Moving text

Mandya District Police

Press Note Dated: 27-03-2017

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 27-03-2017

ಪತ್ರಿಕಾ ಪ್ರಕಟಣೆ

ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ವೃತ್ತದ ವ್ಯಾಪ್ತಿಯ ಕೆಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ದಿನಾಂಕ 05.02.2017 ರಂದು ಕೆಎಂ ದೊಡ್ಡಿ ಟೌನಿನಲ್ಲಿರುವ ಆಲಭುಜನಹಳ್ಳಿ ರಸ್ತೆಯಲ್ಲಿರುವ  ವಿಶ್ವಕರ್ಮ ಜೂಯಿಲರಿ ಶಾಪನ್ನು ಯಾರೋ ಕಳ್ಳರು ಅಂಗಡಿ ಗ್ರಿಲ್ಗೇಟನ್ನು ಗ್ರಿಲ್ ಕಟರ್ನಿಂದ ಕಟ್ ಮಾಡಿ ಅಂಗಡಿಯ ಒಳಗಡೆ ಇದ್ದ 15 ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ 30 ಗ್ರಾಮ್ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಅಂಗಡಿ ಮಾಲಿಕ ರವಿರವರು ನೀಡಿದ ದೂರಿನ ಹಿನ್ನಲೆಯಲ್ಲಿ  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದರು.
       ಸದರಿ ಪ್ರಕರಣದ  ಆರೋಪಿ ಮತ್ತು ಮಾಲುಗಳ ಪತ್ತೆ ಸಂಬಂಧ ಮಳವಳ್ಳಿ ಉಪ ವಿಭಾಗದ ಡಿವೈಎಸ್.ಪಿ ಶ್ರೀ.ಕೆ.ಟಿ ಮ್ಯಾಥ್ಯೂಸ್ ಥಾಮಸ್ ರವರ ಮಾರ್ಗದರ್ಶನದಲ್ಲಿ  ಶ್ರೀ ಶಿವಮಲವಯ್ಯ ಸಿಪಿಐ ಕೆಎಂ ದೊಡ್ಡಿ ರವರ  ನೇತೃತವದಲ್ಲಿ ಹಲಗೂರು ಪೊಲೀಸ್ ಠಾಣಾ ಪಿ.ಎಸ್., ಶ್ರೀ.ಬಿ.ಎಸ್. ಶ್ರೀಧರ್. ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ಗಳಾದ ಮಹದೇವ, ಕೃಷ್ಣಶೆಟ್ಟಿ,  ಪೊಲೀಸ್ ಕಾನ್ಸ್ಟೇಬಲ್ಗಳಾದ ಜಯಕುಮಾರ, ಪ್ರೇಮ್ಕುಮರ್, ರಿಯಾಜ್ಪಾಷ, ಪ್ರಭು, ಮೋಹನ, ಬೆರಳಚ್ಚು ವಿಭಾಗದ ಸಿಬ್ಬಂದಿಗಳಾದ ಶ್ರೀರಾಜೇಂದ್ರ ಮತ್ತು ಮಂಜು ಹಾಗೂ ಚಾಲಕರಾದ ಹೆಡ್ಕಾನ್ಸ್ಟೇಬಲ್ ಮಂಜುನಾಥ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.

