Moving text
PRESS NOTE DATE 31-05-2014
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ 31-05-2014
ಪತ್ರಿಕಾ ಪ್ರಕಟಣೆ
ವಿಷಯಃ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಆವರಣದಲ್ಲಿ ಕಳವು ಹಾಗೂ ಇತರೆ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡು ಮಾಲೀಕರು ಪತ್ತೆಯಾಗದೇ ಅನಾಥವಾಗಿ ಬಿದ್ದಿರುವ ವಾಹನಗಳ ಮಾಲೀಕರುಗಳನ್ನು ಪತ್ತೆ ಮಾಡಿ ವಿಲೇವಾರಿ ಮಾಡುವ ಬಗ್ಗೆ ಒಂದು ತಂತ್ರಾಂಶವನ್ನು ಕಂಪ್ಯೂಟರ್ ನಲ್ಲಿ ಅಳವಡಿಸಿ ಪತ್ತೆ ಮಾಡಲು ಫಲಶೃತಿಯಾಗಿರುವ ಬಗ್ಗೆ.
PRESS NOTE 21-05-2014
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ ಮಂಡ್ಯ ಜಿಲ್ಲೆ. ಮಂಡ್ಯ ದಿಃ-21-05-2014
ಪತ್ರಿಕಾ ಪ್ರಕಟಣೆ
ದಿನಾಂಕಃ 19-05-2014 ರಂದು ಮದ್ದೊರು ತಾಲ್ಲೂಕು, ವಳಗೆರೆಹಳ್ಳಿ ಗ್ರಾಮದ ಸಮೀಪ ಅದೇ ಗ್ರಾಮದ ಶಿವರಾಜು ಎಂಬುವವರ ಮೇಲೆ ಚಿರತೆಯ ದಾಳಿ ನಡೆದು ಸದರಿಯವರು ಮೃತಪಟ್ಟಿದ್ದು, ಈ ವಿಚಾರದಲ್ಲಿ ಸದರಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅನೇಕ ತಂಡಗಳನ್ನು ರಚಿಸಿ ಸೆರೆ ಹಿಡಿಯುವ ಕಾರ್ಯ ಆಚರಣೆಯಲ್ಲಿರುತ್ತದೆ.
ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚಿರತೆ ಕಂಡು ಬಂದಲ್ಲಿ ಸಾರ್ವಜನಿಕರು / ಗ್ರಾಮಸ್ಥರು ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ದೊರವಾಣಿ ಸಂಖ್ಯೆಃ 9480804800 ಅಥವಾ 08232-224888 ಅಥವಾ 08232- 224904 ಗಳಿಗೆ ಮಾಹಿತಿಯನ್ನು ಕೂಡಲೇ ತಿಳಿಸುವಂತೆ ಈ ಮೂಲಕ ಕೋರಲಾಗಿದೆ.
ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಾಗೂ ಕಬ್ಬಿನ ಗದ್ದೆಗಳಲ್ಲಿ ಚಿರತೆ ಅಡಗಿ ಇರಬಹುದೆಂದು ಊಹಿಸಲಾಗಿದ್ದು, ಅರಣ್ಯ ಅದಿಕಾರಿಗಳು ಸದರಿ ಚಿರತೆಯನ್ನು ಸರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವುದರಿಂದ ಆ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ ಹಾಗೂ ರಾತ್ರಿ ವೇಳೆ ಅಂತಹ ಸ್ಥಳಗಳ ಸರಹದ್ದಿನಲ್ಲಿ ಒಬ್ಬರು ಅಥವಾ ಇಬ್ಬರು ತಿರುಗಾಡದಂತೆಯೂ ತೀರ ಅವಶ್ಯಕತೆ ಕಂಡು ಬಂದಲ್ಲಿ ರಾತ್ರಿ ವೇಳೆ ಸಂಚರಿಸುವ ಸಮಯದಲ್ಲಿ ಗುಂಪಾಗಿ ಎಲ್ಲರ ಕೈಯಲ್ಲೂ ಲಾಠಿ, ದೊಣ್ಣೆ ಹಾಗೂ ಟಾರ್ಚರ್ ಗಳನ್ನು ಜೊತೆಯಲ್ಲಿ ಕೊಂಡೊಯ್ಯವಂತೆ ಈ ಮೂಲಕ ಕೋರಲಾಗಿದೆ
PRESS NOTE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 02-05-2014
ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀಯುತ ಕೆ.ರಾಜೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ರವರು ದಿನಾಂಕ 30-04-2014 ರಂದು ರಾತ್ರಿ ಗಸ್ತಿನಲ್ಲಿದ್ದು ಬೆಳಗಿನ ಜಾವ 05-00 ಗಂಟೆಯಲ್ಲಿ ತೆಂಡೆಕೆರೆ ಸರ್ಕಲ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಮೈಸೂರು ಕಡೆಯಿಂದ ಬಂದ ಒಂದು ಪ್ಯಾಸೆಂಜರ್ ಆಟೋ ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಕೆಎ-55-2893 ಆಟೋದಲ್ಲಿದ್ದ ಆರೋಪಿತರಾದ 1) ಯಲ್ಲಪ್ಪ @ ಯಲ್ಲಪ್ಪಬೋವಿ ಬಿನ್ ಚಿಕ್ಕಸುಬ್ಬಯ್ಯ @ ಚಿಕ್ಕಸುಬ್ಬಯ್ಯಬೋವಿ, 38 ವರ್ಷ, ಬೋವಿಜನಾಂಗ ಆಟೋ ಡ್ರೈವರ್ ನಂ 7, ರಿಂಗ್ರೋಡ್ ಸಾತಗಹಳ್ಳಿ ಇಂಜಿನೀಯರಿಂಗ್ ಕಾಲೇಜು ಪಕ್ಕ ಮೈಸೂರು ಮತ್ತು 2) ಸರೋಜ @ ರಾಧ ಕೊಂ ರಾಜು, 25 ವರ್ಷ, ಬೋವಿ ಜನಾಂಗ, ಗಂಧದಕಡ್ಡಿ ವ್ಯಾಪಾರ ಮಾಡುವ ಕೆಲಸ ನಂ 7, 1 ನೇ ಕ್ರಾಸ್, ಕುರಿಮಂಡಿ ಆಲದಮರದ ಪಕ್ಕ, ಕೆಸರೆ, ಮೈಸೂರು ಸಿಟಿ ಎಂದು ತಿಳಿಸಿದ್ದು ಆಟೋ ಪರಿಶೀಲಿಸಿದಾಗ ಹಿಂಬಾಗದ ಸೀಟಿನಲ್ಲಿ ಪ್ಲಾಸ್ಟಿಕ್ ಕವರಿನ ಒಳಗೆ 18 ಜೊತೆ ಬೆಳ್ಳಿ ಕಾಲು ಚೈನುಗಳಿದ್ದು ವಿಚಾರಣೆಮಾಡಿದಾಗ ಸದರಿ ವಸ್ತುಗಳನ್ನು ಮದ್ದೂರಿನ ಬಜಾರ್ ಸ್ಟ್ರೀಟ್ ನಲ್ಲಿರುವ ಒಂದು ಜ್ಯೂಯಲರ್ಸ್ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋಗಿ ಅಂಗಡಿಯವರಿಗೆ ಗೊತ್ತಾಗದೇ 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ನಾವು ಮತ್ತು ನಮ್ಮ ಸಂಬಂದಿಕರಾದ 1) ಸುಬ್ಬಮ್ಮ @ ಸುಜಾತ ಮತ್ತು 2) ಮಂಜು @ ಮಂಜುಳ ಮೈಸೂರು ರವರು ಜೊತೆಗೂಡಿ ಕಳ್ಳತನ ಮಾಡಿದ್ದು ಗಿರಾಕಿಗಳು ಸಿಕ್ಕರೆ ಮಾರಾಟ ಮಾಡಿ ಬಂದ ಹಣವನ್ನು ನಾವೆಲ್ಲರೂ ಹಂಚಿಕೊಳ್ಳೋಣ ಎಂದು ಬರುತ್ತಿದ್ದೆವು ತಿಳಿಸಿದ್ದು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಆಟೋವನ್ನು ಮತ್ತು 18 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಅಮಾನತ್ತುಪಡಿಸಿಕೊಂಡು ಅರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನಂತರ ಮೇಲ್ಕಂಡ ಆರೋಪಿಗಳನ್ನು ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಆರೋಪಿತರಿಂದ ಸುಮಾರು 60.000 ರೂಪಾಯಿ ಬೆಲೆ ಬಾಳುವ 1200 ಗ್ರಾಂ ತೂಕದ ಬೆಳ್ಳಿಯ 18 ಜೊತೆ ಕಾಲು ಚೈನುಗಳನ್ನು ಆರೋಪಿತರಿಂದ ವಶ ಪಡಿಸಿಕೊಂಡಿರುತ್ತೆ.
