಗನಹಳ್ಳಿಯಲ್ಲಿ ಇಟ್ಟಿದ್ದ ಅನ್ನದಾಸೋಹದ ಆಹಾರ ಪದಾರ್ಥಗಳು, ಮತ್ತು ಪಾತ್ರೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ

2] ಮೊ.ಸಂ 38/12 ಕಲಂ 379 ಐಪಿಸಿ ಪಿರ್ಯಾದಿ ಹೆಚ್.ಕೆ.ಸಿದ್ದಯ್ಯ ರವರು ಅವರ ಬಾಬ್ತು ಕೆಎ-15 ಜೆ 302 ನಂಬರಿನ ಹೀರೊಹೋಂಡ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿಯ ಎದುರುಗಡೆ ಇರುವ ಪಾರ್ಕ್ ನ ಮುಂದೆ ಬೀಗ ಹಾಕಿ ನಿಲ್ಲಿಸಿ ಪಾಕರ್್ನ ಒಳಗಡೆ ಹೋಗಿ ವಿಶ್ರಾಂತಿ ಪಡೆದುಕೊಂಡು ವಾಪಸ್ ಸಂಜೆ 6-45 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ

ಮನುಷ್ಯ ಕಾಣೆಯಾಗಿದ್ದಾನೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

1] ಮೊ.ಸಂ 81/12 ಕಲಂ ಹುಡುಗ ಕಾಣೆಯಾಗಿದ್ದಾನೆ ದಿನಾಂಕ 22/02/11 ರಂದು ಪಿರ್ಯಾದಿ ಶಿವಣ್ಣ ರವರ ಮಗ ರಘುವೀರ್ ಬಿನ್ ಶಿವಣ್ಣ 13 ವರ್ಷ ಮಂಡ್ಯ ಸಿಟಿ ಗೀತಾ ಫ್ರಾಡಶಾಲೆಯಲ್ಲಿ 8 ನೇ ತರಗತಿಯಲ್ಲಿ ಒದುತ್ತಿದ್ದು ದಿಃ-17-02-12 ರಂದು ಬೆಳಿಗ್ಗೆ 08-00 ಗಂಟೆಗೆ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ ನಂತರ ನಮ್ಮ ಸಂಬಂದಿಕ ಮನೆ, ಅವನ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ

ಕೆ.ಆರ್ ಸಾಗರ ಪೊಲೀಸ್ ಠಾಣೆ

2] ಮೊ.ಸಂ 28/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ಶಂಕರನು ಬತ್ತವನ್ನು ಕಟ್ಟಾವು ಮಾಡಲು ಹಣವನ್ನು ತೆಗೆದುಕೊಂಡು ಮನೆಯಿಂದ ಹೊರಗೇ ಹೋದವನು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ

ಶಿವಳ್ಳಿ ಪೊಲೀಸ್ ಠಾಣೆ

3] ಮೊ.ಸಂ 021/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 22/02/12 ರಂದು ಕಾಣೆಯಾದ ಮನುಷ್ಯ ದಾಳಯ್ಯ ಬಿನ್ ಲೇಟ್ ದಾಳಿಗೌಡ 60 ವರ್ಷ ತಂದೆಯವರು ದಿನಾಂಕ:17-02-2012 ರಂದು ಇದುವೆರೆಗೂ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರುವುದಿಲ್ಲ ಇದುವರೆಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ.