ಆರೋಪಿ-01 ಗಂಗಾ @ ರಮೇಶ ಬಿನ್ ವೆಂಕಟಯ್ಯ, ಕೊಪ್ಪ ಟೌನ್ ರವರನ್ನು  ವಶಕ್ಕೆ ಪಡೆಕೊಂಡು ವಿಚಾರಣೆಗೆ ಒಳಪಡಿಸಿದಾಗ ತನ್ನ  ಸಹಚರರಾದ
ಆರೋಪಿ-02  ಗುರುರಾಜ್ @ ಗುರು, ಕೊಡಿಯಾಲ ಗ್ರಾಮ, ಶ್ರೀರಂಗಪಟ್ಟಣ ತಾಃ
ಆರೋಪಿ-03  ಕುಮಾರ ಬಿನ್ ಲಕ್ಷ್ಮಣ ಕನಕಪುರ ಸರ್ಕಲ್ ರಾಮನಗರ ಟೌನ್,
ಆರೋಪಿ-04  ಮುನಿಯಪ್ಪ @ ಮುನಿಯ,   ಐಜೂರುಗುಡ್ಡೆ, ರಾಮನಗರ ಟೌನ್ರವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಕೆಳಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.
1]   2016 ನೇ ಸಾಲಿನ ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ರಾಮನಗರದ ತಿಮ್ಮಸಚಿದ್ರ ಗ್ರಾಮದಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸುಮಾರು 15 ಸಾವಿರ ಹಣವನ್ನು ಕಳ್ಳತನ ಮಾಡಿರುತ್ತಾರೆ.
2]   2016 ನೇ ಸಾಲಿನ ಡಿಸಂಬರ್ ತಿಂಗಳಲ್ಲಿ  ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಗಾರನಹಳ್ಳಿ ಗ್ರಾಮದ ಜೂಯಿಲರಿ ಶಾಪನ್ನು ಕನ್ನ ಕಳವು ಮಾಡಿ ಒಟ್ಟು 30 ಗ್ರಾಮ್ ಬಂಗಾರ ಮತ್ತು  5.7 ಕೆಜಿ ಬೆಳ್ಳಿ ಒಟ್ಟು 2,50,000 ರೂಪಾಯಿ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
3] 2017 ನೇ ಜನವರಿ ಕೊನೆಯ ವಾರದಲ್ಲಿ ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಬೀಗವನ್ನು ಹೊಡೆದು ಸುಮಾರು 5.5 ಕೆ.ಜಿ ಬೆಳ್ಳಿ ಪದಾರ್ಥಗಳು, 45 ಗ್ರಾಮ್  ಚಿನ್ನದ ವಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
4] 2017 ನೇ ಸಾಲಿನ ಜನವರಿಯ ಕೊನೆಯ ವಾರದಲ್ಲಿ ರಾಮನಗರ ತಾಲ್ಲೋಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದಲ್ಲಿ   ದೇವರ ವಿಗ್ರಹದ ಮೇಲಿದ್ದ ಒಂದು ಚಿನ್ನದ ತಾಳಿ ಹಾಗೂ ಒಂದು ಬೆಳ್ಳಿ ಕಿರೀಟವನ್ನು ಹಾಗೂ ಹುಂಡಿಯಲ್ಲಿದ್ದ 1,100 ರೂ ಚಿಲ್ಲರೆ ಹಣವನ್ನು ಕಳ್ಳತನ ಮಾಡಿರುತ್ತಾರೆ
5] 2017 ನೇ ಫೆಬ್ರವರಿ ಮೊದಲನೆ ವಾರದಲ್ಲಿ ಕೆಎಂ ದೊಡ್ಡಿ  ಆಲಭುಜನಹಳ್ಳೀ ರಸ್ತೆಯಲ್ಲಿರುವ ವಿಶ್ವಕರ್ಮ ಜೂಯಿಲರಿ ಶಾಪನ್ನು ಹೊಡೆದು ಸುಮಾರು 7 ಕೆಜಿ ಬೆಳ್ಳಿ ಪಧಾರ್ಥ, ಹಾಗೂ ಸಣ್ಣಪುಟ್ಟ ಚಿನ್ನದ ವಡವೆಗಳು ಒಟ್ಟು 30 ಗ್ರಾಂ ನಷ್ಟು ಚಿನ್ನದ ಪದಾರ್ಥ, ಹಾಗೂ 20 ಸಾವಿರ ನಗದು ಸೇರಿ ಒಟ್ಟು 6.50,000 ರೂ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
6] 2017 ನೇ ಫೆಬ್ರವರಿ ಎರಡನೆ ವಾರದಲ್ಲಿ ಚನ್ನಪಟ್ಟಣದ ಕಣ್ವ ಬಡಾವಣೆಯ ಮನೆಯಲ್ಲಿ  ಹೆಂಗಸು ಕಿಟಿಕಿಯ ಪಕ್ಕದಲ್ಲಿ ಮಲಗಿದ್ದಾಗ ಸುಮಾರು 20 ಗ್ರಾಮ್ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ.
7] 2017 ನೇ ಫೆಬ್ರವರಿ ಎರಡನೆ ವಾರದಲ್ಲಿ ಕೊಡಿಯಾಲದಲ್ಲಿ ಮುಖಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಿಕೊಂಡು ಒಂದು ಜ್ಯೂಯಲರಿ ಶಾಪನ್ನು ಮತ್ತು ದೇವಸ್ಥಾನವನ್ನು ಹೊಡೆಯಲು ಪ್ರಯತ್ನಪಟ್ಟಿದ್ದು ನಂತರ ದೇವಸ್ಥಾನದ ಪಕ್ಕದ ಮನೆಯ ಅಜ್ಜಿ ಮತ್ತು ಹೆಂಗಸಿನ ಕತ್ತಿನಲ್ಲಿದ್ದ 1.75,000 ಮೌಲ್ಯದ ಚಿನ್ನದ ಸರಗಳನ್ನು ಕಿತ್ತು ಕೊಂಡಿರುತ್ತಾರೆ.
8] 2017 ಪೆಬ್ರವರಿ ತಿಂಗಳ ಮೂರನೆ ವಾರದಲ್ಲಿ ಕಿರುಗಾವಲಿನಲ್ಲಿ ಉಂತೂರಮ್ಮನ ದೇವಸ್ಥಾನವನ್ನು ಕಳ್ಳತನ ಮಾಡಿ ಟ್ರಂಕ್ನಲ್ಲಿ ಇದ್ದ ಸುಮಾರು 45-50 ತಾಳಿಗಳು ಹಾಗೂ ಹುಂಡಿಯಲ್ಲಿದ್ದ 10, ಸಾವಿರ ನಗದು ಸೇರಿ 1.15,000 ರೂ ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
9]  ಫೆಬ್ರವರಿ 2017 ಕೊನೆಯ ವಾರದಲ್ಲಿ ಚನ್ನಪಟ್ಟಣದ ಕೊಟಮಾರನಹಳ್ಳಿ ಗ್ರಾಮದಲ್ಲಿ ಬಾಳಾರದೇವಮ್ಮ ದೇವಸ್ಥಾನದಲ್ಲಿ ತಾಳಿ ಮತ್ತು ಕಾಸು, ಬೆಳ್ಳಿ ಪಧಾರ್ಥ ಹುಂಡಿಯ ಹಣ ಸೇರಿ  ಸುಮಾರು 80,000 ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
