Moving text
PRESS NOTE DATE 31-05-2014
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ ದಿಃ 31-05-2014
ಪತ್ರಿಕಾ ಪ್ರಕಟಣೆ
ವಿಷಯಃ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಆವರಣದಲ್ಲಿ ಕಳವು ಹಾಗೂ ಇತರೆ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡು ಮಾಲೀಕರು ಪತ್ತೆಯಾಗದೇ ಅನಾಥವಾಗಿ ಬಿದ್ದಿರುವ ವಾಹನಗಳ ಮಾಲೀಕರುಗಳನ್ನು ಪತ್ತೆ ಮಾಡಿ ವಿಲೇವಾರಿ ಮಾಡುವ ಬಗ್ಗೆ ಒಂದು ತಂತ್ರಾಂಶವನ್ನು ಕಂಪ್ಯೂಟರ್ ನಲ್ಲಿ ಅಳವಡಿಸಿ ಪತ್ತೆ ಮಾಡಲು ಫಲಶೃತಿಯಾಗಿರುವ ಬಗ್ಗೆ.
PRESS NOTE 21-05-2014
ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ ಮಂಡ್ಯ ಜಿಲ್ಲೆ. ಮಂಡ್ಯ ದಿಃ-21-05-2014
ಪತ್ರಿಕಾ ಪ್ರಕಟಣೆ
ದಿನಾಂಕಃ 19-05-2014 ರಂದು ಮದ್ದೊರು ತಾಲ್ಲೂಕು, ವಳಗೆರೆಹಳ್ಳಿ ಗ್ರಾಮದ ಸಮೀಪ ಅದೇ ಗ್ರಾಮದ ಶಿವರಾಜು ಎಂಬುವವರ ಮೇಲೆ ಚಿರತೆಯ ದಾಳಿ ನಡೆದು ಸದರಿಯವರು ಮೃತಪಟ್ಟಿದ್ದು, ಈ ವಿಚಾರದಲ್ಲಿ ಸದರಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅನೇಕ ತಂಡಗಳನ್ನು ರಚಿಸಿ ಸೆರೆ ಹಿಡಿಯುವ ಕಾರ್ಯ ಆಚರಣೆಯಲ್ಲಿರುತ್ತದೆ.
ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚಿರತೆ ಕಂಡು ಬಂದಲ್ಲಿ ಸಾರ್ವಜನಿಕರು / ಗ್ರಾಮಸ್ಥರು ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ದೊರವಾಣಿ ಸಂಖ್ಯೆಃ 9480804800 ಅಥವಾ 08232-224888 ಅಥವಾ 08232- 224904 ಗಳಿಗೆ ಮಾಹಿತಿಯನ್ನು ಕೂಡಲೇ ತಿಳಿಸುವಂತೆ ಈ ಮೂಲಕ ಕೋರಲಾಗಿದೆ.
ಮದ್ದೊರು ತಾಲ್ಲೂಕು, ಮಂಡ್ಯ ತಾಲ್ಲೂಕಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಾಗೂ ಕಬ್ಬಿನ ಗದ್ದೆಗಳಲ್ಲಿ ಚಿರತೆ ಅಡಗಿ ಇರಬಹುದೆಂದು ಊಹಿಸಲಾಗಿದ್ದು, ಅರಣ್ಯ ಅದಿಕಾರಿಗಳು ಸದರಿ ಚಿರತೆಯನ್ನು ಸರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವುದರಿಂದ ಆ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ ಹಾಗೂ ರಾತ್ರಿ ವೇಳೆ ಅಂತಹ ಸ್ಥಳಗಳ ಸರಹದ್ದಿನಲ್ಲಿ ಒಬ್ಬರು ಅಥವಾ ಇಬ್ಬರು ತಿರುಗಾಡದಂತೆಯೂ ತೀರ ಅವಶ್ಯಕತೆ ಕಂಡು ಬಂದಲ್ಲಿ ರಾತ್ರಿ ವೇಳೆ ಸಂಚರಿಸುವ ಸಮಯದಲ್ಲಿ ಗುಂಪಾಗಿ ಎಲ್ಲರ ಕೈಯಲ್ಲೂ ಲಾಠಿ, ದೊಣ್ಣೆ ಹಾಗೂ ಟಾರ್ಚರ್ ಗಳನ್ನು ಜೊತೆಯಲ್ಲಿ ಕೊಂಡೊಯ್ಯವಂತೆ ಈ ಮೂಲಕ ಕೋರಲಾಗಿದೆ
Subscribe to:
Posts (Atom)