ರಾಬರಿ ಪ್ರಕರಣ

ಬೆಳ್ಳೂರು ಪೊಲೀಸ್ ಠಾಣೆ

1] ಮೊ.ಸಂ 27/12 ಕಲಂ 392 ಐಪಿಸಿ ದಿನಾಂಕ 22-02-11 ರಂದು ಪಿರ್ಯಾದಿ ನವೀನ್ ಕುಮಾರ್ ಮತ್ತು ಅವರ ಮನೆಯವರು ಪ್ರವಾಸದಿಂದ ಬೆಂಗಳೂರಿಗೆ ಕೆಎ-01-ಬಿ-1490 ಕ್ವಾಲೀಸ್ ಕಾರಿನಲ್ಲಿ ವಾಪಸ್ಸು ಬೆಳ್ಳೂರು ಮಾರ್ಗವಾಗಿ ಹೋಗುತ್ತಿದ್ದಾಗ ತಿಟ್ಟನಹೊಸಹಳ್ಳಿ - ಎ ನಾಗತಿಹಳ್ಳಿ ಮಧ್ಯ ಯಾರೋ ಅಪರಿಚಿತರು 4 ಜನ ಮಾರುತಿ ಅಮ್ನಿ ಕೆಎ-02-ಎಂ-1152 ಮೇಲ್ಕಂಡ ಸ್ಥಳದಲ್ಲಿ ಅಡ್ಡಗಟ್ಟಿ ಮಾಕಾಸ್ತ್ರಗಳನ್ನು ತೋರಿಸಿ ವಾಹನದಲ್ಲಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ಹೆದರಿಸಿ ಅವರ ಬಳಿ 6 ರಿಂದ 7 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ

Press Note

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ
ದಿನಾಂಕಃ 18-02-2012
ಪತ್ರಿಕಾ ಪ್ರಕಟಣೆ

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 4 ಮಂದಿ ಆರೋಪಿಗಳ ಬಂಧನ ಇವರುಗಳಿಂದ 1ಲಕ್ಷ ರೂ ಮೌಲ್ಯದ ಕಳುವು ಮಾಡಿದ್ದ 1140 ಕೆ.ಜಿ.ಯಷ್ಟು ಕಬ್ಬಿಣದ ಆಂಗ್ಲರ್ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಟಾಟಾ 407 ನಂಬರ್ ಕೆ.ಎ-12, 2488 ವಾಹನ ವಶ.

ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದವರು ಬಾತ್ಮೀದಾರರ ಮಾಹಿತಿ ಮೇರೆಗೆ ದಿನಾಂಕಃ 17-02-2012 ರಂದು ಬೆಳಗಿನ ಜಾವ 0500 ಗಂಟೆಯಲ್ಲಿ ಮಂಡ್ಯ ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಸಾಯಿ ಮಂದಿರದ ರಸ್ತೆಯ ರಾಜರಾಜೇಶ್ವರಿ ವೇ ಬ್ರಿಡ್ಜ್ ಪಕ್ಕದಲ್ಲಿ ಟಾಟಾ 407 ವಾಹನ ಸಂಖ್ಯೆ ಕೆಎ-12, 2488 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಆಸಾಮಿಗಳನ್ನು ಅದರಲ್ಲಿದ್ದ 1140 ಕೆ.ಜಿ ತೂಕವಿದ್ದ 13 ಕಬ್ಬಿಣದ ಆಂಗ್ಲರ್ಗಳ ಸಮೇತ ಅವರುಗಳನ್ನು ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿಲಾಗಿ ಸದರಿ ಆಸಾಮಿಗಳು ರಾಮನಗರ-ಕನಕಪುರ ರಸ್ತೆಯಲ್ಲಿ ಕೈಲಂಚ ಗ್ರಾಮ ಹೆಂಚಿನ ಫ್ಯಾಕ್ಟರಿ ಬಳಿ ಇದ್ದ ಸುಮಾರು 25,000/-ರೂ ಮೌಲ್ಯದ 13 ಕಬ್ಬಿಣದ ಆಂಗ್ಲರ್ಗಳನ್ನು ಕಳುವು ಮಾಡಿಕೊಂಡು ಬಂದು ಮಂಡ್ಯದಲ್ಲಿ ಮಾರಾಟಮಾಡಲು ಹೊಂಚುಹಾಕುತ್ತಿದ್ದಾಗಿ ತಿಳಿಸಿದ್ದು, ಸದರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಮೆಲ್ಕಂಡ ಕಬ್ಬಿಣದ ಆಂಗ್ಲರ್ಗಳು ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳ ಹೆಸರು-ವಿಳಾಸ :

