Moving text
ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ,
ಮಂಡ್ಯ
ಜಿಲ್ಲೆ, ಮಂಡ್ಯ, ದಿನಾಂಕ: 11-05-2017.
ಪತ್ರಿಕಾ
ಪ್ರಕಟಣೆ
ಇತ್ತೀಚೆಗೆ ಬೀಗ ಹಾಕಿದ ಮನೆಗಳ
ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು ಸಾರ್ವಜನಿಕರು ಒಂದು ದಿನದ ಮೇಲ್ಪಟ್ಟು
ತಮ್ಮ ಮನೆಗೆ ಬೀಗ ಹಾಕಿಕೊಂಡು
ಬೇರೆ ಊರಿಗೆ ಹೋಗುವಾಗ ತಪ್ಪದೆ
ನಿಮ್ಮ ಮನೆಯ ವಿಳಾಸ ಮತ್ತು
ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ
ನೀಡುವುದು ಮತ್ತು ಮಂಡ್ಯ ಕಂಟ್ರೋಲ್
ರೂಂನ ದೂರವಾಣಿ ಸಂಖ್ಯೆ 9480804800 ಗೆ
ನಿಮ್ಮ ಮೊಬೈಲ್ ವಾಟ್ಸಾಪ್ನಿಂದ
ನಿಮ್ಮ ಮನೆಯ ಲೊಕೇಶನ್ ನೊಂದಿಗೆ
ವಿಳಾಸವನ್ನು ವಾಟ್ಸಾಪ್ ಮಾಡುವುದು. ಪೊಲೀಸ್ ಇಲಾಖಾ ವತಿಯಿಂದ
ಅಂತಹ ಸ್ಥಳಗಳಲ್ಲಿ ರಾತ್ರಿ ಗಸ್ತನ್ನು ಬಿಗಿಗೊಳಿಸಲಾಗುವುದು.
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಮನೆ ಕಳ್ಳತನಗಳನ್ನು ತಡೆಯುವಲ್ಲಿ
ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖಾ ವತಿಯಿಂದ
ಕೋರಲಾಗಿದೆ.
Press Note Date: 07-04-2017
ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ,
ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
ಇತ್ತೀಚೆಗೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್
ಬ್ಯಾಂಕ್ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಡನೆ ವಿಲೀನಗೊಂಡಿರುತ್ತವೆ. ಈ ಹಿನ್ನಲೆಯಲ್ಲಿ ಮೇಲ್ಕಂಡ
ಬ್ಯಾಂಕಿನ ಗ್ರಾಹಕರುಗಳಿಗೆ ಕೆಲವು ಹ್ಯಾಕರ್ಗಳು ದೂರವಾಣಿ ಕರೆ ಮಾಡಿ ಅಕೌಂಟ್ನ ಎ.ಟಿ.ಎಂ. ಕಾರ್ಡ್ಗಳನ್ನು
ಹೊಸದಾಗಿ ನೀಡಬೇಕಾಗುತ್ತಿರುವುದರಿಂದ ನಿಮ್ಮ ಎ.ಟಿ.ಎಂ. ಕಾರ್ಡ್ ನಂಬರ್ ಮತ್ತು ಪಿನ್ ನಂಬರ್ಗಳನ್ನು
ನೀಡುವಂತೆ ಕರೆ ಮಾಡಿ ಮಾಹಿತಿ ಪಡೆದು ಅಕೌಂಟ್ಗಳಿಂದ ಹಣವನ್ನು ಡ್ರಾ ಮಾಡಿ ಮೋಸ ಮಾಡುವ ವಂಚಕರು ಇರುತ್ತಾರೆ.