10] 2017 ನೇ ಜನವರಿ  ತಿಂಗಳ ಎರಡನೆ ವಾರದಲ್ಲಿ ರಾಮನಗರ ತಾಃ ಕೈಲಾಂಚ ಹೋಬಳಿ, ಜಕ್ಕನಹಳ್ಳಿ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಹುಂಡಿಯಲ್ಲಿದ್ದ 20000 ನಗದು ಹಣವನ್ನು ಕಳ್ಳತನ ಮಾಡಿರುತ್ತಾರೆ.
ಮೇಲ್ಕಂಡ 10 ಪ್ರಕರಣಗಳಲ್ಲಿ ಆರೋಪಿಗಳ ಸ್ವಇಚ್ಚಾ ಹೇಳಿಕೆ ಆಧಾರದ ಮೇಲೆ ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ಮಾಗಡಿ, ಮದ್ದೂರು ತಾಃ ಕೊಪ್ಪ ಹಾಗೂ ಚೈನ್ನೈ ಮತ್ತು ಕೊಯಮತ್ತೂರುಗಳಲ್ಲಿ 19 ಕೆಜಿ ಬೆಳ್ಳಿ ಒಟ್ಟು ಮೌಲ್ಯ 8,55,000 ಹಾಗೂ 200 ಗ್ರಾಮ್ ಚಿನ್ನ ಒಟ್ಟು ಮೌಲ್ಯ 5,00,000 ಒಟ್ಟು 13,55,000 ರೂಗಳ ಬೆಳ್ಳಿ ಮತ್ತು ಚಿನ್ನದ ಒಡವೆಗಳನ್ನು ಅಮಾನತ್ತಿ ಪಡಿಸಿರುತ್ತಾರೆ.
                 ಮೇಲ್ಕಂಡ  ಆರೋಪಿಗಳ ಪತ್ತೆಗೆ ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.
Mandya District Daily Crime Report Date: 26-03-2017
Mandya District Daily Crime Report Date: 25-03-2017
Mandya District Daily Crime Report Date: 24-03-2017
Mandya District Daily Crime Report Date: 23-03-2017
Mandya District Daily Crime Report Date: 22-03-2017
Mandya District Daily Crime Report Date: 21-03-2017
Mandya District Daily Crime Report Date: 20-03-2017
Mandya District Daily Crime Report Date: 19-03-2017
Mandya District Daily Crime Report Date: 17-03-2017
Mandya District Daily Crime Report Date: 16-03-2017
Mandya District Daily Crime Report Date: 15-03-2017
Mandya District Daily Crime Report Date: 14-03-2017
Mandya District Daily Crime Report Date: 13-03-2017
Mandya District Daily Crime Report Date: 12-03-2017
Mandya District Daily Crime Report Date: 11-03-2017
Mandya District Daily Crime Report Date: 10-03-2017
Mandya District Daily Crime Report Date: 09-03-2017
Mandya District Daily Crime Report Date: 08-03-2017
Mandya District Daily Crime Report Date: 07-03-2017
Mandya District Daily Crime Report Date: 06-03-2017
Mandya District Daily Crime Report Date: 05-03-2017
Mandya District Daily Crime Report Date: 04-03-2017
Mandya District Daily Crime Report Date: 03-03-2017
Mandya District Daily Crime Report Date: 02-03-2017
Mandya District Daily Crime Report Date: 01-03-2017
Mandya District Daily Crime Report Date: 28-02-2017
Mandya District Daily Crime Report Date: 27-02-2017
Mandya District Daily Crime Report Date: 26-02-2017
Mandya District Daily Crime Report Date: 25-02-2017
Mandya District Daily Crime Report Date: 24-02-2017
Mandya District Daily Crime Report Date: 23-02-2017
Mandya District Daily Crime Report Date: 22-02-2017
Mandya District Daily Crime Report Date: 21-02-2017
Press Note Date: 21-02-2017
Mandya District Daily Crime Report Date: 20-02-2017