1] ಅಜ್ಜುಂ. ಬಿನ್, ಮಹಮದ್ ಯೂಸಫ್, 26 ವಸ ವಾಸ, ಹೊಂಗನೂರು, ರಾಮನಗರ ಟೌನ್.
2] ಮುರುಗ, ಬಿನ್, ರಾಜ,23 ವರ್ಷ, ವಾಸ, ಆಸ್ಪತ್ರೆ ಶೆಡ್, ಮಂಡ್ಯ ಸಿಟಿ.
3] ಸಲೀಂ ಪಾಷ, ಬಿನ್ ತಾಜ್ ಪಾಷಾ, 23ವರ್ಷ, ವಾಸ, ಟಿಪ್ಪು ನಗರ, ರಾಮನಗರ ಟೌನ್
4] ಖುರಂ ಪಾಷಾ, ಬಿನ್ ಮಹಮದ್ ಗೌಸ್, 35ವರ್ಷ, ವಾಸ-ಲೇಬರ್ ಕಾಲೋನಿ, ಮಂಡ್ಯ ಟೌನ್

ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪೂರ್ವ ಠಾಣೆಯ ಪಿಎಸ್ಐ ಎಂ. ಮಂಜುನಾಥ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳನ್ನು ಪೊಲೀಸ್ ಅದೀಕ್ಷಕರಾದ ಶ್ರೀ. ಕೌಶಲೇಂದ್ರಕುಮಾರ್, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

Property Return Parade




ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ-ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

1] ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಮಾಹೆ) ವರದಿ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು :

2] ಮೇಲ್ಕಂಡ ಅಪರಾಧಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ ಸು. 1,10,44,140-00 ರೂ. (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ , ವಾಹನಗಳು, ಮೊಬೈಲ್ಗಳು, ಕಂಪ್ಯೂಟರ್ ಮತ್ತು ಕಬ್ಬಿಣದ ಉಪಕರಣಗಳು ಹಾಗೂ ಇತರೆ)

3] ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ ಸು. 57,38,309-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)

4] ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ ಸು. 49,10,700-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)
5] ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 2 ಕೊಲೆ, 1 ಸುಲಿಗೆ, 11 ಕಳವು, 1 ಕೊಲೆ ಪ್ರಯತ್ನ, 8 ಹಲ್ಲೆ, 16 ಕೆ.ಪಿ.ಕಾಯ್ದೆ ಮತ್ತು 136 ಅಪಘಾತ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ, ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
6] ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 2 ಎಸ್ಸಿ/ಎಸ್ಟಿ ದೌರ್ಜನ್ಯ, 8 ಕಳವು, 1 ಕೊಲೆ ಪ್ರಯತ್ನ, 6 ಕಿರುಕುಳ, 1 ಅಪಹರಣ, 25 ಹಲ್ಲೆ ಮತ್ತು 4 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆ ಆಗಿರುತ್ತವೆ.

7] ಇದೇ ಅವಧಿಯಲ್ಲಿ 2 ಕಳವು, 1 ಕೊಲೆ ಪ್ರಯತ್ನ, 1 ಕಿರುಕುಳ, 62 ಹಲ್ಲೆ ಮತ್ತು 14 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತವೆ.

8] ಇದೇ ಅವಧಿಯಲ್ಲಿ ಕಳವು ಕೇಸುಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 7 ಸಿಪಿಐ, 5 ಪಿಎಸ್ಐ, 3 ಎಎಸ್ಐ, 18 ಸಿಹೆZï¹ ಮತ್ತು 75 ಜನ ಪಿಸಿ ರವರುಗಳಿಗೆ ಒಟ್ಟು 20,675/-ರೂ. ನಗದು ಬಹುಮಾನವನ್ನು ನೀಡಲಾಗಿದೆ.