ಆದುದರಿಂದ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಬಾದ್
ಬ್ಯಾಂಕ್ಗಳ ಗ್ರಾಹಕರು ಇಂತಹ ಯಾವುದೇ ಫ್ರಾಡ್ ಕಾಲರ್ಗಳ ಮಾತಿಗೆ ಮರುಳಾಗದೆ ಹಾಗೂ ನಿಮ್ಮ ಅಕೌಂಟ್ನ
ಮಾಹಿತಿಯನ್ನು ಯಾರಿಗೂ ನೀಡದೆ ಮೋಸಕ್ಕೆ ಒಳಗಾಗದಂತೆ ಎಚ್ಚರದಿಂದ ಇರುವಂತೆ ಪೊಲೀಸ್ ಇಲಾಖೆಯ ವತಿಯಿಂದ
ಕೋರಲಾಗಿದೆ.
Press Note Date: 07-04-2017
ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ,
ಮಂಡ್ಯ ದಿನಾಂಕ:07-04-2017.
ಪತ್ರಿಕಾ ಪ್ರಕಟಣೆ
ದಿನಾಂಕಃ 31.03.17. ರಂದು ಬೆಳಿಗ್ಗೆ 9-30 ಗಂಟೆ
ಸಮಯದಲ್ಲಿ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅರ್.
ಶಶಿಭೂಷಣ್ ಇವರ ಕುತ್ತಿಗೆಯನ್ನು ಕುಯ್ದು ಕೊಲೆ ಮಾಡಿದ್ದು ಈ ಸಂಬಂದsವಾಗಿ ಕೆ.ಎಂ.ದೊಡ್ಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.
ಈ
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ಸಂಬಂಧ ಕೆ.ಎಂ.ದೊಡ್ಡಿ ವೃತ್ತದ ಸಿಪಿಐ ಶ್ರೀ ಶಿವಮಲವಯ್ಯ
ಇವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಹಿಡಿಯುವಲ್ಲಿ ಕೆ.ಎಂ.ದೊಡ್ಡಿ ಠಾಣೆಯ
ಪಿಎಸ್ಐ ಆಯ್ಯನಗೌಡ, ಹಲಗೂರು ಠಾಣೆ ಪಿಎಸ್ಐ ಬಿ.ಎಸ್. ಶ್ರೀಧರ್, ಅರಕೆರೆ ಠಾಣಾ ಪಿಎಸ್ಐ, ಅಜರುದ್ದೀನ್,
ಶ್ರೀರಂಗಪಟ್ಟಣ (ಗ್ರಾ) ಠಾಣಾ ಪಿಎಸ್ಐ ಪುನೀತ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ಗೋವಿಂದಪ್ಪ, ಗಯಾಜï
ಉದ್ದೀನ್ ಖಾನ್, ಮಹದೇವ, ಜಯರಾಮೇಗೌಡ, ಜಯರಾಮು ಹಾಗೂ ಚಾಲಕರುಗಳಾದ ಮಂಜುನಾಥ್ ಮತ್ತು ರವಿ ಇವರುಗಳ
ಸಹಾಯದಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಈ ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ.
1] ಮೃತ
ಶಶಿಭೂಷಣ್ ಇವರ ಪತ್ನಿ ಶ್ರೀಮತಿ ಶಾಂತಮ್ಮ ಇವರನ್ನು ದಸ್ತಗಿರಿ ಮಾಡಿ ಇವರಿಂದ ಒಂದು ಮೊಬೈಲ್ ಪೋನ್
ವಶಕ್ಕೆ ಪಡೆದು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
2] ಮೃತ
ಶಶಿಭೂಷಣ್ ಇವರ ಮಗಳು ನವ್ಯಶ್ರೀ ಈಕೆಯನ್ನು ದಸ್ತಗಿರಿ ಮಾಡಿ ಈಕೆಯಿಂದ ಒಂದು ಮೊಬೆಲ್ ವಶಕ್ಕೆ ಪಡೆದು
ಈಕೆಯನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
3] ಸುರೇಶ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರು ಬ್ಯಾಂಕ್ ಪಾಸ್ ಪುಸ್ತಕಗಳು,
ಐದು ಕೀ ಗಳಿರುವ ಗೊಂಚಲು, ಒಂದು ಹಣ ಇರುವ ಪರ್ಸ್, ಒಂದು ಡೈರಿ, ಎರಡು ಮೊಬೈಲ್ ಪೋನ್ಗಳು ಹಾಗೂ ಕೃತ್ಯಕ್ಕೆ
ಮುಂಗಡವಾಗಿ ಪಡೆದಿದ್ದ 7740/- ರೂ ನಗದು ಹಣ ವಶಕ್ಕೆ ಪಡೆದಿರುತ್ತೆ.