ಈ ಪ್ರಕರಣವನ್ನು ಮಾನ್ಯ ಶ್ರೀರಂಗಪಟ್ಟಣ ಅರಕ್ಷಕ ಉಪ ಪೊಲೀಸ್ ಅದಿಕ್ಷಕರಾದ ಶ್ರೀಮತಿ ಎಂ.ಎಸ್. ಗೀತಾ ರವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕೆ. ರಾಜೇಂದ್ರ ರವರು ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಡಿ.ಪಿ. ಧನರಾಜ್ ಮತ್ತು ಸಿಬ್ಬಂದಿಗಳಾದ ಪಿಸಿ 678 ಕೃಷ್ಣೇಗೌಡ, ಪ್ರಶಾಂತ ಕುಮಾರ ಪಿಸಿ-492 ಇವರುಗಳ ಕಾರ್ಯವನ್ನು ಅವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿರುತ್ತಾರೆ.
PRESS NOTE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 02-05-2014
ಪತ್ರಿಕಾ ಪ್ರಕಟಣೆ
ದಿನಾಂಕಃ 01-05-2014 ರಂದು ಮಂಡ್ಯ ನಗರದ ಮಹಾವೀರ ಚಿತ್ರಮಂದಿರದಲ್ಲಿ ಮಾಣಿಕ್ಯ ಎಂಬ ಸುದೀಪ್ ಅಭಿನಯದ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಈ ಸಮಯದಲ್ಲಿ ಸುದೀಪ್ರವರು ಮಾತನಾಡುವ ಧ್ವನಿಯು ಅಸ್ಪಷ್ಟವಾಗಿ ಕೇಳುತ್ತಿದೆ ಎಂದು ಪ್ರೇಕ್ಷಕರು ಈ ಬಗ್ಗೆ ಚಿತ್ರಮಂದಿರದ ಮೇಲ್ವಿಚಾರಕರನ್ನು ಪ್ರಶ್ನಿಸುತ್ತಿದ್ದ ಸಮಯದಲ್ಲಿ ರೊಚ್ಚಿಗೆದ್ದ ಕೆಲವು ಕಿಡಿಗೇಡಿಗಳು ಚಿತ್ರಮಂದಿರದ ಪೀಠೋಪಕರಣಗಳು ಮತ್ತು ಗ್ಲಾಸುಗಳನ್ನು ಹೊಡೆದು ಗಲಾಟೆ ಮಾಡಿದ್ದು, ನಂತರ ಚಲನಚಿತ್ರ ಪ್ರದರರ್ಶಿಸಲು ಸಾಧ್ಯವಾಗದ ಕಾರಣ ಪ್ರೇಕ್ಷಕರಿಗೆ ಬೆಳಗ್ಗಿನ ಪ್ರದರ್ಶನ ಮತ್ತು ಮದ್ಯಾಹ್ನದ ಪ್ರದರ್ಶನದ ಎರಡು ವೇಳೆಯ ಹಣವನ್ನು ವಾಪಸ್ ನೀಡಿ ಕಳುಹಿಸಿರುತ್ತಾರೆ. ಗಲಾಟೆ ಸಮಯದಲ್ಲಿ ಚಿತ್ರಮಂದಿರ ಹಾನಿಗೊಳಗಾಗಿದ್ದ ಸಂಬಂಧವಾಗಿ ಚಿತ್ರಮಂದಿರದ ಮ್ಯಾನೇಜರ್ ಆದ ರಾಮು ಎಂಬುವವರು ಮಂಡ್ಯ ಪೂರ್ವ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಕೇಸಿನ ಆರೋಪಿಗಳಾದ 1] ವಿನಿಲ್ಕುಮಾರ್ ಬಿನ್ ರಾಮಚಂದ್ರ, 24 ವರ್ಷ, ಒಕ್ಕಲಿಗರು, ವ್ಯವಸಾಯ, ಕನ್ನಲಿ ಗ್ರಾಮ, ಮಂಡ್ಯ ತಾಲ್ಲೂಕು. 2] ಹೆಚ್.ಎನ್.ದೀಪು ಬಿನ್ ನಾಗರಾಜು 27 ವರ್ಷ, ಒಕ್ಕಲಿಗರು, ಕ್ಲಬ್ನಲ್ಲಿ ಸಪ್ಲೈಯರ್ ಕೆಲಸ, ಸ್ವಂತ ಊರು ಹುಚ್ಚಲಗೆರೆ ಮಂಡ್ಯ ತಾಲ್ಲೂಕು. 3] ರಮೇಶ ಬಿನ್ ಲೇಟ್ ಸವಡೆ ಉರುಗಯ್ಯ, 26 ವರ್ಷ, ಗಂಗಾಮತಸ್ತರು, ವ್ಯವಸಾಯ, ವಾಸ ಚೀರನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