Press Note Date 30-01-2012




ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ-ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ

1] ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಮಾಹೆ) ವರದಿ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು :

2] ಮೇಲ್ಕಂಡ ಅಪರಾಧಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ ಸು. 1,10,44,140-00 ರೂ. (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ , ವಾಹನಗಳು, ಮೊಬೈಲ್ಗಳು, ಕಂಪ್ಯೂಟರ್ ಮತ್ತು ಕಬ್ಬಿಣದ ಉಪಕರಣಗಳು ಹಾಗೂ ಇತರೆ)

3] ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ ಸು. 57,38,309-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)

4] ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ ಸು. 49,10,700-00 ರೂ. ಗಳು (ಚಿನ್ನ & ಬೆಳ್ಳಿಯ ಪದಾರ್ಥಗಳು, ನಗದು ಹಣ, ವಾಹನಗಳು, ಮೊಬೈಲ್ಗಳು ಮತ್ತು ಇತರೆ)
5] ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 2 ಕೊಲೆ, 1 ಸುಲಿಗೆ, 11 ಕಳವು, 1 ಕೊಲೆ ಪ್ರಯತ್ನ, 8 ಹಲ್ಲೆ, 16 ಕೆ.ಪಿ.ಕಾಯ್ದೆ ಮತ್ತು 136 ಅಪಘಾತ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ, ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
6] ಈ 3 ತಿಂಗಳ ಅವಧಿಯಲ್ಲಿ 1 ಕೊಲೆ, 2 ಎಸ್ಸಿ/ಎಸ್ಟಿ ದೌರ್ಜನ್ಯ, 8 ಕಳವು, 1 ಕೊಲೆ ಪ್ರಯತ್ನ, 6 ಕಿರುಕುಳ, 1 ಅಪಹರಣ, 25 ಹಲ್ಲೆ ಮತ್ತು 4 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆ ಆಗಿರುತ್ತವೆ.

7] ಇದೇ ಅವಧಿಯಲ್ಲಿ 2 ಕಳವು, 1 ಕೊಲೆ ಪ್ರಯತ್ನ, 1 ಕಿರುಕುಳ, 62 ಹಲ್ಲೆ ಮತ್ತು 14 ಅಪಘಾತ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತವೆ.

8] ಇದೇ ಅವಧಿಯಲ್ಲಿ ಕಳವು ಕೇಸುಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 7 ಸಿಪಿಐ, 5 ಪಿಎಸ್ಐ, 3 ಎಎಸ್ಐ, 18 ಸಿಹೆZï¹ ಮತ್ತು 75 ಜನ ಪಿಸಿ ರವರುಗಳಿಗೆ ಒಟ್ಟು 20,675/-ರೂ. ನಗದು ಬಹುಮಾನವನ್ನು ನೀಡಲಾಗಿದೆ.

dcR of Mandya Dist As on 13-01-12

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 33 ಪ್ರಕರಣಗಳು ವರದಿಯಾಗಿ ಅದರಲ್ಲಿ 4 ರಸ್ತೆ ಅಪಘಾತ ಪ್ರಕರಣ. 1 ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ರಾಬರಿ ಪ್ರಕರಣ. 2 ಕಳ್ಳತನ ಪ್ರಕರಣ. 3 ಯು.ಡಿ.ಆರ್ ಪ್ರಕರಣ. 1 ಅಪಹರಣ ಪ್ರಕರಣ ಮತ್ತು 19 ಇತರೆ ಪ್ರಕರಣಗಳು ವರದಿಯಾಗಿರುತ್ತೆ