PRESS NOTE DATE 20-02-2017



ಸಂಖ್ಯೆ :ಸಿಬಿ/24/2017.                                     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
                                                                               ಮಂಡ್ಯ ಜಿಲ್ಲೆ, ಮಂಡ್ಯ 
                                                                             ದಿನಾಂಕ:20-02-2017.

ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
      
       ದಿನಾಂಕ:21-02-2017ರಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (ಕೆಎಸ್‍ಹೆಚ್‍ಆರ್‍ಸಿ) ವತಿಯಿಂದ  Human rights and gender quality and he need towards being sensitive to upholding human rights of citizens”   ಈ ಕುರಿತಾದ ಕಾರ್ಯಾಗಾರವನ್ನು ದಿನಾಂಕ:21-02-2017ರಂದು ಮಂಡ್ಯ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ಮೀರಾ ಸಿ. ಸೆಕ್ಸೇನಾ ರವರು ಭಾಗವಹಿಸುತ್ತಿದ್ದಾರೆ. ಆದುದ್ದರಿಂದ ದಯವಿಟ್ಟು ಈ ಕಾರ್ಯಗಾರಕ್ಕೆ ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರು ದಿನಾಂಕ: 21-02-2017 ರಂದು ಮಧ್ಯಾಹ್ನ 04-00 ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಭಾಗವಹಿಸಬೇಕೆಂದು ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ. 

                                                                                                             ತಮ್ಮ ವಿಶ್ವಾಸಿ


                                                                                                        ಪೊಲೀಸ್ ಸೂಪರಿಂಟೆಂಡೆಂಟ್
                                                                                                                     ಮಂಡ್ಯ ಜಿಲ್ಲೆ.
Mandya District Daily Crime Report Date: 19-02-2017
Mandya District Daily Crime Report Date: 16-02-2017
Mandya District Daily Crime Report Date: 15-02-2017
Mandya District Daily Crime Report Date: 14-02-2017
Mandya District Daily Crime Report Date: 13-02-2017
Mandya District Daily Crime Report Date: 12-02-2017
Mandya District Daily Crime Report Date: 11-02-2017
Mandya District Daily Crime Report Date: 10-02-2017
Mandya District Daily Crime Report Date: 09-02-2017
Mandya District Daily Crime Report Date: 08-02-2017
Mandya District Daily Crime Report Date: 07-02-2017
Mandya District Daily Crime Report Date: 05-02-2017
Mandya District Daily Crime Report Date: 03-02-2017
Mandya District Daily Crime Report Date: 02-02-2017
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ: 03-02-2017

ಪತ್ರಿಕಾ ಪ್ರಕಟಣೆ
ಕೆ.ಆರ್.ಪೇಟೆ ಹಾಗೂ ಸುತ್ತಮುತ್ತಲ ಕೆಲವು ಗ್ರಾಮಗಳ ಮನೆಗಳ ಬೀಗಗಳನ್ನು ಹೊಡೆದು ಕಳ್ಳತನ ಮಾಡುತ್ತಿದ್ದ ಜಗ್ಗಣ್ಣ @ ಜಗದೀಶ್ ಬಿನ್ ಬಸವರಾಜು, ಚಿಕ್ಕಬಿಳತಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ಎಂಬುವವನನ್ನು ದಸ್ತಗಿರಿ ಮಾಡಿ ಆತನಿಂದ 4,40,000 ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿರುವ ಬಗ್ಗೆ.