MANDYA RURAL POLICE STATION CRIME NUMBER 226/2014 U/s 302-201 IPC Case PRESS NOTE
Click here for DETAILED REPORT
Labels:
Press Note,
Press Note Image
PRESS NOTE DATED 28-04-2014
WOMEN HELPLINE
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ ಮಂಡ್ಯ ಜಿಲ್ಲೆ. ಮಂಡ್ಯ ದಿಃ-28-04-2014
ಪತ್ರಿಕಾ ಪ್ರಕಟಣೆ
ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಯಾವುದೇ ಸಮಯದಲ್ಲಾದರೂ ಸರಿ ಹಾಗೂ ಯಾವುದೇ ಸ್ಥಳದಲ್ಲಾದರೂ ಸರಿ ಯಾರಿಂದಲಾದರೂ ಸರಿ ತೊಂದರೆಯುಂಟಾದಲ್ಲಿ ಅವರ ಸಹಾಯಕ್ಕಾಗಿ ಕೂಡಲೇ ಬರುವ ಸಲುವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಹಿಳಾ ಸಹಾಯವಾಣಿಯನ್ನು [HELP LINE] ಪ್ರಾರಂಭ ಮಾಡಿದ್ದು, ಈ ಕೆಳಕಂಡ ವಿಚಾರಗಳ ಬಗ್ಗೆ ನೊಂದ ಮಹಿಳೆಯರು ಮಹಿಳಾ ಸಹಾಯವಾಣಿಯನ್ನು ಈ ಕೆಳಗೆ ಸೂಚಿಸಿರುವ ದೂರವಾಣಿಗೆ ತಾವುಗಳು ಇದ್ದ ಸ್ಥಳದಿಂದಲೇ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದಾಗಿರುತ್ತದೆ.
1] ಶಾಲಾ - ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳು, ಇತರೆ ಸಾರ್ವಜನಿಕ ಸ್ಥಳಗಳು, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಲ್ಲಿ ಹಾಗೂ ಒಬ್ಬಂಟಿಯಾಗಿ ಮಹಿಳೆಯರು ರಾತ್ರಿ ವೇಳೆ ಯಾವುದೇ ಸ್ಥಳದಲ್ಲಿ ಸಂಚರಿಸುತ್ತಿದ್ದಲ್ಲಿ ಯಾವುದೇ ಕಿಡಿಗೇಡಿಗಳಿಂದ ತೊಂದರೆಯಾದಲ್ಲಿ ಈ ಮಹಿಳಾ ಸಹಾಯವಾಣಿ ಕೇಂದ್ರವನ್ನು ಇದ್ದ ಸ್ಥಳದಿಂದಲೇ ಸಂಪರ್ಕಿಸಿದ್ದಲ್ಲಿ ಸಹಾಯವಾಣಿ ಕೇಂದ್ರದವರು ನೊಂದ ಮಹಿಳೆಯರು ತೊಂದರೆಗೀಡಾದ ಸ್ಥಳದ ಸಮೀಪದ ಠಾಣೆಗಳಿಗೆ ಮಾಹಿತಿಯನ್ನು ನೀಡಿ ಆ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲವೇ ನಿಮಿಷಗಳೊಳಗೆ ತೊಂದರೆಗೀಡಾದ ಮಹಿಳೆ ಇದ್ದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಒದಗಿಸಲು ಬರುವವರಿದ್ದಾರೆ.
2] ಮಹಿಳಾ ಸಹಾಯವಾಣಿಯನ್ನು ಮಂಡ್ಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೆರೆಯಲಾಗಿದ್ದು, ಅದರ ದೂರವಾಣಿ ಸಂಖ್ಯೆ ಈ ಕೆಳಕಂಡಂತೆ ಇರುತ್ತದೆ.
