ಪತ್ರಿಕಾ ಪ್ರಕಟಣೆ
ಇತ್ತೀಚೆಗೆ ಪಾಂಡವಪುರ ಪಟ್ಟಣದಲ್ಲಿ 3 ರಾತ್ರಿ ಕನ್ನ ಕಳವು ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲುಗಳನ್ನು ಪತ್ತೆ ಮಾಡಲು ಶ್ರೀರಂಗಪಟ್ಟಣ ಉಪ-ವಿಭಾಗದಲ್ಲಿ ಪಾಂಡವಪುರ ಪೊಲೀಸ್ ಇನ್ಸಪೆಕ್ಟರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಲಾಗಿತ್ತು.
ಈ ತಂಡ ಕಾರ್ಯಪ್ರವೃತ್ತೃರಾಗಿ ದಿನಾಂಕ 17-05-11 ರಂದು ಬೆಳಗಿನ ಜಾವ 5.00 ಗಂಟೆ ಸಮಯಲ್ಲಿ ಪಾಂಡವಪುರ ಟೌನ್ ವಿ.ಸಿ.ಕಾಲೋನಿಯ ಪೂರ್ವಸಜಾ ವ್ಯಕ್ತಿ ಮಹದೇವ @ ಕಂದಳ್ಳಿ ಮಹದೇವ @ ಪೆದ್ದಮಾವ ಬಿನ್ ಕುಂದಬಳ್ಳಶೆಟ್ಟಿ, ಕಂದಳ್ಳಿ ಗ್ರಾಮ, ಯಳಂದೂರು ತಾ: ಎಂಬುವನನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಆತನು ಕೊಟ್ಟ ಸುಳಿವಿನ ಮೇರೆಗೆ ಈ ಕೆಳಕಂಡ ಈ ಕೆಳಕಂಡ ಕೇಸುಗಳಿಗೆ ಸಂಬಂಧಪಟ್ಟ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಜೊತೆಗೆ ಕಳವು ಮಾಲುಗಳ ವಿಲೇವಾರಿಗೆ ಸಹಕರಿಸಿದ ಈತನ ತಾಯಿ ನಂಜಮ್ಮ @ ಪುಟ್ಟನಂಜಮ್ಮಳನ್ನು ಸಹ ದಸ್ತಗಿರಿ ಮಾಡಲಾಗಿರುತ್ತದೆ.
1.ಪಾಂಡವಪುರ ತಾ: ಕ್ಯಾತನಹಳ್ಳಿ ವಿಷಕಂಠೇಗೌಡ ರವರ ಮನೆಯಲ್ಲಿ ದಿ:20-12-2010 ರಂದು ರಾತ್ರಿ ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ 2 ಎಳೆ ಚಿನ್ನದ, ಹಗ್ಗದ ಚಿನ್ನದ ಚೈನ್, ಚಿನ್ನದ ಕೈ ಬಳೆಗಳು, ಚಿನ್ನದ ಬ್ರಾಸ್ ಲೈಟ್, ಬೆಳ್ಳಿ ದೀಪಾಲೆ ಕಂಬಗಳು, ಬೆಳ್ಳಿಯ ಚೊಂಬು, ತಟ್ಟೆ ಮುಂತಾದ ಒಟ್ಟು 4,25,000-00 ರೂ ಬೆಲೆಯುಳ್ಳ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಬಾಬ್ತು 178 ಗ್ರಾಂ ಚಿನ್ನ ಮತ್ತು 865 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು 4,25,000-00 ರೂ ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
2.ದಿನಾಂಕ 22-04-2011 ರಂದು ರಾತ್ರಿ ಪಾಂಡವಪುರ ಟೌನ್ ನ ಟಿಎಪಿಸಿಎಂಎಸ್ ಬಳಿ ಇರುವ ಶಿಕ್ಷಕರಾದ ಎನ್.ಲಿಂಗರಾಜು ರವರ ಮನೆಯ ವೆಂಟಿಲೇಟರ್ ಮುಖಾಂತರ ಒಳ ಹೊಗಿ ಅಲ್ಮೇರಾದಲ್ಲಿ ಇಟ್ಟಿದ್ದ ಚಿನ್ನದ ಬ್ರಾಸ್ ಲೈಟ್, ಚಿನ್ನದ ಚೈನ್, ಉಂಗುರಗಳು, ಓಲೆಗಳು, ಕೈ ಬಳೆಗಳು ಮುಂತಾದ ಸುಮಾರು 2 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಪೈಕಿ 131 ಗ್ರಾಂ ಚಿನ್ನ ಮತ್ತು 58 ಗ್ರಾಂ ಬೆಳ್ಳಿಯ ಆಭರಣಗಳು ಅಂದಾಜು 3,25,000-00 ರೂ ಬೆಲೆ ಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
3.ದಿನಾಂಕ 13-04-2011 ರ ರಾತ್ರಿ ಪಾಂಡವಪುರ ಟೌನ್ ಕೋಲಪ್ಪನ ಬೀದಿಯಲ್ಲಿರುವ ಕಾರ್ ಡ್ರೈವರ್ ನಾಗೇಂದ್ರ ಎಂಬುವವರ ಮನೆಯಲ್ಲಿ ಒಂದು ಚಿನ್ನದ ಚೈನ್, ಬ್ರಾಸ್ ಲೈಟ್, ಕಪಾಲಿ ಚಿನ್ನದ ಉಂಗುರ, ಚಿನ್ನದ ಓಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಪೈಕಿ 39 ಗ್ರಾಂ ಚಿನ್ನದ ಒಡವೆಗಳು ಅಂದಾಜು 85000-00 ರೂ ಬೆಲೆಬಾಳುವ ವಸ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಮೇಲ್ಕಂಡ ಆರೋಪಿ ನೀಡಿದ ಸುಳಿವಿನ ಮೇರೆಗೆ ಒಟ್ಟು ಎಂಟು ಮುಕ್ಕಾಲು ಲಕ್ಷ ಬೆಲೆ ಬಾಳುವ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮವಹಿಸಿದ ಶ್ರೀ ಜಿ.ಕೃಷ್ಣಮೂರ್ತಿ, ಪಿಐ, ಪಾಂಡವಪುರ ಮತ್ತು ಸಿಬ್ಬಂದಿಗಳಾದ ಮಹದೇವಯ್ಯ, ಲಕ್ಷ್ಮಣ, ಮೆಹಬೂಬ್ ಪಾಷ್, ರಮೇಶ ರಾಜೇಅರಸ್, ಸುಮಾ, ತಾಂಡವಮೂರ್ತಿ ಮತ್ತು ಜೀಪ್ ಡ್ರೈವರ್ ಅಶೋಕ ರವರುಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.
No comments:
Post a Comment