ದರೋಡೆ ನಡೆಸಲು ಗುಂಪು ಸೇರುವ ಪ್ರಕರಣ

ಶ್ರೀರಂಗಪಟ್ಟಣ ಪೊಲೀಸ್ ಠಾಣೆ

1] ಮೊ.ಸಂ 36/12 ಕಲಂ 399-400-402-120 [ಬಿ] ಐಪಿಸಿ ದಿನಾಂಕ 13-01-2012 ರಂದು ರಾತ್ರಿವೇಳೆ ಪಿರ್ಯಾದಿ ಪಿ.ಎಸ್. ಶ್ರೀರಂಗಪಟ್ಟಣ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪ ವಾಹಿನಿ ಬಳಿ ಹೋಗಿ ನೋಡಲಾಗಿ ಒಂದು ಆಟೋ ಮತ್ತು ಒಂದು ಮೋ ಸೈ ನಿಂತಿದ್ದು, ಆರೋಪಿಗಳಾದ ಗುರುರಾಜು ಮತ್ತು ಇತರೆ 5 ಜನರು ಮಾರಕಾಸ್ತ್ರಗಳನ್ನು ಹಿಡಿದು ಪಶ್ಚಿವಾಹಿನಿ ವಾಸಿ ಸರೋಜಮ್ಮ ರವರ ಮನೆಯನ್ನು ಸುತ್ತುವರೆದಿದ್ದು, ಪೊಲೀಸ್ನವರನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದ್ದು ಅನುಮಾನ ಬಂದು ಅವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೋ ದುಷ್ಕೃತ್ಯವೆಸಗಲು ಬಂದಿರುವುದಾಗಿ ತಿಳಿದುಬಂದಿರುವುದರಿಂದ ಸ್ವಯಂ ವರದಿ ನೀಡಿ ದೂರು ದಾಖಲಿಸಿರುತ್ತೆ

ರಸ್ತೆ ಅಪಘಾತ ಪ್ರಕರಣ

1] ಮೊ.ಸಂ 37/12 ಕಲಂ 279-304 [] ಐಪಿಸಿ ರೆ/ವಿ 187 ಐಎಂವಿ ಕಾಯಿದೆ ದಿನಾಂಕ 14-01-12 ರಂದು ಮೃತ ಮಂಜುನಾಥ ರವರು ಹಾಲಿನ ಡೈರಿಗೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂಧ ಚಲಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ಪೆಟ್ಟಾಗಿ ಮೃತಪಟ್ಟ ಬಗ್ಗೆ ದೂರು.

ಮನುಷ್ಯ ಕಾಣೆಯಾದ ಪ್ರಕರಣ

1] ಮೊ.ಸಂ 13/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 14-01-12 ರಂದು ಕಾಣೆಯಾದ ಹೆಂಗಸು ಟಿ.ವಿದ್ಯಾವತಿ ಕೋಂ ರಂಗನಾಥ್, 42 ವರ್ಷ, ರವರು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ

2]ಮೊ.ಸಂ 15/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 14-01-12 ರಂದು ಪಿರ್ಯಾದಿ ಗುಲ್ಲ ರವರ ಗಂಡ ಅರ್ಜುನ ಬಿನ್ ಅಶ್ವತ್ ನಾಯ್ಕ್, 35 ವರ್ಷ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ, ನನ್ನ ಗಂಡ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು ಅದರಂತೆ ದಿ:- 04-11-2011 ರಂದು ನಮ್ಮ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೋದವನು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ,

ರಾಬರಿ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 14/12 ಕಲಂ 392 ಐಪಿಸಿ ದಿನಾಂಕ 14-01-12 ಪಿರ್ಯಾದಿ ಶಿಲ್ಪ ಕೋಂ ರಾಜೇಗೌಡ ರವರು ಅವರ ಮಗನೊಂದಿಗೆ ಕೆ.ಆರ್.ಪೇಟೆಯಿಂದ ಆರತಿಉಕ್ಕಡಕ್ಕೆ ದೇವರ ಪೂಜೆಗಾಗಿ ಹೋಗಲು ಕೆ.ಆರ್.ಪೇಟೆಯಿಂದ ಟಾಟಾ ಎ.ಸಿ.ಇ.ಸಂಖ್ಯೆ ಕೆಎ11/ಎ1028 ರಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಬರುತ್ತಿದ್ದು ವಾಹನದಲ್ಲಿ ಇತರೆ ಪ್ರಯಾಣಿಕರಿದ್ದರೆಂತ, ವಾಹನ ತೆಂಡೆಕೆರೆ ಮಾರ್ಗವಾಗಿ ಬರುತ್ತಿದ್ದಾಗ ಮಂಚನಹಳ್ಳಿ ಕೆರೆಯ ಸಮೀಪ ಬೆಳಿಗ್ಗೆ 10.30 ಗಂಟೆಯಲ್ಲಿ ತಾವು ಪ್ರಯಾಣಿಸುತ್ತಿದ್ದ ವಾಹನದ ಹಿಂದಿನಿಂದ ಒಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಾವು ಪ್ರಯಾಣಿಸುತ್ತಿದ್ದ ವಾಹನದ ಪಕ್ಕಕ್ಕೆ ಬಂದು ಬ್ಕೆಕ್ನ ಹಿಂದೆ ಕುಳಿತಿದ್ದ ವ್ಯಕ್ತಿ ತಮ್ಮ ಕತ್ತಿಗೆ ಕೈ ಹಾಕಿ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಸ್ಪೀಡಾಗಿ ಮೈಸೂರು ಕಡೆಗೆ ಹೋರಟು ಹೋದರೆಂತ ಇದರ ಬೆಲೆ ಎರಡು ಲಕ್ಷ ರೂಪಾಯಿಗಳಾಗುತ್ತೆ