4] ವೆಂಕಟೇಶ್
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರನ್ನು ವಶಕ್ಕೆ ಪಡೆದಿರುತ್ತೆ.
5] ಮಹದೇವ
@ ಶಾಕಾ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚನ್ನು ವಶಕ್ಕೆ
ಪಡೆದಿರುತ್ತೆ.
6] ಸಂತೋಷ
ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮಚ್ಚು ಹಾಗೂ ಒಂದು ಮೊಬೈಲ್
ವಶಕ್ಕೆ ಪಡೆದಿರುತ್ತೆ.
7] ನಂಜುಂಡ
@ ನಂಜಪ್ಪ ಮೈಸೂರು ಈತನನ್ನು ದಸ್ತಗಿರಿ ಮಾಡಿ ಈತನಿಂದ ಮೃತನ ಒಂದು ಮೊಬೆಲ್ ಪೋನನ್ನು ಈತನ ಮನೆಯಿಂದ
ವಶಕ್ಕೆ ಪಡೆದಿರುತ್ತೆ.
ಆರೋಪಿ
ವೆಂಕಟೇಶ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅರೋಪಿ ಸುರೇಶ ಮತ್ತು ಮಹದೇವ @ ಶಾಕಾ ಇವರನ್ನು
ಪೆÇಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿ ಇವರ ಮಾಹಿತಿ ಮೇರೆಗೆ ಅರೋಪಿಗಳಾದ ಸಂತೋಷ ಮತ್ತು ನಂಜುಂಡ
@ ನಂಜಪ್ಪ ಇವರನ್ನು ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
POLICE FLAG DAY PRESS NOTE
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:01-04-2017.
ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
ಗೆ,
ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ.
ಮಂಡ್ಯ ಜಿಲ್ಲೆ, ಮಂಡ್ಯ ದಿನಾಂಕ:01-04-2017.
ಗೆ,
ಎಲ್ಲಾ ಪತ್ರಿಕಾ ಮಾಧ್ಯಮ /ದೃಶ್ಯ ಮಾಧ್ಯಮದವರಿಗೆ.
ಮಂಡ್ಯ ಜಿಲ್ಲೆ.
ಮಂಡ್ಯ.
ಮಾನ್ಯರೆ,
ದಿನಾಂಕ:02-04-2017 ರಂದು ಬೆಳಿಗ್ಗೆ 0800 ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಮಂಡ್ಯ ನಗರದ ಡಿಎಅರ್ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ. ಆದುದ್ದರಿಂದ ದಯವಿಟ್ಟು ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ/ದೃಶ್ಯ ಮಾಧ್ಯಮದವರು ದಿನಾಂಕ: 02-04-2017 ರಂದು ಬೆಳಿಗ್ಗೆ 0750 ಗಂಟೆಗೆ ಮಂಡ್ಯ ನಗರದ ಡಿಎಅರ್ ಪೊಲೀಸ್ ಕವಾಯತು ಮೈದಾನದಲ್ಲಿ ಭಾಗವಹಿಸಬೇಕೆಂದು ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.
ತಮ್ಮ ವಿಶ್ವಾಸಿ
ಪೊಲೀಸ್ ಸೂಪರಿಂಟೆಂಡೆಂಟ್
ಮಂಡ್ಯ ಜಿಲ್ಲೆ.
ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯರವರಿಗೆ ಮಾಹಿತಿಗಾಗಿ ರವಾನಿಸುತ್ತಾ ಎಲ್ಲಾ ಪತ್ರಿಕಾ / ದೃಶ್ಯ ಮಾಧ್ಯಮದವರಿಗೆ ಮಾಹಿತಿಯನ್ನು ರವಾನಿಸಲು ಈ ಮೂಲಕ ಕೋರಲಾಗಿದೆ.