                ದಿನಾಂಕಃ 30-01-2017 ರಂದು ಶ್ರೀ ವೆಂಕಟೇಶಯ್ಯ.ಹೆಚ್.ಬಿ, ಸಿಪಿಐ, ಕೆ.ಆರ್.ಪೇಟೆ ವೃತ್ತ, ಸಿದ್ದರಾಜು.ಆರ್, ಪಿಎಸ್, ಕಿಕ್ಕೇರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್ಸಿ.245 ಪ್ರಕಾಶ್, ಪಿಸಿ.52 ಆನಂದಕುಮಾರ್, ಪಿಸಿ.445 ಅಶೋಕ್ಕುಮಾರ್, ಜೀಪ್ ಚಾಲಕ ಎಹೆಚ್ಸಿ.117 ರಜಿತ್ ರವರುಗಳು ಕಿಕ್ಕೇರಿಯಿಂದ ಹೇಮಗಿರಿ ಜಾತ್ರಾ ಬಂದೋಬಸ್ತ್ಗೆ ಮಂದಗೆರೆ ಗ್ರಾಮದ ರೈಲ್ವೆ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಅನುಮಾನದಿಂದ ತಿರುಗಾಡುತ್ತಿದ್ದ ಜಗ್ಗಣ್ಣ @ ಜಗದೀಶ್ ಎಂಬುವವನನ್ನು ವಿಚಾರಣೆ ಮಾಡಿ ಕೂಲಂಕುಷವಾಗಿ ಮಾಹಿತಿ ಪಡೆಯಲಾಗಿ ತನ್ನ ಪೂರ್ಣ ಹೆಸರು ವಿಳಾಸ ಜಗದೀಶ @ ಜಗ್ಗ ಬಿನ್ ಬಸವರಾಜು, 20 ವರ್ಷ, ಚಿಕ್ಕಬಿಳತಿ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೊಕು, ಹಾಸನ ಜಿಲ್ಲೆ ಎಂದು ತಿಳಿಸಿರುತ್ತಾನೆ. ಆತನನ್ನು ಠಾಣೆಗೆ ಕರೆತಂದು ಪೂರ್ಣ ವಿಚಾರಣೆಗೆ ಒಳಪಡಿಸಲಾಗಿ ತಾನು ಒಂದು ತಿಂಗಳ ಹಿಂದೆ ಕಿಕ್ಕೇರಿಯ ಲಕ್ಷ್ಮಿಪುರದಲ್ಲಿ ಅಕ್ಕಪಕ್ಕದ ಎರಡು ಮನೆಗಳು ಬೀಗ ಹಾಕಿದ್ದನ್ನು ನೋಡಿಕೊಂಡು ಅದೇ ದಿನ ರಾತ್ರಿ ನಾನು ಮನೆಗಳ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಹೋಗಿ ಬೀರುವನ್ನು ಜಖಂ ಮಾಡಿ ಅದರಲ್ಲಿದ್ದ ಚಿನ್ನದ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿ ವಡವೆಗಳನ್ನು ದಿವಸ ಸದರಿ ವಡವೆಗಳನ್ನು ಮಾರಾಟ ಮಾಡಲು ಹೊಳೆನರಸಿಪುರಕ್ಕೆ ಹೋಗಲು ಬಂದಿದ್ದಾಗಿ ತಿಳಿಸಿದ್ದು, ಆತನ ಬ್ಯಾಗಿನಲ್ಲಿ ವಡವೆಗಳು ಹಾಗೂ 2000-00 ರೂ ನಗದು ಹಣ ದೊರೆತಿದ್ದು, ನಂತರ ಈತನ್ನು ಪೂರ್ಣ ಪ್ರಮಾಣದಲ್ಲಿ ವಿಚಾರ ಮಾಡಲಾಗಿ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ಕೆಳಕಂಡ ಒಂಟಿ ಮನೆಗಳ ಹೆಂಚುಗಳನ್ನು ತೆಗೆದು ರಾತ್ರಿ ಕಳ್ಳತನ ಹಾಗೂ ಅಂಗಡಿ ಕಳ್ಳತನ ಮಾಡಿದ್ದ ಬಗ್ಗೆ ಹೇಳಿಕೆ ನೀಡಿದ್ದು ಆತನ ಹೇಳಿಕೆಯಂತೆ ಕೆ.ಆರ್.ಪೇಟೆ ವೃತ್ತ ವ್ಯಾಪ್ತಿಯಲ್ಲಿನ ಕಿಕ್ಕೇರಿ ಪೊಲೀಸ್ ಠಾಣಾ ಮೊ.ಸಂ.287/16, 284/16, 178/16, 187/16, 199/16, 223/16, 231/16, 245/16, 269/16, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 250/16, 346/16, 345/2016, 357/16, 358/16, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ಮೊ.ನಂ. 353/16, ಒಟ್ಟು 15 ಕಳವು ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಯಿಂದ 3,90,000-00 ರೂ ಮೌಲ್ಯದ 130 ಗ್ರಾಂ ಚಿನ್ನದ ಆಭರಣಗಳು ಹಾಗೂ 50,000-00 ರು ಮೌಲ್ಯದ 1 ¼ ಬೆಳ್ಳಿ ವಡವೆಗಳು, ಒಟ್ಟು 4,40,000-00 ರೂ ಮೌಲ್ಯದ ಚಿನ್ನದ ಆಭರಣಗಳು ಹಾಗೂ ಬೆಳ್ಳಿ ವಡವೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ್ ಪಡಿಸಿರುತ್ತಾರೆ.