ಕಳ್ಳತನ ಪ್ರಕರಣ

ಪಾಂಡವಪುರ ಪೊಲೀಸ್ ಠಾಣೆ

1] ಮೊ.ಸಂ 15/12 ಕಲಂ 379 ಐಪಿಸಿ ದಿನಾಂಕ 14-01-12 ದಿನಾಂಕ 14-01-12 ರಂದು ಪಿರ್ಯಾದಿ ರೇವಣ್ಣ ರವರ ಬಾಬ್ತು ಕೆಎ-11-ಆರ್-2920 ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ-11-ಆರ್ -2920 ಅನ್ನು ಪಾಂಡವಪುರ ಟೌನ್ ತಾಲ್ಲೋಕು ಪಂಚಾಯ್ತಿ ಕಛೇರಿ ಮುಂಬಾಗ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ

2] ಮೊ.ಸಂ 016/12 ಕಲಂ 379 ಐಪಿಸಿ ದಿನಾಂಕ: 12/01/2012 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಮೊಹಮ್ಮದ್ ನಾಸಿರ್ ರವರು ಅವರ ಬಾಬ್ತು ಕೆ.ಎ11, ಕೆ-3772 ಆರೆಂಜ್ ಕಲ್ಲರ್ ಹಿರೋ ಹೊಂಡ ಸ್ಪ್ಲೆಂಡರ್, ಮೋಟಾರ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮನೆಯಲ್ಲಿ ಊಟ ಮಾಡುತ್ತಿದ್ದೆನು, ಊಟ ಮಾಡಿದ ನಂತರ, ವಾಪಸ್ ಅಂಗಡಿಯ ಬಳಿ ಹೋಗಲು, ಮನೆಯ ಮುಂದೆ ನಿಲ್ಲಿಸಿದ್ದ ಮೇಲ್ಕಂಡ ದ್ವಿಚಕ್ರ ವಾಹನವನ್ನು ನೋಡಲಾಗಿ, ಸದರಿ ವಾಹನವು ನಾನು ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಆಗ ನಾನು ಗಾಬರಿಗೊಂಡು, ನನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆಲ್ಲಾ ವಿಚಾರ ಮಾಡಿದರೂ ಪತ್ತೆಯಾಗಿರುವುದಿಲ್ಲ

ಯು.ಡಿ.ಆರ್ ಪಕ್ರರಣ

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

1] ಯು.ಡಿ.ಆರ್ ನಂ 01/12 ಕಲಂ 174 [ಸಿ] ಸಿ.ಆರ್ ಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ರಾಜು ಚವಾಣ್ ರವರು ಮತ್ತು ಮೃತ ವಿರೆಂದರ್ ಮತ್ತು ಇತರರೆಲ್ಲರೂ ಊಟಮಾಡಿ ಬಿ.ಜಿ.ಕೃಷ್ಣಮೂರ್ತಿ ರವರ ಹೊಸ ಮನೆಯಲ್ಲಿ ಮಲಗಿದ್ದು ನಂತರ ಬೆಳಿಗ್ಗೆ 14/01/2012 ರ ಬೆಳಿಗ್ಗೆ 09-00 ಗಂಟೆಯಾದರೂ ವೀರೆಂದರ್ ಎದ್ದು ಬರಲಿಲ್ಲ ನಾವುಗಳು ಹೋಗಿ ಎಬ್ಬಿಸಿದಾಗ ಏಳಲಿಲ್ಲ ಸ್ಥಳದಲ್ಲೆ ಮೃತಪಟ್ಟಿರುವುದಾಗಿ ಇತ್ಯಾದಿ ದೂರಿನ ಮೇರೆಗೆ.