1] 08232 - 220239
2] 08232 - 220242
PRESS NOTE DATE 27-04-2014
ಕಿರುಗಾವಲು ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ : 61/2014 ಕಲಂ 302 ಕೂಡ 34 ಐಪಿಸಿ ಪ್ರಕರಣದ ಆರೋಪಿಗಳ ಬಂಧನ
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ-27-04-2014
ಪತ್ರಿಕಾ ಪ್ರಕಟಣೆ
ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಕನ್ನಹಳ್ಳಿ ಗ್ರಾಮದ ಬಳಿ ದಿನಾಂಕಃ 24-04-2014 ರಂದು ಬೆಳಗಿನ ಜಾವ ಶ್ರೀಮತಿ.ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿದ್ದು, ನಂತರ ಆಕೆಯು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿರುವ ಬಗ್ಗೆ.
ಮಳವಳ್ಳಿ ಗ್ರಾಮಾಂತರ ವೃತ್ತ ವ್ಯಾಪ್ತಿಯ ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಕನ್ನಹಳ್ಳಿ ಗ್ರಾಮದ ಮುಂದೆ ರಸ್ತೆಯ ಪಕ್ಕದಲ್ಲಿ ದಿನಾಂಕಃ 24-04-2014 ರಂದು ಬೆಳಗಿನ ಜಾವದ ಸಮಯದಲ್ಲಿ ಆರೋಪಿಗಳು ಶಿಲ್ಪಾ ಕೋಂ ಅಭಿಜಿತ್, 19 ವರ್ಷ, ಬೈರವೇಶ್ವರ ನಗರ, 2 ನೇ ಕ್ರಾಸ್, ಮೇಟಗಳ್ಳಿ, ಮೈಸೂರು ಎಂಬಾಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ವೇಲನ್ನು ಬಿಗಿದು ನಂತರ ಶಿಲ್ಪಾಳ ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಹೊರಟು ಹೋಗಿದ್ದು ಇದನ್ನು ಕಂಡ ಸಾರ್ವಜನಿಕರು ಈಕೆಯನ್ನು 108 ಸಹಾಯದಿಂದ ಮಳವಳ್ಳಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಶಿಲ್ಪಾಳು ಮೃತ ಪಟ್ಟಿರುತ್ತಾಳೆ. ಈ ವಿಚಾರದಲ್ಲಿ ಶಿಲ್ಪಾಳು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಮಕ್ಷಮ ಹೇಳಿಕೆಯನ್ನು ನೀಡಿದ್ದು ಈ ಬಗ್ಗೆ ಕಿರುಗಾವಲು ಠಾಣಾ ಮೊಸಂಃ 61/14 ಕಲಂ 302 ರೆವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಮೇಲ್ಕಂಡ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಡಾ|| ವಿ.ಜೆ ಶೋಬಾರಾಣಿ, ಡಿಎಸ್ಪಿ ಮಂಡ್ಯ ಉಪವಿಭಾಗ ಹಾಗೂ ಶ್ರೀ ಅಣ್ಣಪ್ಪನಾಯಕ ಡಿಎಸ್ಪಿ ಮಳವಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಮಳವಳ್ಳಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಹೆಚ್.ಕೆ ಶಿವಸ್ವಾಮಿ ಶ್ರೀ ಬಿ.ದೇವರಾಜು, ಪಿ.ಎಸ್.