Press Note Dated: 27-03-2017
ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ
ಮಂಡ್ಯ
ಜಿಲ್ಲೆ, ಮಂಡ್ಯ ದಿನಾಂಕ: 27-03-2017
ಪತ್ರಿಕಾ
ಪ್ರಕಟಣೆ
ಮಂಡ್ಯ
ಜಿಲ್ಲೆಯ ಕೆಎಂ ದೊಡ್ಡಿ ವೃತ್ತದ
ವ್ಯಾಪ್ತಿಯ ಕೆಎಂ ದೊಡ್ಡಿ ಪೊಲೀಸ್
ಠಾಣಾ ವ್ಯಾಪ್ತಿಯಲ್ಲಿ ದಿನಾಂಕ
05.02.2017 ರಂದು ಕೆಎಂ ದೊಡ್ಡಿ ಟೌನಿನಲ್ಲಿರುವ
ಆಲಭುಜನಹಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ
ಜೂಯಿಲರಿ ಶಾಪನ್ನು ಯಾರೋ ಕಳ್ಳರು
ಅಂಗಡಿ ಗ್ರಿಲ್ಗೇಟನ್ನು ಗ್ರಿಲ್
ಕಟರ್ನಿಂದ ಕಟ್ ಮಾಡಿ
ಅಂಗಡಿಯ ಒಳಗಡೆ ಇದ್ದ 15 ಕೆಜಿ
ಬೆಳ್ಳಿ ಪದಾರ್ಥಗಳು ಹಾಗೂ 30 ಗ್ರಾಮ್ ಚಿನ್ನದ
ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ಅಂಗಡಿ ಮಾಲಿಕ ರವಿರವರು ನೀಡಿದ
ದೂರಿನ ಹಿನ್ನಲೆಯಲ್ಲಿ ಕೆ.ಎಂ.ದೊಡ್ಡಿ ಪೊಲೀಸ್
ಠಾಣೆಯಲ್ಲಿ ಕನ್ನ ಕಳವು ಪ್ರಕರಣ
ದಾಖಲಾಗಿ ತನಿಖೆ ಕೈಗೊಂಡಿದ್ದರು.
ಸದರಿ
ಪ್ರಕರಣದ ಆರೋಪಿ
ಮತ್ತು ಮಾಲುಗಳ ಪತ್ತೆ ಸಂಬಂಧ
ಮಳವಳ್ಳಿ ಉಪ ವಿಭಾಗದ ಡಿವೈಎಸ್.ಪಿ ಶ್ರೀ.ಕೆ.ಟಿ ಮ್ಯಾಥ್ಯೂಸ್ ಥಾಮಸ್
ರವರ ಮಾರ್ಗದರ್ಶನದಲ್ಲಿ ಶ್ರೀ
ಶಿವಮಲವಯ್ಯ ಸಿಪಿಐ ಕೆಎಂ ದೊಡ್ಡಿ
ರವರ ನೇತೃತವದಲ್ಲಿ
ಹಲಗೂರು ಪೊಲೀಸ್ ಠಾಣಾ ಪಿ.ಎಸ್.ಐ, ಶ್ರೀ.ಬಿ.ಎಸ್. ಶ್ರೀಧರ್.
ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಡ್
ಕಾನ್ಸ್ಟೇಬಲ್ಗಳಾದ ಮಹದೇವ,
ಕೃಷ್ಣಶೆಟ್ಟಿ, ಪೊಲೀಸ್
ಕಾನ್ಸ್ಟೇಬಲ್ಗಳಾದ ಜಯಕುಮಾರ,
ಪ್ರೇಮ್ಕುಮರ್, ರಿಯಾಜ್ಪಾಷ,
ಪ್ರಭು, ಮೋಹನ, ಬೆರಳಚ್ಚು ವಿಭಾಗದ
ಸಿಬ್ಬಂದಿಗಳಾದ ಶ್ರೀರಾಜೇಂದ್ರ ಮತ್ತು ಮಂಜು ಹಾಗೂ
ಚಾಲಕರಾದ ಹೆಡ್ಕಾನ್ಸ್ಟೇಬಲ್
ಮಂಜುನಾಥ ರವರನ್ನು ಒಳಗೊಂಡ ವಿಶೇಷ
ತಂಡವನ್ನು ರಚನೆ ಮಾಡಿದ್ದು ಈ
ಪ್ರಕರಣದಲ್ಲಿ ಭಾಗಿಯಾಗಿರುವ ಈ ಕೆಳಕಂಡ ಆರೋಪಿಗಳನ್ನು
ದಸ್ತಗಿರಿ ಮಾಡಿರುತ್ತಾರೆ.
ಆರೋಪಿ-01
ಗಂಗಾ @ ರಮೇಶ ಬಿನ್ ವೆಂಕಟಯ್ಯ,
ಕೊಪ್ಪ ಟೌನ್ ರವರನ್ನು ವಶಕ್ಕೆ ಪಡೆಕೊಂಡು ವಿಚಾರಣೆಗೆ
ಒಳಪಡಿಸಿದಾಗ ತನ್ನ ಸಹಚರರಾದ
ಆರೋಪಿ-02 ಗುರುರಾಜ್
@ ಗುರು, ಕೊಡಿಯಾಲ ಗ್ರಾಮ, ಶ್ರೀರಂಗಪಟ್ಟಣ
ತಾಃ
ಆರೋಪಿ-03 ಕುಮಾರ
ಬಿನ್ ಲಕ್ಷ್ಮಣ ಕನಕಪುರ ಸರ್ಕಲ್
ರಾಮನಗರ ಟೌನ್,
ಆರೋಪಿ-04 ಮುನಿಯಪ್ಪ
@ ಮುನಿಯ, ಐಜೂರುಗುಡ್ಡೆ,
ರಾಮನಗರ ಟೌನ್. ರವರುಗಳನ್ನು
ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ
ಈ ಕೆಳಕಂಡ ಸ್ಥಳಗಳಲ್ಲಿ
ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.
1] 2016 ನೇ ಸಾಲಿನ ಸೆಪ್ಟಂಬರ್
ತಿಂಗಳ ಕೊನೆಯ ವಾರದಲ್ಲಿ ರಾಮನಗರದ
ತಿಮ್ಮಸಚಿದ್ರ ಗ್ರಾಮದಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸುಮಾರು 15 ಸಾವಿರ ಹಣವನ್ನು ಕಳ್ಳತನ
ಮಾಡಿರುತ್ತಾರೆ.
2] 2016 ನೇ ಸಾಲಿನ ಡಿಸಂಬರ್
ತಿಂಗಳಲ್ಲಿ ಮದ್ದೂರು
ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಗಾರನಹಳ್ಳಿ
ಗ್ರಾಮದ ಜೂಯಿಲರಿ ಶಾಪನ್ನು ಕನ್ನ
ಕಳವು ಮಾಡಿ ಒಟ್ಟು 30 ಗ್ರಾಮ್
ಬಂಗಾರ ಮತ್ತು 5.7 ಕೆಜಿ
ಬೆಳ್ಳಿ ಒಟ್ಟು 2,50,000 ರೂಪಾಯಿ ಮೌಲ್ಯದ ಒಡವೆಗಳನ್ನು
ಕಳ್ಳತನ ಮಾಡಿರುತ್ತಾರೆ.