2] ಯು.ಡಿ.ಆರ್ ನಂ 02/12 ಕಲಂ 174 [ಸಿ] ಸಿ,ಆರ್ ಪಿ.ಸಿ ಪಿರ್ಯಾದಿ ಟಿ ಗೋವಿಂದರಾಜು ರವರ ಅಣ್ಣ ರಾಮ @ ರಾಮಣ್ಣನು ತುಪ್ಪದಮಡುವಿನಿಂದ ಶಿಕಾರಿಪುಕ್ಕೆ ಹೋಗುವುದಕ್ಕೆ ನಾಗಮಂಗಲದಿಂದ ಬರುತ್ತಿದ್ದ ಆಪೇ ಆಟೋ ಕೆಎ-54-1661 ರ ಗಾಡಿಗೆ ಅತ್ತಿ ಆಟೋ ಗಾಡಿಯಿಂದ ಇಳಿಯುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಪ್ರಜ್ಷೆ ತಪ್ಪಿದಾಗ ನಾಗಮಂಗಲ ಜನರಲ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮಾನ್ಸ್ಗೆ ಸೇರಿಸಿದ್ದು ಅಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದ ಕಾರಣ ವಾಪಸ್ ಊರಿಗೆ ಕರೆತರುವಾಗ ಮಾರ್ಗ ಮದ್ಯದಲ್ಲಿ ಮೃತ ಹೊಂದಿರುವುದಾಗಿ ಇತ್ಯಾದಿ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ

3] ಯು.ಡಿ.ಆರ್ ನಂ 02/12 ಕಲಂ 174 ಸಿ.ಆರ್,ಪಿ.ಸಿ ದಿನಾಂಕ 14-01-12 ರಂದು ಮೃತೆ ಚಿಕ್ಕತಾಯಮ್ಮ 50 ವರ್ಷ ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಮೃತಪಟ್ಟಿರುತ್ತಾಳೆ

ಅಪಹರಣ ಪ್ರಕರಣ

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ

1] ಮೊ.ಸಂ 143-341-366 ರೆ/ವಿ 149 ಐಪಿಸಿ ದಿನಾಂಕ 14-01-12 ರಂದು ಪಿರ್ಯಾದಿ ಶಿವಲಿಂಗೇಗೌಡ ರವರ ಮಗಳು ಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಮಾಡುತ್ತಿದ್ದು ಈ ದಿವಸ ದಿ.14-12-2012 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಲು ಕೆ.ಎಂ.ದೊಡ್ಡಿ ಓಂ ಶಾಂತಿ ಮಾರ್ಗದ ರಸ್ತೆಯಲ್ಲಿ ತನ್ನ ಸ್ವಂತ ಕೆಎ.11ಎಕ್ಸ್2364 ಟಿವಿಎಸ್, ಮೋಪೆಡ್ ನಲ್ಲಿ ಹೋಗುತ್ತಿದ್ದಾಗ ಈ ಕೇಸಿನ ಆರೋಪಿ ಆಲೂರಯ್ಯ ಮತ್ತು ಇತರರು ಪಿರ್ಯಾದಿ ಮಗಳು ಹೋಗುತ್ತಿದ್ದ ಮೊಪೆಡ್ನ್ನು ಅಡ್ಡಗಟ್ಟಿ ಬಲವಂತವಾಗಿ ಕಾರಿನ ಓಳಗಡೆ ಕಿರುಚದಂತೆ ಕುರಿಸಿಕೊಂಡು, ಹೊಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರು.

Road Safety

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಡ್ಯ ಜಿಲ್ಲಾ ಪೊಲೀಸ್
ವತಿಯಿಂದ ನಡೆದ ಮ್ಯಾರಥಾನ್ ಓಟ