ಐ, ಕಿರುಗಾವಲು ಪೊಲೀಸ್ ಠಾಣೆ, ಶ್ರೀ ವೆಂಕಟೇಗೌಡ ಪಿಎಸ್ಐ ಮಂಡ್ಯ ಪೂರ್ವ ಪೊಲೀಸ್ ಠಾಣೆ ಹಾಗೂ ಇತರೆ ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಿ, ಸದರಿ ತಂಡದವರು ದಿನಾಂಕಃ24/04/2014 ರಂದು ಆರೋಪಿ ಸಂಖ್ಯೆ 3] ಪ್ರಮಿಳಾ ಕೊಂ ಪುಟ್ಟಸ್ವಾಮಿ, 33 ವರ್ಷ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರುರವರನ್ನು ನೆಲಮಾಕನಹಳ್ಳಿ ಗ್ರಾಮದಲ್ಲಿ ವಶಕ್ಕೆ ಪಡೆದು ನಂತರ ಆರೋಪಿ ಸಂಖ್ಯೆ-4] ನಾಗಮ್ಮ ಕೊಂ ಬಿಲ್ಲಯ್ಯ, 38 ವರ್ಷ, ನೆಲಮಾಕನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಹಾಲಿ ವಾಸ, ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು ರವರನ್ನು ಮೈಸೂರಿನ ಜಯದೇವನಗರದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತಾರೆ. ನಂತರ ದಿನಾಂಕ: 26-04-2014 ರಂದು ಬೆಳಿಗ್ಗೆ ಆರೋಪಿ ಸಂಖ್ಯೆ-1 ಪುಟ್ಟಸ್ವಾಮಿ ಬಿನ್ ಬಿಲ್ಲಯ್ಯ, 36ವರ್ಷ, ವುಡ್ ಪಾಲಿಸ್ ಕೆಲಸ, 2ನೇ ಕ್ರಾಸ್, ಕಲ್ಪವೃಕ್ಷ ಬಾರ್ ಹಿಂಭಾಗ, ಬೈರವೇಶ್ವರ ನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ಆರೋಪಿ ಸಂಖ್ಯೆ-2 ಬಿಲ್ಲಯ್ಯ ಬಿನ್ ಬಿಲ್ಲಯ್ಯ, 44 ವರ್ಷ, ವುಡ್ ಪಾಲಿಸ್ ಕೆಲಸ, ಮನೆ ನಂ 08/1, 1 ನೇ ಕ್ರಾಸ್, ಜಯದೇವನಗರ, ಮೇಟಗಳ್ಳಿ ಪೋಸ್ಟ್, ಮೈಸೂರು. ರವರನ್ನು ಬೆಂಗಳೂರಿನ ಹೆಬ್ಬಾಳದ ಬಸ್ನಿಲ್ದಾಣದ ಬಳಿ ವಶಕ್ಕೆ ಪಡೆದು ಕರೆತಂದು ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಆರೋಪಿಗಳಿಂದ ಎರಡು ಮೊಬೈಲ್ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟಿವಾ ಬೈಕ್ ಕೆ.ಎ.09-ಇ.ಎಸ್-1284 ಹಾಗೂ ಬಜಾಜ್ ಡಿಸ್ಕವರ್ ಮೋಟಾರ್ ಬೈಕ್ ಕೆ.ಎ.09-ಇವಿ-8233 ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಆರೋಪಿಗಳ ವಿಚಾರಣಾ ವೇಳೆಯಲ್ಲಿ ಮೃತೆ ಶಿಲ್ಪಾಳು ಅಭಿಜಿತ್ ನೊಂದಿಗೆ ಅಂರ್ತಜಾತಿ ಪ್ರೇಮ ವಿವಾಹವಾಗಿದ್ದು ಮೃತೆ ಶಿಲ್ಪಾಳ ಅತ್ತೆ ನಾಗಮ್ಮ ಮಾವ ಬಿಲ್ಲಯ್ಯನವರಿಗೆ ಇಷ್ಟವಿಲ್ಲದೇ ಇದ್ದು ಆರೋಪಿ ಸಂಖ್ಯೆ-2 ಬಿಲ್ಲಯ್ಯ ರವರ ಮಗಳು ಅಭಿಲಾಷ್ ರವರ ಮದುವೆ ನಿಶ್ಚಯವಾದಲ್ಲಿ ಈಕೆಯ ತಮ್ಮನಾದ ಅಭಿಜಿತ್ ಅಂರ್ತಜಾತಿ ಹುಡುಗಿಯ ಜೊತೆ ಮದುವೆಯಾಗಿರುವುದರಿಂದ ತಮ್ಮ ಮಗಳ ಮದುವೆಗೆ ಅಡ್ಡಿಯಾಗುತ್ತದೆಂಬ ಕಾರಣದಿಂದ ಒಂದು ವಾರದ ಮುಂಚೆ ಆರೋಪಿಗಳೆಲ್ಲರೂ ಶಿಲ್ಪಾಳನ್ನು ಕೊಲೆ ಮಾಡುವ ಸಂಚು ಮಾಡಿ ಮೈಸೂರು ಮಳವಳ್ಳಿ ಮುಖ್ಯರಸ್ತೆಯ ಪಕ್ಕದ ಕನ್ನಹಳ್ಳಿ ಗ್ರಾಮದ ಬಳಿ ಆರೋಪಿಗಳಾದ ಪುಟ್ಟಸ್ವಾಮಿ ಮತ್ತು ಪ್ರಮೀಳಾ ಇಬ್ಬರು ಸೇರಿ ಶಿಲ್ಪಾಳಿಗೆ ವೇಲ್ನಿಂದ ಕುತ್ತಿಗೆಗೆ ಬಿಗಿದು ಮುಖಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ತನಿಖಾ ಕಾಲದಲ್ಲಿ ತಿಳಿಸಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ
Labels:
Press Note,
Press Note Image
Subscribe to:
Posts (Atom)