3] 2017 ನೇ
ಜನವರಿ ಕೊನೆಯ ವಾರದಲ್ಲಿ ಚನ್ನಪಟ್ಟಣದ
ದೇವರಹೊಸಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಬೀಗವನ್ನು ಹೊಡೆದು ಸುಮಾರು 5.5 ಕೆ.ಜಿ ಬೆಳ್ಳಿ ಪದಾರ್ಥಗಳು,
45 ಗ್ರಾಮ್ ಚಿನ್ನದ
ವಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
4] 2017 ನೇ
ಸಾಲಿನ ಜನವರಿಯ ಕೊನೆಯ ವಾರದಲ್ಲಿ
ರಾಮನಗರ ತಾಲ್ಲೋಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿರುವ ಮುನೇಶ್ವರ ದೇವಸ್ಥಾನದಲ್ಲಿ ದೇವರ
ವಿಗ್ರಹದ ಮೇಲಿದ್ದ ಒಂದು ಚಿನ್ನದ
ತಾಳಿ ಹಾಗೂ ಒಂದು ಬೆಳ್ಳಿ
ಕಿರೀಟವನ್ನು ಹಾಗೂ ಹುಂಡಿಯಲ್ಲಿದ್ದ 1,100 ರೂ
ಚಿಲ್ಲರೆ ಹಣವನ್ನು ಕಳ್ಳತನ ಮಾಡಿರುತ್ತಾರೆ.
5] 2017 ನೇ
ಫೆಬ್ರವರಿ ಮೊದಲನೆ ವಾರದಲ್ಲಿ ಕೆಎಂ
ದೊಡ್ಡಿ ಆಲಭುಜನಹಳ್ಳೀ
ರಸ್ತೆಯಲ್ಲಿರುವ ವಿಶ್ವಕರ್ಮ ಜೂಯಿಲರಿ ಶಾಪನ್ನು ಹೊಡೆದು
ಸುಮಾರು 7 ಕೆಜಿ ಬೆಳ್ಳಿ ಪಧಾರ್ಥ,
ಹಾಗೂ ಸಣ್ಣಪುಟ್ಟ ಚಿನ್ನದ ವಡವೆಗಳು ಒಟ್ಟು
30 ಗ್ರಾಂ ನಷ್ಟು ಚಿನ್ನದ ಪದಾರ್ಥ,
ಹಾಗೂ 20 ಸಾವಿರ ನಗದು ಸೇರಿ
ಒಟ್ಟು 6.50,000 ರೂ ಮೌಲ್ಯದ ಒಡವೆಗಳನ್ನು
ಕಳ್ಳತನ ಮಾಡಿರುತ್ತಾರೆ.
6] 2017 ನೇ
ಫೆಬ್ರವರಿ ಎರಡನೆ ವಾರದಲ್ಲಿ ಚನ್ನಪಟ್ಟಣದ
ಕಣ್ವ ಬಡಾವಣೆಯ ಮನೆಯಲ್ಲಿ ಹೆಂಗಸು ಕಿಟಿಕಿಯ ಪಕ್ಕದಲ್ಲಿ
ಮಲಗಿದ್ದಾಗ ಸುಮಾರು 20 ಗ್ರಾಮ್ ಚಿನ್ನದ ಸರವನ್ನು
ಕಿತ್ತುಕೊಂಡಿರುತ್ತಾರೆ.
7] 2017 ನೇ
ಫೆಬ್ರವರಿ ಎರಡನೆ ವಾರದಲ್ಲಿ ಕೊಡಿಯಾಲದಲ್ಲಿ
ಮುಖಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು
ಕಟ್ಟಿಕೊಂಡು ಒಂದು ಜ್ಯೂಯಲರಿ ಶಾಪನ್ನು
ಮತ್ತು ದೇವಸ್ಥಾನವನ್ನು ಹೊಡೆಯಲು ಪ್ರಯತ್ನಪಟ್ಟಿದ್ದು ನಂತರ
ದೇವಸ್ಥಾನದ ಪಕ್ಕದ ಮನೆಯ ಅಜ್ಜಿ
ಮತ್ತು ಹೆಂಗಸಿನ ಕತ್ತಿನಲ್ಲಿದ್ದ 1.75,000 ಮೌಲ್ಯದ ಚಿನ್ನದ
ಸರಗಳನ್ನು ಕಿತ್ತು ಕೊಂಡಿರುತ್ತಾರೆ.