     ಮೇಲ್ಕಂಡ ಆರೋಪಿ ಪತ್ತೆಗೆ ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.

PRESS NOTE DATE 03-02-2017

                                              

                                                     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
                                          ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:02-02-2017.



ಗೆ, 

ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ. 
ಮಂಡ್ಯ ಜಿಲ್ಲೆ. 
ಮಂಡ್ಯ. 
ಮಾನ್ಯರೆ,



     ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಂಡ್ಯ  ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ( ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಡ್ಯ ) ಇವರ ಸಂಯುಕ್ತಾಶ್ರಯದಲ್ಲಿ “ ಮಾದಕ ವಸ್ತು ಮತ್ತು ಮಾದಕ ದ್ರವ್ಯಗಳ ಸೇವನೆ ತಡೆಗಟ್ಟುವಲ್ಲಿ ಎದುರಾಗುವ ಸವಾಲುಗಳು “ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ: 04-02-2017 ರಂದು ಜಿಲ್ಲಾ ಪಂಚಾಯತ್ ಸಭಾಂಗಣ, ಮಂಡ್ಯದಲ್ಲಿ ಬೆಳಿಗ್ಗೆ 10-15 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳಲಿದೆ. ದಯವಿಟ್ಟು ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರು ಭಾಗವಹಿಸಬೇಕೆಂದು ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.  



                                                                                                                                                                                                           ತಮ್ಮ ವಿಶ್ವಾಸಿ

                                                          ಪೊಲೀಸ್ ಸೂಪರಿಂಟೆಂಡೆಂಟ್
                                                         ಮಂಡ್ಯ ಜಿಲ್ಲೆ.



ಗೆ, 

ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ. 

Mandya District Daily Crime Report Date: 01-02-2017
Mandya District Daily Crime Report Date: 31-01-2017
Mandya District Daily Crime Report Date: 30-01-2017
Mandya District Daily Crime Report Date: 29-01-2017
Mandya District Daily Crime Report Date: 28-01-2017
Mandya District Daily Crime Report Date: 27-01-2017
Mandya District Daily Crime Report Date: 26-01-2017
Mandya District Daily Crime Report Date: 25-01-2017
Mandya District Daily Crime Report Date: 24-01-2017
Mandya District Daily Crime Report Date: 23-01-2017
Mandya District Daily Crime Report Date: 22-01-2017
Mandya District Daily Crime Report Date: 21-01-2017
Mandya District Daily Crime Report Date: 20-01-2017
Mandya District Daily Crime Report Date: 19-01-2017
Mandya District Daily Crime Report Date: 18-01-2017
Mandya District Daily Crime Report Date: 17-01-2017
Mandya District Daily Crime Report Date: 16-01-2017
Mandya District Daily Crime Report Date: 15-01-2017
Mandya District Daily Crime Report Date: 14-01-2017
Mandya District Daily Crime Report Date: 13-01-2017
Mandya District Daily Crime Report Date: 12-01-2017