8] 2017ರ
ಪೆಬ್ರವರಿ ತಿಂಗಳ ಮೂರನೆ ವಾರದಲ್ಲಿ
ಕಿರುಗಾವಲಿನಲ್ಲಿ ಉಂತೂರಮ್ಮನ ದೇವಸ್ಥಾನವನ್ನು ಕಳ್ಳತನ ಮಾಡಿ ಟ್ರಂಕ್ನಲ್ಲಿ ಇದ್ದ ಸುಮಾರು
45-50 ತಾಳಿಗಳು ಹಾಗೂ ಹುಂಡಿಯಲ್ಲಿದ್ದ 10, ಸಾವಿರ
ನಗದು ಸೇರಿ 1.15,000 ರೂ ಮೌಲ್ಯದ ಒಡವೆಗಳನ್ನು
ಕಳ್ಳತನ ಮಾಡಿರುತ್ತಾರೆ.
9] ಫೆಬ್ರವರಿ 2017 ಕೊನೆಯ ವಾರದಲ್ಲಿ ಚನ್ನಪಟ್ಟಣದ
ಕೊಟಮಾರನಹಳ್ಳಿ ಗ್ರಾಮದಲ್ಲಿ ಬಾಳಾರದೇವಮ್ಮ ದೇವಸ್ಥಾನದಲ್ಲಿ ತಾಳಿ ಮತ್ತು ಕಾಸು,
ಬೆಳ್ಳಿ ಪಧಾರ್ಥ ಹುಂಡಿಯ ಹಣ
ಸೇರಿ ಸುಮಾರು
80,000 ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿರುತ್ತಾರೆ.
10] 2017 ನೇ
ಜನವರಿ ತಿಂಗಳ
ಎರಡನೆ ವಾರದಲ್ಲಿ ರಾಮನಗರ ತಾಃ ಕೈಲಾಂಚ
ಹೋಬಳಿ, ಜಕ್ಕನಹಳ್ಳಿ ಗ್ರಾಮದ ಗ್ರಾಮ ದೇವತೆ
ದೇವಸ್ಥಾನದ ಹುಂಡಿಯಲ್ಲಿದ್ದ 20000 ನಗದು ಹಣವನ್ನು ಕಳ್ಳತನ
ಮಾಡಿರುತ್ತಾರೆ.
ಮೇಲ್ಕಂಡ
10 ಪ್ರಕರಣಗಳಲ್ಲಿ ಆರೋಪಿಗಳ ಸ್ವಇಚ್ಚಾ ಹೇಳಿಕೆ
ಆಧಾರದ ಮೇಲೆ ಬೆಳ್ಳಿ ಮತ್ತು
ಬಂಗಾರದ ಒಡವೆಗಳನ್ನು ಮಾಗಡಿ, ಮದ್ದೂರು ತಾಃ
ಕೊಪ್ಪ ಹಾಗೂ ಚೈನ್ನೈ ಮತ್ತು
ಕೊಯಮತ್ತೂರುಗಳಲ್ಲಿ 19 ಕೆಜಿ ಬೆಳ್ಳಿ ಒಟ್ಟು
ಮೌಲ್ಯ 8,55,000 ಹಾಗೂ 200 ಗ್ರಾಮ್ ಚಿನ್ನ ಒಟ್ಟು
ಮೌಲ್ಯ 5,00,000 ಒಟ್ಟು 13,55,000 ರೂಗಳ ಬೆಳ್ಳಿ ಮತ್ತು
ಚಿನ್ನದ ಒಡವೆಗಳನ್ನು ಅಮಾನತ್ತಿ ಪಡಿಸಿರುತ್ತಾರೆ.
ಮೇಲ್ಕಂಡ ಆರೋಪಿಗಳ
ಪತ್ತೆಗೆ ಶ್ರಮಿಸಿದ ಮೇಲ್ಕಂಡ ಪೊಲೀಸ್ ಅಧಿಕಾರಿಗಳು
ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು
ಪ್ರಶಂಸಿರುತ್ತಾರೆ.
Subscribe to:
Posts (Atom)